ಬ್ರಿಟನ್ ರಾಣಿಗಿಂತ ಭಾರತೀಯ ಊಟ ಬೆಸ್ಟ್: ಅಮೆರಿಕ ಅಧ್ಯಕ್ಷರಾಗಿದ್ದಾಗ ಕ್ಲಿಂಟನ್ ಹೀಗೆಲ್ಲಾ ಮಾಡಿದ್ರಂತೆ..!

ಪ್ರವಾಸಿಗರಂತೆ ಇಂಗ್ಲೆಂಡ್ ಅನ್ವೇಷಿಸಲು ಕ್ಲಿಂಟನ್ ಬಯಸಿದ್ದಕ್ಕಾಗಿ ದಂಪತಿ ರಾಯಲ್ ಚಹಾವನ್ನು ಸಹ ಅತ್ಯಂತ ವಿನಯ ಪೂರ್ವಕವಾಗಿ ನಿರಾಕರಿಸಿದ್ದರು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.  

ಬಿಲ್ ಕ್ಲಿಂಟನ್

ಬಿಲ್ ಕ್ಲಿಂಟನ್

  • Share this:
ಯಾರಾದರೂ ಬ್ರಿಟನ್ ರಾಣಿ ಎಲಿಜಬೆತ್ರೊಂದಿಗೆ ಟೀ ಕುಡಿಯೋ ಅವಕಾಶವನ್ನು ಬಿಡುತ್ತಾರೆಯೇ..? ಆದರೆ ಅಮೆರಿಕದ ಮಾಜಿ ರಾಷ್ಟ್ರಪತಿ ಬಿಲ್ ಕ್ಲಿಂಟನ್ ಭಾರತೀಯ ಊಟದ ರುಚಿಯನ್ನು ಸವಿಯಲು ಮತ್ತು ಒಬ್ಬ ಪ್ರವಾಸಿಗರಾಗಿ ಶಾಪಿಂಗ್ ಮಾಡಲು ಬಯಸಿ ರಾಣಿ ಎಲಿಜಬೆತ್ರೊಂದಿಗೆ ಟೀ ಕುಡಿಯೋ ಅವಕಾಶವನ್ನು ಬಿಟ್ಟಿದ್ದರು ಎಂದು ತಿಳಿದು ಬಂದಿದೆ.ಇತ್ತೀಚೆಗೆ ಯುನೈಟೆಡ್ ಕಿಂಗ್ಡಮ್ (ಯುಕೆ) ಬಿಡುಗಡೆ ಮಾಡಿದಂತಹ ಕೆಲವು ಹಳೆಯ ದಾಖಲೆಗಳಿಂದ ಈ ವಿಷಯ ತಿಳಿದು ಬಂದಿದೆ. 1997ರಲ್ಲಿ ಅಧಿಕೃತ ರಾಜ್ಯ ಭೇಟಿಯಲ್ಲಿದ್ದಾಗ ರಾಣಿ ಎಲಿಜಬೆತ್ರೊಂದಿಗೆ ಚಹಾ ಸೇವಿಸುವ ಬದಲು ಭಾರತೀಯ ಆಹಾರವನ್ನು ಸವಿಯಲು ನಿರ್ಧರಿಸಿದ್ದರು ಎಂಬ ಸಂಗತಿಯು ಬಹಿರಂಗವಾಗಿದೆ.


ಇತ್ತೀಚೆಗೆ ಬಿಡುಗಡೆಯಾದ ದಾಖಲೆಗಳ ಪ್ರಕಾರ, ಬಿಲ್ ಕ್ಲಿಂಟನ್ ಇಂಗ್ಲೆಂಡಿಗೆ ಆಗಾಗ ಭೇಟಿ ನೀಡುತ್ತಿದ್ದರು ಮತ್ತು ಆ ಸಮಯದಲ್ಲಿ ಹೊಸದಾಗಿ ಚುನಾಯಿತರಾದ ಪ್ರಧಾನಿ ಟೋನಿ ಬ್ಲೇರ್ರನ್ನು ಭೇಟಿ ಮಾಡುತ್ತಿದ್ದರು ಎನ್ನಲಾಗಿದೆ. ಬಿಲ್ ಕ್ಲಿಂಟನ್ ಇಂಗ್ಲೆಂಡ್ನಲ್ಲಿದ್ದಾಗ ಒಬ್ಬ ಪ್ರವಾಸಿಗರಾಗಿ ಶಾಪಿಂಗ್ ಮಾಡಲು ಮತ್ತು ಭಾರತೀಯ ಆಹಾರವನ್ನು ಸೇವಿಸಲು ಬಯಸಿದ್ದರು ಎಂದು ಈ ದಾಖಲೆಗಳಿಂದ ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಅಮೆರಿಕದ ಅಧ್ಯಕ್ಷರು ತಮ್ಮ ಭಾಷಣದ ನಂತರ ಏನು ಮಾಡಲು ಬಯಸುತ್ತಾರೆ ಎಂದು ಕ್ಲಿಂಟನ್ ಅವರ ತಂಡವನ್ನು ಕೇಳಿದಾಗ, ಅವರ ತಂಡಕ್ಕೆ ಬಿಲ್ ಕ್ಲಿಂಟನ್ ಅವರ ಭಾಷಣದ ನಂತರ ಏನು ಮಾಡಲು ಬಯಸುತ್ತಾರೆ ಎನ್ನುವುದರ ಬಗ್ಗೆ ಯಾವುದೇ ಕಲ್ಪನೆ ಇರುವುದಿಲ್ಲ. ಆದರೆ ಅಧ್ಯಕ್ಷರು ಪ್ರವಾಸಿಗರಾಗಲು ಬಯಸುತ್ತಾರೆ ಮತ್ತು ಉದ್ಯಾನವನಕ್ಕೆ ಭೇಟಿ ನೀಡಬೇಕೆಂದು, ಶಾಪಿಂಗ್ ಮಾಡಲು ಮತ್ತುಟೋನಿ ಬ್ಲೇರ್ ಅವರೊಟ್ಟಿಗೆ ಭಾರತೀಯ ಆಹಾರವನ್ನು ಸಹ ಸೇವಿಸಲು ಇಚ್ಛೆ ಪಡುತ್ತಾರೆ ಎಂದು ತಂಡದವರು ಹೇಳಿದ್ದರು.


ಲಂಡನ್ ನಿಂದ 30 ಮೈಲಿ ದೂರದಲ್ಲಿರುವ ಬಕಿಂಗ್‌ಹ್ಯಾಮ್‌ ಶೈರ್‌ನಲ್ಲಿರುವಂತಹ ಬ್ರಿಟಿಷ್ ಪ್ರಧಾನ ಮಂತ್ರಿ ಅವರ 'ಕಂಟ್ರಿ ರಿಟ್ರೀಟ್ ಚೆಕ್ಕರ್ಸ್' ಎಂಬ ಹೋಟೆಲ್ನಲ್ಲಿ ಊಟ ಮಾಡಲುಯುಕೆ ಅಧಿಕಾರಿಗಳು ಕ್ಲಿಂಟನ್ ತಂಡಕ್ಕೆ ಸೂಚಿಸಿದ್ದರು. ಆದರೆ ಅಮೆರಿಕನ್ನರು ತಮ್ಮ ಸಲಹೆಯನ್ನು ಪರಿಗಣಿಸಿಲ್ಲ ಎಂದು ಬಿಡುಗಡೆಯಾದ ಬಾರ್ಟನ್‌ನ ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೊನೆಯಲ್ಲಿ ಕ್ಲಿಂಟನ್‌ರಿಗೆ ಭಾರತೀಯ ಆಹಾರವನ್ನು ಸವಿಯಲು ಸಾಧ್ಯವಾಗದೆ ಅವರ ತಂಡವು ಲೆ ಪಾಂಟ್ ಡೆ ಲಾ ಟೂರ್‌ನಲ್ಲಿ ಊಟ ಮಾಡಿದ್ದು ಅಲ್ಲಿ 360 ಯುಎಸ್ ಡಾಲರ್ ವೆಚ್ಚವಾಗಿದೆ ಎಂದೂ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ರಾಣಿ ಎಲಿಜಬೆತ್ ಅವರು ಕ್ಲಿಂಟನ್ ಮತ್ತು ಪತ್ನಿ, ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ರೊಂದಿಗೆ ಚಹಾ ಸೇವಿಸಲು ಪ್ರಸ್ತಾಪಿಸಿದ್ದರು, ಆದರೆ, ಅಮೆರಿಕಾದ ನಾಯಕರು ಇತರ ಯೋಜನೆಯನ್ನು ಹೊಂದಿದ್ದರು ಎಂದು ದಾಖಲೆಗಳಲ್ಲಿ ಬಹಿರಂಗಪಡಿಸಲಾಗಿದೆ. ಪ್ರವಾಸಿಗರಂತೆ ಇಂಗ್ಲೆಂಡ್ ಅನ್ವೇಷಿಸಲು ಕ್ಲಿಂಟನ್ ಬಯಸಿದ್ದಕ್ಕಾಗಿ ದಂಪತಿ ರಾಯಲ್ ಚಹಾವನ್ನು ಸಹ ಅತ್ಯಂತ ವಿನಯ ಪೂರ್ವಕವಾಗಿ ನಿರಾಕರಿಸಿದ್ದರು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.


Published by:Latha CG
First published: