ಮೈಕ್ರೋಸಾಫ್ಟ್ ಕಂಪನಿ ಆರಂಭಿಸಿದ ದಿನಗಳಲ್ಲಿ ಬಿಲ್ಗೇಟ್ಸ್ ಪಾರ್ಟಿ ಮಾಡುವ ಒಲವು ಹೊಂದಿದ್ದರು. 80 ದಶಕದ ಉತ್ತರಾರ್ಧ ಮತ್ತು 90 ದಶಕದ ವೇಳೆ ಬಿಲ್ಗೇಟ್ಸ್ ಎಲ್ಲರೊಂದಿಗೆ ಕುಳಿತುಕೊಂಡು ಬೆತ್ತಲೆ ಪೂಲ್ ಪಾರ್ಟಿ ಮಾಡುತ್ತಿದ್ದರಂತೆ.
ಪ್ರಾರಂಭದಲ್ಲಿ ಬಿಲ್ಗೇಟ್ಸ್ 17 ಗಂಟೆಗಳ ಕಾಲ ಕೆಲಸ ಮಾಡುತ್ತಿರಲಿಲ್ಲ. ಆ ಸಮಯದಲ್ಲಿ ಸ್ನೇಹಿತರನ್ನು, ಡ್ಯಾನ್ಸರ್ಸ್ಗಳನ್ನು ಕರೆಸಿ ವಾಷಿಂಗ್ಟನ್ನಲ್ಲಿ ಬೆತ್ತಲೆ ನೈಟ್ ಕ್ಲಬ್ ಮಾಡುತ್ತಿದ್ದರು ಎಂದು ಬಿಲ್ಗೇಟ್ಸ್ ಅವರ ಜೀವನ ಚರಿತ್ರೆಯಲ್ಲಿ ಜೇಮ್ಸ್ ವ್ಯಾಲೇಸ್ ತಿಳಿಸಿದ್ದಾರೆ.
ಬಿಲ್ಗೇಟ್ಸ್ ಅವರ ಸುತ್ತಲು ಹುಡುಗಿಯರು ಸುತ್ತುವರಿಯುತ್ತಿದ್ದರು. ಆದರೆ ಅವರು ದೈಹಿಕವಾಗಿ ಅಥವಾ ತಮ್ಮನ್ನು ತಾವು ತೋರಿಸಿಕೊಳ್ಳಲು ಈ ರೀತಿ ಮಾಡಿದ್ದರೊ ಎಂಬುದು ನನಗೆ ಗೊತ್ತಿಲ್ಲ ಎಂದು ಜೇಮ್ಸ್ ಹೇಳಿದ್ದಾರೆ.
ಎರಡು ಜೀವನ ಚರಿತ್ರೆಗಳನ್ನು ಬರೆದ ಜೇಮ್ಸ್ ವ್ಯಾಲೇಸ್ ಅವರು ಬಿಲ್ಗೇಟ್ಸ್ ವಿಶೇಷ ಪಾರ್ಟಿಗಳಿಗೆ ಸಮಯಕ್ಕೆ ತಕ್ಕಂತೆ ಹಾಜರಾಗುತ್ತಿದ್ದರು. ಅದರಲ್ಲೂ ಕಾಮ್ಡೆಕ್ಸ್ ಮತ್ತು ಡೆಮೊ ಪಾರ್ಟಿಗಳಿಗೆ ಹಾಜರಾಗುತ್ತಿದ್ದರಲ್ಲದೆ ಮುಖ್ಯ ಭಾಷಣಕಾರರಾಗಿದ್ದರು ಎಂದಿದ್ದಾರೆ.
ಬಿಲ್ಗೇಟ್ಸ್ ಕುಡಿಯುತ್ತಿದ್ದರು, ಸುಲಭವಾಗಿ ಮಧ್ಯ ಸೇವಿಸುತ್ತಿದ್ದರು ಎಂದು ರಾಬರ್ಟ್ ಎಕ್ಸ್ ಹೇಳಿದ್ದಾರೆ. ಆ ಸಮಯದಲ್ಲಿ ಇನ್ಫೋವಲ್ಡ್ಗಾಗಿ ಜನಪ್ರಿಯ ಕಂಪ್ಯೂಟರ್ ಗಾಸಿಪ್ ಅಂಕಣವನ್ನು ಬರೆದಿದ್ದರು ಎಂದು ಕ್ರಿಂಗೆಲಿ ಹೇಳಿದ್ದಾರೆ.
ಮೆಲಿಂಡಾ ಜತೆಗೆ ಬಿಲ್ಗೇಟ್ಸ್ ಡೇಟಿಂಗ್ ಮಾಡುವ ವಿಚಾರವನ್ನು ಮುಕ್ತವಾಗಿಡಲು ಪ್ರಯತ್ನಿಸುತ್ತಿದ್ದರು. ಆಕೆಗೆ ಬದ್ಧರಾಗಿರಲು ಪ್ರಯತ್ನಿಸುತ್ತಿದ್ದರು.
ಇನ್ನು ಬಿಲ್ಗೇಟ್ಸ್ ಅವರು ಮದುವೆಯಾಗಲು ಬಯಸಿದಾಗ, ನನ್ನ ಜೀವನಕ್ಕೆ ಬದ್ಧರಾಗಬಹುದೇ ಅಥವಾ ಮೈಕ್ರೋಸಾಫ್ಟ್ಗೆ ಹೆಚ್ಚು ಒತ್ತು ನೀಡಬಹುದೇ ಎಂಬುದು ತಿಳಿದಿರಲಿಲ್ಲ ಎಂದು ಮೆಲಿಂಡಾ ನೆಟ್ಫ್ಲಿಕ್ಸ್ ಡ್ಯಾಕುಸರೀಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ