• Home
  • »
  • News
  • »
  • trend
  • »
  • Cute Viral Video: ಕಾರ್‌ ಮೇಲೆ ಲಿಪ್‌ ಸ್ಟಿಕ್​ನಲ್ಲಿ ಗೀಚಿದ ಪುಟ್ಟ ಪೋರ, ವೈರಲ್‌ ಆಯ್ತು ಪುಟಾಣಿಯ ತುಂಟಾಟ

Cute Viral Video: ಕಾರ್‌ ಮೇಲೆ ಲಿಪ್‌ ಸ್ಟಿಕ್​ನಲ್ಲಿ ಗೀಚಿದ ಪುಟ್ಟ ಪೋರ, ವೈರಲ್‌ ಆಯ್ತು ಪುಟಾಣಿಯ ತುಂಟಾಟ

ವೈರಲ್ ವಿಡಿಯೋ

ವೈರಲ್ ವಿಡಿಯೋ

Boy Scribbles On A Car With Lipstick: ಮಗು ಎಂಥದ್ದೇ ಕಿಲಾಡಿ ಮಾಡಿದರೂ ಅದು ಮುಗ್ಧವಾಗಿ ನಕ್ಕುಬಿಟ್ಟರೆ ಎಲ್ಲವೂ ಮರೆತು ಹೋಗುತ್ತವೆ. ಮಗುವಿನ ಆಟ ನೋಡೋಕೇ ಚೆಂದ. ಇನ್ನು ಅವರು ದೊಡ್ಡವರಾದ ಮೇಲೆ ಇದರ ನೆನಪು ಪೋಷಕರಿಗೆ ಇನ್ನಷ್ಟು ಖುಷಿ ಕೊಡುತ್ತವೆ ಅನ್ನೋದು ಸುಳ್ಳಲ್ಲ.

  • Share this:

ಮಕ್ಕಳು (Child) ಒಂದಲ್ಲ ಒಂದು ತುಂಟಾಟ ಮಾಡ್ತಾನೇ ಇರುತ್ತವೆ. ಮುಗ್ಧತೆಯಿಂದ ಮಕ್ಕಳು ಮಾಡುವ ಕಿಲಾಡಿ ಗಳನ್ನು ನೋಡೋದೇ ಚೆಂದ. ಒಮ್ಮೊಮ್ಮೆ ಅವು ಕೋಪ (Angry) ತರಿಸಿದರೆ ಇನ್ನೂ ಕೆಲವೊಮ್ಮೆ ನಗು ಬರಿಸುತ್ತವೆ. ಹೀಗೆ ಪುಟ್ಟ ಪೋರನೊಬ್ಬ ಮಾಡಿದ ತುಂಟಾಟ ನೋಡಿ ನೆಟ್ಟಿಗರು (Netizens)  ಖುಷಿ ಪಟ್ಟಿದ್ದಾರೆ. ಸಾಮಾನ್ಯವಾಗಿ ಪುಟ್ಟ ಮಕ್ಕಳಿರುವ ಮನೆಗಳ ಗೋಡೆಗಳು, ಮಹಡಿಗಳು, ಸೋಫಾ, ಖುರ್ಷಿ ಹೀಗೆ ಎಲ್ಲ ಕಡೆಯೂ ಗೀಚಲ್ಪಟ್ಟಿರುವುದು ಸಾಮಾನ್ಯ. ಎಷ್ಟು ಬೇಡವೆಂದರೂ ಗೋಡೆಯನ್ನೇ ದೊಡ್ಡ ಬೋರ್ಡ್‌ ಅಂದುಕೊಂಡು ಮಕ್ಕಳು ಬರೆಯುತ್ತಿರುತ್ತಾರೆ. ಎಷ್ಟು ಬೈದರೂ, ಬುದ್ಧಿ ಹೇಳಿದರೂ ಕೇಳದ ಬಹಳಷ್ಟು ಮಕ್ಕಳು ಅದನ್ನು ಮಾಡುತ್ತಲೇ ಇರುತ್ತಾರೆ. ಆದ್ರೆ ಆ ಸಾಲುಗಳು, ಅಲ್ಲಿ ಗೀಚಲಾದ ಬರಹಗಳು, ಗೆರೆಯ ಕುಣಿಕೆಗಳು ಯಾರಿಗೂ ಏನೆಂದು ಅರ್ಥವಾಗೋದಿಲ್ಲ. ಆದ್ರೆ ಇದು ಮಕ್ಕಳು ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ. ಹೀಗೆಯೇ ಒಬ್ಬ ಪುಟಾಣಿ ಮಗು ಕಾರಿನ 9Car) ಮೇಲೆ ಗೀಚುತ್ತಿರುವ ದೃಶ್ಯ ಇಂಟರ್‌ ನೆಟ್‌ (Internet) ನಲ್ಲಿ ವೈರಲ್‌ (Viral) ಆಗಿದೆ.


ಕಾರಿನ ಮೇಲೆ ʼಲಿಪ್‌ ಸ್ಟಿಕ್‌ʼ ಗೀಚುಬರಹ


ಅಂದಹಾಗೆ, ಇಲ್ಲೊಬ್ಬ ಪುಟ್ಟ ಮಗು ಲಿಪ್‌ ಸ್ಟಿಕ್‌ ನಿಂದ ಕಾರಿನ ಮೇಲೆ ಗೀಚುತ್ತಿರುವ ವಿಡಿಯೋ ನೆಟ್ಟಿಗರ ಮನಸೆಳೆದಿದೆ. ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಾಕಷ್ಟು ವೈರಲ್‌ ಆಗಿದೆ. ಬರೀ 7 ಸೆಕೆಂಡ್‌ ಗಳಿರುವ ಈ ಕ್ಯೂಟ್‌ ವಿಡಿಯೋವನ್ನು ಟ್ವಿಟರ್ ಬಳಕೆದಾರರಾದ ಮೊರಿಸ್ಸಾ ಶ್ವಾರ್ಟ್ಜ್ ಅವರು ಹಂಚಿಕೊಂಡಿದ್ದಾರೆ. ಆಕೆ ಈ ವಿಡಿಯೋಕ್ಕೆ "ಅವನು ಮುಂದೊಂದು ದಿನ ಬಾಡಿ ಶಾಪ್ ಹೊಂದುತ್ತಾನೆ" ಎಂದು ಶೀರ್ಷಿಕೆ ನೀಡಿದ್ದಾಳೆ. ಪೋಸ್ಟ್‌ನ ಪ್ರಕಾರ, ವೀಡಿಯೊವನ್ನು ಯುಎಸ್‌ಎಯ ನ್ಯೂಜೆರ್ಸಿಯಿಂದ ಅಪ್‌ಲೋಡ್ ಮಾಡಲಾಗಿದೆ ಎಂದು ತೋರುತ್ತದೆ.


ಅಮ್ಮ ಅಪ್ಪನ ವಸ್ತುಗಳನ್ನು ಮಕ್ಕಳು ಗೊತ್ತಿಲ್ಲದ ಹಾಗೆ ಬಳಸುವುದು ಸಾಮಾನ್ಯ. ಆದ್ರೆ ಈ ವಿಡಿಯೋದಲ್ಲಿರುವ ಪುಟ್ಟ ಮಗು ಅಮ್ಮನ ಲಿಪ್‌ ಸ್ಟಿಕ್‌ ಗಳನ್ನೆಲ್ಲ ಹೊತ್ತು ತಂದಿದೆ. ಮನೆಯ ಎದುರು ನಿಲ್ಲಿಸಿದ್ದ ಕಾರಿನ ಮೇಲೆ ಮನಸೋ ಇಚ್ಛೆ ಗೀಚಿದೆ. ಕಾರ್‌ ನ ಬಾಗಿಲುಗಳು ಮೇಲೆ ಕೆಂಪು ಬಣ್ಣದ ಸಾಲು ಸಾಲು ಗೆರೆಗಳನ್ನು ಬರೆದಿದೆ.


ಚಳಿಗಾಲದಲ್ಲಿ ಹಾಕಿಕೊಳ್ಳೋ ಹೂಡೆಡ್‌ ಜಂಪ್‌ ಸ್ಯೂಟ್‌ ಧರಿಸಿರುವ ಈ ಪುಟಾಣಿ ಆರಾಮಾಗಿ ಖುಷಿ ಖುಷಿಯಲ್ಲಿ ಗೀಚುವ ಕೆಲಸದಲ್ಲಿ ನಿರತವಾಗಿತ್ತು. ಬಹುಶಃ ದೊಡ್ಡವರ್ಯಾರೋ ಬಂದಿರುವುದು ಕಂಡು ಫಟ್ಟನೆ ಗೀಚುತ್ತಿದ್ದ ಲಿಪ್‌ ಸ್ಟಿಕ್‌ ತೆಗೆದು ನೆಲದ ಮೇಲಿಟ್ಟು ಟ್ರೈಸಿಕಲ್‌ ನಲ್ಲಿ ಹೊರಟಿದೆ.


ಇದನ್ನೂ ಓದಿ: ಈ ವಿಮಾನ ಹತ್ತಲು ಚೆಕ್-ಇನ್​ ಮಾಡ್ಬೇಕು, ಆದ್ರೆ ಟೇಕ್​ ಆಫ್ ಮಾತ್ರ ಆಗಲ್ಲ


ವಿಡಿಯೋ ಸಖತ್‌ ವೈರಲ್


ಇನ್ನು ಟ್ವಿಟ್ಟರ್‌ ನಲ್ಲಿ ಈ ಪುಟಾಣಿಯ ವಿಡಿಯೋ 99,000 ವೀಕ್ಷಣೆಗಳನ್ನು ಕಂಡಿದ್ದು, 413 ಲೈಕ್ಸ್‌ ಗಳನ್ನು ಪಡೆದಿದೆ. ಇನ್ನು ಈ ಮುದ್ದಾದ ಮಗುವಿನ ವಿಡಿಯೋಕ್ಕೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಅನೇಕ ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ನಗುವ ಎಮೋಜಿಗಳನ್ನು ಹಾಕಿದ್ದಾರೆ. "ಮಗುವಿನ ಕಿಡಿಗೇಡಿತನವನ್ನು ಪ್ರತಿಬಿಂಬಿಸುತ್ತಾ, ಅವನು ಉತ್ತಮ ಉತ್ಪನ್ನವನ್ನು ಅಭಿವೃದ್ಧಿಪಡಿಸುತ್ತಾನೆ ಮತ್ತು ಅವನ ಭವಿಷ್ಯದಲ್ಲಿ ಯಶಸ್ವಿಯಾಗುತ್ತಾನೆ" ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ.ಇನ್ನೊಬ್ಬರು, "ರನ್ ಬೇಬಿ ರನ್ ಚೆನ್ನಾಗಿದೆ ಎಂದಿದ್ದಾರೆ. ಇನ್ನೊಬ್ಬರು ಮುಂದಿನ ಬಾರಿ ನೀವು ಸ್ಕ್ರೂಡ್ರೈವರ್ ಅನ್ನು ತೆಗೆದುಕೊಂಡರೆ!.," "ತುಂಬಾ ತಮಾಷೆ" ಎಂದು ಬರೆದಿದ್ದಾರೆ. ಮತ್ತೊಬ್ಬರು ಮಗುವಿನ ಕ್ರಿಯೇಟಿವಿಟಿಯನ್ನು ಮೆಚ್ಚಿ "ಮೇಕಿಂಗ್ ಥಿಂಗ್ ಥಿಂಗ್ಸ್ ಪ್ರಿಟಿಯರ್.. ವೆರಿ ವೆಲ್ ಡನ್" ಎಂದು ಕೂಡ ಸೇರಿಸಿದ್ದಾರೆ.


ಇದನ್ನೂ ಓದಿ: 32 ವರ್ಷಗಳಲ್ಲಿ ಈ ದಂಪತಿ ಒಮ್ಮೆಯೂ ಜಗಳವಾಡಿಲ್ವಂತೆ, ಹೆತ್ತವರ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ಮಗಳು


ಒಟ್ಟಾರೆ, ಮಗು ಎಂಥದ್ದೇ ಕಿಲಾಡಿ ಮಾಡಿದರೂ ಅದು ಮುಗ್ಧವಾಗಿ ನಕ್ಕುಬಿಟ್ಟರೆ ಎಲ್ಲವೂ ಮರೆತು ಹೋಗುತ್ತವೆ. ಮಗುವಿನ ಆಟ ನೋಡೋಕೇ ಚೆಂದ. ಇನ್ನು ಅವರು ದೊಡ್ಡವರಾದ ಮೇಲೆ ಇದರ ನೆನಪು ಪೋಷಕರಿಗೆ ಇನ್ನಷ್ಟು ಖುಷಿ ಕೊಡುತ್ತವೆ ಅನ್ನೋದು ಸುಳ್ಳಲ್ಲ.

Published by:Sandhya M
First published: