Viral News: ಮಹಿಳಾ ಉದ್ಯೋಗಿಗಳಿಗೆ ಮೇಲ್ ಕಳುಹಿಸಿದ ಬಾಸ್: ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ

ಮೇಲಾಧಿಕಾರಿ ಈ ಮೇಲ್ ಕೇವಲ ಮಹಿಳಾ ಸಿಬ್ಬಂದಿಗೆ ಮಾತ್ರ ಕಳುಹಿಸಿದ್ದಾನೆ. ಈ ಆಕ್ಷೇಪಾರ್ಹ ಮೇಲ್ ಗೆ ಮಹಿಳಾ ಸಿಬ್ಬಂದಿ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುವುದು ತಿಳಿದು ಬಂದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ಮಹಿಳೆ ಪುರುಷನಿಗೆ (Man And Woman) ಸಮಾನವಾಗಿ ಕೆಲಸ ಮಾಡುತ್ತಾಳೆ. ಅದ್ಯಾಗಿಯೂ ಕೆಲವರು ಮಹಿಳೆಯ ಕೆಲಸಕ್ಕೆ (Working Woman) ಅಡ್ಡಿಯುಂಟು ಮಾಡುತ್ತಿರುತ್ತಾರೆ. ಪುರುಷರು ಮಾಡುವಷ್ಟು ಕೆಲಸವನ್ನ ಮಹಿಳೆ ಮಾಡಲ್ಲ ಎಂಬ ವಾದವನ್ನು ಕೆಲವರು ಮಂಡಿಸುತ್ತಾರೆ. ಇಂತಹ ಹೇಳಿಕೆ ನೀಡುವ ಜನರ ಮುಂದೆಯೇ ಮಹಿಳೆ ತನ್ನ ಕ್ಷೇತ್ರದಲ್ಲಿ ಉನ್ನತ ಸ್ಥಾನ ತಲುಪುವ ಮೂಲಕ ಎಲ್ಲರ ಬಾಯಿಯನ್ನು ಮುಚ್ಚುತ್ತಾಳೆ. ಈ 21ನೇ ಶತಮಾನದಲ್ಲಿಯೂ ಉದ್ಯೋಗ ಸ್ಥಳದಲ್ಲಿ (Working Place) ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಮೇಲಾಧಿಕಾರಿಗಳು (Boss Or Higher Officer) ನೀಡುವ ಕಿರುಕುಳವನ್ನ ಕೆಲವರು ಹೇಳಿಕೊಂಡ್ರೆ, ಬಹುತೇಕರು ಹೇಳಿಕೊಳ್ಳಲು ಮುಂದಾಗಲ್ಲ. ಇದೀಗ ಮಹಿಳೆಯೊಬ್ಬರ ತಮ್ಮ ಮೇಲಾಧಿಕಾರಿ ಕಳುಹಿಸಿರುವ ದುರ್ವತನೆಯ ಸಂದೇಶವನ್ನು ರೆಡಿಟ್ಟ್ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ಈ ಪೋಸ್ಟ್  (Viral Post)ಹಂಚಿಕೊಂಡಿರುವ ಮಹಿಳೆ ತಮ್ಮ ಮತ್ತು ಮೇಲಾಧಿಕಾರಿಯ ಹೆಸರನ್ನು ಹೇಳಿಕೊಂಡಿಲ್ಲ.

ಮೇಲಾಧಿಕಾರಿ ಈ ಮೇಲ್ ಕೇವಲ ಮಹಿಳಾ ಸಿಬ್ಬಂದಿಗೆ ಮಾತ್ರ ಕಳುಹಿಸಿದ್ದಾನೆ. ಈ ಆಕ್ಷೇಪಾರ್ಹ ಮೇಲ್ ಗೆ ಮಹಿಳಾ ಸಿಬ್ಬಂದಿ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುವುದು ತಿಳಿದು ಬಂದಿಲ್ಲ.

ಡೈಲಿ ಮೇಲ್ ವರದಿಯ ಪ್ರಕಾರ, ಪುರುಷ ಮೇಲಾಧಿಕಾರಿ ತನ್ನ ಎಲ್ಲ ಮಹಿಳೆ ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದಾನೆ. ಆದ್ರೆ ಇದರಲ್ಲಿ ಕೆಲ ಸಲಹೆಗಳು ಮಹಿಳಾ ಉದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿವೆ. ಈ ಮೇಲ್‌ನಲ್ಲಿ, ಪುರುಷ ತನ್ನ ಮಹಿಳಾ ಉದ್ಯೋಗಿಗಳಿಗೆ ಕಚೇರಿಯಲ್ಲಿ ಅಚ್ಚುಕಟ್ಟಾಗಿ ಉಡುಗೆ ತೊಡುವಂತೆ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾನೆ.

ಇದನ್ನೂ ಓದಿ: Illegal Relationship: ಗಂಡ ಮನೆ ಹೊರಗೆ, 'ಅವನು' ಬೆಡ್‌ ರೂಂ ಒಳಗೆ! ಬೆಂಗಳೂರಲ್ಲೇ ಹೆಚ್ಚಂತೆ ಇಂತ ಕೇಸ್!

ಪುರುಷ ಮೇಲಾಧಿಕಾರಿ ನೀಡಿದ ಸಲಹೆಗಳು ಹೀಗಿವೆ

>> ಸಿಬ್ಬಂದಿ ತಮ್ಮ ಬಟ್ಟೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು

>> ಸ್ಟೈಲ್ ಬೇಕಿಲ್ಲ ಆದರೆ ಕ್ಲೀನ್ ಬಟ್ಟೆ ಮುಖ್ಯ

>> ವಾಷಿಂಗ್ ಮಶೀನ್ ನಲ್ಲಿ ಬಟ್ಟೆಗಳನ್ನು ರಾತ್ರಿಯಿಡೀ ಬಿಡಬೇಡಿ. ಇದರಿಂದ ಬಟ್ಟೆಗಳು ದುರ್ವಾಸನೆ ಬರುತ್ತದೆ.

>> ಪ್ರತಿ ದಿನ ಕೂದಲನ್ನು ತೊಳೆದುಕೊಳ್ಳಿ, ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಸ್ನಾನ ಮಾಡಿ

>> ಒಳ್ಳೆಯ ಸುವಾಸನೆಯ ಸುಗಂಧದ್ರವ್ಯಗಳನ್ನು ಬಳಸಿ. ಅದರಲ್ಲಿಯೂ ನಿಮ್ಮ ಮುಟ್ಟಿನ ಸಮಯದಲ್ಲಿ ಎರಡ್ಮೂರು ದಿನ ಡಿಯೋಡರೆಂಟ್ ಬಳಕೆ ಮಾಡುವಂತೆ ಸಲಹೆ ನೀಡಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು

ಇನ್ನೂ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಪರ- ವಿರೋಧ ಚರ್ಚೆಗಳು ಆರಂಭಗೊಂಡಿವೆ. ಬಹುತೇಕ ಮಹಿಳೆಯರು ಇಷ್ಟು ಆಳವಾಗಿ ವಿವರಣೆ ನೀಡುವ ಅಗತ್ಯವಿರಲಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ. ಎಲ್ಲ ಸಲಹೆಗಳು ಆರೋಗ್ಯಕ್ಕೆ ಸಂಬಂಧಿಸಿದ್ರೆ ಮಹಿಳೆಯರಿಗೆ ಮಾತ್ರ ಈ ಮೇಲ್ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

boss-writes-offensive-and-derogatory-email-to-female-employees mrq
ವೈರಲ್ ಆಗಿರುವ ಮೇಲ್


ನಿಮ್ಮ ಬಾಸ್ ಕೊಳಕು ಮನಸ್ಥಿತಿಯವನು, ಲಿಂಗ ತಾರತಮ್ಯದ ಮೇಲೆ  ಈ ರೀತಿಯ ಸಂದೇಶ ರವಾನಿಸಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಒಂದಿಷ್ಟು ಜನ ಮೇಲಾಧಿಕಾರಿ ಪರವಾಗಿ ಕಮೆಂಟ್ ಸಹ ಮಾಡಿದ್ದಾರೆ.

ಇದನ್ನೂ ಓದಿ:  Viral News: ಟಾಯ್ಲೆಟ್ ಕಮೋಡ್ ನಲ್ಲಿ ಬಿದ್ದ ಮೊಬೈಲ್; ತೆಗೆಯಲು ಹೋದಾಗ ಅಲ್ಲಿಯೇ ತಗ್ಲಾಕೊಳ್ತು ಮಹಿಳೆಯ ತಲೆ

4 Baby: ಒಂದೇ ಸಲಕ್ಕೆ 4 ಮಕ್ಕಳನ್ನು ಹೆತ್ತ ತಾಯಿ, ಎಲ್ಲರೂ ಕ್ಷೇಮ

ಅಮೃತಸರದ ಗುರುನಾನಕ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ನಾಲ್ಕೂ ಮಕ್ಕಳೂ ಆರೋಗ್ಯವಾಗಿದ್ದು, ವೈದ್ಯರ ಪ್ರಕಾರ ಅವರ ತೂಕ ಒಂದೂವರೆ ಕಿಲೋ. ಸದ್ಯ ನಾಲ್ವರು ಮಕ್ಕಳನ್ನು ಐಸಿಯುನಲ್ಲಿ ಇರಿಸಲಾಗಿದೆ. ಅದೇ ಸಮಯದಲ್ಲಿ, ಮಹಿಳೆಯ ಕುಟುಂಬವು ತುಂಬಾ ಸಂತೋಷವಾಗಿದೆ. ದೇವರು ಏನು ಮಾಡಿದರೂ ಒಳ್ಳೆಯದನ್ನು ಮಾಡುತ್ತಾನೆ ಎಂದು ಅವರು ಹೇಳುತ್ತಾರೆ. ಇದೇ ವೇಳೆ ಆಸ್ಪತ್ರೆಯ ವೈದ್ಯರಿಗೂ ಕೃತಜ್ಞತೆ ಸಲ್ಲಿಸಿದರು.
Published by:Mahmadrafik K
First published: