ವೈರಲ್ ಆಯ್ತು ಯುವಕ, ಯುವತಿ ಅಪ್ಪಿಕೊಂಡ ಈ ಫೋಟೋ...!: ಕಣ್ಣನ್ನೇ ಮೋಸ ಮಾಡಲಿದೆ ಈ ಚಿತ್ರ


Updated:May 30, 2018, 1:13 PM IST
ವೈರಲ್ ಆಯ್ತು ಯುವಕ, ಯುವತಿ ಅಪ್ಪಿಕೊಂಡ ಈ ಫೋಟೋ...!: ಕಣ್ಣನ್ನೇ ಮೋಸ ಮಾಡಲಿದೆ ಈ ಚಿತ್ರ

Updated: May 30, 2018, 1:13 PM IST
ನ್ಯೂಸ್ 18 ಕನ್ನಡ

ಸಾಮಾಜಿಕ ಜಾಲಾತಾಣಗಳಲ್ಲಿ ಸದ್ಯ ಫೋಟೋ ಒಂದು ಭಾರೀ ವೈರಲ್ ಆಗುತ್ತಿದ್ದು, ಬಹುತೇಕ ಮಂದಿ ಈ ಚಿತ್ರವನ್ನು ಶೇರ್ ಮಾಡಿಕೊಳ್ಳುತ್ತಿದ್ಧಾರೆ. ಯುವಕ, ಯುವತಿ ಪರಸ್ಪರ ಅಪ್ಪಿಕೊಂಡ ಈ ಫೋಟೋ ಮೇ 24 ರಂದು ಟ್ವಿಟರ್​ನಲ್ಲಿ ಈ ಫೋಟೋ ಶೇರ್ ಆಗಿದೆ. ಮೊದಲಿಗೆ ಯುವಕನೇ, ಯುವತಿಯನ್ನು ಅಪ್ಪಿಕೊಂಡಂತೆ ಕಂಡು ಬರುವ ಈ ಫೋಟೋ ಸಲಿಯತ್ತೇ ಬೇರೆ ಇದೆ. ಯಾಕೆಂದರೆ ಕಣ್ಣನ್ನೇ ಮೋಸ ಮಾಡುವ ಈ ಫೋಟೋದಲ್ಲಿ ವಾಸ್ತವವಾಗಿ ಹುಡುಗಿಯೇ, ಹುಡುಗನನ್ನು ಅಪ್ಪಿಕೊಂಡಿದ್ದಾಳೆ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಇನ್ನು ಹುಡುಗಿ ಧರಿಸಿರುವ ಹೀಲ್ಸ್​ನಿಂದಲೂ ಕಂಡು ಹಿಡಿಯಬಹುದು.


ಜಾಲಾತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ಫೋಟೋ ಈಗಾಗಲೇ 1 ಲಕ್ಷಕ್ಕೂ ಅಧಿಕ ಲೈಕ್ಸ್​ ಗಿಟ್ಟಿಸಿಕೊಂಡಿದ್ದು, 45 ಸಾವಿರಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಆಗಿದೆ. ಆರಂಭದಲ್ಲಿ ಎಲ್ಲರೂ ಯುವಕನೇ ಯುವತಿಯನ್ನು ಅಪ್ಪಿಕೊಂಡಿದ್ದಾನೆ, ಆತನೇ ಹೀಲ್ಸ್​ ಧರಿಸಿದ್ದಾನೆಂದು ಎಲ್ಲರೂ ಅಂದುಕೊಂಡಿದ್ದರು. ಹೀಗಾಗಿ ಟ್ವಿಟರ್​ನಲ್ಲಿ ಈ ಫೋಟೋಗೆ ರಿಯಾಕ್ಷನ್ಸ್​ ಕೂಡಾ ಬಂದಿವೆ.
Loading...ಆದರೆ ಕೊನೆಗೆ ಇದೇ ಟ್ವಿಟರ್​ನಲ್ಲಿ ಬಳಕೆದಾರನೊಬ್ಬ ಯುವಕ ಕುರ್ಚಿಯಲ್ಲಿ ಕುಳಿತುಕೊಂಡಿದ್ದು ಹಾಗೂ ಯುವತಿ ಹಿಂದಿನಿಂದ ಅಪ್ಪಿಕೊಂಡಿರುವುದನ್ನು ಸ್ಪಷ್ಟಪಡಿಸಿದ್ದಾರೆ.
First published:May 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ