ರಾಯಲ್ ಎನ್ಫೀಲ್ಡ್ (Royal Enfield) ಅಂದ್ರೆ ಹುಡುಗರಿಗೆ ಅದೇನೋ ಎಮೋಷ್ನಲ್ ಅಂತ ಹೇಳ್ಬೋದು. ಇನ್ನು ಕೆಲವು ಹುಡುಗಿಯರಿಗೆ ರಾಯಲ್ ಎನ್ಫೀಲ್ಡ್ ಅಂದ್ರೆ ಸಖತ್ ಕ್ರೇಜ್ ಇರುತ್ತೆ. ಹುಡುಗರಿಗೆ ಗಿಫ್ಟ್ಗಳನ್ನಾಗಿ (Gift) ಕೂಡ ನೀಡಿರುವುದು ಅದೆಷ್ಟೋ ಉದಾಹರಣಗಳಿವೆ. ಹಾಗೆಯೇ ದೇಶಾದ್ಯಂತದ ಜನರು ರಾಯಲ್ ಎನ್ಫೀಲ್ಡ್ ಬುಲೆಟ್ 350 ಬುಲೆಟ್ ಅನ್ನು ದಶಕಗಳಿಂದ ಖರೀದಿಸುತ್ತಿದ್ದಾರೆ, ಇದು ದೇಶದ ಅತ್ಯಂತ ಜನಪ್ರಿಯ ಬೈಕ್ಗಳಲ್ಲಿ ಒಂದಾಗಿದೆ. ಕಂಪನಿಯ ದೀರ್ಘಾವಧಿಯ ಮಾಡೆಲ್ ಆಗಿದ್ದು, ಇದು ಒಂದು ಪೌರಾಣಿಕ ಬೈಕು ಅಂತಾನೇ ಹೇಳಬಹುದು. ರಸ್ತೆಗಳಲ್ಲಿ (Road) ಹೆಚ್ಚು ಗುರುತಿಸಬಹುದಾದ ಬೈಕುಗಳಾಗಿರುವುದರಿಂದ, ಈ ವಾಹನವು ಪ್ರತ್ಯೇಕ ಅಭಿಮಾನಿಗಳನ್ನು ಹೊಂದಿದೆ. ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಹಲವಾರು ವರ್ಷಗಳಿಂದ ಕೆಲವು ತಾಂತ್ರಿಕ (Technology) ಬದಲಾವಣೆಗಳಿಗೆ ಒಳಗಾಯಿತು, ಆದರೆ ತಯಾರಕರು ಅದರ ನೋಟವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಇದೀಗ ರಾಯಲ್ ಎನ್ಫೀಲ್ಡ್ 1986ರ ಬಿಲ್ ಪತ್ತೆಯಾಗಿದೆ. ಇದರ ಬಿಲ್ ನೋಡಿದ್ರೆ ಸಖತ್ ಶಾಕ್ ಆಗುತ್ತೆ. ಹೌದು. ಪ್ರಸ್ತುತ ಈ ಬೈಕ್ನ ಬೆಲೆ 1 ಲಕ್ಷದ ತನಕ ಏರಿದೆ. ಅದು ಲೆಕ್ಕಕ್ಕೆ ಇಲ್ಲ ನಮ್ಮ ಜನರಿಗೆ, ಕ್ರೇಜ್ ಇಂದ ತೆಗೆದುಕೊಳ್ಳುತ್ತಾರೆ. ಹಳೆಯ ಬೈಕ್ ನ ಬೆಲೆ ನೋಡಿ!
ರಾಯಲ್ ಎನ್ಫೀಲ್ಡ್ ಅಧಿಕೃತ ವೆಬ್ಸೈಟ್ ಪ್ರಕಾರ, 'ಆಲ್ ನ್ಯೂ ಕ್ಲಾಸಿಕ್ 350' ಬೆಲೆ ₹ 2.2 ಲಕ್ಷಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಆದರೆ ಈ ಬೈಕ್ ಒಂದು ಕಾಲದಲ್ಲಿ ₹ 18,700 ಇತ್ತು ಎಂಬುದು ನಿಮಗೆ ತಿಳಿದಿದೆಯೇ? ಇದು ಆಶ್ಚರ್ಯ ಅಥವಾ ಸುಳ್ಳು ಅಂತ ಅನಿಸಿದ್ರೆ, ನಮ್ಮ ಬಳಿ ಪುರಾವೆಗಳಿವೆ ಎಂದು ಸೋಷಿಯಲ್ ಮಿಡೀಯಾದಲ್ಲಿ ಬಿಲ್ ಹಂಚಿಕೊಂಡಿದ್ದಾರೆ. ಜನವರಿ 23, 1986 ರ ಬಿಲ್ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದನ್ನು ವಿಂಟೇಜ್ ಬೈಕ್ ಉತ್ಸಾಹಿ ಬೀಯಿಂಗ್ ರಾಯಲ್ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ. ಬುಲೆಟ್ನ ₹ 18,700 ಇನ್ವಾಯ್ಸ್ 36 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಜಾರ್ಖಂಡ್ನ ಬೊಕಾರೊದಲ್ಲಿ ಸಂದೀಪ್ ಆಟೋ ಕಂಪನಿ ಎಂಬ ಡೀಲರ್ ನೀಡಿದ್ದಾನೆ.
ಇದನ್ನೂ ಓದಿ: 90 ವರ್ಷದ ಹಳೆಯ ಮದುವೆ ಪತ್ರಿಕೆಯನ್ನು ನೋಡಿದ್ದೀರಾ? ಇದೀಗ ವೈರಲ್ ಆಗಿದೆ ನೋಡಿ!
ಆಗ, ಬಿಲ್ನಲ್ಲಿ ಉಲ್ಲೇಖಿಸಲಾದ ಬುಲೆಟ್ ಅನ್ನು ಸರಳವಾಗಿ ಎನ್ಫೀಲ್ಡ್ ಬುಲೆಟ್ ಎಂದು ಕರೆಯಲಾಗುತ್ತಿತ್ತು. ಇದು ವಿಶ್ವಾಸಾರ್ಹ ಮೋಟಾರ್ಸೈಕಲ್ ಆಗಿದ್ದು, ಗಡಿ ಪ್ರದೇಶಗಳಲ್ಲಿ ಗಸ್ತು ತಿರುಗಲು ಭಾರತೀಯ ಸೇನೆಯು ಹೆಚ್ಚಾಗಿ ಬಳಸುತ್ತಿತ್ತು. ಇದನ್ನು ಹಂಚಿಕೊಂಡ ನಂತರ, ಪೋಸ್ಟ್ 53,000 ಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ವ್ಯಕ್ತಿ, "ನನ್ನ ಬಳಿ ₹ 16100 ಬೆಲೆಯ 1984 ಫೆಬ್ರವರಿ ಮಾಡೆಲ್ ಇದೆ. 38 ವರ್ಷಗಳಿಗೂ ಹೆಚ್ಚು ಕಾಲ ನನ್ನ ಒಡನಾಡಿ. " ಎಂದು ಪ್ರೀತಿಯಿಂದ ಈ ಫೊಟೋಗೆ ಕಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಈ ಬಿಲ್ ನೋಡ್ತಾ ಇದ್ರೆ ಈಗ ಕೂಡ ಇಷ್ಟೇ ಬಿಲ್ ಇದ್ದಿದ್ರೆ ಚೆನ್ನಾಗಿ ಇರ್ತಿತ್ತು ಅಂತ ಅನಿಸುತ್ತೆ ಅಲ್ವಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ