Viral Story: ಬಾಯ್​ಫ್ರೆಂಡ್​ BMW ಕಾರು ಖರೀದಿಸಿಲ್ಲವೆಂದು ಟೆಸ್ಲಾ ಕಾರು ಮಾಲೀಕನೊಂದಿಗೆ ಓಡಿ ಹೋದ ಪ್ರಿಯತಮೆ!

Broke Up Story: ಅವರಿಬ್ಬರದ್ದು 6 ವರ್ಷದ ಪ್ರೀತಿ. ಆದರೆ ಪ್ರಿಯತಮೆ ಹೇಳಿದಂತೆ ಪ್ರಿಯಕರ ಬಿಎಮ್​​ಡಬ್ಲ್ಯು ಕಾರು ಖರೀದಿಸಿಲ್ಲವೆಂಬ ಕಾರಣಕ್ಕೆ ಆತನಿಗೆ ಕೈ ಕೊಟ್ಟಿದ್ದಾಳೆ. 6 ವರ್ಷದ ಪ್ರೀತಿಗೆ ಬೆಲೆ ಕೊಡದೆ ಹೊರಟು ಹೋಗಿದ್ದಾಳೆ.

Broke Up Story: ಅವರಿಬ್ಬರದ್ದು 6 ವರ್ಷದ ಪ್ರೀತಿ. ಆದರೆ ಪ್ರಿಯತಮೆ ಹೇಳಿದಂತೆ ಪ್ರಿಯಕರ ಬಿಎಮ್​​ಡಬ್ಲ್ಯು ಕಾರು ಖರೀದಿಸಿಲ್ಲವೆಂಬ ಕಾರಣಕ್ಕೆ ಆತನಿಗೆ ಕೈ ಕೊಟ್ಟಿದ್ದಾಳೆ. 6 ವರ್ಷದ ಪ್ರೀತಿಗೆ ಬೆಲೆ ಕೊಡದೆ ಹೊರಟು ಹೋಗಿದ್ದಾಳೆ.

Broke Up Story: ಅವರಿಬ್ಬರದ್ದು 6 ವರ್ಷದ ಪ್ರೀತಿ. ಆದರೆ ಪ್ರಿಯತಮೆ ಹೇಳಿದಂತೆ ಪ್ರಿಯಕರ ಬಿಎಮ್​​ಡಬ್ಲ್ಯು ಕಾರು ಖರೀದಿಸಿಲ್ಲವೆಂಬ ಕಾರಣಕ್ಕೆ ಆತನಿಗೆ ಕೈ ಕೊಟ್ಟಿದ್ದಾಳೆ. 6 ವರ್ಷದ ಪ್ರೀತಿಗೆ ಬೆಲೆ ಕೊಡದೆ ಹೊರಟು ಹೋಗಿದ್ದಾಳೆ.

  • Share this:
    ಪ್ರೀತಿಗೆ (Love) ತನ್ನದೇ ಆದ ಮಹತ್ವವಿದೆ. ಪ್ರೀತಿಸುವವರು ಅದನ್ನು ತಿಳಿದು ಪ್ರೀತಿಸಿದರೆ ಯಾವುದೇ ತೊಂದರೆ ಬಾರದು. ಆದರೆ ಕೆಲವರು ವ್ಯಕ್ತಿಯನ್ನು ಪ್ರೀತಿಸದೆ ಆತನ ಹಣ (Money), ಆಸ್ತಿಯನ್ನು (Property) ನೋಡಿ ಪ್ರೀತಿಸುತ್ತಾರೆ. ಇನ್ನು ಕೆಲವರು ಪ್ರೀತಿಯ ನಾಟಕವಾಗಿ (Drama) ಪ್ರಿಯಕರನಿಂದ ಸಾಕಷ್ಟು ದುಬಾರಿ ಉಡುಗೊರೆ (Gift) ಪಡೆದು ಕೊನೆಗೊಂದು ದಿನ ಆತನಿಗೆ ಟಾಟಾ ಗುಡ್​ ಬೈ ಹೇಳಿ ಹೊರಟು ಹೋಗುತ್ತಾರೆ. ಅದೇ ರೀತಿಯ ಸ್ಟೋರಿ ಇಲ್ಲಿದೆ. ಪ್ರಿಯಕರ ಐಷಾರಾಮಿ ಬಿಎಮ್​ಡಬ್ಲ್ಯು ಕಾರು (BMW Car) ಖರೀದಿಸಿಲ್ಲವೆಂದು ಟೆಸ್ಲಾ ಕಾರಿನ (Tesla Car) ಮಾಲಕನೊಂದಿಗೆ ಪ್ರಿಯತಮೆ ಓಡಿಹೋಗಿದ್ದಾಳೆ. ಅಂದಹಾಗೆಯೇ ಈ ಘಟನೆ ನಡೆದಿದ್ದೆಲ್ಲಿ ಗೊತ್ತಾ? ಈ ಸ್ಟೋರಿ ಓದಿ

    ಅವರಿಬ್ಬರದ್ದು 6 ವರ್ಷದ ಪ್ರೀತಿ. ಆದರೆ ಪ್ರಿಯತಮೆ ಹೇಳಿದಂತೆ ಪ್ರಿಯಕರ ಬಿಎಮ್​​ಡಬ್ಲ್ಯು ಕಾರು ಖರೀದಿಸಿಲ್ಲವೆಂಬ ಕಾರಣಕ್ಕೆ ಆತನಿಗೆ ಕೈ ಕೊಟ್ಟಿದ್ದಾಳೆ. 6 ವರ್ಷದ ಪ್ರೀತಿಗೆ ಬೆಲೆ ಕೊಡದೆ ಹೊರಟು ಹೋಗಿದ್ದಾಳೆ. ಇವಿಷ್ಟು ಮಾತ್ರವಲ್ಲದೆ ಪ್ರಿಯತಮೆಗೆ ಅದೇನು ಕಾರು ಹುಚ್ಚು ಗೊತ್ತಿಲ್ಲ. ಟೆಸ್ಲಾ ಕಾರಿನ ಮಾಲೀಕನೊಂದಿಗೆ ಪ್ರೀತಿ ಶುರುಮಾಡಿದ್ದಾಳೆ. ಈ ವಿಚಾರವನ್ನು ಪ್ರಿಯತಮೆಯೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ.

    ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಮಗನಿಸಿದ್ದನ್ನು ಹೇಳಿಕೊಳ್ಳುತ್ತಾರೆ. ಅದರಂತೆ ಫೇಸ್‌ಬುಕ್‌ನಲ್ಲಿ UTAR ಕನ್ಫೆಷನ್ಸ್ ಹೆಸರಿನ ಪುಟದಲ್ಲಿ ಮಹಿಳೆಯೊಬ್ಬಳು ತನ್ನ ಜೀವನದ ಬಗ್ಗೆ ಮತ್ತು ಹಳೆಯ ಪ್ರಿಯಕರನ ಬಗ್ಗೆ ಮಾಹಿತಿ ಹಂಚುಕೊಂಡಿದ್ದಾಳೆ.

    ಮಹಿಳೆ ಗೆಳೆಯನೊಂದಿಗಿನ 6 ವರ್ಷದ ಪ್ರೀತಿಯು ಮುರಿದು ಬಿದ್ದಿರುವುದಾಗಿ ಹೇಳಿದ್ದಾಳೆ. ತನಗಾಗಿ ಕಾರು ಖರೀದಿಸಲು ಸಾಧ್ಯವಾಗದ ವ್ಯಕ್ತಿಯೊಂದಿಗೆ ಅವಳು ಬದುಕಲು ಸಾಧ್ಯವಿಲ್ಲ. ತನ್ನ ಕಿರಿಕಿರಿಯನ್ನು ಮತ್ತಷ್ಟು ವ್ಯಕ್ತಪಡಿಸುತ್ತಾ, ಆಕೆ ತನ್ನ ಮಾಜಿ ಗೆಳೆಯನಿಗೆ 28 ​​ವರ್ಷ ವಯಸ್ಸಾಗಿದೆ ಎಂದು ಬರೆದಿದ್ದಾಳೆ. ಅವನು ಮನೆ ಅಥವಾ BMW ಕಾರನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವನೊಂದಿಗೆ ಇರಲು ಸಾಕಷ್ಟು ಮುಜುಗರವಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ.

    ಹಳೆಯ ಪ್ರೇಮಿಗೆ ಟಾಟಾ ಅಂದವಳು ಹೊಸ ಪ್ರೇಮಿಯನ್ನು ಹುಡುಕಿಕೊಂಡಳು

    ಯುವತಿ ತನ್ನ ಸಂಪೂರ್ಣ ಪ್ರೇಮಕಥೆಯನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಮಾಜಿ ಪ್ರಿಯಕರನೊಂದಿಗಿನ ಮೊದಲ ಪ್ರೀತಿ ಬಗ್ಗೆ ವಿವರಿಸಿದ್ದಾಳೆ. ಇಬ್ಬರೂ ಕಾಲೇಜಿನಲ್ಲಿ ಭೇಟಿಯಾಗಿದ್ದರು. ಆದರೆ ಇಷ್ಟು ವರ್ಷಗಳ ನಂತರವೂ ಆ ವ್ಯಕ್ತಿ ತನ್ನ ಮನೆ ಮತ್ತು BMW ಖರೀದಿಸಲು ಸಾಧ್ಯವಾಗದಿದ್ದಾಗ, ಆಕೆ ಅವನೊಂದಿಗೆ ಪ್ರೀತಿಯನ್ನು ಕೊನೆಗೊಳಿಸಿದಳು. ಇದಾದ ನಂತರ ಆಕೆ ತನ್ನ ಕಚೇರಿಯಲ್ಲಿನ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದಳು.

    ಸದ್ಯ ಆಕೆಗೆ 30 ವರ್ಷ. ಹೊಸ ಪ್ರಿಯಕರು ಐಷಾರಾಮಿ ಫ್ಲಾಟ್ ಮತ್ತು ಟೆಸ್ಲಾ ಕಾರು ಹೊಂದಿದ್ದಾರೆ. ಅದಕ್ಕಾಗಿಯೇ ಹಾಗಾಗಿ ಆತನೊದಿಗೆ ಡೇಟಿಂಗ್ ಮಾಡುತ್ತಿದ್ದಾಳೆ.

    ಈ ಪೋಸ್ಟ್‌ನ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ಮಹಿಳೆಯ ದುರಾಸೆಗೆ ಕೋಪಗೊಂಡಿದ್ದಾರೆ. ಇಂತಹ ಮಹಿಳೆ ಯಾರೊಬ್ಬರ ಸ್ನೇಹಿತನಾಗಲು ಸಾಧ್ಯವಿಲ್ಲ ಎಂದು ಒಬ್ಬರು ಬರೆದಿದ್ದಾರೆ. ಕೆಲವರು ಮಹಿಳೆಯನ್ನು ಬೆಂಬಲಿಸಿದ್ದಾರೆ.

    ಮಹಿಳೆ ತನಗಾಗಿ ಮಾತ್ರ ಅಂತಹ ಜೀವನವನ್ನು ಮಾಡುತ್ತಿದ್ದಾಳೆ, ಅದರಲ್ಲಿ ತನಗೆ ಎಲ್ಲಾ ಸೌಲಭ್ಯಗಳಿವೆ ಎಂದು ಆಕೆ ಕಂಡುಕೊಂಡಿದ್ದಾಳೆ. ಅದರಲ್ಲಿ ಏನು ತಪ್ಪಿದೆ. ಎಂದು ಮತ್ತೋರ್ವ ಮಹಿಳೆ ಕಾಮೆಂಟ್​ ಬರೆದಿದ್ದಾಳೆ. ಒಟ್ಟಿನಲ್ಲಿ ಈ ಪೋಸ್ಟ್ ಲಕ್ಷಾಂತರ ಲೈಕ್‌ ಗಿಟ್ಟಿಸಿದೆ. ಜೊತೆಗೆ ವೈರಲ್ ಆಗಿದೆ.
    Published by:Harshith AS
    First published: