• Home
 • »
 • News
 • »
 • trend
 • »
 • Guinness World Record: ಇದು ಕಣ್ಣು ಕಳೆದುಕೊಂಡವರ ರೇಸಿಂಗ್! ಅಂಧ ಕಣ್ಣಿನಲ್ಲೇ ಕಾರು ಚಲಾಯಿಸಿ ಗಿನ್ನಿಸ್‌ ದಾಖಲೆ

Guinness World Record: ಇದು ಕಣ್ಣು ಕಳೆದುಕೊಂಡವರ ರೇಸಿಂಗ್! ಅಂಧ ಕಣ್ಣಿನಲ್ಲೇ ಕಾರು ಚಲಾಯಿಸಿ ಗಿನ್ನಿಸ್‌ ದಾಖಲೆ

ಡ್ಯಾನ್ ಪಾರ್ಕರ್

ಡ್ಯಾನ್ ಪಾರ್ಕರ್

Viral Story: ಇದೀಗ ನಾವು ಹೇಳ ಹೊರಟಿರುವುದು ಅಂತಹುದ್ದೇ ಒಬ್ಬ ಸಾಹಸಮಯ ಕಾರು ಚಾಲಕನ ಕಥೆ. ಈತ ರೇಸ್ ಕಾರುಗಳ ಡ್ರೈವರ್. ಹತ್ತು ವರ್ಷಗಳ ಹಿಂದೆ ಕಾರು ಚಲಾಯಿಸುತ್ತಿದ್ದ ವೇಳೆ ಅಪಘಾತಕ್ಕೆ ಗುರಿಯಾಗಿದ್ದ. ಅದೃಷ್ಟವಶಾತ್ ಪ್ರಾಣಕ್ಕೆ ಏನೂ ತೊಂದರೆಯಾಗಿರಲಿಲ್ಲ, ಆದರೂ ಅಪಘಾತದಿಂದಾಗಿ ಅವನು ಕಣ್ಣುಗಳನ್ನು ಕಳೆದುಕೊಂಡಿದ್ದ.

ಮುಂದೆ ಓದಿ ...
 • Share this:

  ಈ ಜಗತ್ತಿನಲ್ಲಿ ಹುಚ್ಚುತನ ತೋರುವ ಜನರಿಗೆ ಏನೂ ಕಮ್ಮಿ ಇಲ್ಲ. ಅದು ಎಷ್ಟೇ ಅಪಾಯಕಾರಿಯಾದ ಚಟುವಟಿಕೆ ಇರಲಿ, ಕೆಲವರು ದಾಖಲೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅದನ್ನು ಸಾಧಿಸಿ (Achievement) ತೋರಿಸುತ್ತಾರೆ. ಇನ್ನು ಕೆಲವರಿದ್ದಾರೆ ಅದಾಗಲೇ ಅವರು ತಮ್ಮ ಒಂದು ಸಾಹಸಭರಿತ ಸಾಧನೆಯಲ್ಲಿ ದಹಿಕವಾಗಿ ನಷ್ಟ (Loss) ಅನುಭವಿಸಿದ್ದಾರಾದರೂ ಗಿನ್ನೆಸ್‌ ದಾಖಲೆಯ (Guinness World Record) ಹುಚ್ಚಿಗಾಗಿ ಮತ್ತೆ ಅದೇ ಸಾಹಸಕ್ಕೆ ಕೈ ಹಾಕುವುದಕ್ಕೆ ಹಿಂಜರಿಯುವುದಿಲ್ಲ.


  ಇದೀಗ ನಾವು ಹೇಳ ಹೊರಟಿರುವುದು ಅಂತಹುದ್ದೇ ಒಬ್ಬ ಸಾಹಸಮಯ ಕಾರು ಚಾಲಕನ ಕಥೆ. ಈತ ರೇಸ್ ಕಾರುಗಳ ಡ್ರೈವರ್. ಹತ್ತು ವರ್ಷಗಳ ಹಿಂದೆ ಕಾರು ಚಲಾಯಿಸುತ್ತಿದ್ದ ವೇಳೆ ಅಪಘಾತಕ್ಕೆ ಗುರಿಯಾಗಿದ್ದ. ಅದೃಷ್ಟವಶಾತ್ ಪ್ರಾಣಕ್ಕೆ ಏನೂ ತೊಂದರೆಯಾಗಿರಲಿಲ್ಲ, ಆದರೂ ಅಪಘಾತದಿಂದಾಗಿ ಅವನು ಕಣ್ಣುಗಳನ್ನು ಕಳೆದುಕೊಂಡಿದ್ದ.


  ಈ ಅಂಧ ಚಾಲಕ ಈಗ ಮಾಡಿದ್ದೇನೆಂದರೆ ಮಾರ್ಚ್ 31 ರಂದು ತಾನು ಅಪಘಾತಕ್ಕೊಳಗಾಗಿ ಹತ್ತು ವರ್ಷಗಳ ಗತಿಸಿದ ನೆನಪಿಗಾಗಿ ಮತ್ತೊಂದು ಸಾಧನೆ ಮಾಡಿದ್ದಾನೆ. ಅಂದರೆ ಗಿನ್ನೆಸ್‌ ದಾಖಲೆಯ "ಕಣ್ಣಿಗೆ ಪಟ್ಟಿ ಕಟ್ಟಿ ಅತಿ ವೇಗದ ಕಾರು ಚಾಲನೆ" ಎಂಬ ವಿಭಾಗದಲ್ಲಿ ರೇಸ್ ಕಾರನ್ನು 339.64 ಕಿ.ಮೀ ಪ್ರತಿ ಗಂಟೆಯ ವೇಗದಲ್ಲಿ ಚಲಾಯಿಸಿ ಹೊಸ ಗಿನ್ನೆಸ್‌ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.


  ಈ ಹಿಂದೆ ಈ ಕೆಟಗರಿಯಲ್ಲಿ ಇದ್ದ ಗಿನ್ನೆಸ್‌ ದಾಖಲೆ 322.68 ಕಿ.ಮೀ ಪ್ರತಿ ಗಂಟೆಯಾಗಿತ್ತು. ಅದನ್ನು ಈಗ ಡ್ಯಾನ್ ಪಾರ್ಕರ್ ಎಂಬ ದೃಷ್ಟಿ ಕಳೆದುಕೊಂಡಿರುವ ಚಾಲಕ ಮುರಿದಿದ್ದು ಸಂತಸಗೊಂಡಿದ್ದಾನೆ. ಈ ದಾಖಲೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡ್ಯಾನ್ ನ್ಯೂ ಮೆಕ್ಸಿಕೋದ ಸ್ಪೇಸ್ ಪೋರ್ಟ್ ಅಮೆರಿಕದಲ್ಲಿ ತನ್ನ ಕಸ್ಟಮೈಸ್ಡ್ ಕಾರ್ವೆಟ್ ಮೂಲಕ ರಸ್ತೆಗೆ ಇಳಿದು ಈ ದಾಖಲೆ ನಿರ್ಮಿಸಿದ್ದಾರೆ ಎನ್ನಲಾಗಿದೆ.


  ಇದನ್ನೂ ಓದಿ: Elon Musk: ಶ್ರೀಲಂಕಾವನ್ನು ಖರೀದಿಸಿ ಸಿಲೋಮ್​ ಮಸ್ಕ್​ ಎಂದು ಹೆಸರಿಡಿ; ಎಲಾನ್​ ಮಸ್ಕ್​ಗೆ ಸಲಹೆ ನೀಡಿದ ಸ್ನ್ಯಾಪ್​ಡೀಲ್​ ಸಿಇಒ


  ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಮಾರ್ಚ್ 31. ಬಹುಶಃ ಡ್ಯಾನ್ ಅವರ ಜೀವನವು ಈ ದಿನದೊಂದಿಗೆ ಯಾವ ಸಂಬಂಧ ಹೊಂದಿದೆಯೋ ಇಲ್ಲವೋ ಗೊತ್ತಿಲ್ಲ, ಒಟ್ಟಿನಲ್ಲಿ ಇದು ಒಂದು ವಿಶಿಷ್ಟ ದಿನ ಎಂದಷ್ಟೇ ಹೇಳಬಹುದು. ಏಕೆಂದರೆ, ಹತ್ತು ವರ್ಷಗಳ ಹಿಂದೆ ಮಾರ್ಚ್ 31 ರಂದೆ ಅಪಘಾತವಾಗಿ ಡ್ಯಾನ್ ಕಣ್ಣು ಕಳೆದುಕೊಂಡಿದ್ದ. ತದನಂತರ ಆತ ಏಳು ವರ್ಷಗಳ ಹಿಂದೆ ದೃಷ್ಟಿಹೀನರಿಗಾಗಿ ಇರುವ ಲೂಸಿಯಾನಾ ಕೇಂದ್ರದಿಂದ ಪದವಿಯನ್ನು ಇದೇ ದಿನದಂದು ಪಡೆದಿದ್ದ. ಇದೀಗ ಅವನು ಹೊಸ ಗಿನ್ನೆಸ್‌ ದಾಖಲೆ ತನ್ನ ಮುಡುಪಿಗೇರಿಸಿಕೊಂಡ ದಿನವೂ ಮಾರ್ಚ್ 31 ರ ದಿನವೇ ಆಗಿದೆ.  ಡ್ಯಾನ್ ಕಾರು ಚಲಾಯಿಸಿದ ಬಗೆ


  ಹಾಗೆ ನೋಡಿದರೆ, ದೃಷ್ಟಿಯಿಲ್ಲದೆ ಅಥವಾ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕಾರನ್ನು ವೇಗವಾಗಿ ಚಲಾಯಿಸುವುದು ಖಂಡಿತ ಸುಲಭವಾದ ಕೆಲಸವಲ್ಲ. ಅದಕ್ಕೆ ಸಾಕಷ್ಟು ಧೈರ್ಯ, ಕಾರು ಓಡಿಸುವ ಚಾಕಚಕ್ಯತೆ, ಆತ್ಮವಿಶ್ವಾಸ ಎಲ್ಲವೂ ಬೇಕಾಗುತ್ತದೆ. ಡ್ಯಾನ್ ತಾನು ಈ ಸಾಧನೆ ಮಾಡುವ ಸಂದರ್ಭದಲ್ಲಿ ಓಡಿಸುತ್ತಿದ್ದ ಕಾರು ಆಡಿಯೋ ಮೂಲಕ ಸೂಚನೆಗಳನ್ನು ನೀಡುವ ವ್ಯವಸ್ಥೆಯನ್ನು ಹೊಂದಿತ್ತು. ಡ್ಯಾನ್ ಪ್ರಯತ್ನಿಸುತ್ತಿದ್ದ ಈ ವಿಶ್ವದಾಖಲೆಯು ಅಂಧರ ರಾಷ್ಟ್ರೀಯ ಒಕ್ಕೂಟದ "ಅಂಧ ಚಾಲಕನ ಸ್ವಾಲು" ಎಂಬ ಅಭಿಯಾನದ ಭಾಗವಾಗಿತ್ತೆಂದು ತಿಳಿದುಬಂದಿದೆ. ಈ ಅಭಿಯಾನವು ಚಲನಶೀಲತೆಯಲ್ಲಿ ಕಂಡುಬರುವ ಅಡೆತಡೆಗಳು ಮತ್ತು ಅಂಧ ಜನರು ಮಾಡಿರುವ ನಂಬಲಸಾಧ್ಯವಾದಂತಹ ಸಾಧನೆಗಳನ್ನು ಗುರುತಿಸುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ.


  ಇದನ್ನೂ ಓದಿ: BMW F 900 XR: ಅಬ್ಬಾ..! ಈ ಬೈಕ್​ ಕೇವಲ 3.6 ಸೆಕೆಂಡ್​ಗಳಲ್ಲಿ 0-100 Km ವೇಗವನ್ನು ಪಡೆಯುತ್ತದೆ


  ಈ ಸಾಧನೆಯ ನಂತರ ಮಾಧ್ಯಮದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಡ್ಯಾನ್ ಈ ರೀತಿ ಪ್ರತಿಕ್ರಿಯೆ ನೀಡುತ್ತಾರೆ, "ನಾವು ಕೇವಲ ಕುರುಡರು ವಾಹನವನ್ನು ಸುರಕ್ಷಿತವಾಗಿ ಓಡಿಸುತ್ತಾರೆ ಎಂಬುದನ್ನು ಮಾತ್ರವಲ್ಲದೆ ಗಂಟೆಗೆ ಇನ್ನೂರು ಮೈಲುಗಳಷ್ಟು ವೇಗದಲ್ಲೂ ಓಡಿಸಬಹುದು ಎನ್ನುವುದನ್ನು ತೋರಿಸಿದ್ದೇವೆ" ಎಂದಿದ್ದಾರೆ. ಅಲ್ಲದೆ, ಈ ರೀತಿಯ ಸಾಧನೆಗಳು ಜಗತ್ತಿನಾದ್ಯಂತ ಇರುವ ಹಲವು ಅಂಧರಿಗೆ ಹೆಚ್ಚಿನ ಪ್ರೇರಣೆ ನೀಡಬಹುದು ಹಾಗೂ ದೃಷ್ಟಿಹೀನತೆ ಎಂಬುದು ಒಂದು ತಡೆಯಾಗದೆ ಸ್ವಯಂ ಚಲಿಸುವ ವಾಹನಗಳ ಮೂಲಕ ಅಂಧರೂ ಸಹ ವಾಹನ ಚಲಾಯಿಸುವಂತಾಗಲು ಇದು ಸಹಕಾರ ನೀಡಬಹುದು ಎಂದು ಡ್ಯಾನ್ ಹೇಳಿಕೊಂಡಿದ್ದಾರೆ.


  ಒಟ್ಟಿನಲ್ಲಿ ಡ್ಯಾನ್ ಪಾರ್ಕರ್, ಮಾಡುವ, ಸಾಧಿಸುವ ಛಲ ಮನದಲ್ಲಿದ್ದರೆ ಹಾಗೂ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿದ್ದರೆ ದೇಹದ ಯಾವ ನ್ಯೂನ್ಯತೆಯೂ ಸಾಧನೆ ಮಾಡಲಾಗದಂತೆ ಅಡ್ಡ ಬರದು ಎಂಬುದನ್ನು ತೋರಿಸಿಕೊಟ್ಟಿದ್ದಾರೆಂದಷ್ಟೇ ಹೇಳಬಹುದು.

  Published by:Harshith AS
  First published: