Viral Video: ಸರಸರನೇ ಬಂದು ಗಟಗಟನೇ ನೀರು ಕುಡಿದ ಹಾವು: ಮೈ ಜುಮ್ಮೆನ್ನುವ ವಿಡಿಯೋ ನೋಡಿ

ಇಲ್ಲೊಂದು ವಿಷಕಾರಿ ಹಾವು ಗಟಗಟನೇ ನೀರು ಕುಡಿದ ವಿಡಿಯೋ ನೋಡುಗರನ್ನು ಭಯ ಹುಟ್ಟಿಸುತ್ತಿದೆ. ಆ ನಾಗರಹಾವಿನ ಕಣ್ಣುಗಳೇ ಭಯಾನಕವಾಗಿವೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ನಾಗರಹಾವು

ನಾಗರಹಾವು

  • Share this:
ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುವ ವಿಡಿಯೋಗಳು (Viral Video) ಭಯ ಹುಟ್ಟಿಸುತ್ತವೆ. ವಿಡಿಯೋ ನೋಡಿದ ಕೂಡಲೇ ಓ ಮೈ ಗಾಡ್ ಅಂತ ನೆಟ್ಟಿಗರು ಕಮೆಂಟ್ ಮಾಡಿ ಆಶ್ಚರ್ಯ ಹೊರ ಹಾಕುತ್ತಾರೆ. ಅಡುಗೆ ನಂತರ ಹಾವುಗಳ (Snakes Video) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತವೆ. ಹಾವು ಕಂಡ್ರೆ ನೂರು ಮೈಲು ಓಡುವ ಜನರು ಸಹ ಭಯಪಡುತ್ತಲೇ ಅಂತಹ ವಿಡಿಯೋಗಳನ್ನು ಅತ್ಯಂತ ಕುತೂಹಲದಿಂದ ನೋಡುತ್ತಾರೆ. ಹಾವು ರಕ್ಷಣೆಯ ವಿಡಿಯೋಗಳನ್ನು (Snake Rescue Videos) ನಾವು ನೀವು ನೋಡಿರುತ್ತವೆ. ಆದ್ರೆ ಇಲ್ಲೊಂದು ವಿಷಕಾರಿ ಹಾವು ಗಟಗಟನೇ ನೀರು ಕುಡಿದ ವಿಡಿಯೋ ನೋಡುಗರನ್ನು ಭಯ ಹುಟ್ಟಿಸುತ್ತಿದೆ. ಆ ನಾಗರಹಾವಿನ ಕಣ್ಣುಗಳೇ ಭಯಾನಕವಾಗಿವೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ವ್ಯಕ್ತಿಯೊಬ್ಬರು ಕೈಯಲ್ಲಿ ಒಂದು ಗ್ಲಾಸ್ ನೀರು ಹಿಡಿದುಕೊಂಡು ನಿಂತಿದ್ದಾರೆ. ವ್ಯಕ್ತಿಯ ಬಳಿ ಬರುವ ಕಪ್ಪು ಬಣ್ಣದ ನಾಗರಾಜ ಗಟಗಟನೇ ನೀರು ಕುಡಿದಿದ್ದಾನೆ. ನಾಗರಾಜನ ಹೊಳಪಿನ ಕಪ್ಪು ಬಣ್ಣ  ಮತ್ತು ಆತನ ಕಣ್ಣುಗಳು ನೋಡಗರಲ್ಲಿ ನಡುಕು ಹುಟ್ಟಿಸುತ್ತವೆ. ಆ ನಾಗರಹಾವಿನ ರಚನೆಯೇ ಅದು ಎಷ್ಟು ಭಯಂಕರವಾಗಿದೆ ಅನ್ನೋದನ್ನು ಹೇಳಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಭಯದಿಂದಲೇ ಕಮೆಂಟ್ ಹಾಕುತ್ತಿರುವ ನೆಟ್ಟಿಗರು

ರಾಯಲ್ ಪೈಥಾನ್ ಹೆಸರಿನ ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಕಪ್ಪು ನಾಗರಹಾವಿನ ವಿಡಿಯೋಗೆ ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಇನ್ನು ವಿಡಿಯೋ ನೋಡಿದ ನೆಟ್ಟಿಗರು ಭಯದಿಂದಲೇ ಕಮೆಂಟ್ ಹಾಕುತ್ತಿರೋದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ವೇದಿಕೆ ಮೇಲೆ ಗುಜರಾತ್ ಯುವತಿಯರು ನಾಗರಹಾವು ಹಿಡಿದು ಗಾರ್ಬಾ ನೃತ್ಯ ಮಾಡಿದ ವಿಡಿಯೋ ವೈರಲ್!

ಇನ್ನು ಕೆಲವರು ನಾಗರಹಾವಿಗೆ ನೀರು ಕುಡಿಸುತ್ತಿರುವ  ವ್ಯಕ್ತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಕೈಗೆ ಗ್ಲೌಸ್ ಹಾಕಿಕೊಳ್ಳುವ ಮೂಲಕ ಮುಂಜಾಗ್ರತೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದೊಂದು ಅಸಾಮನ್ಯ ಮತ್ತು ಭಯಾನಕ ವಿಡಿಯೋ ಅಂತ ಹೇಳಿದ್ದಾರೆ.




70 ಸಾವಿರಕ್ಕೂ ಅಧಿಕ ಕಮೆಂಟ್

ಇದುವರೆಗೂ ಈ ವಿಡಿಯೋ 1.23 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. 70 ಸಾವಿರಕ್ಕೂ ಅಧಿಕ ಕಮೆಂಟ್ ಗಳು ಬಂದಿವೆ. ಒಬ್ಬರು ಹಾವುಗಳು ನೀರು ಕುಡಿಯುತ್ತಿರುವ ದೃಶ್ಯವನ್ನು ಇಷ್ಟು ಸನೀಹದಿಂದ ಇವತ್ತೆ ನೋಡುತ್ತಿದ್ದೇನೆ. ಮತ್ತೊಬ್ಬರು ಸುಂದರವಾದ ಮತ್ತು ವಿಸ್ಮಯಕಾರಿ ಪ್ರಾಣಿ. ಅದರ ಶಾಂತತೆ ಮತ್ತು ಬಂದು ನೀರು ಕುಡಿಯುವ ಆತ್ಮವಿಶ್ವಾಸ ಗಮನಿಸಬೇಕು ಎಂದು ಬರೆದುಕೊಂಡಿದ್ದಾರೆ.

ಎರಡು ತಲೆಯ ನಾಗರಹಾವು

ಉತ್ತರಾಖಂಡ ರಾಜ್ಯದಲ್ಲಿರುವ ಡೆಹ್ರಾಡೂನ್ ಜಿಲ್ಲೆಯ ಕಾಲ್ಸಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಪರೂಪದ ಎರಡು ತಲೆಯ ನಾಗರಹಾವು ಪತ್ತೆಯಾಗಿತ್ತು. ಡೆಹ್ರಾಡೂನ್ ಜಿಲ್ಲೆಯ ವಿಕಾಸ್ ನಗರ ಪ್ರದೇಶದಲ್ಲಿರುವಂತಹ ಕೈಗಾರಿಕಾ ಘಟಕದ ಆವರಣದಲ್ಲಿ ಒಂದು ನಾಗರಹಾವು ಬಂದಿರುವುದನ್ನು ಕಂಡಂತಹ ಸ್ಥಳೀಯರು ಕಾಲ್ಸಿ ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ. ಕಳೆದ 15 ವರ್ಷಗಳಿಂದ ಅನೇಕ ಹಾವುಗಳನ್ನು ರಕ್ಷಿಸಿದ ಆದಿಲ್ ಮಿರ್ಜಾ ಅರಣ್ಯ ಇಲಾಖೆಯವರೊಂದಿಗೆ ಜೊತೆಗೂಡಿ ಕೆಲಸ ಮಾಡುತ್ತಿದ್ದು, ನಾಗರಹಾವು ಬಂದಿರುವ ಸ್ಥಳಕ್ಕೆ ಕೂಡಲೇ ಧಾವಿಸಿ ಬಂದು ನೋಡಿದಾಗ ಅಲ್ಲಿ ಅವರಿಗೆ ಕಂಡದ್ದು ಅಪರೂಪವಾದಂತಹ 2 ತಲೆಯ ನಾಗರಹಾವು.

ಇದನ್ನೂ ಓದಿ:  ನಾಗರಹಾವಿನ ಜೊತೆ ಮೂರು ಶ್ವಾನಗಳ ಕಾಳಗ; ಸೋಲೊಪ್ಪಿಕೊಂಡ ಸರ್ಪ

ನಾನು ಸುಮಾರು 15 ವರ್ಷಗಳಿಂದ ಹಾವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದು, ಇಂತಹ 2 ತಲೆಯುಳ್ಳ ನಾಗರಹಾವನ್ನು ಎಂದೂ ನೋಡಿರಲಿಲ್ಲ. ಇದು ತುಂಬಾ ಅಪರೂಪದ ನಾಗರಹಾವು”, ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದರು.

ಈ ಎರಡು ತಲೆಯುಳ್ಳ ನಾಗರಹಾವು ಸುಮಾರು ಒಂದೂವರೆ ಅಡಿ ಉದ್ದವಿದ್ದು ಮತ್ತು ಇದಕ್ಕೆ ಎರಡು ವಾರಗಳಿಗಿಂತ ಕಡಿಮೆ ವಯಸ್ಸಾಗಿತ್ತು ಎಂದು ಹೇಳಲಾಗಿದೆ. 2 ತಲೆಗಳುಳ್ಳ ಈ ನಾಗರಹಾವಿನ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
Published by:Mahmadrafik K
First published: