ಬಾಲಿವುಡ್ (Bollywood)ನಟ ಗೋವಿಂದ (Govinda)ಹಾಗೂ ಅವರ ಮಡದಿ ಸುತೀನಾ ಅಹುಜಾ (sunita Ahuja) ಅವರ ಸೋದರ ಸಂಬಂಧಿ ಕೃಷ್ಣ ಅಭಿಷೇಕ್ (Krushna Abhishekh)ಕುಟುಂಬದ ನಡುವಿನ ಕಲಹದ ವಿಚಾರದಿಂದಾಗಿ ಸುದ್ದಿಯಲ್ಲಿದ್ದರು. ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅವರು ಪ್ರೀತಿಸಿ ವಿವಾಹವಾದ ವಿಷಯ ಗೊತ್ತೇ ಇದೆ. ಈಗಲೂ ಈ ಜೋಡಿಯ ನಡುವೆ ಮೊದಲಿನಷ್ಟೇ ಪ್ರೀತಿ ಇದೆ. ಅದಕ್ಕೆ ಬಾಲಿವುಡ್ ನಟ ಗೋವಿಂದ ಅವರು ತಮ್ಮ ಮಡದಿಗೆ ಮನೆಯಲ್ಲಿ ಸಾಕಷಟು ಕೆಲಸಗಳಲ್ಲಿ ಸಹಾಯ ಮಾಡುತ್ತಾರಂತೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಪುಟ್ಟ ವಿಡಿಯೋ ಇದೆ. ಹೌದು, ಗೋವಿಂದ ಅವರು ಮಡದಿ ಸುನೀತಾ ಅಹುಜಾ ಅವರ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತಾರಂತೆ. ಹೆಂಡತಿ ಒಂದು ಸಲ ಹೇಳಿದರೆ, ಮುಗಿದೇ ಹೋಯಿತು. ಹೆಂಡತಿಯ ಬಟ್ಟೆ ಐರನ್ ಮಾಡಿಕೊಟ್ಟು, ಅವರಿಗೆ ತಿಂಡಿ ಸಹ ತಿನ್ನಿಸುತ್ತಾರೆ ಈ ನಟ. ಇದನ್ನು ನೀವು ನಂಬಲೇ ಬೇಕು. ಅದಕ್ಕೆ ಸಾಕ್ಷಿಯಾಗಿ ಇಲ್ಲೊಂದು ವಿಡಿಯೋ ಸಹ ಇದೆ ನೋಡಿ.
ಕೆಲ ದಿನಗಳ ಹಿಂದೆಯಷ್ಟೆ ನಟ ಗೋವಿಂದ ಅವರು ತಮ್ಮ ಪತ್ನಿ ಸುನೀತಾ ಜೊತೆ ಕಿರುತೆರೆಯ ಜನಪ್ರಿಯ ಕಾಮಿಡಿ ಕಾರ್ಯಕ್ರಮ ದ ಕಪಿಲ್ ಶರ್ಮಾ ಶೋಗೆ (The Kapil Sharma Show) ಬಂದಿದ್ದರು. ಅಲ್ಲಿ ವ್ಯಾನಿಟಿಯಲ್ಲಿ ರೆಕಾರ್ಡ್ ಮಾಡಿದ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗೋವಿಂದ ಹಾಗೂ ಸುನೀತಾ ಅವರ ಫನ್ನಿ ವಿಡಿಯೋ ಸಖತ್ ವೈರಲ್ ಆಗಿದೆ. ಇದರಲ್ಲಿ ಸುನೀತಾ ಅಹುಜಾ ಅವರು ಆರಾಮವಾಗಿ ಕುಳಿತುಕೊಂಡಿದ್ದಾರೆ. ಜೊತೆಗೆ ಪತಿ ಗೋವಿಂದ ಅವರಿಗೆ ಆರ್ಡರ್ ಮಾಡುತ್ತಿರುವುದರನ್ನು ನೋಡಬಹುದಾಗಿದೆ. ನೀನು ಇದೇ ಬಟ್ಟೆ ತೊಟ್ಟಿಕೋ ಸಾಕು, ನನ್ನ ಈ ಡ್ರೆಸ್ ಕೊಂಚ ಐರನ್ ಮಾಡಿಬಿಡಿ, ಜೊತೆಗೆ ಈ ಹಣ್ಣನ್ನು ತಿನ್ನಿಸಿ ಎನ್ನುತ್ತಾರೆ. ಗೋವಿಂದ ಪತ್ನಿಯ ಮಾತುಗಳನ್ನು ಕೇಳುತ್ತಾ ಗಿಡಿಬಿಡಿಯಲ್ಲಿ ಎಲ್ಲ ಕೆಲಸ ಮಾಡುತ್ತಿರುತ್ತಾರೆ. ಈ ವಿಡಿಯೋ ನೋಡಿದವರು ಮಾತ್ರ ಹೊಟ್ಟೆ ಹುಣ್ಣಾಗುವಂತೆ ನಗುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Sunita Ahujaರನ್ನು ಕೆಟ್ಟ ಅತ್ತೆ ಎಂದು ಕರೆದ Kashmera Shah - ಬೀದಿಗೆ ಬಂದ ಕುಟುಂಬದ ಕಲಹ ..
ಬಾಲಿವುಡ್ನಲ್ಲಿ ಒಂದು ಕಾಲದಲ್ಲಿ ರಾಜ್ಯಭಾರ ಮಾಡಿದ
ಹಾಸ್ಯ ನಾಯಕ ನಟ ಗೋವಿಂದ. ವಿಭಿನ್ನವಾದ ನೃತ್ಯ ಶೈಲಿ, ನಟನೆ ಹಾಗೂ ಹಾಸ್ಯ ಚಟಾಕಿ ಹಾರಿಸುತ್ತಲೇ ಇತರೆ ನಾಯಕರನ್ನು ಬದಿಗೊತ್ತಿ ಯಶಸ್ಸಿನ ಉತ್ತುಂಗವೇರಿದ್ದ ನಟ ಗೋವಿಂದ. ಬಾಲಿವುಡ್ನ ಈ ನಟ ಇತ್ತೀಚೆಗಷ್ಟೆ ತಮಗೆ ತಮ್ಮ ವೃತ್ತಿ ಜೀವನದಲ್ಲಿ ಎದುರಾಗಿದ್ದ ಕೆಲವು ಕಹಿ ಘಟನೆಗಳು ಹಿರಿಯ ನಟನನ್ನು ಕೆಲ ಬಾಲಿವುಡ್ ಮಂದಿ ನಡೆಸಿಕೊಂಡ ರೀತಿ ಎಲ್ಲವನ್ನೂ ಬೇಸರದಿಂದ ನೆನಪಿಸಿಕೊಂಡಿದ್ದರು.
ಅಲ್ಲದೆ ಬಾಲಿವುಡ್ನಲ್ಲಿ ಹೇಗೆ ಅವರಿಗೆ ಅವಕಾಶಗಳನ್ನು ನೀಡದೆ ಮೂಲೆಗುಂಪು ಮಾಡಲಾಯಿತು ಎಂದು ಆರೋಪಿಸಿದ್ದರು.
ಇದನ್ನೂ ಓದಿ: Govinda: ಮತ್ತೊಮ್ಮೆ ಅಣ್ಣಾವ್ರ ಹಾಡು ಹಾಡಿ ಮನಗೆದ್ದ ಬಾಲಿವುಡ್ ನಟ ಗೋವಿಂದ..!
ಕಳೆದ 14 - 15 ವರ್ಷಗಳಲ್ಲಿ ಅವರು ಸುಮಾರು 16 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿರುವುದಾಗಿಯೂ ಹೇಳಿಕೊಂಡಿದ್ದಾರೆ. ಚಿತ್ರರಂಗದವರೂ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ತನ್ನ ಸಿನಿಮಾಗಳಿಗೆ ಥಿಯೇಟರ್ ಕೊಡದೆ ಸಿನಿ ಜೀವನವನ್ನು ಬೀಳಿಸುವ ಯತ್ನಗಳೂ ನಡೆದಿವೆ. ತನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಅಂತನ್ನಿಸುತ್ತೆ. ನಮ್ಮವರೂ ಪರವಾಗಿಬಿಡುತ್ತಾರೆ. ಅದೃಷ್ಟ ಕೈಕೊಟ್ಟರೆ ನಿಮ್ಮವರೂ ನಿಮ್ಮ ವಿರುದ್ಧ ತಿರುಗಿಬಿಡುತ್ತಾರೆ ಎಂದು ತಮ್ಮ ಅಸಮಾಧಾನ ಬಿಚ್ಚಿಡುವ ಮೂಲಕ ನಟ ಗೋವಿಂದ ಸುದ್ದಿಯಲ್ಲಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ