Katrina-Vicky Wedding: ಕತ್ರಿನಾ ಕೈ ಮೇಲೆ 1 ಲಕ್ಷ ಬೆಲೆಯ ಮೆಹೆಂದಿ ಚಿತ್ತಾರ, ಅದರ ವಿಶೇಷತೆ ಏನು?

Katrina Kaif wedding Mehendi: ಈಗಿನ ಸುದ್ದಿ ಮದುವೆಯಲ್ಲಿ ಕತ್ರೀನಾ ಕೈಯನ್ನು ಅಲಂಕರಿಸಲಿರುವ ಮದರಂಗಿಯದ್ದು. ರಾಜಸ್ಥಾನದ ಜೋಧಪುರದ ಪಾಲಿ ಜಿಲ್ಲೆಯಿಂದ ಸೋಜತ್ ಮೆಹಂದಿಯನ್ನು ಮದುವೆಯ ದಿನ ಕತ್ರೀನಾರಿಗೆ ಕಳುಹಿಸಲಾಗುವುದಂತೆ. ಆ ಮದರಂಗಿಯ ಮೌಲ್ಯ 1 ಲಕ್ಷ ರೂ.

ವಿಕ್ಕಿ-ಕತ್ರಿನಾ

ವಿಕ್ಕಿ-ಕತ್ರಿನಾ

  • Share this:
ನಟ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರೀನಾ ಕೈಫ್ (Katrina Kaif) ಮದುವೆಯ ಸಿದ್ಧತೆಗಳು ನಡೆಯುತ್ತಿವೆ. ಆದರೂ, ಅವರಿಬ್ಬರೂ ಆ ಕುರಿತು ಯಾವುದೇ ಹೇಳಿಕೆಗಳನ್ನು ನೀಡದೆ ಮೌನವಾಗಿದ್ದಾರೆ. ಅವರ ವಿವಾಹ (Wedding) ಡಿಸೆಂಬರ್‌ನಲ್ಲಿ ರಾಜಸ್ಥಾನದ (Rajasthan) ಐಷಾರಾಮಿ ಕೋಟೆ - ರೆಸಾರ್ಟ್‍ನಲ್ಲಿ ನಡೆಯಲಿದ್ದು, ಅದೊಂದು ಏಕಾಂತದ ಸ್ಥಳವಾಗಿರುವುದರಿಂದ ಅದನ್ನು ಆಯ್ಕೆ ಮಾಡಿಕೊಂಡಿರುವಂತೆ ತೋರುತ್ತಿದೆ. ವರದಿಗಳ ಪ್ರಕಾರ, ವಿಕ್ಕಿ ಮತ್ತು ಕ್ಯಾಟ್ ಮದುವೆ ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ನಡೆಯಲಿದೆ, ಆದರೆ ಅದಕ್ಕಿಂತಲೂ ಮೊದಲು ಈ ಜೋಡಿ ಕೋರ್ಟ್ ಮ್ಯಾರೇಜ್ (Court Marriage) ಮಾಡಿಕೊಳ್ಳಲಿದೆಯಂತೆ. ಇಬ್ಬರು ಜನಪ್ರಿಯ ತಾರೆಯರ ವೈಭವದ ಮದುವೆಯನ್ನು ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ವಧು ವರರ ಮದುವೆ ಉಡುಗೆ ಸೇರಿದಂತೆ ಮದುವೆ ಸಂಬಂಧಿಸಿದ ಮಾಹಿತಿಗಳು ಬಹಿರಂಗವಾಗಿವೆ. ಇದೀಗ ಬಂದಿರುವ ಮತ್ತೊಂದು ಸುದ್ದಿ, ಮದುವೆಯಲ್ಲಿ ಕತ್ರೀನಾ ಕೈಯನ್ನು ಅಲಂಕರಿಸಲಿರುವ ಮದರಂಗಿಯದ್ದು(Mehendi). ರಾಜಸ್ಥಾನದ ಜೋಧಪುರದ ಪಾಲಿ ಜಿಲ್ಲೆಯಿಂದ ಸೋಜತ್ ಮೆಹಂದಿಯನ್ನು (Sojat Mehendi) ಮದುವೆಯ ದಿನ ಕತ್ರೀನಾರಿಗೆ ಕಳುಹಿಸಲಾಗುವುದಂತೆ. ಆ ಮದರಂಗಿಯ ಮೌಲ್ಯ 1 ಲಕ್ಷ ರೂ.

ಕತ್ರೀನಾರ ಮದರಂಗಿ ಶಾಸ್ತ್ರಕ್ಕೆ ವಿಶೇಷ ಮೆಹಂದಿ

ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ , ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ಮಾಧ್ಯಮ ವರದಿಯೊಂದರ ಪ್ರಕಾರ, ರಾಜಸ್ಥಾನದ ಜೋಧಪುರದ ಪಾಲಿ ಜಿಲ್ಲೆಯಿಂದ ಸೋಜತ್ ಮೆಹಂದಿಯನ್ನು ಕತ್ರೀನಾ ಅವರ ಮದರಂಗಿ ಶಾಸ್ತ್ರಕ್ಕೆ ತರಿಸಿಕೊಳ್ಳಲಾಗುತ್ತಿದೆ. ಅದರ ಮಾದರಿಯನ್ನು ಈಗಾಗಲೇ ನಟಿಗೆ ಕಳುಹಿಸಲಾಗಿದೆಯಂತೆ.

Sojat Mehendi for Katrina
ಸೋಜತ್ ಮೆಹೆಂದಿ ಚಿತ್ತಾರ


ಸೊಜತ್‍ನ ಕುಶಲಕರ್ಮಿಗಳು ನೈಸರ್ಗಿಕವಾಗಿ ಮೆಹಂದಿ ತಯಾರಿಸುತ್ತಿದ್ದು, ಅವರು ಅದಕ್ಕೆ ಯಾವುದೇ ರಾಸಾಯನಿಕ ಸೇರಿಸುತ್ತಿಲ್ಲ. ಅದನ್ನು ಕೈಯಲ್ಲೇ ತಯಾರಿಸಲಾಗುತ್ತದೆ. ಕತ್ರೀನಾ ಕೈಫ್ ಮದುವೆಯ ಮೆಹಂದಿ ತಯಾರಿಸಲು 50, 000 ದಿಂದ 1 ಲಕ್ಷದವರೆಗೆ ವೆಚ್ಚವಾಗಲಿದೆಯಂತೆ. ಆದರೂ ಇದನ್ನು ಮಾಡುತ್ತಿರುವ ಉದ್ಯಮಿ ಈ ತಾರಾ ಜೋಡಿಯಿಂದ ಯಾವುದೇ ಹಣ ತೆಗೆದುಕೊಳ್ಳುತ್ತಿಲ್ಲವಂತೆ.

ಕರಣ್ ಜೋಹರ್, ಕೈರಾ-ಸಿದ್ದಾರ್ಥ್, ವರುಣ್ ಧವನ್‍ಗೆ ಆಮಂತ್ರಣ

ಗುಪ್ತವಾಗಿ ರೋಕಾ ಸಮಾರಂಭ ಮಾಡಿಕೊಂಡಿದ್ದ ಈ ಜೋಡಿ, ತಮ್ಮ ಮದುವೆಗೆ ಬರಲಿರುವ ಅತಿಥಿಗಳ ಪಟ್ಟಿಯನ್ನು ಕೂಡ ರಹಸ್ಯವಾಗಿಯೇ ಇಡಲು ಪ್ರಯತ್ನಿಸುತ್ತಿದೆ. ಬಂಧುಗಳು ಮತ್ತು ಸ್ನೇಹಿತರ ಹೊರತಾಗಿ, ಬಾಲಿವುಡ್ ಮಂದಿಯನ್ನು ಕೂಡ ಈ ವಿವಾಹಕ್ಕೆ ಆಮಂತ್ರಿಸಲಾಗಿದೆ.

ಇದನ್ನೂ ಓದಿ: Vicky Kaushal: ಚಾಕಲೇಟ್ ಬ್ರೌನಿ ಡಬ್ಬದೊಳಗೆ ಉಂಗುರವಿಟ್ಟು, ಕತ್ರೀನಾಳಿಗೆ ಮದುವೆ ಪ್ರಸ್ತಾಪ ಮಾಡಿದ ನಟ ವಿಕ್ಕಿ ಕೌಶಲ್!

ಕರಣ್ ಜೋಹರ್, ಅಲಿ ಅಬ್ಬಾಸ್ ಜಾಫರ್, ಕಬೀರ್ ಖಾನ್ ಮತ್ತು ಮಿನಿ ಮಾಥುರ್, ರೋಹಿತ್ ಶೆಟ್ಟಿ, ಸಿದ್ದಾರ್ಥ್ ಮಲ್ಹೋತ್ರ ಮತ್ತು ಕೈರಾ ಅಡ್ವಾಣಿ, ವರುಣ್ ಧವನ್ - ನತಾಶ ದಲಾಲ್ ಮುಂತಾದವರು ಈ ಮದುವೆಯ ಆಮಂತ್ರಿತರ ಪಟ್ಟಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಅತಿಥಿಗಳಿಗೆ ಸುಗಮ ಪ್ರಯಾಣಕ್ಕಾಗಿ ಸ್ಥಳೀಯ ಬಾಡಿಗೆ ಕಾರು ಮತ್ತು ಭದ್ರತಾ ಸೇವೆಗಳನ್ನು ಮುಂಚಿತವಾಗಿ ಕಾಯ್ದಿರಿಸಲಾಗಿದೆ.

ವಿಕ್ಕಿ – ಕತ್ರೀನಾ ನಿಶ್ಚಿತಾರ್ಥ

ನಿರ್ದೇಶಕ ಕಬೀರ್ ಖಾನ್ ಮತ್ತು ಮಿನಿ ಮಾಥುರ್ ಅವರ ಮನೆಯಲ್ಲಿ ವಿಕ್ಕಿ – ಕತ್ರೀನಾ ರೋಕಾ ನಡೆದಿತ್ತು. ಅದರಲ್ಲಿ ಕೇವಲ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಕತ್ರೀನಾ ತಾಯಿ ಸುಜಾನೆ ಟರ್ಕೋಯೆಟ್, ಸೋದರಿ ಇಸಬೆಲ್ಲೆ ಕೈಫ್, ವಿಕ್ಕಿ ಪೋಷಕರಾದ ಶಾಮ್ ಕೌಶಲ್ ಮತ್ತು ವೀಣಾ ಕೌಶಲ್ ಹಾಗೂ ಸಹೋದರ ಸನ್ನಿ ಕೌಶಲ್ ಉಪಸ್ಥಿತರಿದ್ದರು.
Published by:Soumya KN
First published: