ಸತ್ತ ವ್ಯಕ್ತಿಯ ನೆನೆಪಿಗೆ ಶವದ ಹಲ್ಲನ್ನು ಸಂಗ್ರಹಿಸುವ ವಿಚಿತ್ರ ಪದ್ಧತಿ; ಗಂಡನ ಕುಟುಂಬದ ಸಂಪ್ರದಾಯಕ್ಕೆ ಬೆಚ್ಚಿದ ಮಹಿಳೆ

ಸತ್ತ ವ್ಯಕ್ತಿಯ ಹತ್ತಿರದ ಸಂಬಂಧಿಗಳಿಗೆ ಯಾವ ರೀತಿ ಹಲ್ಲು ನೀಡಬೇಕು. ಕೊಂಚ ದೂರದವರಾದರೆ ಯಾವ ಹಲ್ಲು ಕೊಡಬೇಕು ಎಂಬ ಕುರಿತು ನಿರ್ಧರಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಮ್ಮ ಪ್ರೀತಿ ಪಾತ್ರರೂ ಅಗಲಿದರೆ ಆಗುವ ನೋವು ಕಡಿಮೆ ಅಲ್ಲ. ಜೊತೆಯಲ್ಲಿದ್ದವರು ಬಿಟ್ಟು ಹೋದರೂ ಅವರ ನೆನಪನ್ನು ಅಮರವಾಗಿಸುವ ಕಾರ್ಯವನ್ನು ಮಾಡುತ್ತೇವೆ. ಅದಕ್ಕಾಗಿ ಅವರ ಬಳಸುತ್ತಿದ್ದ ವಸ್ತುಗಳನ್ನು ಕೆಲವರು ಜೋಪಾನ ಮಾಡುತ್ತಾರೆ. ಈ ಮೂಲಕ ಅವರ ಇರುವಿಕೆಯನ್ನು ಶಾಶ್ವತವಾಗಿ ಇರಿಸುವ ಪ್ರಯತ್ನವನ್ನು ಕೆಲವು ಕುಟುಂಬಗಳು ಮಾಡುವುದು ಹಲವು ಬಾರಿ ಕೇಳಿದ್ದೇವೆ. ಆದರೆ, ಇಲ್ಲೊಂದು ಕುಟುಂಬ ಮಾಡಿರುವ ಘಟನೆ ಆ ಕುಟುಂಬಸ್ಥರನ್ನೇ ಬೆಚ್ಚಿ ಬೀಳಿಸಿದೆ. ಗಂಡನ ಮನೆಯ ಈಯ ವಿಚಿತ್ರ ಸಂಪ್ರದಾಯವನ್ನು ಗಂಡ ಮಹಿಳೆ ಬೆಚ್ಚಿ ಬಿದ್ದಿದ್ದಾಳೆ. ಅಷ್ಟೇ ಅಲ್ಲದೇ, ಈ ವಿಲಕ್ಷಣ ಸಂಪ್ರದಾಯವನ್ನು ಕೂಡ ವಿವರಿಸಿದ್ದಾಳೆ

  ವೇಲ್ಸ್​ನ ರೆಡ್ಡಿಟ್​ ಎಂಬ ಮಹಿಳೆ ಈ ವಿಚಿತ್ರ ಸಂಪ್ರದಾಯ ಕುರಿತು ವಿವರಿಸಿದ್ದಾಳೆ. ತನ್ನ ಗಂಡನ ಕುಟುಂಬದಲಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಸಾವನ್ನಪ್ಪಿದ ವ್ಯಕ್ತಿಯ ಹಲ್ಲುಗಳನ್ನು ಹೊಡೆದು, ಪ್ರತಿ ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ. ಅಷ್ಟೇ ಅಲ್ಲದೇ, ಈ ಸತ್ತ ವ್ಯಕ್ತಿಯ ಹಲ್ಲನ್ನು ಕೊನೆಯವರೆಗೂ ಜೋಪಾನವಾಗಿ ಇಟ್ಟುಕೊಳ್ಳಲು ಒಂದು ಬಟ್ಟೆಯ ಚೀಲವನ್ನು ಕೂಡ ನೀಡುತ್ತಾರೆ.

  ವಿಶೇಷ ಎಂದರೆ, ಸತ್ತ ವ್ಯಕ್ತಿಯ ಹಲ್ಲುಗಳಲ್ಲಿ ಯಾರಿಗೆ ಯಾವ ಹಲ್ಲು ಕೊಡಬೇಕು ಎಂಬ ಕುರಿತು ಕೂಡ ನಿರ್ಧರಿಸಲಾಗುತ್ತದೆ. ಸತ್ತ ವ್ಯಕ್ತಿಯ ಹತ್ತಿರದ ಸಂಬಂಧಿಗಳಿಗೆ ಯಾವ ರೀತಿ ಹಲ್ಲು ನೀಡಬೇಕು. ಕೊಂಚ ದೂರದವರಾದರೆ ಯಾವ ಹಲ್ಲು ಕೊಡಬೇಕು ಎಂಬ ಕುರಿತು ನಿರ್ಧರಿಸುತ್ತಾರೆ.

  ಇದನ್ನು ಓದಿ: ಸಂಚಲನ ಸೃಷ್ಟಿಸಿದ ಓಲಾ ಎಲೆಕ್ಟ್ರಿಕ್​ ಸ್ಕೂಟರ್​, ಒಂದೇ ದಿನದಲ್ಲಿ 600 ಕೋಟಿ ರೂ ವಹಿವಾಟು

  ಏನು ಮಾಡಬೇಕು ಈ ಹಲ್ಲನ್ನು
  ಇನ್ನು ಈ ಕುಟುಂಬದಲ್ಲಿ ಹೀಗೆ ವ್ಯಕ್ತಿ ಬದುಕಿದ್ದ ವೇಳೆ ತನ್ನ ಕುಟುಂಬಸ್ಥರ ಸತ್ತ ವ್ಯಕ್ತಿಗಳ ಹಲ್ಲನ್ನು ಕೊನೆಗಾಲದವರೆಗೆ ಶೇಖರಿಸಲಾಗುತ್ತದೆ. ಕಡೆಗೆ ಆತ ಸತ್ತ ಬಳಿಕ ಆ ಸಂಗ್ರಹಿಸಿದ ನೂರಾರು ಹಲ್ಲುಗಳನ್ನು ಆತನ ಎದೆ ಮೇಲೆ ಹಾಕಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.
  ಮಹಿಳೆಗೆ ತನ್ನ ಗಂಡನ ಕುಟುಂಬದ ಈ ಸಂಪ್ರದಾಯ ಕುರಿತು ತಿಳಿದಿದ್ದು, ಗಂಡನ ಅಜ್ಜಿ ಸಾವನ್ನು ಅಪ್ಪಿದಾಗ. ಈ ವೇಳೆ ಮಹಿಳೆಯ ಅತ್ತೆ ಸತ್ತ ಅಜ್ಜಿಯ ಹಲ್ಲಿನ ಚೀಲವನ್ನು ಕೊಟ್ಟಿದ್ದರಂತೆ. ಈ ವಿಚಿತ್ರ ಪದ್ಧತಿ ತಿಳಿದು ನಾನು ಇದರಲ್ಲಿ ಭಾಗಿಯಾಗುವುದಿಲ್ಲ ಎಂದು ನನ್ನ ಗಂಡನಿಗೆ ತಿಳಿಸಿದೆ. ಈ ವಿಚಾರ ತಿಳಿದ ಅವರು ಅಸಮಾಧಾನಗೊಂಡರು. ಅವರ ಕುಟುಂಬದ ಪದ್ದತಿ ಇಷ್ಟ ಇಲ್ಲ ಎಂದು ತಿಳಿಸಿದೆ. ಆದರೆ, ನನಗೆ ಸ್ಪಷ್ಟವಾಗಿ ತಿಳಿದಿದೆ. ನಾನು ಸತ್ತಾಗ ನನ್ನ ಹಲ್ಲನ್ನು ಅವರು ಇದೇ ರೀತಿ ಮುರಿದು ವಿತರಿಸುತ್ತಾರೆ ಎಂದು ತಿಳಿಸಿದ್ದಾರೆ.

  ಇದನ್ನು ಓದಿ: ಅಷ್ಟಮಿಯಂದು ಬರುವ ಜೋಕುಮಾರ ಮಳೆ ತರುತ್ತಾನಾ?; ಉ.ಕ ಸಾಂಪ್ರದಾಯಿಕ ಹಬ್ಬ ಇಂದಿಗೂ ವಿಶಿಷ್ಟ

  ಅವರ ಪ್ರಕಾರ ನಾನು ತೀರಿ ಹೋದ ಬಳಿಕ ನನ್ನ ನೆನಪನ್ನು ಜೀವಂತವಾಗಿಸುವ ಕ್ರಿಯೆಗೆ ನಿರಾಕರಿಸುತ್ತೇಯೇ ಎಂದು ನನಗೆ ಕೇಳುತ್ತಾರೆ. ಆದರೆ, ನನ್ನ ಪ್ರಕಾರ ಇದು ಹುಚ್ಚು ಸಂಪ್ರದಾಯ ಎಂದು ತಿಳಿಸಿದೆ. ಈಗ ನನ್ನ ಗಂಡ ನನಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂದರು

  ಸತ್ತವರ ನೆನಪನ್ನು ಜೀವಂತವಾಗಿಸುವ ಅವರ ನಂಬಿಕೆ ಇದು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇದರ ನೈರ್ಮಲ್ಯದ ಬಗ್ಗೆ ನನಗೆ ಪ್ರಶ್ನೆ ಇದೆ. ಈ ಬಗ್ಗೆ ಯಾರಿಗೂ ನೋವು ಉಂಟು ಮಾಡುವ ಉದ್ದೇಶ ತನ್ನದಲ್ಲ ಎಂದಿದ್ದಾಳೆ ಮಹಿಳೆ
  Published by:Seema R
  First published: