Viral Story: ಆತನದ್ದು ಆಂಧ್ರ ಪ್ರದೇಶ, ಆಕೆಯದ್ದು ಜರ್ಮನಿ! ಇಬ್ಬರ ಲವ್​ ಮ್ಯಾರೇಜ್​ ನಡೆದದ್ದು ಅಮೆರಿಕದಲ್ಲಿ

ಶಶಾಂಕ್​ ಮತ್ತು ಲಿಂಡಾ ಮುಲ್ಲರ್​ ವಿವಾಹವಾಗಲು ನಿರ್ಧರಿಸುತ್ತಾರೆ. ಕೊನೆಗೆ ಇಬ್ಬರ ಪ್ರೇಮ ವಿಚಾರವನ್ನು ಮನೆಯಲ್ಲಿ ಹೇಳುತ್ತಾರೆ. ಪೋಷಕರು ಇಬ್ಬರಿಬ್ಬರ ಪ್ರೀತಿಯನ್ನು ಕಂಡು, ಒಪ್ಪಿಕೊಂಡು, ಕೊನೆಗೆ ಮದುವೆಗೆ ಸಕಲ ಸಿದ್ಧತೆ ಕೂಡ ಮಾಡುತ್ತಾರೆ. ಆದರೆ.....

ಶಶಾಂಕ್​ ಮತ್ತು ಲಿಂಡಾ ಮುಲ್ಲರ್

ಶಶಾಂಕ್​ ಮತ್ತು ಲಿಂಡಾ ಮುಲ್ಲರ್

  • Share this:
    ವಿವಾಹವೆಂಬುದು ಪವಿತ್ರ ಬಂಧ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಜೀವನ ನಡೆಸಿದಾಗಲೇ ಆ ವಿವಾಹಕ್ಕೆಕೊಂದು ಅರ್ಥ ಸಿಗುತ್ತದೆ. ಅಂದಹಾಗೆಯೇ ಈಗೆಲ್ಲಾ ವಿವಾಹವೂ (Marriage) ಆನ್​ಲೈನ್​ನಲ್ಲೂ (Online) ನಡೆಯುತ್ತದೆ. ಅಮೆರಿಕದಲ್ಲಿ (America) ವರ, ಇಂಗ್ಲೆಂಡ್​​ನಲ್ಲಿ ವಧು, ಭಾರತದಲ್ಲಿ (India) ವಧು-ವರನ ತಂದೆ ತಾಯಿ ಕುಳಿತುಕೊಂಡು ಹಾರೈಸುವ ಮೂಲಕ ಆನ್​ಲೈನ್​ ಮದುವೆಯೂ ನಡೆಯುತ್ತಿದೆ. ಆದರೆ ಇಲ್ಲೊಂದು ಸ್ಟೋರಿ ಇದೆ. ಹುಡುಗ ಆಂಧ್ರ ಪ್ರದೇಶದವನು (Andra Pradesh), ಹುಡುಗಿ ಜರ್ಮನಿಯವಳು (Germany). ಇಬ್ಬರದ್ದು ಲವ್​ ಮ್ಯಾರೇಜ್ (Love Marriage)​. ಆದರೆ ಅವರಿಬ್ಬರು ವಿವಾಹವಾದದ್ದು ಮಾತ್ರ ಅಮೆರಿಕದಲ್ಲಿ. ಅಂದಹಾಗೆಯೇ ಈ ಘಟನೆ ಕೊಂಚ ವಿಚಿತ್ರವಾಗಿದ್ದು, ಈ ಜೋಡಿಯ ಲವ್​ ಸ್ಟೋರಿಯ (Love Story) ಬಗ್ಗೆ ತಿಳಿದುಕೊಳ್ಳಲೇಬೇಕು.

    ವಿಶಾಖಪಟ್ಟಣಂ ಮೂಲದ ನಿವೃತ್ತ ಅಧಿಕಾರಿ ಹಾಗೂ ವಿಶಾಖ ಕಲಾಸಾಗರದ ಸಂಸ್ಥಾಪಕ ಅಧ್ಯಕ್ಷ ವಾನಪಲ್ಲಿ ಶ್ರೀಮನ್ನಾರಾಯಣ ಅವರ ಏಕೈಕ ಪುತ್ರ ಶಶಾಂಕ್ ಜರ್ಮನಿಯಲ್ಲಿ ನೆಲೆಸಿದ್ದಾರೆ. ಜರ್ಮನಿಯ ಕೆಲಸ ಮಾಡುತ್ತಿದ್ದ ಶಶಾಂಕ್​ಗೆ ಅಲ್ಲಿಯ ಲಿಂಡಾ ಮುಲ್ಲರ್ ಎಂಬ ಯುವತಿಯ ಪರಿಚಯವಾಗುತ್ತದೆ. ಇಬರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಸ್ನೇಹ ಕೊನೆಗೆ ಪ್ರೀತಿಯತ್ತ ಮುಖಮಾಡುತ್ತದೆ.

    ಶಶಾಂಕ್​ ಮತ್ತು ಲಿಂಡಾ ಮುಲ್ಲರ್​ ವಿವಾಹವಾಗಲು ನಿರ್ಧರಿಸುತ್ತಾರೆ. ಕೊನೆಗೆ ಇಬ್ಬರ ಪ್ರೇಮ ವಿಚಾರವನ್ನು ಮನೆಯಲ್ಲಿ ಹೇಳುತ್ತಾರೆ. ಪೋಷಕರು ಇಬ್ಬರಿಬ್ಬರ ಪ್ರೀತಿಯನ್ನು ಕಂಡು, ಒಪ್ಪಿಕೊಂಡು, ಕೊನೆಗೆ ಮದುವೆಗೆ ಸಕಲ ಸಿದ್ಧತೆ ಕೂಡ ಮಾಡುತ್ತಾರೆ. ಆದರೆ ದೂರದ ಅಮೆರಿಕದಲ್ಲಿ ವಿವಾಹವಾಗಲು ಶಶಾಂಕ್​ ಮತ್ತು ಲಿಂಡಾ ಮುಲ್ಲರ್​ ನಿರ್ಧರಿಸಿದ ಕಾರಣ ಮದುವೆ ಅಮೆರಿಕದಲ್ಲಿ ನಡೆಯುತ್ತದೆ.

    ಇದನ್ನೂ ಓದಿ: Viral Story: ಮದುವೆಯೂ ಆಗಿಲ್ಲ, ಗೆಳತಿಯೂ ಇಲ್ಲ, ಆದ್ರೆ ಈ ಯಂಗ್​ ಹೀರೋ 48 ಮಕ್ಕಳ ತಂದೆ!

    ಭಾರತೀಯ ಸಂಪ್ರದಾಯದಂತೆ ಶಶಾಂಕ್​ ಮತ್ತು ಲಿಂಡಾ ಮುಲ್ಲರ್​ ಅಮೆರಿಕದಲ್ಲಿ ಹಸೆಮಣೆ ಏರುತ್ತಾರೆ. ಪೋಷಕರ ಸಮ್ಮುಖದಲ್ಲಿ ಶಶಾಂಕ್​ ತನ್ನ ಪ್ರಿಯತಮೆ ಲಿಂಡಾಗೆ ತಾಳಿ ಕಟ್ಟುತ್ತಾರೆ. ಇಲ್ಲಿ ಹೈಲೈಟ್ಸ್​ ಆದ ಸಂಗತಿ ಎಂದರೆ ಲಿಂಡಾ ಭಾರತೀಯ ಸಂಪ್ರದಾಯದಂತೆ ಈ ಜೋಡಿ ಅಮೆರಿಕದಲ್ಲಿ ವಿವಾಹವಾಗುತ್ತಾರೆ.



    ಇದೇ ರೀತಿಯ ಮದುವೆಗಳು ಹಿಂದೆಯೂ ನಡೆದಿವೆ. ಅಷ್ಟೇ ಏಕೆ ವಿದೇಶಿಯರು ಭಾರತದ ಹಲವಾರು ದಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ಇಲ್ಲಿನ ಸಂಪ್ರದಾಯದಂತೆ ವಿವಾಹವಾದವರೂ ಇದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ದೇವಸ್ಥಾನಗಳಿಗೆ ವಿದೇಶದಿಂದ ಬಂದು ಇಲ್ಲಿನ ಸಂಪ್ರದಾಯದಂತೆ ಮದುವೆ ಆದ ಅನೇಕ ಉದಾಹರಣೆಗಳು ಕಣ್ಣ ಮುಂದಿವೆ.

    ಇದನ್ನೂ ಓದಿ: Army Background: ಬಾಲಿವುಡ್​ನ ಈ ನಟಿಯರು ಸೇನಾ ಕುಟುಂಬದಿಂದ ಬಂದವರು! ಇವರ ಫ್ಯಾಮಿಲಿ ಬಗ್ಗೆ ತಿಳಿದುಕೊಳ್ಳಲೇಬೇಕು

    ಭಾರತೀಯ ಸಂಸ್ಕೃತಿಗಳಿಗೆ ಮಾರು ಹೋಗಿ, ಇಲ್ಲಿನ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಬದುಕುವ ಹಲವಾರು ವಿದೇಶಿಗರನ್ನು ಇಲ್ಲಿ ಕಾಣಬಹುದಾಗಿದೆ. ಅಷ್ಟೇ ಏಕೆ ಭಗವಾನ್​ ಕೃಷ್ಣ ಆರಾಧನೆ ಮಾಡುವ ಮತ್ತು ಶಿವನನ್ನು ಆರಾಧಿಸುವ ವಿದೇಶಿಗರು ಕೂಡ ಇದ್ದಾರೆ. ಉತ್ತರ ಪ್ರದೇಶ, ಹಿಮಾಲಯದ ಕೆಲವು ಭಾಗಗಳಿಗೆ ಹೋದಾಗ ಶಿವನ ಆರಾಧನೆ ಮಾಡುವ ಮತ್ತು ಎಲ್ಲವನ್ನು ತ್ಯಜಿಸಿ ಧ್ಯಾನದತ್ತ ಮುಖ ಮಾಡಿದ ವಿದೇಶಿ ಸನ್ಯಾಸಿಗಳನ್ನು ಕಾಣಬಹುದಾಗಿದೆ. ವಿವಾಹವೊಂದೆ ಅಲ್ಲ, ಭಾರತೀಯ ಸಂಸ್ಕೃತಿಗೆ ಮಾರು ಹೋದವರು ಅನೇಕರಿದ್ದಾರೆ.
    Published by:Harshith AS
    First published: