Viral Video : ಮಹಿಳೆಯ ಪರ್ಸ್ ಕಚ್ಚಿಕೊಂಡು ಹಾರಿ ಹೋದ ಹಕ್ಕಿ, ಮುಂದೇನಾಯ್ತು ನೋಡಿ!

Viral Video : ಹಕ್ಕಿ(Bird)ಯೊಂದು ಯುವತಿಯ ಪರ್ಸ(Purse)ನ್ನು ಕಸಿದು ಹಾರಿಹೋಗುವ ದೃಶ್ಯ ಎಲ್ಲೆಡೆ ಸಖತ್​ ವೈರಲ್ ಆಗುತ್ತಿದೆ. ಯುವತಿ ಕೂಡ ಹಕ್ಕಿ ಹಿಂದಿದೆಯೇ ಓಡಿಹೋಗುತ್ತಿರುವ ದೃಶ್ಯ ಸೆರೆಯಾಗಿದೆ

ಪರ್ಸ್​ ಕಚ್ಚಿಕೊಂಡು ಹಾರಿಹೋಗುತ್ತಿರುವ ಹಕ್ಕಿ

ಪರ್ಸ್​ ಕಚ್ಚಿಕೊಂಡು ಹಾರಿಹೋಗುತ್ತಿರುವ ಹಕ್ಕಿ

  • Share this:
ಇಂಟರ್​ನೆಟ್​​ನಲ್ಲಿ(Internet) ಪ್ರತಿದಿನ ನಮಗೆ ಹೊಸ ಹೊಸ ವಿಡಿಯೋಗಳು(New Videos) ಕಾಣಸಿಗುತ್ತವೆ. ಅದರಲ್ಲೂ ಕೆಲವೊಂದು ದೃಶ್ಯಗಳು ನಿಜಕ್ಕೂ ನಮಗೆ ಅಚ್ಚರಿ ಮೂಡಿಸುತ್ತವೆ. ಜತೆಗೆ ನಮಗೆ ತಿಳಿಯದ ಹಾಗೇ ನಮ್ಮ ಮುಖದಲ್ಲಿ ನಗುವರಳಿಸುತ್ತವೆ. ಇಂತಹ ಲಕ್ಷಾಂತರ ವಿಡಿಯೋಗಳಿಂದ ಇಂಟರ್‌ನೆಟ್ ತುಂಬಿ ಹೋಗಿದೆ. ಪ್ರತಿದಿನ ಒಂದಲ್ಲ ಒಂದು ಅಚ್ಚರಿ ಮೂಡಿಸುವಂತಹ ಈ ರೀತಿಯ ದೃಶ್ಯಗಳು ನಮಗೆ ಕಾಣಸಿಗುತ್ತವೆ. ಇದೀಗ, ಅಂತಹದ್ದೇ ದೃಶ್ಯವೊಂದು ಸೋಷಿಯಲ್ ಮೀಡಿಯಾ(Social Media)ದಲ್ಲಿ ಮತ್ತೆ ವೈರಲ್​ ಆಗುತ್ತಿದೆ. ಹಕ್ಕಿ(Bird)ಯೊಂದು ಯುವತಿಯ ಪರ್ಸ(Purse)ನ್ನು ಕಸಿದು ಹಾರಿಹೋಗುವ ದೃಶ್ಯ ಎಲ್ಲೆಡೆ ಸಖತ್​ ವೈರಲ್ ಆಗುತ್ತಿದೆ. ಯುವತಿ ಕೂಡ ಹಕ್ಕಿ ಹಿಂದಿದೆಯೇ ಓಡಿಹೋಗುತ್ತಿರುವ ದೃಶ್ಯ ಸೆರೆಯಾಗಿದೆ.  ಮೊಬೈಲ್ ಫೋನ್‌ ಸೇರಿದಂತೆ ಇತರ ವಸ್ತುಗಳ ಜತೆಗೆ ಇಟ್ಟಿದ್ದ ಹಣದ ಪರ್ಸ್ ಕದ್ದು ಹಕ್ಕಿ ಪರಾರಿಯಾಗಿದೆ. 


ನೋಡ ನೋಡುತ್ತಲೇ ಪರ್ಸ್​ ಎಗರಿಸಿದ ಹಕ್ಕಿ


ಮಹಿಳೆಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ಕಾಲ ಕಳೆಯುತ್ತಿರುತ್ತಾಳೆ. ಈ ವೇಳೆ ಪರ್ಸ್ ಹಾಗೂ ಫೋನ್​ ಅನ್ನು ಪಕ್ಕದಲ್ಲಿ ಇಟ್ಟು ಮಾತನಾಡುತ್ತಿರುತ್ತಾಳೆ. ಅಲ್ಲಿಗೆ ಅದೇ ಸಮಯಕ್ಕೆ ಎಂಟ್ರಿಯಾಗುವ ಹಕ್ಕಿ ಇವರ ಬಳಿ ಬರುತ್ತೆ. ಹಕ್ಕಿಯನ್ನು ಕಂಡ ಇವರು ಅದರ ಕಡೆ ಯಾವುದೇ ಗಮನ ಕೊಡದೇ ಸುಮ್ಮನಾಗಿ ಬಿಡುತ್ತಾರೆ. ಬರುತ್ತಾ ಬರುತ್ತಾ ಹಕ್ಕಿ ಇವರ ಬಳಿ ಬರುತ್ತೆ. ಆದರೂ ಇವರು ತಮ್ಮ ಪಾಡಿಗೆ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಹಕ್ಕಿ ತೀರಾ ಹತ್ತಿರ ಬಂದ ಬಳಿಕ ಸ್ನೇಹಿತೆ ತನ್ನ ಮೊಬೈಲ್​ನಲ್ಲಿ ಹಕ್ಕಿಯ ದೃಶ್ಯಗಳನ್ನು ತೆಗೆಯಲು ಮುಂದಾಗುತ್ತಾಳೆ. ನೋಡ ನೋಡತ್ತಿದ್ದಂತೆ ಹಕ್ಕಿ ಅಲ್ಲೇ ಹಣವಿದ್ದ ಪರ್ಸ್​ ಅನ್ನು ಕಚ್ಚಿಕೊಂಡು ಹಾರಿ ಹೋಗುತ್ತೆ.









View this post on Instagram






A post shared by hepgul5 (@hepgul5)






ಹಕ್ಕಿ ಹಿಂದಿದೆಯೇ ಓಡಿದ ಮಹಿಳೆ


ಹೀಗೆ ಹಕ್ಕಿ ಪರ್ಸ್​ ಕದ್ದು ಹಾರಿ ಹೋಗುತ್ತಿದ್ದಂತೆ, ಪಕ್ಕದಲ್ಲಿದ್ದ ಮಹಿಳೆ ಜೋರಾಗಿ ಕಿರುಚುತ್ತಾಳೆ. ಅತ್ತ ಮಹಿಳೆ ಹಾರಿ ಹೋದ ಹಕ್ಕಿಯ ಹಿಂದೆ ಓಡಿ ಹಿಡಿಯುವ ಪ್ರಯತ್ನ ಮಾಡುತ್ತಾಳೆ . ಆದರೆ ಹಕ್ಕಿ ವೇಗವಾಗಿ ಹಾರಿ ಹೋಗಿತ್ತು.  ದೃಶ್ಯವನ್ನು ಅಲ್ಲೇ ಇದ್ದವರು ಸೆರೆ ಹಿಡಿದಿದ್ದಾರೆ. ಜತೆಗೆ, ಈಕೆಯ ಜತೆಗಿದ್ದವರು ಕೂಡಾ ಆತಂಕದಿಂದ ಕಿರಿಚಾಡುವುದನ್ನು ಈ ಕ್ಲಿಪ್‌ನಲ್ಲಿ ಕೇಳಬಹುದಾಗಿದೆ. ಆದರೆ ಅಷ್ಟೊತ್ತಿಗಾಗಲೇ ತಡವಾಗಿದ್ದರಿಂದ ಯುವತಿಗೆ ಪರ್ಸ್ ಸಿಗಲಿಲ್ಲ.ಇದರಿಂದ ಯುವತಿಗೆ ಬೇಸರ ವ್ಯಕ್ತಪಡಿಸಿದ್ದಾಳೆ.




ಹಳೆ ವಿಡಿಯೋ ಮತ್ತೆ ವೈರಲ್​




ಅಂದಹಾಗೇ ಇದು ಹೊಸ ವಿಡಿಯೋವಲ್ಲ ಎಂದು ತಿಳಿದುಬಂದಿದೆ, ಲ ವರ್ಷಗಳ ಹಿಂದೆಯೇ ಈ ವಿಡಿಯೋ ಅಪ್ಲೋಡ್ ಆಗಿತ್ತು. ಇದೀಗ ಇದೇ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ.  ಸದ್ಯ @hepgul5 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಆದರೆ ಮತ್ತೆ ಮತ್ತೆ ಈ ವಿಡಿಯೋ ಕಂಡ ನೆಟ್ಟಿಗರು ಇದನ್ನು ಪದೇ ಪದೇ ಶೇರ್​ ಮಾಡುತ್ತಿದ್ದಾರೆ.  ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದು, ಕೆಲವರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ : ಸೀರೆ ತೊಟ್ಟ ಆಂಟಿಯ ಮಸ್ತ್​ ಡ್ಯಾನ್ಸ್​ ಮೋಡಿಗೆ ನೆಟ್ಟಿಗರು ಫಿದಾ!

ಪುಣ್ಯಕ್ಕೆ ನಿಮ್ಮ ಪೋನ್​ ಕಚ್ಚಿ ಹಾರಿಹೋಗಿಲ್ಲ ಪಕ್ಷಿ ಅದಕ್ಕೆ ಖುಷಿ ಪಡಿ ಎಂದಿದ್ದಾರೆ. ಇನ್ನೂ ಕೆಲವರು ಈಕೆ ಪಕ್ಷಿ ಹಿಂದೆ ಓಡಿಹೋಗಿದ್ದನ್ನು ಅಣುಕಿಸಿದ್ದಾರೆ. ನೀನು ದೇವಲೋಕದಿಂದ ಬಂದಿರುವ ಏಂಜೆಲ್​ ಅಂದುಕೊಂಡಿದ್ದೀರಾ. ಆ ರೀತಿ ಪಕ್ಷಿ ಹಿಂದೆ ಓಡಿ ಹೋಗುತ್ತಿರುವಾಗ ಕಟ್ಟಡದಿಂದ ಕೆಳಗೆ ಬಿದ್ದದ್ದರೇ ನಿಮ್ಮ ತಂದೆ ತಾಯಿ ಏನು ಮಾಡಬೇಕಿತ್ತು ಎಂದು ಕಮೆಂಟ್​ ಮಾಡಿದ್ದಾರೆ.


Published by:Vasudeva M
First published: