Instagram Viral: 16 ವರ್ಷದ ಬಾಲಕಿಗೆ ಇನ್ಸ್ಟಾಗ್ರಾಂ ನಲ್ಲಿ ಇದ್ದಾರೆ 2 ಮಿಲಿಯನ್ ಫಾಲೋವರ್ಸ್, ಹೇಗೆ ಸಾಧ್ಯ?

ಬಾಲಿವುಡ್ ನಟ-ನಟಿಯರು ಮಾತ್ರವಲ್ಲದೆ ಹಿಂದಿ ಕಿರುತೆರೆಯ ಮಲ್ಲಿಕಾ ದುಹಾ, ಡಾಲಿ ಸಿಂಗ್, ಕೋಮಲ್ ಪಾಂಡೆ, ರಶ್ಮಿ ದೇಸಾಯಿ, ಇತ್ತೀಚಿಗೆ ನಡೆದ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಸಹ ಮಿತಿಕಾಳನ್ನ ಇನ್ಸ್ಟಾಗ್ರಾಂ ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಮಿತಿಕಾ ದ್ವಿವೇದಿ

ಮಿತಿಕಾ ದ್ವಿವೇದಿ

 • Share this:
  ಇತ್ತೀಚಿನ ದಿನಗಳಲ್ಲಿ ಕ್ರೀಡಾ (Sports )ತಾರೆಗಳು ಚಿತ್ರನಟಿಯರು (Film Actress) ರಾಜಕಾರಣಿಗಳಿಗಿಂತ,(Politician )ಸೋಶಿಯಲ್ ಮೀಡಿಯಾದಲ್ಲಿ (Social Media)ಹೆಚ್ಚು ಸಕ್ರಿಯರಾಗಿರುವ ಜನರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ.. ಅದರಲ್ಲೂ ಟಿಕ್ ಟಾಕ್ Tik tok) ಬಂದ ಬಳಿಕವಂತೂ ಯಾವುದೋ ಹಾಡಿಗೆ ಡ್ಯಾನ್ಸ್ ಮಾಡಿ, ಡೈಲಾಗ್ ಹೇಳಿ ರಿಲ್ಸ್ ಮಾಡಿ ಸಿಕ್ಕಾಪಟ್ಟೆ ಫೇಮಸ್ ಆದ ಹಲವು ಜನರು ಇದ್ದಾರೆ. ಯಾವ ಸಿನಿಮಾ ತಾರೆಯರಿಗೆ ಇಲ್ಲದಷ್ಟು ಫಾಲೋವರ್ಸ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವವರಿಗೆ ಇದ್ದಾರೆ..

  ಹೀಗಾಗಿಯೇ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ, ಸಿಕ್ಕಾಪಟ್ಟೆ ಸೋಶಿಯಲ್ ಮೀಡಿಯಾದಲ್ಲಿ (Social Media)ಆಕ್ಟಿವ್ ಆಗಿ ಇರ್ತಾರೆ.. ಅದ್ರಲ್ಲೂ ಟಿಕ್ ಟಾಕ್ ದೇಶದಲ್ಲಿ ಬ್ಯಾನ್ ಆದ ಬಳಿಕ ಇನ್ಸ್ಟಾಗ್ರಾಂ (Instagram )ರೀಲ್ಸ್ ನಲ್ಲಿ ಲಕ್ಷಾಂತರ ಫಾಲೋಯರ್ಸ್ ಗಳಿಸಿಕೊಂಡು ದೊಡ್ಡ ದೊಡ್ಡ ಸೆಲೆಬ್ರಿಟಿಗಳಾದ ಹಲವು ಜನರು ಇದ್ದಾರೆ.. ಅಂಥವರ ಸಾಲಿನಲ್ಲಿ ತನ್ನ ಡೈಲಾಗ್ ಗಳಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮಿತಿಕಾ ದ್ವಿವೇದಿ ಕೂಡ ಸೇರ್ಪಡೆಯಾಗಿದ್ದಾರೆ..
  16 ವರ್ಷದ ಬಾಲಕಿಗೆ ಇದ್ದಾರೆ 2 ಮಿಲಿಯನ್ ಫಾಲೋವರ್ಸ್

  ನಟ-ನಟಿಯರು ಅವರ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಡೈಲಿ ಅಪ್ಡೇಟ್ ಕೊಡುವುದರಿಂದ ಅವರ ಬಗ್ಗೆ ತಿಳಿದುಕೊಳ್ಳಲು ಸದಾ ಕಾಯುವ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಾರೆ.. ಆದ್ರೆ ಸಾಮಾನ್ಯ ಜನರು ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡಿ, ಲಕ್ಷಾಂತರ ಫಾಲೋಯರ್ಸ್ ಹೊಂದುವುದು ಸಾಮಾನ್ಯವಾದ ವಿಷಯವಲ್ಲ.. ಏನೇ ಮಾಡಿದ್ರೂ ಟ್ರೋಲ್ ಆಗುವ ಈ ಕಾಲದಲ್ಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ತಮ್ಮ ಟ್ಯಾಲೆಂಟ್ ನಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದವರು
  ಉತ್ತರಪ್ರದೇಶದ ಲಕ್ನೋ ಮೂಲದ ಮಿತಿಕಾ ದ್ವಿವೇದಿ.

  ಕೇವಲ 16 ವರ್ಷದ ಮಿತಿಕಾ ಉತ್ತರಪ್ರದೇಶದ ಶೈಲಿಯಲ್ಲಿ ಫ್ರೆಂಡ್ಸ್, ಕುಟುಂಬದವರು, ಹಾಗೂ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿರುವ ರೀತಿ ಸಣ್ಣ ಸಣ್ಣ ರಿಲ್ಸ್ ಮಾಡಿ ತನ್ನ ಫಾಲೋಯರ್ಸ್ ಗಳ ಮುಖದಲ್ಲಿ
  ಮಿತಿಕಾ ನಗು ಮೂಡಿಸುತ್ತಿದ್ದಾರೆ. ಅಲ್ಲದೆ ಯಾವ ಸಿನಿಮಾ ತಾರೆಯರಿಗೆ ಕಡಿಮೆ ಇಲ್ಲ ಎನ್ನುವಂತೆ ಬರೋಬ್ಬರಿ 2 ಮಿಲಿಯನ್ ಗಟ್ಟಲೆ ಫ್ಯಾನ್ ಫಾಲೋಯರ್ಸ್ ಗಳನ್ನು ಮಿತಿಕಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಂದಿದ್ದಾಳೆ..
  ಮಿತಿಕಾ ಮಾಡೋ ವಿಡಿಯೋಗಳು ಬಾಲಿವುಡ್ ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು

  ಸಾಮಾನ್ಯ ಜನರಿಗೆ ಮಾತ್ರವಲ್ಲ ಬಾಲಿವುಡ್ ನ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಮಿತಿಕಾ ಮಾಡೋ ವಿಡಿಯೋಗಳು ಸಿಕ್ಕಾಪಟ್ಟೆ ಅಚ್ಚುಮೆಚ್ಚು.. ಹೀಗಾಗ್ಲೇ 2 ಮಿಲಿಯನ್ ಗೂ ಅಧಿಕ ಫ್ಯಾನ್ ಫಾಲೋಯರ್ಸ್ ಹೊಂದಿರುವ ರಿತಿಕಾ ಖಾತೆಯನ್ನು, ಸ್ವತಹ ಬಾಲಿವುಡ್ ಸೆಲೆಬ್ರಿಟಿಗಳಾದ ಪ್ರಿಯಾಂಕಾ ಚೋಪ್ರಾ, ಆಯುಷ್ಮಾನ್ ಖುರಾನಾ, ಅನುಷ್ಕಾ ಶರ್ಮಾ, , ಯಶ್ ರಾಜ್ ಮುಖರ್ಜಿ ಸೇರಿ ಹಲವರು ಫಾಲೋ ಮಾಡುತ್ತಿದ್ದಾರೆ..

  ಇನ್ನು ಬಾಲಿವುಡ್ ನಟ-ನಟಿಯರು ಮಾತ್ರವಲ್ಲದೆ ಹಿಂದಿ ಕಿರುತೆರೆಯ ಮಲ್ಲಿಕಾ, ದುಹಾ, ಡಾಲಿ ಸಿಂಗ್, ಕೋಮಲ್ ಪಾಂಡೆ, ರಶ್ಮಿ ದೇಸಾಯಿ, ಇತ್ತೀಚಿಗೆ ನಡೆದ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಸಹ ಮಿತಿಕಾಳನ್ನ ಇನ್ಸ್ಟಾಗ್ರಾಂ ನಲ್ಲಿ ಫಾಲೋ ಮಾಡುತ್ತಿದ್ದಾರೆ.

  ಅರ್ಬಾಜ್ ಖಾನ್ ಭೇಟಿಯಾಗಿದ್ದ ಮಿತಿಕಾ

  ಇತ್ತೀಚಿಗೆ ಲಕ್ನೋದಿಂದ ಮುಂಬೈಗೆ ತೆರಳಿದ್ದ ಮಿತಿಕಾ ದ್ವಿವೇದಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾಳೆ . ಅಲ್ಲದೆ ಅರ್ಬಾಜ್ ಖಾನ್ ಜೊತೆಗಿರುವ ಫೋಟೋವನ್ನ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾಳೆ.
  ಇನ್ನು ಸೋಶಿಯಲ್ ಮೀಡಿಯಾದಲ್ಲಿ 2 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿರುವ ಮಿತಿಕಾ, ಕೇವಲ ರಿಲ್ಸ್ ಮಾಡುವುದಲ್ಲದೆ, ಪೈಡ್ ಪ್ರಮೋಷನ್ ಹಾಗೂ ಕೋಲೋಬ್ರೇಶನ್ ಮಾಡಿಕೊಂಡು ಹಣ ಕೂಡ ಸಂಪಾದನೆ ಮಾಡುತ್ತಿದ್ದಾಳೆ
  Published by:ranjumbkgowda1 ranjumbkgowda1
  First published: