Nidhi Parmar: 37ನೇ ವಯಸ್ಸಿಗೆ ತಾಯಿಯಾಗಿ 100 ಲೀಟರ್ ಎದೆಹಾಲು ದಾನ​ ಮಾಡಿದ ಬಾಲಿವುಡ್ ನಿರ್ದೇಶಕಿ!

Saand Ki Aankh: ನಿಧಿ ಪ್ರೊಡಕ್ಷನ್​ ಹೌಸ್​ ಆರಂಭಿಸಿದರು. ಇದರ ನಡುವೆ ಅವರ ಸಮಯ ಕಳೆದು ಹೋಯಿತು. ಕುಟುಂಬವು ಅವರನ್ನು ಬೆಂಬಲಿಸುತ್ತಾ ಬಂತು. ಸ್ವಂತ ನಿರ್ಮಾಣ ಸಂಸ್ಥೆಯನ್ನು ನಿಧಿ  ಆರಂಭಿಸಿದರು ಮತ್ತು ಸ್ಯಾಂಡ್​ ಕಿ ಆಂಕ್​ ಸಿನಿಮಾ ನಿರ್ಮಾಣ ಮಾಡಿದರು.

ರಿಯಾ ಚಕ್ರವರ್ತಿ-ನಿಧಿ ಪರ್ಮಾರ್- ಸುಶಾಂತ್​ ಸಿಂಗ್​

ರಿಯಾ ಚಕ್ರವರ್ತಿ-ನಿಧಿ ಪರ್ಮಾರ್- ಸುಶಾಂತ್​ ಸಿಂಗ್​

 • Share this:
  ಕ್ಯಾಮೆರಾದ ಮುಂದೆ ಕಾಣಿಸುವ ಮತ್ತು ಪರದೆಯ ಮೇಲೆ ಅಭಿಮಾನಿಗಳಿಗೆ ಮನರಂಜನೆಯನ್ನು ಒದಗಿಸುವ ಅನೇಕರ ತಾರೆಯ ಬಗ್ಗೆ ಆಗಾಗ ಸುದ್ದಿಯಾಗುತ್ತಿರುತ್ತದೆ ಮತ್ತು ಬೇಗನೇ ವೈರಲ್​ ಆಗುತ್ತಿರುತ್ತದೆ. ಆದರೆ ಆ ವೇದಿಕೆಯನ್ನು ನಿರ್ಮಿಸಲು ಶ್ರಮಿಸಿದವರ ಬಗ್ಗೆ ಅಷ್ಟೇನು ಸುದ್ದಿಯಾಗುವುದಿಲ್ಲ. ಆದರೆ ಅದರಲ್ಲಿ ಕೆಲವರು ಪರದೆಯ ಹಿಂದೆಯೂ ಯಾರಿಗೂ ಗೊತ್ತಾಗದಂತೆ ಉತ್ತಮ ಕೆಲಸವನ್ನು ಮಾಡಿ ಜನರಿಂದ ಮೆಚ್ಚಿಗೆ ಗಳಿಸಿಕೊಂಡವರಿದ್ದಾರೆ. ಅದರಂತೆ ಖ್ಯಾತ ಬಾಲಿವುಡ್ (Bollywood)​ ನಿರ್ಮಾಪಕಿಯೊಬ್ಬರು (Producer) ತಮ್ಮ 37ನೇ ವಯಸ್ಸಿನಲ್ಲಿ 100 ಲೀಟರ್​ ಎದೆಹಾಲು (Breast Milk) ಮಾರುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಯಾರು ಆ ನಿರ್ಮಾಪಕಿ? ಯಾವ ಸಿನಿಮಾಗೆ ಬಂಡವಾಳ ಹಾಕಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

  ಕೊರೋನಾ (Corona) ಸಮಯದಲ್ಲಿ ಬಡವರಿಗೆ ಸಹಾಯ ಮಾಡಿದ, ಆಹಾರ ಪೊಟ್ಟಣಗಳನ್ನು ವಿತರಿಸಿದ ನಟ-ನಟಿಯರನ್ನು ಹೊರತು ಪಡಿಸಿ ಅನೇಕ ನಿರ್ದೇಶಕರು, ನಿರ್ಮಾಪಕರುಗಳು ಕೂಡ ಅವರ ಸಂಕಷ್ಟ ಮಿಡಿದವರಿದ್ದಾರೆ. ಆದರೆ ಅವರು ಮಾಡಿದ ಕೆಲಸಗಳು ವೈರಲ್​ ಆಗುವುದು ಅಪರೂಪ. ಆದರಂತೆ ಬಾಲಿವುಡ್​ನಲ್ಲಿ ‘ಸಾಂದ್​ ಕಿ ಆಂಕ್​‘ (Saand Ki Aankh) ಸಿನಿಮಾದ ನಿರ್ಮಾಪಕಿ ನಿಧಿ ಪರ್ಮಾರ್​ ಮಾಡಿದ ಕೆಲಸ ಸದ್ಯ ವೈರಲ್​ ಆಗಿದೆ. ಅಷ್ಟಕ್ಕೂ ಅವರು ಬರೋಬ್ಬರಿ 100 ಲೀಟರ್​ ಎದೆಹಾಲು ವಿತರಿಸಿದ್ದಾರೆ ಎಂದರೆ ನಂಬುತ್ತೀರಾ?.

  ನಿಧಿ ಪರ್ಮಾರ್​, ಹ್ಯೂಮನ್ಸ್​ ಆಫ್​​ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ‘‘ನಾನು 37ನೇ ವಯಸ್ಸಿನಲ್ಲಿ ತಾಯಿಯಾಗಲು ಬಯಸಿದೆ. ಹಾಗಾಗಿ ವೃತ್ತಿಗೆ ನಾನು ಹೆಚ್ಚಿನ ಆದ್ಯತೆ ನೀಡುತ್ತೇವೆ’’ ಎಂದು ಹೇಳಿದರು.

  ನಂತರ ಮಾತನಾಡಿದ ಅವರು. ‘‘ನಾನು ಮುಂಬೈ ಬಂದ ದಿನಗಳಲ್ಲಿ ಸಿನಿಮಾ ನಿರ್ಮಾಣ ಮಾಡುವುದು ಕಷ್ಟವಾಯಿಯು. ಮಾತ್ರವಲ್ಲದೆ ನಾನು ಹಣ ಗಳಿಸಲು ಸಾಕಷ್ಟು ಹೋರಾಟ ಮಾಡಬೇಕಾಯಿತು. ನಾನು ಜಾಹೀರಾತು ಮತ್ತು ಟ್ಯಾಲೆಂಟ್ ಏಜೆಂಟ್​ ಆಗಿ ಕೆಲಸ ಮಾಡಿದ್ದೇನೆ. ಇದರ ನಂತರ ನಾನು ಪ್ರೀತಿಗೆ ಬಿದ್ದೆ, ವಿವಾಹವಾದೆ. ನನ್ನ ಪೋಷಕರು ನೀವು ಯಾವಾಗ ಮೊಮ್ಮಗ/ಮೊಮ್ಮಗಳನ್ನು ಹೆತ್ತು ಕೊಡುತ್ತೀರಿ ಎಂದು ನಮ್ಮನ್ನು ಕೇಳಲು ಆರಂಭಿಸಿದರು’’ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

  ‘‘ಗರ್ಭಿಣಿಯಾದ ವೇಳೆ ತೂಕ ಹೆಚ್ಚಾಗುತ್ತದೆ ಮತ್ತು ನನ್ನಾಸೆ ನನಗೆ ಹೊರೆಯಾಗಲಾರಂಭಿಸಿರು. ಆದರೆ ನಾನು ಮಹಿಳೆಯಾಗಿ ಇದನ್ನು ಎದುರಿಸಲೇಬೇಕು’’ ಎಂದರು

  ನಿಧಿ ಪರ್ಮಾರ್


  ನಿಧಿ ಪ್ರೊಡಕ್ಷನ್​ ಹೌಸ್​ ಆರಂಭಿಸಿದರು. ಇದರ ನಡುವೆ ಅವರ ಸಮಯ ಕಳೆದು ಹೋಯಿತು. ಕುಟುಂಬವು ಅವರನ್ನು ಬೆಂಬಲಿಸುತ್ತಾ ಬಂತು. ಸ್ವಂತ ನಿರ್ಮಾಣ ಸಂಸ್ಥೆಯನ್ನು ನಿಧಿ  ಆರಂಭಿಸಿದರು ಮತ್ತು ಸ್ಯಾಂಡ್​ ಕಿ ಆಂಕ್​ ಸಿನಿಮಾ ನಿರ್ಮಾಣ ಮಾಡಿದರು.

  ನಿಧಿಯನ್ನು ಹ್ಯೂಮನ್ಸ್ ಆಫ್ ಬಾಂಬೆ ನೀಡಿದ ಸಂದರ್ಶನದಲ್ಲಿ 'ನಾನು ನನ್ನ ಕನಸನ್ನು ಈಡೇರಿಸಿದ್ದೇನೆ ಮತ್ತು ನಾನು ತಾಯಿಯಾಗಲು ಸಿದ್ಧನಾಗಿದ್ದೇನೆ ಎಂದು ತಿಳಿದಾಗ ಸಂತೋಷವಾಯಿತು. ಏಕೆಂದರೆ ನಾನು ಸ್ವಾಭಾವಿಕವಾಗಿ ಗರ್ಭಿಣಿಯಾಗಿದ್ದೇನೆ ಎಂದು ಅವಳು ಹೇಳಿದ್ದಾರೆ,

  ‘‘ನಾನು 37 ನೇ ವಯಸ್ಸಿನಲ್ಲಿ ತಾಯಿಯಾದೆ. ಆದರೆ ನಾನು ನನ್ನದೇ ಆದ ರೀತಿಯಲ್ಲಿ ದಾರಿ ಹಿಡಿದಿದ್ದಕ್ಕೆ ನನಗೆ ಸಂತೋಷವಾಗಿದೆ. ನನ್ನ ವೃತ್ತಿ ಮತ್ತು ಕುಟುಂಬಕ್ಕಾಗಿ ನನಗೆ ಈಗ ಪೂರ್ಣ ಸಮಯವಿದೆ’’ ಎಂದರು

  ಇದನ್ನು ಓದಿ: ಗಮನ ಸೆಳೆದ ಮಲೆನಾಡಿನ ಸ್ಮಗ್ಲರ್​​ಗಳ ನೈಜ ಘಟನೆ ಆಧಾರಿತ ಚಿತ್ರ ಸಿನಿಮಾ Kargal Nights

  100 ಲೀಟರ್ ಎದೆ ಹಾಲನ್ನು ದಾನ ಮಾಡಿದೆ

  ನಿರ್ಮಾಪಕಿ ಹೇಳಿದಂತೆ, ‘‘ನಾನು ಲಾಕ್‌ಡೌನ್ ಸಮಯದಲ್ಲಿ ಸ್ತನ್ಯಪಾನ ಮತ್ತು ದಾನ ಮಾಡುವ ಬಗ್ಗೆ ಯೋಚಿಸಿದೆ. ಅಕಾಲಿಕ ಶಿಶುಗಳಿಗಾಗಿ ಸುಮಾರು 100 ಲೀಟರ್‌ಗಳಷ್ಟು ನನ್ನ ಎದೆ ಹಾಲನ್ನು ದಾನ ಮಾಡಿದ್ದೇನೆ’’ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.


  ಇದನ್ನು ಓದಿ: Nikhil Kumaraswamy ನಟನೆಯ Rider ಸಿನಿಮಾದ ಸಾಂಗ್​ ರಿಲೀಸ್​

  ನಿರ್ಮಾಪಕಿ ನಿಧಿ ಪರ್ಮಾರ್​ ಅವರ ಆಲೋಚನೆಯಂತೆ ಸಮಾಜಕ್ಕೆ ಉತ್ತಮ ಕೆಲಸವನ್ನು ಮಾಡುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಅದರಲ್ಲು ತಾಯಿಯಾಗಿ ನಿಧಿ ಪರ್ಮಾರ್​ ತನ್ನ ಹೆಚ್ಚಾದ ಎದೆ ಹಾಲನ್ನು ಅಕಾಲಿಕ ಶಿಶುಗಳಿಗೆ ದಾನ ಮಾಡಿದ್ದಾರೆ. ಸುಮಾರು 100 ಲೀಟರ್​ ಹಾಲು ದಾನ ಮಾಡುವ ಮೂಲಕ ಎದೆಷ್ಟೋ ಕಂದಮ್ಮಗಳ ಹಸಿವು ನೀಗಿಸಿದ್ದಾರೆ. ಈ ಕಾರಣಕ್ಕೆ ಅನೇಕರು ನಿರ್ಮಾಪಕಿ ನಿಧಿ ಅವರ ಕೆಸಲವನ್ನು ಹೊಗಳಿದ್ದಾರೆ.
  Published by:Harshith AS
  First published: