Crab: ರೋಮಗಳಿರೋ ವಿಶಿಷ್ಟ ಏಡಿ ನೋಡಿದ್ದೀರಾ? ಈಗ ವೈರಲ್ ಆಗಿದೆ

ರೋಮಗಳಿಂದ ಕೂಡಿರುವ ವಿಶಿಷ್ಟ ಏಡಿ

ರೋಮಗಳಿಂದ ಕೂಡಿರುವ ವಿಶಿಷ್ಟ ಏಡಿ

ವಿಭಿನ್ನ ಗಾತ್ರ, ವಿಭಿನ್ನ ಬಣ್ಣದ ಹಲವಾರು ಏಡಿಗಳ ಬಗ್ಗೆ ನೀವು ಕೇಳಿರಬಹುದು ಅಥವಾ ಅವುಗಳಲ್ಲಿ ಕೆಲವನ್ನು ನೋಡಿರಲೂಬಹುದು. ಆದರೆ ಯಾವತ್ತಾದರೂ ಮೈಯ ಮೇಲೆಲ್ಲಾ ಕೂದಲನ್ನು ಹೊಂದಿರುವ ಏಡಿಯ ಬಗ್ಗೆ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಇಲ್ಲ, ಅಂತದ್ದೊಂದು ಏಡಿ ಇರಲಿಕ್ಕಿಲ್ಲ ಎನ್ನುವಿರಾ? ಖಂಡಿತಾ ಇದೆ, ಸಮುದ್ರದ ಆಳದಲ್ಲಿ ಜೀವಿಸುವ ಅಂತಹ ಏಡಿಯೊಂದನ್ನು ವಿಜ್ಞಾನಿಗಳು ಕಂಡು ಹಿಡಿದ್ದಿದ್ದಾರೆ.

ಮುಂದೆ ಓದಿ ...
  • Share this:

ಜಗತ್ತಿನ ಸಮುದ್ರಗಳು (Sea) ಮತ್ತು ಇತರ ಜಲಮೂಲಗಳಲ್ಲಿ ಲೆಕ್ಕವಿಲ್ಲದಷ್ಟು ಪ್ರಭೇದದ ಏಡಿಗಳಿವೆ. ಅಂತಹ ವಿಭಿನ್ನ ಗಾತ್ರ, ವಿಭಿನ್ನ ಬಣ್ಣದ ಹಲವಾರು ಏಡಿಗಳ ಬಗ್ಗೆ ನೀವು ಕೇಳಿರಬಹುದು ಅಥವಾ ಅವುಗಳಲ್ಲಿ ಕೆಲವನ್ನು ನೋಡಿರಲೂಬಹುದು. ಆದರೆ ಯಾವತ್ತಾದರೂ ಮೈಯ ಮೇಲೆಲ್ಲಾ ಕೂದಲನ್ನು (Hair) ಹೊಂದಿರುವ ಏಡಿಯ ಬಗ್ಗೆ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಇಲ್ಲ, ಅಂತದ್ದೊಂದು ಏಡಿ ಇರಲಿಕ್ಕಿಲ್ಲ ಎನ್ನುವಿರಾ? ಖಂಡಿತಾ ಇದೆ, ಸಮುದ್ರದ ಆಳದಲ್ಲಿ ಜೀವಿಸುವ ಅಂತಹ ಏಡಿಯೊಂದನ್ನು (Crab) ವಿಜ್ಞಾನಿಗಳು (Scientist) ಕಂಡು ಹಿಡಿದ್ದಿದ್ದಾರೆ. ದೇಹದ ತುಂಬಾ ಕೂದಲನ್ನು ಹೊಂದಿರುವ ಈ ಏಡಿ ಸಿಕ್ಕಾಪಟ್ಟೆ ಜಾಣ. ಯಾಕಂತೀರಾ? ಅದು ಪರಭಕ್ಷಗಳಿಂದ ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ಕೂದಲನ್ನು ಬಳಸಿ ವೇಷ ಬದಲಿಸುತ್ತದಂತೆ !


ಡ್ರೊಮಿಡಿ ಕುಟುಂಬಕ್ಕೆ ಸೇರಿದ ಸ್ಪಾಂಜ್ ಏಡಿಗಳು
ಮೇಲ್ನೋಟಕ್ಕೆ ಈ ಏಡಿಗಳು ತುಪ್ಪಳವನ್ನು ಹೊದ್ದುಕೊಂಡಂತೆ ಕಾಣುತ್ತವೆ. ಅವು ತಮ್ಮ ಉಗುರುಗಳ ಸಹಾಯದಿಂದ ಜೀವಂತ ಸ್ಪಂಜುಗಳನ್ನು ಟ್ರಿಮ್ ಮಾಡಿ, ಒಂದು ಕವಚವನ್ನು ರಚಿಸುತ್ತವೆ. ಅಷ್ಟೇ ಅಲ್ಲ, ಏಡಿಗಳು ತಮ್ಮ ತಲೆಯ ಮೇಲೆ ಸಂಗ್ರಹಿಸಿದ ಟ್ರಿಮ್ಮಿಂಗ್‍ಗಳನ್ನು ಹಿಡಿದಿಡಲು ಅವುಗಳ ದೇಹದ ಹಿಂಭಾಗದಲ್ಲಿ ವಿಶೇಷವಾದ ಕಾಲುಗಳನ್ನು ಹೊಂದಿವೆ. ಈ ಏಡಿಗಳು, ಡ್ರೊಮಿಡಿ ಕುಟುಂಬಕ್ಕೆ ಸೇರಿದ್ದು, ಅವುಗಳನ್ನು ಸಾಮಾನ್ಯವಾಗಿ ಸ್ಪಾಂಜ್ ಏಡಿಗಳು ಎಂದು ಕರೆಯಲಾಗುತ್ತದೆ.


ಯೂಎಸ್‍ಎ ಯ ಮಾಧ್ಯಮವೊಂದರ ವರದಿಯ ಪ್ರಕಾರ, ಚಾರ್ಲ್ಸ್ ಡಾರ್ವಿನನ ಹಡಗಿನ ಹೆಸರನ್ನು ಆಧರಿಸಿ, ಈ ಪ್ರಭೇದದ ಏಡಿಗೆ ಲ್ಯಾಮಾರ್ಕ್‍ಡ್ರೋಮಿಯಾ ಬೀಗಲ್ ಎಂಬ ಹೆಸರನ್ನು ಇಡಲಾಗಿದೆ. ಚಾರ್ಲ್ಸ್ ಡಾರ್ವಿನ್ ಒಬ್ಬ ಬ್ರಿಟೀಷ್ ನ್ಯಾಚುರಲಿಸ್ಟ್ ಆಗಿದ್ದರು. ಅವರು ತಮ್ಮ ಶಿಪ್‍ನಲ್ಲಿ ಪ್ರಪಂಚದಾದ್ಯಂತ ಸುತ್ತಾಡಿದ್ದರು ಮತ್ತು ಅವರು ಆಸ್ಟ್ರೇಲಿಯಾಗೆ ಪ್ರಯಾಣಿಸಿದ ಹಡಗಿನ ಹೆಸರು ಹೆಚ್‍ಎಂಎಸ್ ಬೀಗಲ್ ಆಗಿತ್ತು.
ಮಾಧ್ಯಮವೊಂದರ ವರದಿಯ ಪ್ರಕಾರ, ಏಡಿ ಮೊದಲ ಬಾರಿಗೆ ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿಯಲ್ಲಿ ಕುಟುಂಬವೊಂದಕ್ಕೆ ಕಾಣ ಸಿಕ್ಕಿತ್ತು. ಅವರು ಅದರ ಗುರುತನ್ನು ಪತ್ತೆ ಹಚ್ಚಲು ಅಲ್ಲಿನ ಸ್ಥಳಿಯ ಮ್ಯೂಸಿಯಂಗೆ ಕಳುಹಿಸಿದ್ದರು.


ಏಡಿಯ ಬಗ್ಗೆ  ಡಾ. ಆ್ಯಂಡ್ರೂ ಹೋಸಿ ಹೇಳಿದ್ದೇನು
“ಸ್ಪಾಂಜ್ ಅಥವಾ ಅಸಿಡಿಯನ್ ಕೇವಲ ಬೆಳೆಯುತ್ತಲೇ ಇರುತ್ತದೆ ಮತ್ತು ಏಡಿಯ ಬೆನ್ನಿನ ಆಕಾರಕ್ಕೆ ಸರಿ ಹೊಂದಿಕೊಳ್ಳುತ್ತದೆ. ಅದು ಯಾವತ್ತೂ ಅಂಟಿಕೊಳ್ಳುವುದಿಲ್ಲ. . .ಅದು ಏಡಿಯ ದೇಹದ ಮೇಲಿನ ಭಾಗಕ್ಕೆ ಸರಿಯಾಗಿ ಹೊಂದುವ ಕ್ಯಾಪ್ ಆಗಿ ರೂಪುಗೊಳ್ಳುತ್ತದೆ” ಎಂದು ಪಶ್ಚಿಮ ಆಸ್ಟ್ರೇಲಿಯಾದ ಮ್ಯೂಸಿಯಂನಲ್ಲಿ ಕ್ರಸ್ಟೆಸಿಯಾ ಮತ್ತು ವರ್ಮ್‍ಗಳ ಕ್ಯೂರೇಟರ್ ಆಗಿರುವ ಡಾ. ಆ್ಯಂಡ್ರೂ ಹೋಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಇದನ್ನೂ ಓದಿ: Viral Video: ಪಾಂಡಾವನ್ನು ಮಗುವಿನಂತೆ ತಟ್ಟಿ ಮಲಗಿಸಿದ ವ್ಯಕ್ತಿ! ಕ್ಯೂಟ್ ವಿಡಿಯೋ ವೈರಲ್


ಈ ಏಡಿಗಳ ಮೈಮೇಲೆ ಕಂಡು ಬರುವ ಸ್ಪಾಂಜ್‍ಗಳು, ಏಡಿಯ ಗಾತ್ರಕ್ಕಿಂತಲೂ ದೊಡ್ಡದಾಗಿರಬಹುದು. ಅವು ಏಡಿಗೆ ಒಂದು ರಾಸಾಯನಿಕ ನಿರೋಧಕವನ್ನು ಕೂಡ ಒದಗಿಸುತ್ತವೆ. “ಈ ಸ್ಪಂಜುಗಳು ಉತ್ಪಾದಿಸುವ ಕೆಲವು ಸಂಯುಕ್ತಗಳು ತುಂಬಾ ಹಾನಿಕಾರಕವಾಗಿರುತ್ತವೆ” ಎಂದು ಡಾ. ಆ್ಯಂಡ್ರೂ ಹೋಸಿ ತಿಳಿಸಿದ್ದಾರೆ.


ಹೊಸ ಪ್ರಭೇದದ ಏಡಿಯ ಫೋಟೋ ಇಂಟರ್ನೆಟ್‍ನಲ್ಲಿ ವೈರಲ್
ಏಡಿಗಳ ಮೇಲಿನ ಭಾಗವು ಬಿಗಿಯದಾಗ ಕೂದಲು ಅಥವಾ ತುಪ್ಪಳದಂತ ಕವಚ ಇರುವುದರಿಂದ, ದೊಡ್ಡ ಮೀನುಗಳು, ಇತರ ಏಡಿಗಳು ಅಥವಾ ಆಕ್ಟೋಪಸ್‍ನಂತಹ ಪರಭಕ್ಷಕಗಳಿಗೆ ಆಹಾರವಾಗದೆ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಡಾ. ಆ್ಯಂಡ್ರೂ ಹೋಸಿ ಅವರು ಹೇಳುವ ಪ್ರಕಾರ, “ಏಡಿಯನ್ನು ತಿನ್ನಬೇಕು ಎಂಬ ಉದ್ದೇಶಕ್ಕಾಗಿ ಸ್ಪಂಜನ್ನು ಕೂಡ ಅಗಿಯಲು ಆಸಕ್ತಿ ಹೊಂದಿರುವ ಸಕ್ರೀಯ ಪರಭಕ್ಷಕಗಳ ಸಂಖ್ಯೆ ಅಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ.”


ಇದನ್ನೂ ಓದಿ: Snake: ಅಪರೂಪದ ಎರಡು ತಲೆಯ ಮೊಟ್ಟೆ ಭಕ್ಷಕ ಹಾವು ಪತ್ತೆ! ಫೋಟೋ ವೈರಲ್


ಮೈ ತುಂಬಾ ಕೂದಲನ್ನು ಹೊಂದಿರುವ ಈ ಹೊಸ ಪ್ರಭೇದದ ಏಡಿಯ ಫೋಟೋ ಇಂಟರ್ನೆಟ್‍ನಲ್ಲಿ ಹರಿದಾಡುತ್ತಿದೆ. ಈ ವಿಚಿತ್ರ ಏಡಿಯನ್ನು ಕಂಡು ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ಕೂಡ ನೀಡುತ್ತಿದ್ದಾರೆ.

top videos
    First published: