• Home
 • »
 • News
 • »
 • trend
 • »
 • Bomb Cyclone Effect: ಸೌತ್‌ವೆಸ್ಟ್ ಏರ್‌ಲೈನ್ಸ್‌ನ ವಿಮಾನಗಳು ರದ್ದು, ಮದುವೆ ಗಂಡಿಗೆ ಮಿಸ್‌ ಆಯ್ತು ಫ್ಲೈಟ್‌!

Bomb Cyclone Effect: ಸೌತ್‌ವೆಸ್ಟ್ ಏರ್‌ಲೈನ್ಸ್‌ನ ವಿಮಾನಗಳು ರದ್ದು, ಮದುವೆ ಗಂಡಿಗೆ ಮಿಸ್‌ ಆಯ್ತು ಫ್ಲೈಟ್‌!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೌತ್‌ವೆಸ್ಟ್ ಏರ್‌ಲೈನ್ಸ್ ಸಂಸ್ಥೆ ಸಹ ತನ್ನ ಕಂಪನಿಯ ವಿಮಾನಗಳನ್ನು ಏಕಾಏಕಿ ರದ್ದು ಮಾಡಿದ್ದು, ಹಲವು ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬುಧವಾರ, ಮಧ್ಯಾಹ್ನ 1 ಗಂಟೆಯ ಹೊತ್ತಿಗೆ, ರಾಷ್ಟ್ರವ್ಯಾಪಿ ಅಂದಾಜು 2,509 ವಿಮಾನಯಾನಗಳನ್ನು ಸೌತ್‌ವೆಸ್ಟ್‌ ಏರ್‌ಲೈನ್ಸ್‌ ರದ್ದು ಮಾಡಿದೆ

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Share this:

  ಅಮೆರಿಕದ ಜನತೆ(America People) ಬಾಂಬ್‌ ಚಂಡಮಾರುತದ(Bomb Cyclone) ಪರಿಣಾಮದಿಂದಾಗಿ ಶೀತಮಾರುತದ(Cold Wave) ಆರ್ಭಟವನ್ನು ಎದುರಿಸುತ್ತಿದ್ದಾರೆ. ಇಲ್ಲಿಯವರೆಗೂ ಅನೇಕ ಸಾವು ನೋವುಗಳು ಸಂಭವಿಸಿವೆ. ಚಂಡಮಾರುತದ ಪರಿಣಾಮ ವಿಮಾನ(Flight), ರೈಲು(Trains) ಹಾಗೂ ರಸ್ತೆ ಸಂಚಾರ ಸೇರಿದಂತೆ ಎಲ್ಲ ರೀತಿಯ ಸಾರಿಗೆ ವ್ಯವಸ್ಥೆಗೆ ಅಡಚಣೆ ಉಂಟಾಗಿದೆ. ವಿಮಾನಗಳ ಹಾರಾಟ ರದ್ದು ಪಡಿಸಲಾಗಿದೆ.


  ಸೌತ್‌ವೆಸ್ಟ್ ಏರ್‌ಲೈನ್ಸ್‌ನ ಸಾವಿರಾರು ವಿಮಾನಗಳು ರದ್ದು


  ಸೌತ್‌ವೆಸ್ಟ್ ಏರ್‌ಲೈನ್ಸ್ ಸಂಸ್ಥೆ ಸಹ ತನ್ನ ಕಂಪನಿಯ ವಿಮಾನಗಳನ್ನು ಏಕಾಏಕಿ ರದ್ದು ಮಾಡಿದ್ದು, ಹಲವು ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬುಧವಾರ, ಮಧ್ಯಾಹ್ನ 1 ಗಂಟೆಯ ಹೊತ್ತಿಗೆ, ರಾಷ್ಟ್ರವ್ಯಾಪಿ ಅಂದಾಜು 2,509 ವಿಮಾನಯಾನಗಳನ್ನು ಸೌತ್‌ವೆಸ್ಟ್‌ ಏರ್‌ಲೈನ್ಸ್‌ ರದ್ದು ಮಾಡಿದೆ. ಹಲವಾರು ಪ್ರಯಾಣಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಸಂಸ್ಥೆ ಪ್ರಯಾಣಿಕರಿಗೆ ಶುಕ್ರವಾರದಿಂದ ಎಲ್ಲವನ್ನೂ ಸರಿ ಮಾಡುವ ಬಗ್ಗೆ ಭರವಸೆ ನೀಡಿದೆ.
  ಎಲ್ಲವೂ ಸರಿಹೋಗುತ್ತದೆ ಎಂದು ಭರವಸೆ ನೀಡಿದ ಸಿಇಒ


  ಸಂದರ್ಶನವೊಂದರಲ್ಲಿ ಮಾತನಾಡಿದ ಸಿಇಒ ಬಾಬ್ ಜೋರ್ಡಾನ್, "ವಿಮಾನ ಅವ್ಯವಸ್ಥೆಗೆ ವಿಷಾದಿಸುತ್ತೇನೆ, ಶುಕ್ರವಾರದಿಂದ ಪ್ರಯಾಣಿಕರು ಯಾವುದೇ ಅಡೆತಡೆಗಳಿಲ್ಲದೇ ಪ್ರಯಾಣಿಸಬಹುದು. ಬಾಡಿಗೆ ಕಾರುಗಳು, ಹೋಟೆಲ್ ಕೊಠಡಿಗಳು, ಊಟ, ಇತರ ವಿಮಾನಯಾನ ಸಂಸ್ಥೆಗಳಲ್ಲಿ ಗ್ರಾಹಕರನ್ನು ಕಾಯ್ದಿರಿಸುವುದು ಸೇರಿದಂತೆ ಎಲ್ಲಾ ಪ್ರಯಾಣಿಕರ ವೆಚ್ಚಗಳನ್ನು ಪ್ರಯಾಣಿಕರಿಗೆ ಭರಿಸುತ್ತವೆ" ಎಂದು ಜೋರ್ಡಾನ್‌ ಹೇಳಿದ್ದಾರೆ.


  ವಿಮಾನ ರದ್ದು.. ಮದುವೆ ಗಂಡಿಗೆ ಮಿಸ್‌ ಆಯ್ತು ಫ್ಲೈಟ್‌


  ವಿಮಾನ ರದ್ದು ಪ್ರಯಾಣಿಕರಿಗೆ ಇನ್ನಿಲ್ಲದ ಸಂಕಷ್ಟಗಳನ್ನು ತಂದೊಡ್ಡಿದೆ. ಹೀಗೆ ಸೌತ್‌ವೆಸ್ಟ್‌ ತನ್ನ ವಿಮಾನಗಳನ್ನು ರದ್ದು ಮಾಡಿದಾಗಲೂ ಹಲವಾರು ಪ್ರಯಾಣಿಕರು ತಮ್ಮ ಪ್ರಯಾಣದ ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.
  ಮದುವೆ ಅಂದರೆ ಅಲ್ಲಿ ವಧು-ವರ ಇರಲೇಬೇಕು ಅಲ್ವಾ, ಆದರೆ ಇಲ್ಲೊಬ್ಬ ಪ್ರಯಾಣಿಕರ ಸ್ಥಿತಿ ಮದುವೆಗೆ ಹೋಗದಂತೆ ಆಗಿಬಿಟ್ಟಿತ್ತು ನೋಡಿ. ಮದುವೆಗೆ ಇನ್ನೇನು ಒಂದೆರೆಡು ದಿನ ಬಾಕಿ ಇದ್ದಾಗ ಈ ಅವಘಡ ಸಂಭವಿಸಿದರೆ ಎಂಥವರಿಗೂ ಸಹ ಆತಂಕ ಸಹಜವಾಗಿ ಆಗುತ್ತದೆ. ಮುಂದೆ ಏನು ಮಾಡೋದು ಅನ್ನೋ ಗೊಂದಲ ಸಹ ಉಂಟಾಗುತ್ತದೆ.


  ವರ ರೀಚ್‌ಸ್ಟೈನ್ ಪ್ರಯಾಣಿಸಬೇಕಿದ್ದ ವಿಮಾನ ರದ್ದು


  ವರ್ಷಗಳ ಕಾಲ ಸೌತ್‌ವೆಸ್ಟ್‌ ವಿಮಾನಗಳಲ್ಲಿಯೇ ಪ್ರಯಾಣಿಸುತ್ತಿದ್ದ ರೀಚ್‌ಸ್ಟೈನ್ ಎಂಬ ಪ್ರಯಾಣಿಕರಿಗೆ ವಿಮಾನ ರದ್ದತಿಯಿಂದ ದೊಡ್ಡ ನಷ್ಟವೇ ಆಗಿದೆ ಎನ್ನಬಹುದು. ಏಕೆಂದರೆ ರೀಚ್‌ಸ್ಟೈನ್ ಮದುವೆಯಾಗುತ್ತಿರುವ ವರ. ಇನ್ನೇನು ತನ್ನ ಮನದನ್ನೆಯನ್ನು ನೋಡಲು ಹೋಗಲು ಕಾತುರರಾಗಿದ್ದರು. ಅದಕ್ಕಾಗಿ ತನ್ನನ್ನು ಸೇರಿ ತನ್ನ ಕುಟುಂಬದವರಿಗೆ ಫ್ಲೈಟ್‌ ಬುಕ್‌ ಮಾಡಿದ್ದರು. ಆದರೆ ಪಾಪ ವರನ ಆಸೆಗೆ ತಣ್ಣಿರೆರೆಚಿದ ವಿಮಾನಯಾನ ಸಂಸ್ಥೆ ರೀಚ್‌ಸ್ಟೈನ್‌ ಅವರ ವಿಮಾನವನ್ನು ಸಹ ರದ್ದು ಮಾಡಿತ್ತು. ಈ ವಿಷಯದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದರೀಚ್‌ಸ್ಟೈನ್‌ ತಮಗಾದ ದೊಡ್ಡ ಅಡಚಣೆ ಬಗ್ಗೆ ಹೇಳಿಕೊಂಡಿದ್ದಾರೆ.
  ಮದುವೆ ಹಿಂದಿನ ದಿನ ರೀಚ್‌ಸ್ಟೈನ್ ವಿಮಾನ ರದ್ದಾಗಿತ್ತು. ಲಾಡರ್‌ಡೇಲ್‌ನಿಂದ ಹೂಸ್ಟನ್‌ಗೆ ರೀಚ್‌ಸ್ಟೈನ್‌ ತೆರಳಬೇಕಿತ್ತು. ರೀಚ್‌ಸ್ಟೈನ್‌ ಅವರ ತಂದೆ ತಾಯಿಗೆ ಹೇಗೋ ಟಿಕೆಟ್‌ ಮರುಬುಕ್ ಮಾಡಲು ಸಾಧ್ಯವಾಯಿತು. ಇನ್ನು ಕೆಲ ಸಂಬಂಧಿಕರು ತಮ್ಮ ಸ್ವಂತ ವಾಹನಗಳಲ್ಲಿ ರೋಡ್‌ ಮೂಲಕ ಮದುವೆ ಸ್ಥಳಕ್ಕೆ ಪ್ರಯಾಣಿಸಿದರು.


  ತಕ್ಷಣ ಬೇರೆ ವಿಮಾನ ಬುಕ್


  ಇನ್ನೂ ವಿಷಯ ತಿಳಿದ ವಧು ವೆಂಡಿ ಅವರು ವರ ರೀಚ್‌ಸ್ಟೈನ್‌ಗೆ ಬೇರೆ ವಿಮಾನವನ್ನು ತಕ್ಷಣ ಬುಕ್‌ ಮಾಡಿದರು. ಹೂಸ್ಟನ್‌ಗೆ ಬರಲು ಪರದಾಡಿದ ರೀಚ್‌ಸ್ಟೈನ್‌ಗೆ ಹೇಗೋ ಅದೃಷ್ಟವಶಾತ್‌ ವಿಮಾನ ಸಿಕ್ಕಿದೆ. ವಧು-ವರ ಅಂದುಕೊಂಡಂತೆ ಇಂದು ಅವರಿಬ್ಬರ ಮದುವೆ ನಡೆಯಲಿದೆ.


  ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ


  ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಊರಿಗೆ, ಮನೆಗಳಿಗೆ ತೆರಳಲು ಸಿದ್ಧರಾಗಿದ್ದ ಪ್ರಯಾಣಿಕರ ಕೋಪಕ್ಕೆ ವಿಮಾನ ರದ್ದತಿ ಕಾಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವು ಪ್ರಯಾಣಿಕರು ಸೌತ್‌ವೆಸ್ಟ್‌ ವಿಮಾನಯಾನ ಸಂಸ್ಥೆ ಸೇರಿ ಬೇರೆ ಸಂಸ್ಥೆಗಳನ್ನು ಟ್ಯಾಗ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  Published by:Latha CG
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು