news18-kannada Updated:February 10, 2020, 10:04 AM IST
ಕೇರಳದ ಶಾಲೆಯೊಂದರ ಸಂಸ್ಕೃತ ಶಿಕ್ಷಕ ರಂಜಿತ್ ಎಂಬವರು ಬೈಕ್ ಏರಿ 5 ಕಿ.ಮೀ ದೂರದ ಶಾಲೆಗೆ ತೆರಳಿದ್ದಾರೆ. ಬೆಳಗ್ಗೆ 8.30 ಶಾಲೆಗೆ ತಲುಪಿ ಮಕ್ಕಳಿಗೆ ಸಂಸ್ಕೃತ ಪಾಠ ಮಾಡಿದ್ದಾರೆ. ನಂತರ ಅಲ್ಲಿಂದ ಮತ್ತೊಂದು ಶಾಲೆಯಲ್ಲಿ ಪಾಠ ಮಾಡಲು ರಂಜಿತ್ ತೆರಳಿದ್ದಾರೆ. 11:30 ಶಾಲೆಗೆ ತಲುಪಿದ್ದಾರೆ.
ವಾಹನ ಚಲಾಯಿಸುವ ಮುನ್ನ ಒಂದು ಬಾರಿ ಪರಿಶೀಲನೆ ಮಾಡಿ ನಂತರ ಚಲಾಯಿಸುವುದು ಒಳಿತು. ದ್ವಿಚಕ್ರವಾಗಲಿ ಅಥವಾ ಕಾರ್ ಆಗಲಿ ಒಮ್ಮೆ ಪರೀಶಿಲನೆ ಮಾಡಿದಾಗ ವಾಹನದಲ್ಲಿದ್ದ ಸಮಸ್ಯೆ ನಮಗೆ ತಿಳಿಯುತ್ತದೆ. ಆದರೆ ಕೆಲವೊಮ್ಮೆ ಆಫೀಸ್ ಲೇಟಾಯ್ತು, ಸಮಯ ಮೀರಿ ಹೋಯ್ತು ಎಂದು ಎದ್ದು ಬಿದ್ದು ಗಾಡಿ ಸ್ಟಾರ್ಟ್ ಮಾಡಿ ಹೊರಟು ಹೋಗುತ್ತಾರೆ. ಆದರೆ ಇಂತಹ ಸನ್ನಿವೇಷಗಳಿಂದ ಕೆಲಮೊಮ್ಮೆ ಫಚೀತಿಗೆ ಸಿಲುಕಿಕೊಂಡ ಘಟನೆಯೂ ಸಾಕಷ್ಟಿರುತ್ತವೆ. ಅದರಂತೆ ಇಲ್ಲೊಬ್ಬರು ಶಿಕ್ಷಕರು ಪರಿಶೀಲನೆ ನಡೆಸದೆ ಬೈಕ್ ಚಲಾಯಿಸಿ ಆಸ್ಪತ್ರೆ ಸೇರಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಕೇರಳದ ಶಾಲೆಯೊಂದರ ಸಂಸ್ಕೃತ ಶಿಕ್ಷಕ ರಂಜಿತ್ ಎಂಬವರು ಬೈಕ್ ಏರಿ 5 ಕಿ.ಮೀ ದೂರದ ಶಾಲೆಗೆ ತೆರಳಿದ್ದಾರೆ. ಬೆಳಗ್ಗೆ 8.30 ಶಾಲೆಗೆ ತಲುಪಿ ಮಕ್ಕಳಿಗೆ ಸಂಸ್ಕೃತ ಪಾಠ ಮಾಡಿದ್ದಾರೆ. ನಂತರ ಅಲ್ಲಿಂದ ಮತ್ತೊಂದು ಶಾಲೆಯಲ್ಲಿ ಪಾಠ ಮಾಡಲು ರಂಜಿತ್ ತೆರಳಿದ್ದಾರೆ. 11:30 ಶಾಲೆಗೆ ತಲುಪಿದ್ದಾರೆ.
ಆದರೆ ಶಾಲೆಗೆ ತಲುಪಿ ಬೈಕ್ ಪಾರ್ಕ್ ಮಾಡಿ ಹೆಲ್ಮೆಟ್ ತೆಗೆದಾಗ ರಂಜಿತ್ ಶಾಕ್ ಆಗಿದ್ದಾರೆ. ಹೆಲ್ಮೆಟ್ ಒಳಗೆ ಹಾವಿನ ಬಾಲವೊಂದು ಕಾಣಿಸಿದೆ. ನಂತರ ಪರಿಶೀಲಿಸಿದಾಗ ವಿಷಕಾರಿ ಹಾವೆಂದು ಗೊತ್ತಾಗಿದೆ. ಇದನ್ನು ಕಂಡು ಶಿಕ್ಷಕ ರಂಜಿತ್ ಬೆಚ್ಚಿ ಬಿದ್ದಿದ್ದಾರೆ.
ತಕ್ಷಣವೇ ರಂಜಿತ್ ಅವರನ್ನು ಅಲ್ಲಿನ ಸಹಶಿಕ್ಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ರಂಜಿತ್ ದೇಹದಲ್ಲಿ ವಿಷ ಇದೆಯಾ ಎಂದು ವೈದ್ಯರು ಪರೀಕ್ಷೆ ನಡೆಸಿದರು. ಆದರೆ ವಿಷ ಇಲ್ಲವೆಂದು ವೈದ್ಯರು ಪರೀಕ್ಷೆಯ ನಂತರ ದೃಢಪಡಿಸಿದ್ದಾರೆ. ಇನ್ನು ಶಿಕ್ಷಕ ರಂಜಿತ್ ಧರಿಸಿದ್ದ ಹೆಲ್ಮೆಟ್ ಚಿಕ್ಕದಾಗಿರುವ ಕಾರಣ ಒಳಗಿದ್ದ ವಿಷಕಾರಿ ಹಾವು ಅಲ್ಲೇ ಸತ್ತು ಹೋಗಿದೆ.
First published:
February 9, 2020, 8:36 PM IST