• Home
  • »
  • News
  • »
  • trend
  • »
  • Mukesh Ambani: ಉದ್ಯಮಿ ಮುಖೇಶ್‌ ಅಂಬಾನಿಯ ʼಆಂಟಿಲಿಯಾʼ ಮನೆ ಹೇಗಿದೆ ಗೊತ್ತಾ? ಭವ್ಯ ಬಂಗಲೆ ಬಗ್ಗೆ ಇಲ್ಲಿದೆ ಮಾಹಿತಿ

Mukesh Ambani: ಉದ್ಯಮಿ ಮುಖೇಶ್‌ ಅಂಬಾನಿಯ ʼಆಂಟಿಲಿಯಾʼ ಮನೆ ಹೇಗಿದೆ ಗೊತ್ತಾ? ಭವ್ಯ ಬಂಗಲೆ ಬಗ್ಗೆ ಇಲ್ಲಿದೆ ಮಾಹಿತಿ

ʼಆಂಟಿಲಿಯಾʼ

ʼಆಂಟಿಲಿಯಾʼ

ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ಐಷಾರಾಮಿ ʼಆಂಟಿಲಿಯಾʼ ಮನೆ ಭಾರತದ ವ್ಯಾಪಾರ ರಾಜಧಾನಿ ಮುಂಬೈನಲ್ಲಿ ಒಂದು ಅಪ್ರತಿಮ ಹೆಗ್ಗುರುತಾಗಿದೆ.

  • News18 Kannada
  • Last Updated :
  • New Delhi, India
  • Share this:

ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಐಷಾರಾಮಿ ವಾಹನ, ಅತ್ಯದ್ಭುತ ಮನೆ (House), ದುಬಾರಿ ಆಸ್ತಿ (Property), ಬೆಲೆಬಾಳುವ ವಸ್ತು ಹೀಗೆ ಎಲ್ಲವೂ ಇದೆ. ಮುಖೇಶ್ ಅಂಬಾನಿಯವರ ಆಸ್ತಿಗಳಲ್ಲಿ ಎಲ್ಲರ ಕಣ್ಮನಸೆಳೆಯುವುದೇ ಅವರ ಮನೆ. ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ಐಷಾರಾಮಿ ʼಆಂಟಿಲಿಯಾʼ (Antilia) ಮನೆ ಭಾರತದ ವ್ಯಾಪಾರ ರಾಜಧಾನಿ ಮುಂಬೈನಲ್ಲಿ (Mumbai) ಒಂದು ಅಪ್ರತಿಮ ಹೆಗ್ಗುರುತಾಗಿದೆ.


ವಿಶ್ವದ ಎರಡನೇ ದುಬಾರಿ ಆಸ್ತಿ
ಹೌದು, ಬಕಿಂಗ್ಹ್ಯಾಮ್ ಅರಮನೆಯ ನಂತರ ವಿಶ್ವದ ಎರಡನೇ ಅತ್ಯಂತ ಅದ್ದೂರಿ ಆಸ್ತಿ ಎಂದು ಅಂದಾಜಿಸಲಾದ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ದೇಶ ಮತ್ತು ವಿದೇಶಗಳಲ್ಲಿ ಜನರನ್ನು ಬೆರಗುಗೊಳಿಸುತ್ತಿರುವ ಅತ್ಯದ್ಭುತ ಕಟ್ಟಡ. ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ಐಷಾರಾಮಿ ʼಆಂಟಿಲಿಯಾʼ ಮನೆ ಭಾರತದ ವ್ಯಾಪಾರ ರಾಜಧಾನಿ ಮುಂಬೈನಲ್ಲಿ ಒಂದು ಅಪ್ರತಿಮ ಹೆಗ್ಗುರುತಾಗಿದೆ.


ಇದನ್ನೂ ಓದಿ: ಪೇರೆಂಟ್ಸ್​ ಆಗ್ತಾ ಇದ್ದೀವಿ ಅಂತ ಗೊತ್ತಾಗಿ ಗಂಡ ಹೆಂಡ್ತಿ ಕೊಟ್ಟ ಸೇಮ್​ ರಿಯಾಕ್ಷನ್​! ಎಲ್ಲಾ ಕಡೆ ಇವರದ್ದೇ ಹವಾ


ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಅಂಬಾನಿ ಕುಟುಂಬ
ʼಆಂಟಿಲಿಯಾʼ ಮನೆಗೆ ಪ್ರವೇಶಿಸುವ ಮೊದಲು ಮುಖೇಶ್ ಅಂಬಾನಿ ಕುಟುಂಬ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಹೌದು, ಇವರು ಮೊದಲು ಮುಂಬೈನ ಭುಲೇಶ್ವರದಲ್ಲಿ ಎರಡು ಬೆಡ್‌ರೂಮ್‌ ಇರುವ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದರು.


ʼಆಂಟಿಲಿಯಾʼ ಹೆಸರು ಬಂದಿದ್ದು ಹೇಗೆ?
ವಿಶ್ವದ ಅತ್ಯಂತ ದುಬಾರಿ ಬೆಲೆಯ ವಸತಿ ಮಾರುಕಟ್ಟೆಗಳಲ್ಲಿ ಒಂದಾಗಿರುವ ಈ ಮನೆ ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿದೆ. 400,000 ಚದರ ಅಡಿ ಕಟ್ಟಡಕ್ಕೆ ಪೋರ್ಚುಗಲ್ ಮತ್ತು ಸ್ಪೇನ್ ಬಳಿಯ ಅಟ್ಲಾಂಟಿಕ್ ಸಾಗರದಲ್ಲಿರುವ ಪೌರಾಣಿಕ ದ್ವೀಪ ʼಆಂಟಿಲಿಯಾʼ ಎಂದು ಹೆಸರನ್ನು ಇಡಲಾಗಿದೆ. ಆಂಟಿಲಿಯಾವನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ಎರಡು ವಿಶ್ವಪ್ರಸಿದ್ಧ, ಯುಎಸ್ ಮೂಲದ ಕಂಪನಿಗಳನ್ನು ಅಂಬಾನಿ ನೇಮಿಸಿಕೊಂಡರು. 27-ಅಂತಸ್ತಿನ ಆಸ್ತಿಯನ್ನು ಪ್ರತಿಷ್ಠಿತ ಚಿಕಾಗೋ ಮೂಲದ ವಾಸ್ತುಶಿಲ್ಪಿಗಳಾದ ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ್ದಾರೆ ಮತ್ತು ಇದನ್ನು ಆಸ್ಟ್ರೇಲಿಯಾ ಮೂಲದ ಲೈಟನ್ ಹೋಲ್ಡಿಂಗ್ಸ್ ಎಂಬ ನಿರ್ಮಾಣ ಕಂಪನಿ ನಿರ್ಮಿಸಿದೆ.


ಇದನ್ನೂ ಓದಿ: ಕಾರ್‌ ಮೇಲೆ ಲಿಪ್‌ ಸ್ಟಿಕ್​ನಲ್ಲಿ ಗೀಚಿದ ಪುಟ್ಟ ಪೋರ, ವೈರಲ್‌ ಆಯ್ತು ಪುಟಾಣಿಯ ತುಂಟಾಟ


600 ಉದ್ಯೋಗಿಗಳಿಂದ ಮನೆ ನಿರ್ವಹಣೆ
2006 ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯ 2012 ರಲ್ಲಿ ಪೂರ್ಣಗೊಂಡಿತು. ಈ ಐಷಾರಾಮಿ ಮನೆಯನ್ನು 600 ಉದ್ಯೋಗಿಗಳು ನೋಡಿಕೊಳ್ಳುತ್ತಿದ್ದಾರೆ.


ಹೇಗಿದೆ ಗೊತ್ತಾ ʼಆಂಟಿಲಿಯಾʼ?
ಆಂಟಿಲಿಯಾದ ವಾಸ್ತುಶಿಲ್ಪದ ವಿನ್ಯಾಸವು ಸೂರ್ಯ ಮತ್ತು ಕಮಲದಿಂದ ಪ್ರೇರಿತವಾಗಿದೆ. ಮನೆಯ ಬಹುಮುಖ್ಯ ವಿಶೇಷತೆ ಎಂದರೆ ಇದು 8 ತೀವ್ರತೆಯ ಭೂಕಂಪವನ್ನು ಸಹ ತಡೆದುಕೊಳ್ಳಬಲ್ಲದು. ಇನ್ನೂ ಆಂಟಿಲಿಯಾ ಕೆಳಗಿನ ಮೊದಲ 6 ಮಹಡಿಗಳು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ 168 ಕಾರುಗಳನ್ನು ಏಕಕಾಲದಲ್ಲಿ ಪಾರ್ಕ್‌ ಮಾಡಬಹುದಾಗಿದೆ. ಪಾರ್ಕಿಂಗ್ ಲಾಟ್‌ನ ಮೇಲಿನ ಮಹಡಿಯಲ್ಲಿ 50 ಆಸನಗಳ ಸಿನಿಮಾ ಹಾಲ್ ಮತ್ತು ಅದರ ಮೇಲೆ ಹೊರಾಂಗಣ ಗಾರ್ಡನ್‌ ಇದೆ. ಅಂಬಾನಿಯವರ ಈ ಮನೆಯಲ್ಲಿ ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು 9 ಲಿಫ್ಟ್‌ಗಳಿವೆ. ಮನೆಯಲ್ಲಿ 1 ಸ್ಪಾ ಮತ್ತು ದೇವಸ್ಥಾನ ಕೂಡ ಇದೆ. ಇದಲ್ಲದೇ ಯೋಗ ಸ್ಟುಡಿಯೋ, ಐಸ್ ಕ್ರೀಂ ರೂಮ್, ಮೂರು ಈಜುಕೊಳಗಳು ಮತ್ತು ಹೆಲಿಪ್ಯಾಡ್‌ ವ್ಯವಸ್ಥೆ ಕೂಡ ಇದೆ.


ಸ್ನೋ ರೂಮ್
ಮುಂಬೈನಲ್ಲಿ ಅತಿ ಹೆಚ್ಚು ತಾಪಾಮಾನ ಇರುವುದರಿಂದ, ಬೇಸಿಗೆಯನ್ನು ಕಳೆಯಲು ಆಂಟಿಲಿಯಾದಲ್ಲಿ ಮುಕೇಶ್‌ ಅಂಬಾನಿ ಹಿಮದಿಂದ ಕೂಡಿದ ಒಂದು ರೂಮ್‌ ಅನ್ನು ನಿರ್ಮಿಸಿದ್ದಾರಂತೆ.


ಪ್ರತಿ ಮಹಡಿಯೂ ವಿಭಿನ್ನ
ಪ್ರತಿ ಮಹಡಿಯೂ ಏನಾದರೂ ಒಂದು ವಿಭಿನ್ನತೆಯನ್ನು ಹೊಂದಿದೆ. ಪ್ರತಿಯೊಂದು ಮಹಡಿಯು ಕರಕುಶಲ ವಿನ್ಯಾಸಗಳನ್ನು ಒಳಗೊಂಡಂತೆ ವಿಶಿಷ್ಟವಾದ ಥೀಮ್ ಅಲ್ಲಿ ನಿರ್ಮಿತವಾಗಿದೆ. ಒಳಾಂಗಣದ ಪ್ರಾಥಮಿಕ ಥೀಮ್ ಆದ ಕಮಲ ಮತ್ತು ಸೂರ್ಯ ವಿನ್ಯಾಸ ಅಮೂಲ್ಯವಾದ ಕಲ್ಲುಗಳು, ಮದರ್ ಆಫ್ ಪರ್ಲ್, ಅಮೃತಶಿಲೆ ಮುಂತಾದ ಸೊಗಸಾದ ವಸ್ತುಗಳಿಂದ ನಿರ್ಮಿಸಲ್ಪಟ್ಟಿದೆ.


ಮುಖೇಶ್ ಅಂಬಾನಿ ಮನೆ ಬೆಲೆ ಎಷ್ಟು?
ಅಲ್ಟಾಮೌಂಟ್ ರಸ್ತೆಯಲ್ಲಿರುವ ಮುಖೇಶ್-ಅಂಬಾನಿ ಆಂಟಿಲಿಯಾ ಮನೆ, ಅಂದಾಜು 15,000 ಕೋಟಿ ಬೆಲೆ ಬಾಳುವ ಕಟ್ಟಡವಾಗಿದೆ.

First published: