ಜಿಂಕೆ ಮರಿಗೆ ಹಾಲುಣಿಸಿದ ಮಹಿಳೆ; ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​

ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಾಸ್ವಾಸ್​ ಈ ದೃಶ್ಯವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಾಕಿದ್ದು ‘ಜೋಧ್​ಪುರದ ಬಿಷ್ನೋಯಿ ಸಮುದಾಯದ ಮಹಿಳೆಯೊಬ್ಬರು ಮಗುವಿನಂತಿರುವ ಜಿಂಕೆ ಮರಿಯನ್ನು ಎತ್ತಿಕೊಂಡು ಹಾಲುಣಿಸಿದ್ದಾರೆ‘ ಎಂದು ಬರೆದುಕೊಂಡಿದ್ದಾರೆ.

news18
Updated:July 19, 2019, 9:03 PM IST
ಜಿಂಕೆ ಮರಿಗೆ ಹಾಲುಣಿಸಿದ ಮಹಿಳೆ; ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​
ಜಿಂಕೆ ಮರಿಗೆ ಹಾಲುಣಿಸುತ್ತಿರುವ ಮಹಿಳೆ
  • News18
  • Last Updated: July 19, 2019, 9:03 PM IST
  • Share this:
ಮಹಿಳೆಯೊಬ್ಬರು ಜಿಂಕೆ ಮರಿಗೆ ಹಾಲುಣಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಾಸ್ವಾಸ್​ ಎಂಬವರು ಈ ದೃಶ್ಯವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಾಕಿದ್ದು, ‘ಜೋಧ್​ಪುರದ ಬಿಷ್ನೋಯಿ ಸಮುದಾಯದ ಮಹಿಳೆಯೊಬ್ಬರು ಮಗುವಿನಂತಿರುವ ಜಿಂಕೆ ಮರಿಯನ್ನು ಎತ್ತಿಕೊಂಡು ಹಾಲುಣಿಸಿದ್ದಾರೆ‘ ಎಂದು ಬರೆದುಕೊಂಡಿದ್ದಾರೆ.

ಬಿಷ್ನೋಯಿ ಸಮುದಾಯದ ಪ್ರಾಣಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಎಂದು  ಟ್ವಿಟ್​ ಮಾಡಿದ್ದಾರೆ.

 

Loading...ಇನ್ನು ಪ್ರವೀಣ್​ ಕಾಸ್ವಾಸ್ ಈ ದೃಶ್ಯವನ್ನು ತಮ್ಮ​ ಖಾತೆಯಲ್ಲಿ ಟ್ವಿಟ್​​ ಮಾಡುತ್ತಿದ್ದಂತೆ 1 ಸಾವಿರಕ್ಕೂ ಅಧಿಕ ಶೇರ್​ಆಗಿದೆ. 4 ಸಾವಿರಕ್ಕೂ ಅಧಿಕ ಜನರು ಲೈಕ್ಸ್​ ಮಾಡಿದ್ದಾರೆ. ತನ್ನ ಮಗುವಿನಂತೆ ಜಿಂಕೆ ಮರಿಗೆ ಹಾಲುಣಿಸುತ್ತಿರುವ ಈ ಮಹಿಳೆಯ ಪ್ರಾಣಿ ಪ್ರೀತಿಗೆ ಅನೇಕರು ಕಮೆಂಟ್​ ಮಾಡಿದ್ದಾರೆ.

ಇನ್ನು ಕೆಲವರು ಹಳ್ಳಿಗಾಡಿನಲ್ಲಿ ವಾಸಿಸುವ ಜನರು ಕುರಿ, ದನ, ಮೊಲ, ನಾಯಿ, ಬೆಕ್ಕು, ಗಿಳಿ ಮುಂತಾದ ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ಸಾಕುತ್ತಾರೆ. ಅವುಗಳಿಗೆ ಹೆಸರನ್ನು ಇಟ್ಟಿರುತ್ತಾರೆ ಎಂದು ಕಮೆಂಟ್​ ಮಾಡಿದ್ದಾರೆ.
First published:July 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...