ಇಲ್ಲಿ ದಂಪತಿಗಳಿಗೆ ಮಕ್ಕಳನ್ನು ಹೊಂದಲು ಹಣ ನೀಡುತ್ತಿದ್ದಾರಂತೆ!

Viral News: ಕೆಲವೊಂದು ದೇಶಗಳು ಇದರ ಬಗ್ಗೆ ಅಷ್ಟಾಗಿ ತಲೆ ಕೆಡೆಸಿಕೊಂಡಿಲ್ಲ ವಾದರೂ ಸಹ ಕೆಲವು ಶ್ರೀಮಂತ ರಾಷ್ಟ್ರಗಳು ಮಾತ್ರ ಇದರಿಂದ ಎಚ್ಚೆತ್ತುಕೊಂಡ ಇಳಿಮುಖ ವಾಗುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದರೆ ತಪ್ಪಾಗುವುದಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಈ COVID-19 Virus ಹಾವಳಿಯಿಂದಾಗಿ ಅನೇಕ ಜನರು ತಮ್ಮ ಪ್ರಾಣವನ್ನೇ ಕಳೆದು ಕೊಳ್ಳಬೇಕಾಯಿತು ಮತ್ತು ಅನೇಕರು ತಮ್ಮ ದೇಶ ಬಿಟ್ಟು ಬೇರೆ ಸುರಕ್ಷಿತ ದೇಶಗಳಿಗೆ ವಲಸೆ ಹೋಗಿರುವುದನ್ನು ಸಹ ನಾವು ನೋಡಬಹುದಾಗಿದೆ. ಈ ಕಾರಣಗಳಿಂದಾಗಿ ಒಂದೊಂದು ಚಿಕ್ಕ ದೇಶದ ಜನಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಮುಖ ಕಂಡಿದೆ.

  ಕೆಲವೊಂದು ದೇಶಗಳು ಇದರ ಬಗ್ಗೆ ಅಷ್ಟಾಗಿ ತಲೆ ಕೆಡೆಸಿಕೊಂಡಿಲ್ಲ ವಾದರೂ ಸಹ ಕೆಲವು ಶ್ರೀಮಂತ ರಾಷ್ಟ್ರಗಳು ಮಾತ್ರ ಇದರಿಂದ ಎಚ್ಚೆತ್ತುಕೊಂಡ ಇಳಿಮುಖ ವಾಗುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದರೆ ತಪ್ಪಾಗುವುದಿಲ್ಲ.

  ಚೀನಾ ದೇಶದಲ್ಲಿರುವಂತಹ ಗಾನ್ಸು ಪ್ರಾಂತ್ಯದ ಲಿಂಜ್ ಕೌಂಟಿಯಲ್ಲಿ ಮೂವರು ಮಕ್ಕಳನ್ನು ಹೊಂದಿರುವ ದಂಪತಿಗಳಿಗೆ ಮೂರನೇ ಮಗು ಜನಿಸಿದಾಗ 5,000 ಯನ್ ಎಂದರೆ ಬರೋಬ್ಬರಿ $777 ಡಾಲರ್ ನೀಡಲಾಗುತ್ತದೆ ಮತ್ತು ಮಗು ಮೂರು ವರ್ಷ ತಲುಪುವ ಒಂದು ವರ್ಷಕ್ಕೆ ಮುಂಚಿತವಾಗಿ 10,000 ಯುವಾನ್ ಗಳನ್ನು ನೀಡಲಾಗುತ್ತದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ.

  ಪಶ್ಚಿಮ ಚೀನಾದ ಒಂದು ಕೌಂಟಿಯು ದಂಪತಿಗಳಿಗೆ ಮಕ್ಕಳನ್ನು ಮಾಡಿಕೊಳ್ಳಲು ನಗದು ಸಬ್ಸಿಡಿಗಳನ್ನು ನೀಡುತ್ತಿದ್ದು, ಮುಂಬರುವ ವರ್ಷಗಳಲ್ಲಿ ಜನಸಂಖ್ಯೆಯು ಇನ್ನೂ ಕುಸಿಯಲಿರುವ ಸಂದೇಹದಿಂದ ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚು ಮಾಡಲು ಈ ರೀತಿಯ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

  ಗಾನ್ಸು ಪ್ರಾಂತ್ಯದ ಲಿಂಜ್ ಕೌಂಟಿಯಲ್ಲಿ ಮೂವರು ಮಕ್ಕಳನ್ನು ಹೊಂದಿರುವ ಕುಟುಂಬಗಳು ಮೂರನೇ ಮಗು ಜನಿಸಿದಾಗ ಮತ್ತು ಮಗು ಮೂರು ವರ್ಷ ತಲುಪುವ ಮೊದಲು ನಗದು ಹಣವನ್ನು ಪಡೆಯಲಿದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದ್ದು, ಒಂದು ಅಥವಾ ಎರಡು ಮಕ್ಕಳನ್ನು ಹೊಂದಿರುವ ಕುಟುಂಬಗಳು ಸಣ್ಣ ಸಬ್ಸಿಡಿಗಳನ್ನು ಪಡೆಯಬಹುದು, ಮತ್ತು ಸ್ಥಳೀಯ ಪ್ರಾಧಿಕಾರವು ಶಾಲಾ ಶುಲ್ಕಗಳು ಮತ್ತು ಮನೆ ಖರೀದಿಗಳಿಗೆ ಸಬ್ಸಿಡಿಗಳನ್ನು ನೀಡುವುದಾಗಿ ಸಹ ಭರವಸೆ ನೀಡಿದೆ.

  ಇದನ್ನೂ ಓದಿ: ಅಳಿವಿನಂಚಿನಲ್ಲಿರುವ ಕೆಂಪು ಪಾಂಡಾ ಪ್ರಭೇದ ಕುರಿತು ತಿಳಿದುಕೊಳ್ಳಬೇಕಾದ ಅಂಶಗಳೇನು?

  ನೈರುತ್ಯ ಪ್ರಾಂತ್ಯವಾದ ಸಿಚುವಾನ್ ನ ಪನ್ಝಿಹುವಾ ನಗರವು ಜುಲೈನಲ್ಲಿ ಮಕ್ಕಳ ಜನನದ ಪ್ರಮಾಣವನ್ನು ಪ್ರೋತ್ಸಾಹಿಸಲು ದಂಪತಿಗಳಿಗೆ ನಗದು ಹಣವನ್ನು ನೀಡಿದ ರಾಷ್ಟ್ರದ ಮೊದಲ ನಗರವಾಯಿತು.ಕುಸಿಯುತ್ತಿರುವ ಜನನ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಹೆಚ್ಚು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಕೇಳಿದ ಎಲ್ಲಾ ದಂಪತಿಗಳು ಮೂರನೇ ಮಗುವನ್ನು ಮಾಡಿಕೊಳ್ಳುವ ಆಶ್ಚರ್ಯಕರ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಪೋಷಕರು ಮಕ್ಕಳನ್ನು ಬೆಳೆಸಲು ಸಹಾಯವಾಗುವಂತೆ ಬೆಂಬಲ ಕ್ರಮಗಳನ್ನು ತೆಗೆದು ಕೊಳ್ಳುವುದಾಗಿ ಸ್ಥಳೀಯ ಸರ್ಕಾರವು ಭರವಸೆ ನೀಡಿದ್ದಾರೆ.

  ಇದನ್ನೂ ಓದಿ: ವೃತ್ತಿಯಲ್ಲಿ ನಿಷ್ಠೆಯ ಪೊಲೀಸ್ ಆದ್ರೂ ಆಸಕ್ತಿ ಮಾತ್ರ ಬಾಕ್ಸರ್, ಬೈಕರ್, ಮಾಡೆಲಿಂಗ್! ಎಲ್ಲರಿಗೂ ಸ್ಫೂರ್ತಿ ಈ ಸಿಕ್ಕಿಂ ಚೆಲುವೆ!

  ಈ ಪ್ರದೇಶದಲ್ಲಿ ಶಾಶ್ವತ ನಿವಾಸಿಗಳ ಸಂಖ್ಯೆ ಗಮನಾರ್ಹವಾಗಿ ಕುಗ್ಗಿರುವುದರಿಂದ ಲಿಂಜ್ ಕೌಂಟಿಯಲ್ಲಿ ಈ ನೀತಿಯನ್ನು ಪರಿಚಯಿಸಲಾಯಿತು. ಇದು 10 ವರ್ಷಗಳ ಹಿಂದಿನ ಜನಗಣತಿಯಿಂದ ಇದುವರೆಗೆ 22,000 ಕ್ಕೆ ಕುಸಿದಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿ ಜಿಯಾ ಯೊಂಗ್ಮಿಂಗ್ ತಿಳಿಸಿದ್ದಾರೆ.ಕೌಂಟಿ ಸರ್ಕಾರವು 2020 ರಿಂದ 2030 ರ ವೇಳೆಗೆ ಸ್ಥಳೀಯ ಜನಸಂಖ್ಯೆಯನ್ನು ಸುಮಾರು 9% ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
  Published by:Sharath Sharma Kalagaru
  First published: