Viral Video: ನಡುರಸ್ತೆಯಲ್ಲಿ ನಾಗಿನ್ ಡ್ಯಾನ್ಸ್! ಯುವಕರ ವಿಡಿಯೋ ನೋಡಿ ನೆಟ್ಟಿಗರು ಖುಷ್

ದೂಧ್ ಸಾಗರ್ ಫಾಲ್ಸ್ ಒಂದು ಉತ್ತಮ ಪ್ರವಾಸಿತಾಣವಾಗಿದೆ, ಅಲ್ಲಿಗೆ ವರ್ಷ ಪೂರ್ತಿ ಜನರು ಬಂದು ಹೋಗುತ್ತಿರುತ್ತಾರೆ. ಅದೇ ರೀತಿ ಅಲ್ಲಿಗೆ ಪ್ರವಾಸಕ್ಕೆಂದು ಬಂದಿರುವ ಬೈಕ್ ಸವಾರರ ತಂಡವೊಂದು ದಾರಿಯ ಮಧ್ಯದಲ್ಲಿ ನಾಗಿನ್ ನೃತ್ಯ ಮಾಡಿದೆ. ಇದನ್ನು ಚಿತ್ರೀಕರಿಸಲಾಗಿದ್ದು ತದನಂತರ ಆ ವಿಡಿಯೋ ಅನ್ನು ಯೂಟ್ಯೂಬ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಉತ್ತರ ಕನ್ನಡಕ್ಕೆ ಹತ್ತಿರವಿರುವ ಗೋವಾ (Goa) ಭಾಗದಲ್ಲಿ ಬರುವ ಆಕರ್ಷಕ ದೂಧ್ ಸಾಗರ್ ಫಾಲ್ಸ್ ವೀಕ್ಷಣಾ ತಾಣಕ್ಕೆ ಪ್ರವಾಸಕ್ಕೆಂದು ಬಂದಿರುವ ಕೆಲ ಬೈಕ್ ಸವಾರರ ಗುಂಪೊಂದು 'ನಾಗಿನ್ ಡ್ಯಾನ್ಸ್'  (Nagin Dance) ಮಾಡಿರುವ ವಿಡಿಯೋ ಅನ್ನು ಯಾರೋ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದು ಅದೀಗ ಸಖತ್ ವೈರಲ್ ಆಗುತ್ತಿದೆ. ಮಧ್ಯ ದಾರಿಯಲ್ಲಿ ಡ್ಯಾನ್ಸ್  (Dance) ಮಾಡಿರುವ ಬೈಕ್ (Bike) ಸವಾರರ ತಂಡದ ಬಗ್ಗೆ ಈಗ ಎಲ್ಲರೂ ಮಾತನಾಡುವಂತಾಗಿದೆ. ದೂಧ್ ಸಾಗರ್ ಫಾಲ್ಸ್ ಒಂದು ಉತ್ತಮ ಪ್ರವಾಸಿತಾಣವಾಗಿದೆ, ಅಲ್ಲಿಗೆ ವರ್ಷ ಪೂರ್ತಿ ಜನರು ಬಂದು ಹೋಗುತ್ತಿರುತ್ತಾರೆ. ಅದೇ ರೀತಿ ಅಲ್ಲಿಗೆ ಪ್ರವಾಸಕ್ಕೆಂದು ಬಂದಿರುವ ಬೈಕ್ ಸವಾರರ ತಂಡವೊಂದು ದಾರಿಯ ಮಧ್ಯದಲ್ಲಿ ನಾಗಿನ್ ನೃತ್ಯ ಮಾಡಿದೆ. ಇದನ್ನು ಚಿತ್ರೀಕರಿಸಲಾಗಿದ್ದು ತದನಂತರ ಆ ವಿಡಿಯೋ (Video) ಅನ್ನು ಯೂಟ್ಯೂಬ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ರಸ್ತೆಯಲ್ಲಿ ಹುಚ್ಚೆದ್ದು ಕುಣಿದ ಯುವಕರ ಗುಂಪು
ಈ ಬೈಕ್ ಸವಾರರ ಕುಣಿತವು ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಹಂಚಿಕೆಯಾಗುತ್ತಿದೆ. ಇದನ್ನು ಉತ್ತರ ಕರ್ನಾಟಕದಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ನಾಗಿನ್ ಡ್ಯಾನ್ಸ್ ವಿಡಿಯೋ ಮಾತ್ರ ನೆಟ್ಟಿಗರನ್ನು ರಂಜಿಸುವಲ್ಲಿ ಯಶಸ್ವಿ ಆಗಿದೆ.

ನಗೆಯ ಕಡಲಿನಲ್ಲಿ ತೇಲುವಂತೆ ಮಾಡುತ್ತೆ ಈ ವಿಡಿಯೋ 
ಕೆಲವು ವಿಡಿಯೋ ಗಳು ನಿಮ್ಮ ಮುಖದಲ್ಲಿ ನಗುವನ್ನು ತರಿಸುತ್ತದೆ ಇನ್ನು ಕೆಲವು ವಿಡಿಯೋಗಳು ನಿಮ್ಮನ್ನು ಕುಳಿತಿರುವ ಜಾಗದಿಂದ ಎದ್ದು ಕುಣಿಯುವಂತೆ ಮಾಡುತ್ತವೆ. ಉತ್ತರ ಕರ್ನಾಟಕದ ದೂದ್ ಸಾಗರ್ ಫಾಲ್ಸ್ ದಾರಿಯಲ್ಲಿ ಬೈಕ್ ಸವಾರರ ತಂಡ ಮಾಡಿರುವ ನಾಗಿನ್ ಡ್ಯಾನ್ಸ್ ವಿಡಿಯೋ ಖಂಡಿತವಾಗಿಯು ನಿಮ್ಮನ್ನು ಕುಳಿತಿರುವ ಜಾಗದಿಂದ ಎದ್ದು ಕುಣಿಯುವಂತೆ ಮಾಡುತ್ತದೆ. ಈ ವಿಡಿಯೋ ಯಾವುದೇ ಸಂದೇಹವಿಲ್ಲದೆ ನಿಮ್ಮನ್ನು ನಗೆಯ ಕಡಲಿನಲ್ಲಿ ತೇಲುವಂತೆ ಮಾಡಿ ನಿಮ್ಮ ದಿನಕ್ಕೆ ಒಂದು ಹೊಸ ಹುರುಪನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ:  Heart Attack Risk: ಹುಡುಗರ ಹಾರ್ಟ್ ಫೆಲ್ಯೂರ್​ ಆಗಲು ಬ್ಯೂಟಿಫುಲ್ ಹುಡುಗಿಯರೇ ಕಾರಣವಂತೆ!

ಇತ್ತೀಚೆಗೆ ಯುವಕರು ತಂಡವನ್ನಾಗಿ ಕಟ್ಟಿಕೊಂಡು ತಮ್ಮ ಬೈಕಗಳಲ್ಲಿ ಪ್ರವಾಸಕ್ಕೆಂದು ತೆರಳುವುದು ಸಾಮಾನ್ಯವಾಗಿದ್ದು ಈ ರೀತಿಯಾದ ಪ್ರವಾಸದ ಸಂದರ್ಭದಲ್ಲಿ ಪ್ರವಾಸದ ಆನಂದ ಹೆಚ್ಚಾಗುವಂತೆ ಹಲವಾರು ವೈವಿಧ್ಯಮಯ ಚಟುವಟಿಕೆಗಳನ್ನು ಮಾಡುತ್ತಾರೆ. ಅಂತಹ ಚಟುವಟಿಕೆಗಳಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಡ್ಯಾನ್ಸ್ ಮಾಡುವುದು ಸಹ ಒಂದಾಗಿದೆ. ಆದರೆ, ವಿಶೇಷವೆಂದರೆ ಈ ಬೈಕರ್ಸ್, ನಾಗಿನ್ ನೃತ್ಯ ಮಾಡಿರುವುದು. ಹಾಗಾಗಿ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ 
ಯೂಟ್ಯೂಬ್ ಅಲ್ಲಿ ಹಂಚಿಕೊಳ್ಳಲಾದ ದೂಧ್ ಸಾಗರ್ ಫಾಲ್ಸ್ ವೀವ್ ಪಾಯಿಂಟ್ ನ ಮಧ್ಯ ದಾರಿಯಲ್ಲಿ ಸೆರೆಹಿಡಿದಿರುವ ಈ ವಿಡಿಯೋ, ಬೈಕರ್ಗಳ ತಂಡ ಮಧ್ಯ ದಾರಿಯಲ್ಲಿ ಕುಣಿಯುತ್ತಿರುವ ದೃಶ್ಯದಿಂದ ಶುರುವಾಗುತ್ತದೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಒಂದು ಲಾರಿ ಬರುತ್ತದೆ ಆ ಲಾರಿಯ ಹಾರ್ನ್ ನಾಗಿನ್ ಟ್ಯೂನ್ ಆಗಿರುತ್ತದೆ ಇವರು ಕುಣಿಯುತ್ತಿರುವುದನ್ನು ಗಮನಿಸಿದ ಆ ಲಾರಿ ಚಾಲಕ ಲಾರಿಯನ್ನು ಅವರ ಮುಂದೆ ನಿಲ್ಲಿಸಿ ನಾಗಿಣಿ ಟ್ಯೂನ್ ಅನ್ನು ಪ್ಲೇ ಮಾಡುತ್ತಾನೆ ಆ ಟ್ಯೂನ್ ಗೆ ಆ ಬೈಕರ್ಗಳ ತಂಡವು ನಡು ದಾರಿಯಲ್ಲೆ ಹಾವಿನಂತೆ ಕುಣಿಯಲು ಪ್ರಾರಂಭಿಸುತ್ತದೆ.ಈ ವಿಡಿಯೋ ಈಗಾಗಲೆ ಸುಮಾರು 5 ಸಾವಿರಕ್ಕೂ ಹೆಚ್ಚು ವೀಕ್ಷಣೆ ಆಗಿದೆ ಹಾಗೂ ಇನ್ನಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಲವರು ಈ ತಂಡದ ಕುಣಿತ ಕಂಡು ಸಂತಸ ಪಟ್ಟರೆ ಇನ್ನು ಹಲವರು ನಾವು ಸಹ ಇಂತಹ ತಂಡದ ಜೊತೆಯಲ್ಲಿ ಪ್ರವಾಸಕ್ಕೆ ತೆರಳಬೇಕು ಎಂದು ಕಾಮೆಂಟ್ಸ್ ಮಾಡಿದ್ದಾರೆ. ಏನೇ ಆದರೂ ಪ್ರವಾಸಕ್ಕೆ ತೆರಳಿದಾಗ ಯುವಕರು ಈ ರೀತಿಯಾಗಿ ಸಂಭ್ರಮಿಸುವುದು ನಮ್ಮಲ್ಲಿ ಸಾಮಾನ್ಯ.

ಇದನ್ನೂ ಓದಿ:  Heart Attack Risk: ಹುಡುಗರ ಹಾರ್ಟ್ ಫೆಲ್ಯೂರ್​ ಆಗಲು ಬ್ಯೂಟಿಫುಲ್ ಹುಡುಗಿಯರೇ ಕಾರಣವಂತೆ!

ಈ ವಿಡಿಯೋ ಟ್ವಿಟ್ಟರ್ ಅಲ್ಲಿ ಸಹ ಹಂಚಿಕೆ ಆಗಿದ್ದು, ನೆಟ್ಟಿಗರು ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Published by:Ashwini Prabhu
First published: