ಸಂಜು ಸಿನಿಮಾದಲ್ಲಿ ನಟ ಸಂಜಯ್ ದತ್(Actor Sanjay Dutt) 300ಕ್ಕೂ ಹೆಚ್ಚು ಹೆಂಗಸರ ಜೊತೆ ಸಂಬಂಧ ಇರಿಸಿಕೊಂಡಿದ್ದನ್ನು ಲೆಕ್ಕ ಇಟ್ಟಿದ್ದರ ಬಗ್ಗೆ ಆ ಚಿತ್ರ ಬಿಡುಗಡೆ ಆದಾಗ ಎಲ್ಲರೂ ಮಾತಾಡಿಕೊಂಡಿದ್ದರು. ಈಗ ತಾನು ಮಲಗಿದ್ದ ಎಲ್ಲ ಹೆಂಗಸರ ಲೆಕ್ಕವನ್ನು ಎಕ್ಸೆಲ್ ಶೀಟಿ(Excel Sheet)ನಲ್ಲಿ ದಾಖಲೆ ಮಾಡಿಕೊಂಡು ಇಟ್ಟಿದ್ದ ಅಂಥದ್ದೇ ಒಬ್ಬ ಬಿಲಿಯನೇರ್ ಕಥೆ ಹೊರಗೆ ಬಂದಿದೆ. 57 ವರ್ಷದ ಬಿಲಿಯನೇರ್(Billionaire) ಮತ್ತು ಸಿಕ್ವೊಯಾ ಕ್ಯಾಪಿಟಲ್ನ ಪಾಲುದಾರ ಮೈಕೆಲ್ ಗೊಗುನ್ ವಿರುದ್ಧ ನಾಲ್ಕು ಮಾಜಿ ಉದ್ಯೋಗಿಗಳು ಸರಿಸುಮಾರು 800 ಮಿಲಿಯನ್ ಡಾಲರ್(Million Dollar) ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್(New York Post) ವರದಿ ಮಾಡಿದೆ.
5000 ಮಹಿಳೆಯರ ಜೊತೆ ಸಂಭೋಗ ನಡೆಸಿದ್ದ ಬಿಲಿಯನೇರ್
ಸಿಲಿಕಾನ್ ವ್ಯಾಲಿಯ ಈ ಬಿಲಿಯನೇರ್ ವಿರುದ್ಧ ದಾಖಲಾದ ಆಘಾತಕಾರಿ ಸಿವಿಲ್ ದೂರಿನಲ್ಲಿ ಆತ ಹದಿಹರೆಯದವರು ಸೇರಿದಂತೆ ಅನೇಕ ಯುವತಿಯರ ಜೊತೆ ಮಲಗಿದ್ದರು ಎಂದು ಆರೋಪಿಸಲಾಗಿದೆ. ತನ್ನ ಐಷಾರಾಮಿ ಮನೆಗಳಲ್ಲಿ 5000ಕ್ಕೂ ಹೆಚ್ಚು ಮಹಿಳೆಯರೊಂದಿಗೆ ನಡೆಸಿದ ಲೈಂಗಿಕ ಸಂಭೋಗಗಳನ್ನು ದಾಖಲಿಸುವ ಸ್ಪ್ರೆಡ್ಶೀಟ್ ಅನ್ನು ಈತ ಇಟ್ಟುಕೊಂಡಿದ್ದಾರೆ. ಸ್ಥಳೀಯ ಬಾರ್ನಲ್ಲಿ ನೆಲಮಾಳಿಗೆಯ 'ಬೂಮ್ ಬೂಮ್' ಕೊಠಡಿಯಲ್ಲಿ ನಡೆಸಿದ ಕಾಮದಾಟದ ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: Dead Body : ಸತ್ತೇ ಹೋದ ಅಂದವನು 7 ಗಂಟೆ ಬಳಿಕ ಎದ್ದು ಕೂತಿದ್ದ: ಇಲ್ಲಿದೆ ಎದೆ ಝಲ್ ಎನಿಸುವ ವಿಡಿಯೋ!
ದೂರು ದಾಖಲು
ಇದರ ಜತೆ, ಗೊಗುಯೆನ್ ತನ್ನ ಭದ್ರತಾ ಮುಖ್ಯಸ್ಥರಿಗೆ ವಿರೋಧಿಗಳನ್ನು ಕೊಲ್ಲುವಂತೆ ಆದೇಶಿಸಿದ ಆರೋಪಗಳು ಕೂಡಾ, ಮೊಂಟಾನಾದ US ಡಿಸ್ಟ್ರಿಕ್ಟ್ ಕೋರ್ಟ್ನಲ್ಲಿ ಸಲ್ಲಿಸಲಾದ ದೂರಿನಲ್ಲಿವೆ.
ದೌರ್ಜನ್ಯ ನಡೆಸಿದ್ದಾರೆಂದು ಆರೋಪ
ಲೈಂಗಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಿದ್ದ ಮಹಿಳೆಗೆ ಗೊಗುಯೆನ್, 40 ಮಿಲಿಯನ್ ಡಾಲರ್ ಮೊತ್ತದ ಪರಿಹಾರ ನೀಡಿದ ಬೆನ್ನಲ್ಲೇ ಈ ಆರೋಪಗಳು ಬಂದಿವೆ. ಆದರೆ ಅವರ ವಕೀಲರು ಇದನ್ನು ಸುಳ್ಳು ಎಂದು ಅಲ್ಲಗಳೆದಿದ್ದಾರೆ.
ಮಹಿಳೆಯರನ್ನು ಬಾರ್ನಲ್ಲಿ ಇರಿಸಿದ್ದ ಶ್ರೀಮಂತ
ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದ ದಾಖಲೆಗಳಲ್ಲಿ ಇಬ್ಬರು ಮಕ್ಕಳನ್ನು ಹೊಂದಿರುವ ಈ ವಿವಾಹಿತ ಬಿಲಿಯನೇರ್, ಮೊಂಟಾನಾದ ವೈಟ್ಫಿಶ್ ಪಟ್ಟಣದಲ್ಲಿ ಸ್ಥಳೀಯ ಕಾನೂನನ್ನು ಮೀರಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಯುವತಿಯರನ್ನು ಕರೆದೊಯ್ಯುಲೊಂದೇ ಹಲವಾರು ಸೇಫ್ ಹೌಸ್ಗಳನ್ನು ಹೊಂದಿದ್ದಾರೆ. ಮತ್ತು ತನ್ನ ಅಕ್ರಮ ಲೈಂಗಿಕ ಚಟುವಟಿಕೆಗಳಿಗೆ ಮಹಿಳೆಯರನ್ನು ಕರೆದೊಯ್ಯುವ ಉದ್ದೇಶಕ್ಕಾಗಿ ಈತ ತನ್ನ ಮಾಲೀಕತ್ವದ ಬಾರ್ನಲ್ಲಿ "ಬೂಮ್ ಬೂಮ್" ಎಂಬ ಕೋಣೆ ಇರಿಸಿದ್ದಾನೆ ಎನ್ನಲಾಗಿದೆ.
800 ಮಿಲಿಯನ್ ಡಾಲರ್ ಪರಿಹಾರ ಕೋರಿದ ಮಹಿಳೆಯರು
ನ್ಯೂಯಾರ್ಕ್ ಪೋಸ್ಟ್ನ ಈ ವರದಿಯ ಪ್ರಕಾರ, 135 ಪುಟಗಳ ದೂರಿನಲ್ಲಿ 800 ಮಿಲಿಯನ್ ಡಾಲರ್ಗಿಂತಲೂ ಹೆಚ್ಚಿನ ಪರಿಹಾರ ಕೋರಲಾಗಿದೆ. ಈ ಮೊಕದ್ದಮೆಯನ್ನು ನಾಲ್ವರು ಮಾಜಿ ಉದ್ಯೋಗಿಗಳು ಹೂಡಿದ್ದಾರೆ. ಗೊಗುಯೆನ್ ಈ ಮಹಿಳೆಯರನ್ನು ತನ್ನೊಂದಿಗೆ ವಿಕೃತ ಲೈಂಗಿಕ ಕ್ರಿಯೆಗಳನ್ನು ಮಾಡಲು ಮತ್ತು 'ಗೋಗುಯೆನ್ ಲೈಂಗಿಕ ಉದ್ಯಮ'ದ ಬಗ್ಗೆ ಎಲ್ಲೂ ಮಾತನಾಡದೇ ಇರಲು ಮಹಿಳೆಯರಿಗೆ ಉಡುಗೊರೆಗಳನ್ನು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಯಾರು ಈ ಗೊಗುಯೆನ್?
ಗೊಗುಯೆನ್ ಮಾಲೀಕತ್ವದ ಭದ್ರತಾ ಸಂಸ್ಥೆಯ ಅಮಿಂಟರ್ ಗ್ರೂಪ್ ಕಂಪನಿಯು ಆ್ಯಪಲ್, ಸಿಸ್ಕೋ, ಗೂಗಲ್, ಯೂಟ್ಯೂಬ್, ಪೇಪಾಲ್ ಮತ್ತು ಇನ್ಸ್ಟಾಗ್ರಾಮ್ನಂತಹ ಉನ್ನತ ಸಂಸ್ಥೆಗಳಿಗೆ ಹಣಕಾಸಿನ ಸಹಾಯ ಮಾಡಿತ್ತು. ಇದು ಮೈಕೆಲ್ ಗೊಗುನ್ ಅನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿತ್ತು.
ಇದನ್ನೂ ಓದಿ: Immortality: ಒಂದು ಮಾತು ಕೇಳಿ ಪತಿಯನ್ನ ಜೀವಂತ ಸಮಾಧಿ ಮಾಡಿದ್ಲು: ಮಗಳ ಮುಂದೆ ಸತ್ಯ ಒಪ್ಪಿಕೊಂಡ ಮಹಿಳೆ
ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡುವ ತಂತ್ರಗಳ ಬಗ್ಗೆ ಮಾಡಿರುವ ಸಾಧನೆಗಾಗಿ, ಈ ಬಿಲಿಯನೇರ್ ಉದ್ಯಮಿ ಫೋರ್ಬ್ಸ್ ಮಿಡಾಸ್ ಪಟ್ಟಿಯಲ್ಲಿ ಆಗಾಗ್ಗೆ ಹೆಸರಿಸಲ್ಪಟ್ಟಿದ್ದಾರೆ.
ಮೂಲಗಳ ಪ್ರಕಾರ ಗೊಗುಯೆನ್ ಇನ್ನೂ 5 ಬಿಲಿಯನ್ ಡಾಲರ್ಗಿಂತ ಹೆಚ್ಚು ಮೌಲ್ಯದ ಆಸ್ತಿಗೆ ಒಡೆಯನಾಗಿದ್ದಾನೆ. ಹಾಗಾಗಿ ಅದರಲ್ಲಿ ಈಗ 800 ಮಿಲಿಯನ್ ಡಾಲರುಗಳಿಗೆ ಸಂಚಕಾರ ಬಂದಿದೆ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ