ಸಾಮಾಜಿಕ ಜಾಲತಾಣಿಗರ ಹೃದಯ ಕದ್ದ ಮಕ್ಕಳ ಮುಗ್ದತೆಯ ಸೆಲ್ಫಿ

ದುಬಾರಿ ಮೊಬೈಲ್​ ಕೊಡಿಸಿ ಕೂಡ ಮಕ್ಕಳ ಮುಖದಲ್ಲಿ ಸಂತೋಷ ಕಾಣದ ಎಷ್ಟೋ ಶ್ರೀಮಂತ ಪೋಷಕರ ಮಧ್ಯೆ ಈ ಮಕ್ಕಳ ಸೆಲ್ಫಿ ಜನಪ್ರಿಯವಾಗಲು ಕಾರಣ ಅವರ ಮನಸ್ಥಿತಿ. . ಖುಷಿ ಎಂಬುದು ಎಲ್ಲೋ ಹುಡುಕುವ ವಸ್ತುವಲ್ಲ. ಅದು ನಮ್ಮ ಮನಸ್ಥಿತಿ ಎಂಬುದರ ಜೀವನದ ಮಹತ್ವದ ಸಾರಾಂಶ ನೀಡಿದೆ.

Seema.R | news18
Updated:February 4, 2019, 4:18 PM IST
ಸಾಮಾಜಿಕ ಜಾಲತಾಣಿಗರ ಹೃದಯ ಕದ್ದ ಮಕ್ಕಳ ಮುಗ್ದತೆಯ ಸೆಲ್ಫಿ
ಮಕ್ಕಳ ಸೆಲ್ಫಿ
  • News18
  • Last Updated: February 4, 2019, 4:18 PM IST
  • Share this:
ಯಾಂತ್ರಿಕ ಯುಗದಲ್ಲಿ ಬದುಕುತ್ತಿರುವ ಈ ಕಾಲದಲ್ಲಿ ಈ ಮಕ್ಕಳ ಮುಗ್ದ ಸೆಲ್ಫಿಯೊಂದು ಬದುಕಿನ ಮಹಾಪಾಠವನ್ನೆ ನೀಡುತ್ತಿದೆ ಎಂದರೆ ತಪ್ಪಾಗಲಾರದು. ನೆಮ್ಮದಿಯ ಹುಡುಕಾಟ ನಡೆಸುತ್ತಿರುವ ಉಳ್ಳವರ ನಡುವೆ  ಈ ಮಕ್ಕಳ ಖುಷಿ ಬದುಕಿಗೆ ಹೊಸ ಅರ್ಥ ನೀಡಿದೆ. ಈ ಮಕ್ಕಳ ಈ ಫೋಟೊಗೆ ಸಾಮಾಜಿಕ ಜಾಲತಾಣಿಗರು ಮನಸೋತಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

ದುಬಾರಿ ಮೊಬೈಲ್​ ಕೊಡಿಸಿ ಕೂಡ ಮಕ್ಕಳ ಮುಖದಲ್ಲಿ ಸಂತೋಷ ಕಾಣದ ಎಷ್ಟೋ ಶ್ರೀಮಂತ ಪೋಷಕರ ಮಧ್ಯೆ ಈ ಮಕ್ಕಳ ಸೆಲ್ಫಿ ಜನಪ್ರಿಯವಾಗಲು ಕಾರಣ ಅವರ ಮನಸ್ಥಿತಿ. ಖುಷಿ ಎಂಬುದು ಎಲ್ಲೋ ಹುಡುಕುವ ವಸ್ತುವಲ್ಲ. ಅದು ನಮ್ಮ ಮನಸ್ಥಿತಿ ಎಂಬುದರ ಜೀವನದ ಮಹತ್ವದ ಸಾರಾಂಶ ನೀಡಿದೆ.

ಸೆಲ್ಫಿಯುಗದಲ್ಲಿ ಪ್ರತಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ಫೋಟೊ ತೆಗೆದುಕೊಳ್ಳುವುದನ್ನು ನೋಡಿದ ಈ ಮಕ್ಕಳು,  ಮೊಬೈಲ್​ ಇಲ್ಲದೆ ಸೆಲ್ಪಿ ವಿಶೇಷವಾಗಿದೆ. ಮೊಬೈಲ್​ ಬದಲಿಗೆ ಕಾಲಿನ ಚಪ್ಪಲಿಯನ್ನೇ ಮೊಬೈಲ್​ ಆಗಿ ಬಳಸಿದ್ದಾರೆ. ಆ ಮೂಲಕ ತಮ್ಮ ಮುಂದೆ ಇರುವುದು ನಿಜವಾದ ಮೊಬೈಲ್​ ನಂತೆ ಆ ಮಕ್ಕಳು ತಮ್ಮ ಮುಗ್ದ ನಗು ಚೆಲ್ಲಿದ್ದಾರೆ. ಈ ಕ್ಷಣದಲ್ಲಿ ಫೋಟೊಗ್ರಾಫರ್​ ಒಬ್ಬರು ಈ ಚಿತ್ರವನ್ನು ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಇದನ್ನು ಓದಿ: VIDEO:ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು "ಮೀಸೆ ಮತ್ತು ಜಡೆ" ಜಗಳ; ಮಿಸ್​ ಮಾಡ್ದೆ ನೋಡಿ

ಕೋಟಿಗಿಂತಲೂ ಬೆಲೆಬಾಳು ಈ ಫೋಟೊಗೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.  ಮುಗ್ದ ನಗು, ಜೀವನೋತ್ಸಹ ತಂಬುವ ಈ  ಮಕ್ಕಳ  ಪರಿಶುದ್ಧ ಮನಸ್ಸಿಗೆ ಸರಿಸಾಟಿಯಾವುದು ಇಲ್ಲ.

ಈ ಚಿತ್ರಕ್ಕೆ ಬಾಲಿವುಡ್​ ಮಂದಿ ಕೂಡ ಮೆಚ್ಚುಗೆ ನೀಡಿ ಮಕ್ಕಳ ಮುಗ್ದತೆಯನ ಪರಮಾನಂದ ಅನುಭವಿಸುವ ಜೊತೆ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.First published:February 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ