HOME » NEWS » Trend » BODY OF MISSING WOMAN IN JAPAN 2011 TSUNAMI IDENTIFIED DECADE ON STG ZP

Viral News: ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಅವಶೇಷ 10 ವರ್ಷಗಳ ಬಳಿಕ ಪತ್ತೆ..!

10ನೇ ವಾರ್ಷಿಕೋತ್ಸವವು ಬರುತ್ತಿರುವ ಸಂದರ್ಭದಲ್ಲಿಯೇ ನನ್ನ ತಾಯಿಯ ಅಸ್ಥಿ ಸಿಕ್ಕಿರುವುದು ನನಗೆ ತುಂಬಾ ಸಂತೋಷವಾಗಿದೆ. ತಾಯಿಯನ್ನು ಕಳೆದುಕೊಂಡ ಅನಾಥಭಾವ ನನ್ನನ್ನು ಕಾಡುತ್ತಿತ್ತು.

news18-kannada
Updated:March 5, 2021, 4:15 PM IST
Viral News: ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಅವಶೇಷ 10 ವರ್ಷಗಳ ಬಳಿಕ ಪತ್ತೆ..!
ಸಾಂದರ್ಭಿಕ ಚಿತ್ರ
  • Share this:
2011ರಲ್ಲಿ ಜಪಾನ್​ನಲ್ಲಿ ಸಂಭವಿಸಿದ್ದ ಭೀಕರ ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಅವಶೇಷ ಈಗ ಪತ್ತೆಯಾಗಿದೆ. ಸುಮಾರು 10 ವರ್ಷಗಳ ಬಳಿಕ ಮಹಿಳೆಯ ಅವಶೇಷ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಿಯಾಗಿಯ ಈಶಾನ್ಯ ಕಡಲತೀರದಲ್ಲಿ ಫೆಬ್ರುವರಿ 17ರಂದು ತಲೆಬುರುಡೆ ಸೇರಿ ಅಸ್ಥಿಪಂಜರದ ಅವಶೇಷ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರ ಹೇಳಿಕೆ ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.

2011ರ ಮಾರ್ಚ್ 11ರಂದು ನಾಪತ್ತೆಯಾಗಿದ್ದ 61 ವರ್ಷದ ನಾಟ್ಸುಕೋ ಒಕ್ಯುಹಾಮಾ ಎಂಬ ಮಹಿಳೆಯ ಅಸ್ಥಿಪಂಜರ ಇದಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಂದು ಸಂಭವಿಸಿದ್ದ ಭೀಕರ ಸುನಾಮಿ ಹೊಡೆತಕ್ಕೆ ಸಿಲುಕಿ ನಾಟ್ಸುಕೋ ನಾಪತ್ತೆಯಾಗಿದ್ದರು. ಎಷ್ಟು ಹುಡುಕಿದ್ದರೂ ಕೂಡ ಅವರು ಸಿಕ್ಕಿರಲಿಲ್ಲ. ಇದರಿಂದ ಅವರ ಕುಟುಂಬ ಸದಸ್ಯರು ದುಃಖದಲ್ಲಿಯೇ ಕಾಲ ಕಳೆಯುವಂತಾಗಿತ್ತು. ಇದೀಗ ಅವರ ಅವಶೇಷ ಪತ್ತೆಯಾಗಿರುವುದನ್ನು ಫೋರೆನ್ಸಿಕ್ ವರದಿ ಹಾಗೂ ಡಿಎನ್‌ಎ ವಿಶ್ಲೇಷಣೆಯ ಮೂಲಕ ಖಚಿತಪಡಿಸಲಾಗಿದೆ.

2011ರ ಭೀಕರ ಸುನಾಮಿ ಹೊಡೆತಕ್ಕೆ ಸಿಲುಕಿ 15,899 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆಂದು ಜಪಾನ್ ರಾಷ್ಟ್ರೀಯ ಪೊಲೀಸ್ ಸಂಸ್ಥೆ ತಿಳಿಸಿದೆ. ಆದರೆ ಈ ದುರಂತದ 10 ವರ್ಷಗಳ ನಂತರವೂ ನಾಪತ್ತೆಯಾಗಿರುವ ಸುಮಾರು 2,500ಕ್ಕೂ ಹೆಚ್ಚು ಮಂದಿಯನ್ನು ಪತ್ತೆ ಹಚ್ಚಲಾಗಿಲ್ಲವೆಂದು ತಿಳಿದು ಬಂದಿದೆ. ಈ ಸುನಾಮಿಯಲ್ಲಿ ಹಲವು ಕುಟುಂಬಗಳು ತಮ್ಮ ಪ್ರೀತಿ ಪಾತ್ರರರನ್ನು ಕಳೆದುಕೊಂಡಿದ್ದಾರೆ, ಅವರು ಇನ್ನೂ ಕೂಡ ಕಳೆದುಹೋದವರ ನೆನಪಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ನಾಪತ್ತೆಯಾಗಿರುವವರಿಗಾಗಿ ಇನ್ನೂ ಕೂಡ ಹುಡುಕಾಟ ನಡೆಯುತ್ತಲೇ ಇದೆ.
Youtube Video

ತಮ್ಮ ತಾಯಿಯ ಅಸ್ಥಿಯನ್ನು ಹುಡುಕಿ ಕೊಟ್ಟಿದ್ದಕ್ಕಾಗಿ ಮಹಿಳೆಯ ಪುತ್ರ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ‘10ನೇ ವಾರ್ಷಿಕೋತ್ಸವವು ಬರುತ್ತಿರುವ ಸಂದರ್ಭದಲ್ಲಿಯೇ ನನ್ನ ತಾಯಿಯ ಅಸ್ಥಿ ಸಿಕ್ಕಿರುವುದು ನನಗೆ ತುಂಬಾ ಸಂತೋಷವಾಗಿದೆ. ತಾಯಿಯನ್ನು ಕಳೆದುಕೊಂಡ ಅನಾಥಭಾವ ನನ್ನನ್ನು ಕಾಡುತ್ತಿತ್ತು. ಇದರಿಂದ ನನ್ನ ಭಾವನೆಗಳಿಗೆ ತುಂಬಾ ಘಾಸಿಯುಂಟಾಗಿತ್ತು. ಇದೀಗ ತಾಯಿಯ ಅಸ್ಥಿ ಸಿಕ್ಕಿರುವುದರಿಂದ ನನಗೆ ಖುಷಿಯಾಗಿದೆ’ ಎಂದು ಅವರು ಹೇಳಿದ್ದಾರೆ.
Published by: zahir
First published: March 5, 2021, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories