HOME » NEWS » Trend » BLUE TEA MADE OF BLUE PEA FLOWER CURES SEVERAL DISEASES AND HELPS IN WEIGHT LOSS STG SKTV

Blue Tea: ಶಂಕಪುಷ್ಪಿಯ ಚಹಾದಲ್ಲಿದೆ ಅಮೃತದ ಅಂಶ, ಸರ್ವರೋಗಕ್ಕೂ ಮದ್ದು ಈ ನೀಲಿ ಟೀ !

Blue Tea Benefits: ಸಿಕ್ಕಾಪಟ್ಟೆ ಟ್ರೆಂಡ್ ಆಗಿರುವ ನೀಲಿ ಚಹಾ, ತೂಕ ಇಳಿಕೆ, ದೇಹವನ್ನು ಕಲ್ಮಶಮುಕ್ತಗೊಳಿಸುವುದು, ಮನಸ್ಸಿಗೆ ಹಿತ ನೀಡುವುದು, ಚರ್ಮವನ್ನು ಸುಂದರಗೊಳಿಸುವುದು ಮತ್ತು ಕೂದಲ ಬೆಳವಣಿಗೆಗೆ ಸಹಕಾರಿ ಆಗುವುದು ಸೇರಿದಂತೆ ಅನೇಕ ಆರೋಗ್ಯಕರ ಉಪಯೋಗಗಳನ್ನು ಹೊಂದಿದೆ.

Trending Desk
Updated:June 25, 2021, 3:56 PM IST
Blue Tea: ಶಂಕಪುಷ್ಪಿಯ ಚಹಾದಲ್ಲಿದೆ ಅಮೃತದ ಅಂಶ, ಸರ್ವರೋಗಕ್ಕೂ ಮದ್ದು ಈ ನೀಲಿ ಟೀ !
ಪ್ರಾತಿನಿಧಿಕ ಚಿತ್ರ
  • Share this:

Blue Tea: ಕಪ್ಪು ಚಹಾ, ಹಸಿರು ಚಹಾ.. ಕೇಳಿದ್ದೀರಿ. . ಆದರೆ ನೀಲಿ ಚಹಾದ ಬಗ್ಗೆ ಗೊತ್ತೇ..? ಹೆಸರಿಗೆ ತಕ್ಕಂತೆ ನೀಲಿ ಬಣ್ಣ ಹೊಂದಿರುವ, ಕ್ಲಿಟೋರಿಯಾ ಟರ್ನೇಟಿಯಾ ಸಸ್ಯದ ಹೂಗಳಿಂದ ತಯಾರಿಸಲ್ಪಡುವ ಈ ಚಹಾ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ. ಈ ಔಷಧೀಯ ಸಸ್ಯವನ್ನು ಶಂಖಪುಷ್ಪಿ, ಬಟರ್‌ಫ್ಲೈ ಪೀ, ಕಾರ್ಡೋಫಾನ್ ಪೀ, ಬ್ಲೂ ಪೀ, ಅಪರಾಜಿತ ಮತ್ತು ಏಷಿಯನ್ ಪಿಜನ್‍ವಿಂಗ್ಸ್ ಎಂದು ಕೂಡ ಕರೆಯುತ್ತಾರೆ. ಈ ದಿನಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿರುವ ನೀಲಿ ಚಹಾ, ತೂಕ ಇಳಿಕೆ, ದೇಹವನ್ನು ಕಲ್ಮಶಮುಕ್ತಗೊಳಿಸುವುದು, ಮನಸ್ಸಿಗೆ ಹಿತ ನೀಡುವುದು, ಚರ್ಮವನ್ನು ಸುಂದರಗೊಳಿಸುವುದು ಮತ್ತು ಕೂದಲ ಬೆಳವಣಿಗೆಗೆ ಸಹಕಾರಿ ಆಗುವುದು ಸೇರಿದಂತೆ ಅನೇಕ ಆರೋಗ್ಯಕರ ಉಪಯೋಗಗಳನ್ನು ಹೊಂದಿದೆ.


ಥೈಲಾಂಡ್, ವಿಯೆಟ್ನಾಂ,ಇಂಡೋನೇಶಿಯಾ, ಭಾರತ ಮತ್ತು ಶ್ರೀಲಂಕಾದಂತಹ ಆಗ್ನೇಯ ಏಷ್ಯಾ ದೇಶಗಳಲ್ಲಿ ಕ್ಲಿಟೋರಿಯಾ ಟರ್ನೇಟಿಯಾ ಸಸ್ಯ ಕಂಡು ಬರುತ್ತದೆ. ಇದು ಆ ದೇಶಗಳಲ್ಲಿ ಶತಮಾನಗಳಿಂದ ಔಷಧಿ ಮತ್ತು ಅಡುಗೆಯಲ್ಲಿ ಬಳಕೆಯಲ್ಲಿದೆ.ನೀಲಿ ಚಹಾವನ್ನು ಮಾಡುವುದು ಹೇಗೆ?
ನೀಲಿ ಚಹಾವನ್ನು ಮಾಡುವುದು ತುಂಬಾ ಸುಲಭ. ಬ್ಲೂ ಪೀ ಹೂವಿನ ದಳಗಳನ್ನು, ಒಣ ಲೆಮನ್‍ಗ್ರಾಸ್ ಜೊತೆ ನೀರಿನಲ್ಲಿ ಹಾಕಿ 5-10 ನಿಮಿಷಗಳ ವರೆಗೆ ಕುದಿಸಬೇಕು. ಕುದಿಸಿದ ಆ ನೀರಿಗೆ ಸ್ವಲ್ಪ ಜೇನು ತುಪ್ಪ ಸೇರಿಸಿ, ಬಿಸಿ ಇರುವಾಗಲೇ ಸೇವಿಸಿ. ಇದನ್ನು ಊಟಕ್ಕೆ ಮೊದಲು ಸೇವಿಸಿ. ನೀಲಿ ಚಹಾವನ್ನು ತಣ್ಣಗಾದ ಮೇಲೂ ಸೇವಿಸಬಹುದು, ಊಟದ ನಂತರ ಸೇವಿಸುವುದರಿಂದ ಜೀರ್ಣ ಕ್ರಿಯೆಗೆ ಮತ್ತು ಆರೋಗ್ಯಕರ ನಿದ್ದೆಗೆ ಸಹಕಾರಿಯಾಗುತ್ತದೆ.


ನೀಲಿ ಚಹಾದ ಉಪಯೋಗಗಳು
ಜೀರ್ಣಕ್ರಿಯೆಗೆ ಸಹಕಾರಿ


ಈ ಚಹಾದಲ್ಲಿ ಹೇರಳ ಆ್ಯಂಟಿಆಕ್ಸಿಡೆಂಟ್‍ಗಳು ಇವೆ. ಅವು ನಮ್ಮ ದೇಹದ ಆರೋಗ್ಯಕರ ಜೀವಕೋಶಗಳಿಗೆ ಹಾನಿ ಮಾಡುವ ಫ್ರೀ ರ‍್ಯಾಡಿಕಲ್ಸ್ ವಿರುದ್ಧ ಹೋರಾಡುತ್ತವೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಖಾಲಿ ಹೊಟ್ಟೆಗೆ ಈ ಚಹಾವನ್ನು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ ಮತ್ತು ಆ ಮೂಲಕ ಜೀರ್ಣಕ್ರಿಯೆಯನ್ನು ವೃದ್ಧಿಸಬಹುದು.

ಇದನ್ನೂ ಓದಿ: ನೀವು ಕೊರಿಯನ್ ಹುಡುಗಿಯರಂತೆ ಸುಂದರವಾಗಿ ಕಾಣಬೇಕಾ? ಹಾಗಿದ್ದರೆ, ಮುಖಕ್ಕೆ ಜಮ್ಸು ಹ್ಯಾಕ್ ಟ್ರೈ ಮಾಡಿ!

ಮನಸ್ಸಿಗೆ ಅಹ್ಲಾದ ನೀಡುತ್ತದೆ
ನೀಲಿ ಚಹಾ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಇದರಲ್ಲಿ ಒತ್ತಡ ನಿವಾರಕ ಅಂಶಗಳಿದ್ದು, ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿ ಆಗುತ್ತದೆ.


ತೂಕ ಇಳಿಕೆಗೆ ಸಹಕಾರಿ
ನೀಲಿ ಚಹಾದಲ್ಲಿ ಕೆಫಿನ್ ಇರುವುದಿಲ್ಲ, ಕಾರ್ಬೊಹೈಡ್ರೇಟ್‌, ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಶೂನ್ಯವಾಗಿರುತ್ತದೆ. ಹಾಗಾಗಿ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನಿರತರಾಗಿರುವವರಿಗೆ ಇದು ಅತ್ಯಂತ ಉಪಯೋಗಕರ ಪೇಯ.


ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ
ನೀಲಿ ಚಹಾದಲ್ಲಿ ಇರುವ ಫ್ಲೇವನಾಯ್ಡ್‌ಗಳು ,ಕೊಲಾಜಿನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ, ಚರ್ಮ ಸ್ಥಿತಿಸ್ಥಾಪಕತ್ವವನ್ನು ನಿಯಂತ್ರಣದಲ್ಲಿ ಇಡಲು ಹಾಗೂ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಚರ್ಮದಲ್ಲಿನ ಕಪ್ಪು ಕಲೆಗಳು ಮಾಯವಾಗಿ ಬಣ್ಣ ವೃದ್ಧಿಸುತ್ತದೆ.


ಕೂದಲ ಬೆಳವಣಿಗೆಗೆ ಸಹಕಾರಿ
ನೀಲಿ ಚಹಾ ಕೂದಲ ಬೆಳವಣಿಗೆಗೆ ಕೂಡ ಸಹಕಾರಿ. ಇದರಲ್ಲಿರುವ ಅಂಥೋಸಯಾನಿನ್ ಎಂಬ ಸಂಯುಕ್ತ , ತಲೆಯ ರಕ್ತ ಪರಿಚಲನೆಯನ್ನು ಹೆಚ್ಚಿಸಿ, ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ. ಇದು ಆಂತರಿಕವಾಗಿ ಹೇರ್ ಫಾಲಿಕಲ್ಸ್‌ ಅನ್ನು ಸದೃಢಗೊಳಿಸುತ್ತದೆ.


ಇದನ್ನೂ ಓದಿ: Hair Care Tips: ಕೂದಲು ಬೆಳ್ಳಗಾಗುವುದನ್ನು ತಡೆಯುತ್ತವೆ ಈ ಆಸನಗಳು, ನೀಳಕೇಶರಾಶಿಗೆ ಯೋಗಾಸನ ಮದ್ದು !

ಮಧುಮೇಹದ ಸ್ಥಿತಿಯನ್ನು ಸುಧಾರಿಸುತ್ತದೆ
ಟೈಪ್ 2 ಮಧುಮೇಹ ಇರುವವರು ನಿತ್ಯ ಒಂದು ಬಿಸಿಬಿಸಿ ನೀಲಿ ಚಹಾ ಸೇವಿಸಿದರೆ, ರಕ್ತ ಸಕ್ಕರೆ ಮಟ್ಟದ ಹಠಾತ್ ಏರಿಕೆಯನ್ನು ತಡೆಯಬಹುದು. ಇದು ಇನ್ಸುಲಿನ್ ಸೃವಿಸುವಿಕೆಯನ್ನು ಸುಧಾರಿಸುತ್ತದೆ, ಗ್ಲೂಕೋಸ್ ಚಯಾಪಚಯವನ್ನು ನಿಯಂತ್ರಿಸುತ್ತದೆ ಮತ್ತು ದೇಹದ ಕೋಶಗಳು ಅಧಿಕ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ಮಧುಮೇಹಿಗಳಿಗೆ ಉಪಯುಕ್ತ ಪೇಯ.


ಹೃದಯದ ಸ್ವಾಸ್ಥ್ಯವನ್ನು ಕಾಪಾಡುತ್ತದೆ
ನೀಲಿ ಚಹಾದಲ್ಲಿರುವ ಬಯೋಫ್ಲಾವಿನಾಯ್ಡ್‌ ಸಂಯುಕ್ತಗಳು , ಹೃದಯದ ಆರೋಗ್ಯಕ್ಕೆ ಸಹಕಾರಿ. ನೀಲಿ ಚಹಾ ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ರಕ್ತ ಪ್ರವಾಹದಲ್ಲಿ ಅಸಹಜವಾಗಿ ಹೆಚ್ಚಿರುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನೀಲಿ ಚಹಾ ಇನ್ನೂ ಅನೇಕ ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.Youtube Video

ಕಣ್ಣಿನ ಆರೋಗ್ಯಕ್ಕೆ ಪೂರಕ
ನೀಲಿ ಚಹಾದಲ್ಲಿರು ಪ್ರೊಂಥೋಸಯಾನಿಡಿನ್ ಸಂಕೀರ್ಣಗಳು, ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಇದರಲ್ಲಿ ಉರಿಯೂತ ಮತ್ತು ನೋವು ನಿವಾರಕ ಅಂಶಗಳಿವೆ. ಗ್ಲುಕೋಮಾ, ಆಲಸ್ಯ ದೃಷ್ಟಿ, ಕಾರ್ನಿಯಾ ಸೇರಿದಂತೆ ಅನೇಕ ಕಣ್ಣಿನ ಸಮಸ್ಯೆಗಳ ಅಪಾಯದಿಂದ ಇದು ದೂರವಿಸುತ್ತದೆ.


Published by: Soumya KN
First published: June 25, 2021, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories