Bill Gates Resume: 48 ವರ್ಷಗಳ ಹಿಂದೆ ಬಿಲ್ ಗೇಟ್ಸ್ ರೆಸ್ಯೂಮ್ ಹೀಗಿತ್ತು!

ಹಲವರು ಬಿಲ್ ಗೇಟ್ಸ್ ಅವರ ರೆಸ್ಯೂಮ್ ಪರಿಪೂರ್ಣವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ನಾಸ್ಟಾಲ್ಜಿಕ್ ಕ್ಷಣವನ್ನು ಹಂಚಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಬಿಲ್ ಗೇಟ್ಸ್

ಬಿಲ್ ಗೇಟ್ಸ್

 • Share this:
  ಉದ್ಯೋಗ ಹುಡುಕುತ್ತಿರುವವರು, ಒಳ್ಳೆಯ ಕೆಲಸವೊಂದರ ಅಪೇಕ್ಷೆಯಲ್ಲಿರುವ ಆಕಾಂಕ್ಷಿಗಳು ತಮ್ಮ ಕನಸಿನ ವೃತ್ತಿಜೀವನವನ್ನು ಪಡೆಯುವುದು ಅಷ್ಟು ಸುಲಭವೇನಲ್ಲ. ಒಮ್ಮೆ ಒಂದು ಕೆಲಸ ಅಂತ ಸಿಕ್ಕರೆ ಸಾಕು ಎಂದು ಬಹುತೇಕರು ಶ್ರಮಪಟ್ಟು ಕೆಲಸ ಹುಡುಕುತ್ತಾರೆ. ತಮ್ಮ ರೆಸ್ಯೂಮ್​ನ್ನು ಆಕರ್ಷಕವಾಗಿ ತಯಾರಿಸುತ್ತಾರೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ (Bill Gates) ಅವರು ಇಂದು ತಮ್ಮ ಮೊದಲ ರೆಸ್ಯೂಮ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ. 68 ವರ್ಷ ವಯಸ್ಸಿನ ಬಿಲ್ ಗೇಟ್ಸ್, 48 ವರ್ಷಗಳ ಹಿಂದೆ ತಮ್ಮ ತಮ್ಮ ವೃತ್ತಿಜೀವನದ ಆರಂಭದಲ್ಲಿನ ರೆಸ್ಯೂಮ್​ ಅನ್ನು (Bill Gates Resume) ಹಂಚಿಕೊಂಡಿದ್ದಾರೆ.

  ನೀವು ಇತ್ತೀಚಿಗೆ ಪದವಿ ಪಡೆದವರು ಆಗಿರಲಿ ಅಥವಾ ಕಾಲೇಜು ಡ್ರಾಪ್ಔಟ್ ಆಗಿರಲಿ, ನಿಮ್ಮ ರೆಸ್ಯೂಮ್ ನನ್ನ 48 ವರ್ಷಗಳ ಹಿಂದಿನ ರೆಸ್ಯೂಮ್​ಗಿಂತ ನಿಮ್ಮ ರೆಸ್ಯೂಮ್ ಬಹಳ ಚೆನ್ನಾಗಿರುತ್ತೆ. ನಿಮ್ಮ ರೆಸ್ಯೂಮ್ ಬಹಳ ಉತ್ತಮವಾಗಿ ಕಾಣುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಬಿಲಿಯನೇರ್ ಬಿಲ್ ಗೇಟ್ಸ್ ಭರವಸೆ ನೀಡಿದ್ದಾರೆ.  ಈ ವಿಷಯಗಳನ್ನು ಓದಿದ್ದರು ಬಿಲ್ ಗೇಟ್ಸ್
  ಬಿಲ್ ಗೇಟ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಲಿಯಂ ಹೆನ್ರಿ ಗೇಟ್ಸ್ III ಹಾರ್ವರ್ಡ್ ಕಾಲೇಜಿನಲ್ಲಿ ಮೊದಲ ವರ್ಷದಲ್ಲಿದ್ದಾಗ ರೆಸ್ಯೂಮ್ ಆಗಿದೆ. ಆಪರೇಟಿಂಗ್ ಸಿಸ್ಟಂ ರಚನೆ, ಡೇಟಾಬೇಸ್ ನಿರ್ವಹಣೆ, ಕಂಪ್ಯೂಟರ್ ಗ್ರಾಫಿಕ್ಸ್ ಮುಂತಾದ ಕೋರ್ಸ್‌ಗಳನ್ನು ತೆಗೆದುಕೊಂಡಿದ್ದರು ಎಂದು ಮೈಕ್ರೋಸಾಫ್ಟ್ ಬಾಸ್ ರೆಸ್ಯೂಮ್​ನಲ್ಲಿ ಉಲ್ಲೇಖಿಸಿದ್ದಾರೆ.

  ನೆಟ್ಟಿಗರಿಂದ ಬಿಲಿಯನೇರ್ ಬಿಲ್​ ಗೇಟ್ಸ್​ಗೆ ಧನ್ಯವಾದ
  ಹಲವಾರು ಬಳಕೆದಾರರು ಬಿಲ್ ಗೇಟ್ಸ್ ಅವರ ರೆಸ್ಯೂಮ್ ಪರಿಪೂರ್ಣವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ನಾಸ್ಟಾಲ್ಜಿಕ್ ಕ್ಷಣವನ್ನು ಹಂಚಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  ಇದನ್ನೂ ಓದಿ: Old House: 7 ಕುಟುಂಬಗಳು ಒಟ್ಟಿಗೆ ವಾಸಿಸುತ್ತಿದ್ದ ಈ ಮನೆಗೆ 987 ವರ್ಷ! ಈಗಲೂ ಎಷ್ಟು ಗಟ್ಟಿಯಾಗಿದೆ ನೋಡಿ

  ಹಳೆ ರೆಸ್ಯೂಮ್ ಇಟ್ಕೊಳ್ಳಬೇಕು!
  "ಬಿಲ್ ಗೇಟ್ಸ್ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಒಂದು ಪುಟದ ರೆಸ್ಯೂಮ್ ಅದ್ಭುತವಾಗಿದೆ. ನಾವೆಲ್ಲರೂ ಜೀವನದ ಪಯಣದಲ್ಲಿ ಹಿಂತಿರುಗಿ ನೋಡಲು ನಮ್ಮ ಹಿಂದಿನ ರೆಸ್ಯೂಮ್‌ಗಳ ನಕಲುಗಳನ್ನು ಇಟ್ಟುಕೊಳ್ಳಬೇಕು. ಕೆಲವೊಮ್ಮೆ, ನಾವು ನಮ್ಮ ಜೀವನದಲ್ಲಿ ಎಷ್ಟು ಸಾಧನೆ ಮಾಡಿದ್ದೇವೆ ಎಂಬುದನ್ನು ನಾವು ಮರೆತುಬಿಡುತ್ತೇವೆ" ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

  ಈ ಮೂಲಕ ಲಿಂಕ್ಡ್​ಇನ್ ಸಾಮಾಜಿಕ ಜಾಲತಾಣದಲ್ಲಿ ಬಿಲಿಯನೇರ್ ಬಿಲ್ ಗೇಟ್ಸ್ ತಮ್ಮ 48 ವರ್ಷಗಳ ಹಿಂದಿನ ರೆಸ್ಯೂಮ್ ಹಂಚಿಕೊಂಡಿರುವುದು ಫುಲ್ ವೈರಲ್ ಆಗಿದೆ. ಇಂದಿನ ಯುವಕರಿಗೆ ಪ್ರೇರಣೆ ನೀಡಿದೆ.

  ಇದನ್ನೂ ಓದಿ: Viral Video: ಸ್ನೇಹಿತರ ಮುಂದೆ ಮ್ಯಾಜಿಕ್ ಮಾಡಿ ತೋರಿಸಿದ ಶಾಲಾ ಬಾಲಕ! ಫುಲ್ ವೈರಲ್ ಆಯ್ತು ವಿಡಿಯೋ

  ಮತ್ತು ಇನ್ನೊಬ್ಬರು ಹೀಗೆ ಬರೆದಿದ್ದಾರೆ, ನಿಮ್ಮ ರೆಸ್ಯೂಮ್ ಮೊದಲ ವರ್ಷದ ಕಾಲೇಜು ವಿದ್ಯಾರ್ಥಿಗೆ ಅದ್ಭುತವಾಗಿ ಕಾಣುತ್ತದೆ. ಕೆಲವೊಮ್ಮೆ ನೇಮಕಾತಿ ಮಾಡುವವರು ರೆಸ್ಯೂಮ್​ಗಳ ವಿನ್ಯಾಸವನ್ನು ಮೀರಿ ನೋಡಬೇಕು. ಆದರೆ ರೆಸ್ಯೂಮ್ ರೀಡರ್ ಪ್ರೋಗ್ರಾಂಗಳು ರೆಸ್ಯೂಮ್‌ನಲ್ಲಿ ಜನರು ಹೆಚ್ಚು ಕೆಲಸ ಮಾಡುತ್ತವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೂ ಆ ಸಮಯದಲ್ಲಿ ರೆಸ್ಯೂಮ್ ರೀಡರ್ ಪ್ರೋಗ್ರಾಂಗಳು ಸ್ಥಳದಲ್ಲಿ ಇರಲಿಲ್ಲ, ನಂತರ ನೀವು ಎಲ್ಲರೊಂದಿಗೆ ಬಂದಿದ್ದೀರಿ ನಿಮ್ಮ ರೆಸ್ಯೂಮ್ ಅನ್ನು ಇಂದು ವಿತರಿಸಿದರೆ ಅದನ್ನು ಸಾಧ್ಯವಾಗಿಸಿದ ತಂತ್ರಜ್ಞಾನವು ರೆಸ್ಯೂಮ್ ಪ್ರೋಗ್ರಾಂ ರೀಡರ್‌ಗಳೊಂದಿಗೆ ಹೊಂದಾಣಿಕೆಯಾದರೆ ನಿಮ್ಮ ಕೌಶಲ್ಯಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬರೆದಿದ್ದಾರೆ.
  Published by:guruganesh bhat
  First published: