Olympics: ಗೆದ್ದಿದ್ದು ಯಾರೋ, ವಿಶ್ ಮಾಡಿದ್ದು ಯಾರಿಗೋ...Farhan Akhtar ಫುಲ್ ಟ್ರೋಲ್!

ಫರ್ಹಾನ್ ಅಖ್ತರ್

ಫರ್ಹಾನ್ ಅಖ್ತರ್

Farhan Akhtar: ನಾಡಿನ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿಸಿದ ಹೆಮ್ಮೆಯ ಕ್ರೀಡಾಪಟುಗಳಿಗೆ ಶುಭ ಕೋರುವಲ್ಲಿ ಸಿನಿಮಾ ಮಂದಿಯೂ ಹಿಂದೆ ಬಿದ್ದಿಲ್ಲ. ಆದರೆ ಗುಂಪಿನಲ್ಲಿ ಗೋವಿಂದ ಎನ್ನುವ ಹಾಗೆ ಎಲ್ಲರಂತೆ ತಾನು ಶುಭ ಕೋರಬೇಕು ಎಂಬ ಗಡಿಬಿಡಿಯಲ್ಲಿ ಒಂದು ಫಜೀತಿ ಮಾಡಿಕೊಂಡಿದ್ದಾರೆ ಒಬ್ಬರು ಬಾಲಿವುಡ್ ತಾರೆ. ಅವರೇನು ಮಾಡಿದ್ದಾರೆ ಗೊತ್ತೆ?

ಮುಂದೆ ಓದಿ ...
  • Share this:

Farhan Akhtar: ಈಗ ಎಲ್ಲೆಲ್ಲೂ ನಮ್ಮ ಕ್ರೀಡಾಪಟುಗಳ ಒಲಿಂಪಿಕ್ಸ್‌ ಸಾಧನೆಯದ್ದೇ ಮಾತು. ದೇಶಾದ್ಯಂತ ಎಲ್ಲೆಡೆಯಿಂದ ಅವರಿಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ನಮ್ಮ ನಾಡಿನ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿಸಿದ ಹೆಮ್ಮೆಯ ಕ್ರೀಡಾಪಟುಗಳಿಗೆ ಶುಭ ಕೋರುವಲ್ಲಿ ಸಿನಿಮಾ ಮಂದಿಯೂ ಹಿಂದೆ ಬಿದ್ದಿಲ್ಲ. ಆದರೆ ಗುಂಪಿನಲ್ಲಿ ಗೋವಿಂದ ಎನ್ನುವ ಹಾಗೆ ಎಲ್ಲರಂತೆ ತಾನು ಶುಭ ಕೋರಬೇಕು ಎಂಬ ಗಡಿಬಿಡಿಯಲ್ಲಿ ಒಂದು ಫಜೀತಿ ಮಾಡಿಕೊಂಡಿದ್ದಾರೆ ಒಬ್ಬರು ಬಾಲಿವುಡ್ ತಾರೆ. ಅವರೇನು ಮಾಡಿದ್ದಾರೆ ಗೊತ್ತೆ? ಟೋಕಿಯೋ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹಾಕಿ ತಂಡಕ್ಕೆ ಶುಭಕೋರುವ ಬದಲು, ಬೇರಾವುದೋ ತಂಡಕ್ಕೆ ಶುಭಕೋರಿದ್ದಾರೆ! ಅವರು ಮತ್ತ್ಯಾರೂ ಅಲ್ಲ ಒಳ್ಳೆಯ ನಟ ಮತ್ತು ಮೇಧಾವಿ ನಿರ್ದೇಶಕ ಎಂದು ಹೆಸರುವಾಸಿಯಾಗಿರುವ ಫರ್ಹಾನ್ ಅಖ್ತರ್! ಜನಸಾಮಾನ್ಯರು ಮಾಡುವ ಸಣ್ಣಪುಟ್ಟ ಫಜೀತಿಗಳೇ ವೈರಲ್ ಆಗುವ ಕಾಲವಿದು, ಇನ್ನು ಬಾಲಿವುಡ್ ಮಂದಿ ತಪ್ಪು ಮಾಡಿದರೆ ನೆಟ್ಟಿಗರು ಸುಮ್ಮನಿದ್ದಾರೆಯೇ? ಎಲ್ಲರೂ ತಾ ಮುಂದು ನಾ ಮುಂದು ಎಂಬಂತೆ ಫರ್ಹಾನ್ ಅಖ್ತರ್‌ರನ್ನು ಕಿಚಾಯಿಸುತ್ತಿದ್ದಾರೆ.


ಆಗಸ್ಟ್ 5ರಂದು ಭಾರತದ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆಯ ಕಿರೀಟ ತಂದುಕೊಟ್ಟಿತು. ಈ ಶುಭ ಸಂದರ್ಭದಲ್ಲಿ, ಫರ್ಹಾನ್ ಅಖ್ತರ್ ಟ್ವಿಟ್ಟರ್‌ನಲ್ಲಿ ಪುರುಷರ ಹಾಕಿ ತಂಡಕ್ಕೆ ಶುಭ ಕೋರುವ ಬದಲು, ತಪ್ಪಿ ಮಹಿಳಾ ಹಾಕಿ ತಂಡಕ್ಕೆ ಶುಭ ಕೋರಿದ್ದಾರೆ. ಬಳಿಕ ತಮ್ಮ ತಪ್ಪನ್ನು ತಿದ್ದಿಕೊಂಡ ಅವರು ಟ್ವೀಟನ್ನು ತೆಗೆದು ಹಾಕಿದ್ದಾರೆ.


ಆದರೆ ಪೋಸ್ಟ್ ಮಾಡಿದ್ದೆಲ್ಲನ್ನು ಬಳಕೆದಾರರಿಗೆ ಮಿಂಚಿನ ವೇಗದಲ್ಲಿ ತಲುಪಿಸುವ ಇಂಟರ್‌ನೆಟ್‍ನಲ್ಲಿ ಏನನ್ನೇ ಪೋಸ್ಟ್ ಮಾಡಬೇಕಾದರೂ ಎಚ್ಚರಿಕೆ ಅಗತ್ಯ ಎಂಬುದನ್ನು ಬಹುಶ: ಫರ್ಹಾನ್ ಮರೆತಿರಬೇಕು..? ಆ ತಪ್ಪಿನಿಂದಾಗಿ ಅವರೀಗ ಟ್ರೋಲ್ ಆಗುತ್ತಿದ್ದಾರೆ. ಏಕೆಂದರೆ, ಫರ್ಹಾನ್ ಅಖ್ತರ್ ಟ್ವೀಟ್‌ ತೆಗೆದು ಹಾಕುವ ಮುನ್ನವೇ ಅದರ ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಂಡಿದ್ದಾರೆ ನೆಟ್ಟಿಗರು.


ಇದನ್ನೂ ಓದಿ: Organic Farming: ಈ ರೈತ ತನ್ನ ಬೆಳೆಗಳನ್ನು ವಿಭಿನ್ನವಾಗಿ ಮಾರುತ್ತಿದ್ದಾನೆ, ವರ್ಷಕ್ಕೆ ಮಿನಿಮಮ್ 2 ಕೋಟಿ ಲಾಭ ಗ್ಯಾರಂಟಿ ! ನೀವೂ ಟ್ರೈ ಮಾಡಬಹುದು

ಬಳಿಕ ಫರ್ಹಾನ್ ಪುರುಷರ ಹಾಕಿ ತಂಡಕ್ಕೆ ಶುಭ ಕೋರಿ ಹೊಸ ಟ್ವೀಟ್ ಪೋಸ್ಟ್ ಮಾಡಿದರು. ಆದರೆ ಕಾಲೆಳೆಯಲು ಕಾಯುವ ನೆಟ್ಟಿಗರು ಸುಮ್ಮನಿರಬೇಕಲ್ಲ.. ಅವರು ಮೊದಲು ಮಾಡಿದ ತಪ್ಪು ಟ್ವೀಟನ್ನು ಹಿಡಿದುಕೊಂಡು ಟ್ರೋಲ್ ಮಾಡುತ್ತಿದ್ದಾರೆ.


“ಮತ್ತೊಂದು ಮೂರ್ಖತನ: ಭಾರತದ ಪುರುಷರ ತಂಡ ಕಂಚಿನ ಪದಕ ಗೆದ್ದು ತಂದರೆ ಮಹಿಳೆಯರ ತಂಡಕ್ಕೆ ಶುಭಕೋರಿದ ಫರ್ಹಾನ್ ಅಖ್ತರ್, ಬಳಿಕ ಟ್ವೀಟ್ ತೆಗೆದು ಹಾಕಿದ್ದಾರೆ“ ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದರೆ, ಮತ್ತೊಬ್ಬರು “ಬಾಲಿವುಡ್‍ನ ಶೂನ್ಯತೆ# ಕ್ರೀಯಾಶೀಲತೆಯ ದೂತ ಎಂದು ಕರೆಯಲ್ಪಡುವ ಮಹಾನುಭಾವ #ಫರ್ಹಾನ್ ಅಖ್ತರ್” ಎಂದು ಇನ್ನೊಬ್ಬರು ಬರೆದಿದ್ದಾರೆ.




“ಟ್ವೀಟ್ ಡಿಲೀಟ್ ಮಾಡಿದ #ಫರ್ಹಾನ್ ಅಖ್ತರ್, ಮೊದಲು ಸಿಎಎ ಫಜೀತಿ, ಈಗ ಇದು” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬ ನೆಟ್ಟಿಗ “ಬೇರೆಯೇ ಲೋಕದಲ್ಲಿದ್ದಾರೆ” ಎಂದು ಹಾಸ್ಯ ಮಾಡಿದ್ದಾರೆ.
ಫರ್ಹಾನ್ ಅಖ್ತರ್ , ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅವರ ‘ತೂಫಾನ್’ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. 2013ರಲ್ಲಿ ಫರ್ಹಾನ್ ಅಖ್ತರ್ , ರಾಕೇಶ್ ಓಂ ಪ್ರಕಾಶ್ ಮೆಹಾ ಜೋಡಿ ‘ಬಾಗ್ ಮಿಲ್ಕಾ ಬಾಗ್ ‘ಎಂಬ ಯಶಸ್ವಿ ಚಿತ್ರವನ್ನು ನೀಡಿತ್ತು.

Published by:Soumya KN
First published: