ಮಾಧ್ಯಮದ ವರದಿಯ ಪ್ರಕಾರ, ಕಳೆದ ಬುಧವಾರ, ಸೆಪ್ಟೆಂಬರ್ 1 ರಂದು ಬಿಎಂಸಿ ನೇಮಿಸಿದ ಸ್ವಚ್ಛತಾ ಮಾರ್ಷಲ್ ಸುರೇಶ್ ಪವಾರ್ (36) ಸಾಂತಾಕ್ರೂಜ್ ನಲ್ಲಿರುವ ಹನ್ಸ್ ಭುಗ್ರ ಸಿಗ್ನಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದೆ. ಮಾಸ್ಕ್ ಧರಿಸದೆ ಕ್ಯಾಬ್ನಲ್ಲಿ ಕುಳಿತಿರುವ ಮಹಿಳೆಯನ್ನು ಮಾರ್ಷಲ್ ಗಮನಿಸಿ 200 ರೂ ದಂಡ ಪಾವತಿಸುವಂತೆ ಆತ ಅವರನ್ನು ಕೇಳಿದರು ಮತ್ತು ಆಕೆ ಒಪ್ಪಿಕೊಂಡರು.
ಅದರೂ, ಕ್ಯಾಬ್ ಚಾಲಕನು ವಾಹನವನ್ನು ಚಲಾಯಿಸಲು ಪ್ರಾರಂಭಿಸಿದನು ಮತ್ತು ಮಾರ್ಷಲ್ ಅವನನ್ನು ತಡೆಯಲು ಪ್ರಯತ್ನಿಸಿದರೂ ಕೂಡ ನಿಲ್ಲಿಸಲಿಲ್ಲ. ಮಾರ್ಷಲ್ ನಂತರ ಕ್ಯಾಬ್ನ ಬಾನೆಟ್ ಮೇಲೆ ಹತ್ತಿದ್ದಾರೆ. ಆದರೆ ಇದನ್ನು ಲೆಕ್ಕಿಸದ ಚಾಲಕ ಇನ್ನೂ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದಲ್ಲದೇ, . ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾನೆ. ಆದ ಕಾರಣ ಬ್ಯಾನೆಟ್ನಿಂದ ಜಾರುವ ರೀತಿಯಲ್ಲಿ ಪಕ್ಕಕ್ಕೆ ಸರಿಯುತ್ತಿದ್ದನು. ಕಾರು ಆ ಪ್ರದೇಶವನ್ನು ಬಿಟ್ಟು ಮುಂದಕ್ಕೆ ಹೋಗುವ ಮೊದಲು ಈ ದೃಶ್ಯವನ್ನು ನೋಡುತ್ತಿದ್ದ ಬೈಕ್ ಸವಾರ ಮೊಬೈಲ್ನಲ್ಲಿ ವಿಡಿಯೋವನ್ನು ದೃಶ್ಯೀಕರಿಸಿದ್ದಾರೆ.
ಸಾಂತಾಕ್ರೂಜ್ ಪೂರ್ವದ ಹನುಮಾನ್ ಟೆಕ್ಡಿಯ ನಿವಾಸಿ ಪವಾರ್. ಅವರು ಕಳೆದ ಎರಡು ವರ್ಷಗಳಿಂದ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಇಂತಹ ಘಟನೆಯನ್ನು ಎಂದಿಗೂ ಎದುರಿಸಿರಲಿಲ್ಲ ಎಂದು ಹೇಳಿದರು.
ಬುಧವಾರ ಸಂಜೆ, ನಾನು ಸಾಂತಾಕ್ರೂಜ್ನ ಹನ್ಸ್ ಭುಗ್ರಾ ಸಿಗ್ನಲ್ ಬಳಿ ಕರ್ತವ್ಯದಲ್ಲಿದ್ದಾಗ ಕ್ಯಾಬ್ನಲ್ಲಿ ಮಾಸ್ಕ್ ಧರಿಸದ ಒಬ್ಬ ಮಹಿಳೆಯನ್ನು ನೋಡಿದೆ. ನಾನು ಅವರಿಗೆ 200 ರೂಪಾಯಿ ದಂಡ ಪಾವತಿಸಲು ಕೇಳಿದಾಗ, ಅವರು ನೀಡಲು ಒಪ್ಪಿಕೊಂಡರು. ಆದರೆ ಕ್ಯಾಬ್ ಚಾಲಕ ಜಗಳವಾಡಲು ಆರಂಭಿಸಿದನು. ಕ್ಯಾಬ್ ಚಾಲಕನು ವಾಹನವನ್ನು ಮುಂದಕ್ಕೆ ಓಡಿಸಲು ಆರಂಭಿಸಿದಾಗ ಮಹಿಳೆ ದಂಡ ಪಾವತಿಸಲು ಸಿದ್ಧಳಾದಳು. ನಾನು ಅವನನ್ನು ಒಂದು ಕಡೆ ಬಂದು ಕಾರನ್ನು ನಿಲ್ಲಿಸುವಂತೆ ಪದೇ ಪದೇ ಕೇಳಲು ಪ್ರಯತ್ನಿಸಿದೆ ಆದರೆ ಆತ ನಿರಾಕರಿಸಿದ ಎಂದು ಪವಾರ್ ಹೇಳಿದರು.
ಕಾರನ್ನು ಮತ್ತಷ್ಟು ವೇಗವಾಗಿ ಚಲಿಸಲು ಪ್ರಾರಂಭಿದಾಗ ಕಾರಿನ ಬ್ಯಾನೇಟ್ ಅನ್ನು ಹಿಡಿದುಕೊಂಡೆ. ಘಟನೆಯಲ್ಲಿ ಯಾವುದೇ ತೊಂದರೆಯಾಗಲಿಲ್ಲ ಆದರೆ ಕ್ಯಾಬ್ ಚಾಲಕ ವರ್ತಿಸಿದ ರೀತಿಯಿಂದ ಹೆದರಿಕೆಯಾಗಿತ್ತು ಎಂದು ಹೇಳಿದರು.
#ViralVideo Of #BMC Marshal Being drag by Tourist car driver with his Wagorn car on the streets of #mumbai @mybmc @RoadsOfMumbai @mumbaicommunity #MaskUp #Goregaon @IqbalSinghChah2 @RetweetsMumbai @PotholeWarriors @mymalishka pic.twitter.com/jGGXhiDKUH
— Mohsin shaikh 🇮🇳 (@mohsinofficail) September 1, 2021
ಚಾಲಕ ವೇಗವಾಗಿ ಚಲಿಸಿದ್ದರಿಂದ ಪವಾರ್ಗೆ ಕ್ಯಾಬ್ ನಿಲ್ಲಿಸಲು ಸಾಧ್ಯವಾಗಲಿಲ್ಲ ಮತ್ತು ಆತ ಪಕ್ಕಕ್ಕೆ ಸರಿಯಬೇಕಾಯಿತು. ಈ ಮಧ್ಯೆ, ಘಟನೆಯನ್ನು ನೋಡುತ್ತಿದ್ದ ಬೈಕ್ ಸವಾರನೊಬ್ಬ ವಿಡಿಯೋ ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ವಚ್ಛತಾ ಮಾರ್ಷಲ್ಗಳ ಏರಿಯಾ ಮ್ಯಾನೇಜರ್ ಅವರನ್ನು ಆಗಾಗ್ಗೆ ಟೀಕಿಸಲಾಗುತ್ತದೆ ಆದರೆ ವಾಹನ ಸವಾರರು ಆ ರೀತಿ ವರ್ತಿಸಿದಾಗ ಇಂತಹವುಗಳ ಕಡೆ ಗಮನಹರಿಸುವುದೇ ಇಲ್ಲ ಎಂದು ಸುಧೀರ್ ಚೌಧರಿ ಹೇಳಿದರು.
ಕಲಿನಾ ಕಾರ್ಪೋರೇಟರ್ ತುಲಿಪ್ ಮಿರಾಂಡಾ ಅವರು ವಾರ್ಡ್ ಕಮಿಟಿ ಸಭೆಗಳಲ್ಲಿ, ಟ್ರಾಫಿಕ್ ಸಿಗ್ನಲ್ಗಳಲ್ಲಿ ಮಾರ್ಷಲ್ಗಳನ್ನು ಅನುಮತಿಸದಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಟ್ರಾಫಿಕ್ ಸಿಗ್ನಲ್ಗಳಲ್ಲಿ ಫೇಸ್ ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸುವ ಪ್ರಯತ್ನದಲ್ಲಿ ಅವರು ವಾಹನವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಆದಾಗ್ಯೂ, ಇದು ಟ್ರಾಫಿಕ್ ದಟ್ಟಣೆಗೆ ಕಾರಣವಾಗುತ್ತದೆ. ಆದ್ದರಿಂದ, ಸಂಚಾರಕ್ಕೆ ತೊಂದರೆಯಾಗದಂತೆ ಅವರನ್ನು ಆಂತರಿಕ ರಸ್ತೆಗಳಲ್ಲಿ ಮಾತ್ರ ಅನುಮತಿಸುವಂತೆ ನಾನು ಸೂಚಿಸಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ