ಟೆಸ್ಲಾ(Tesla) ಕಾರಿನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ನಾವೂ ಒಂದು ಟೆಸ್ಲಾ ಕಾರು(Car) ಖರೀದಿಸಿ ಆಟೋಮೆಟಿಕ್ ಡ್ರೈವ್ ಮೋಡ್(automatic drive mode) ಹಾಕಿ ಜುಮ್ ಅಂತ ಕಾರು ಓಡಿಸದೆ ಕೂತು ರೈಡ್ ಎಂಜಾಯ್(Ride Enjoy) ಮಾಡಬೇಕು ಅಂದುಕೊಂಡಿರುತ್ತೀರಾ. ಎಲಾನ್ ಮಸ್ಕ್(Elon Musk) ಈ ಹೈಟೆಕ್(Hightech) ಟೆಸ್ಲಾ ಕಾರನ್ನು ಮಾರುಕಟ್ಟೆಗೆ ತಂದಿದ್ದಾರೆ. ವಿದೇಶಗಳಲ್ಲಿ ಈ ಟೆಸ್ಲಾ ಕಾರಿಗೆ ಬಹಳ ಬೇಡಿಕೆಯಿದೆ. ಈ ಟೆಸ್ಲಾ ಕಾರಿನ ವಿಶೇಷತೆ ಅಂದರೆ ಚಾಲಕ ಇಲ್ಲದಿದ್ದರೂ ಈ ಕಾರು ಓಡುತ್ತೆ. ಹೀಗಾಗಿ ವಿದೇಶದಲ್ಲಿ ಈ ಕಾರಿಗೆ ಡಿಮ್ಯಾಂಡ್ ಹೆಚ್ಚಿದೆ. ಆದರೆ ಭಾರತದಲ್ಲಿ ಈ ಕಾರಿನ ಬೆಲೆ ಕೇಳಿದರೆ ಶಾಕ್ ಆಗಬಹುದು. ಒಂದೂವರೆ ಕೋಟಿಯಿಂದ ಈ ಕಾರಿನ ಬೆಲೆ ಶುರುವಾಗುತ್ತೆ. ಈವಾಗ ಯಾಕೆ ಟೆಸ್ಲಾ ಕಾರಿನ ಬಗ್ಗೆ ಹೇಳುತ್ತಾ ಇದೀವಿ ಅಂದುಕೊಂಡರಾ? ಹೌದು, ಇಲ್ಲೊಬ್ಬ ಬೈಕ್ ಸವಾರ(Bike Rider) ಟೆಸ್ಲಾ ಹಾಗೂ ಎಲಾನ್ ಮಸ್ಕ್ರನ್ನ ನೆನಪು ಮಾಡಿದ್ದಾರೆ. ಈತನ ವಿಡಿಯೋ ನೋಡಿದವರು ಎಲಾನ್ ಮಸ್ಕ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಯಾಕೆ ಅಂತೀರಾ? ಮುಂದೆ ನೋಡಿ..
ಹಿಂಬದಿ ಸೀಟ್ನಲ್ಲಿ ಕೂತು ಬೈಕ್ ರೈಡಿಂಗ್
ವ್ಯಕ್ತಿಯೊಬ್ಬ ಬೈಕ್ನಲ್ಲಿ ಚಾಲಕನ ಸೀಟ್ ಬಿಟ್ಟು ಹಿಂಬದಿ ಸೀಟ್ನಲ್ಲಿ ಬೈಕ್ ಓಡಿಸಿರುವ ವಿಡಿಯೋವೊಂದು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಈತನ ವಿಡಿಯೋ ನೋಡಿದ ನೆಟ್ಟಿಗರು ಎಲಾನ್ ಮಸ್ಕ್ ಅವರ ಚಾಲಕರಹಿತ ವಾಹನ ಸಂಚಾರ ಐಡಿಯಾವನ್ನು ಕಿಂಡಲ್ ಮಾಡಿದ್ದಾರೆ. ನಮ್ಮ ದೇಶದಲ್ಲಿ ನೀವು ಏನಾದರೂ ಚಾಲಕ ರಹಿತ ಬೈಕ್ ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡಬೇಕು ಅಂದುಕೊಂಡಿದ್ದರೆ, ಆ ಆಸೆಯನ್ನು ಬಿಟ್ಟುಬಿಡಿ. ಇಲ್ಲಿ ನೋಡಿ ನಮ್ಮ ದೇಶದಲ್ಲಿ ಆಗಲೇ ಚಾಲಕ ರಹಿತ ಬೈಕ್ ಚಾಲ್ತಿಯಲ್ಲಿದೆ. ನಿಮ್ಮ ಚಾಲಕರಹಿತ ವಾಹನಕ್ಕೆ ಕಾಂಪಿಟೇಷನ್ ಶುರುವಾಗಿದೆ ಎಂದು ವೈರಲ್ ವಿಡಿಯೋವನ್ನ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದನ್ನು ಓದಿ:
ಸತ್ತ ಗಂಡನ ಬೂದಿ ಹೊತ್ತು ತಿರುಗುತ್ತಿರುವ ಹೆಂಡತಿ.. ಅವನ ನೆನೆಪಾದ್ರೆ ಅದನ್ನೇ ತಿನ್ನುತ್ತಾಳಂತೆ!
ಟ್ವೀಟ್ ಮಾಡಿದ ಮಹೀಂದ್ರಾ ಗ್ರೂಪ್ ಚೇರ್ಮನ್
ಈ ಬೈಕ್ ರೈಡಿಂಗ್ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಎಂದರೆ, ಸ್ವತಃ ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಈ ವಿಡಿಯೋವನ್ನ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. `ನಾನೊಬ್ಬ ಸಂಚಾರಿ ಆದರೆ ನನಗೆ ಯಾರು ಚಾಲಕರಿಲ್ಲ, ಸೇರಬೇಕಾದ ಗುರಿಯಿಲ್ಲ’ ಅಂತ ಹಿಂದಿಯ ಸಾಲುಗಳನ್ನ ಹಾಕಿ ಈ ವಿಡಿಯೋವನ್ನ ಆನಂದ್ ಮಹೀಂದ್ರಾ ಅವರು ಶೇರ್ ಮಡಿದ್ದಾರೆ.
ಇದನ್ನು ಓದಿ :
70ನೇ ವರ್ಷಕ್ಕೆ ಮೊದಲ ಮಗುವನ್ನು ಹೆತ್ತ ಮಹಾತಾಯಿ, ಇದು ನಮ್ ದೇಶದ್ದೇ ವಿಚಿತ್ರ!
ಜೋರಾಗಿದೆ ಪರ- ವಿರೋಧದ ಚರ್ಚೆ
ಈ ಬೈಕ್ ಸವಾರನ ಪರವಾಗಿ ಕೆಲ ನೆಟ್ಟಿಗರು ಸಪೋರ್ಟ್ ಮಾಡಿದ್ದಾರೆ. ಈ ರೀತಿಯ ಪ್ರತಿಭೆಗಳನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಮುಂದೊಂದು ದಿನ ನಮ್ಮ ದೇಶಕ್ಕೆ ಒಳ್ಳೆಯದು. ಎಷ್ಟು ಅದ್ಭುತವಾಗಿ ಗಾಡಿಯನ್ನು ಈ ರೀತಿ ಓಡಿಸಿದ್ದಾರೆ ಅಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮತ್ತೊಂದು ವರ್ಗ ಈ ರೀತಿಯ ದುಸ್ಸಾಹಸಕ್ಕೆ ಯಾರೂ ಕೂಡ ಮುಂದಾಗಬಾರದು ಅಥವಾ ಇಂಥವರಿಗೆ ಸಪೋರ್ಟ್ ಮಾಡಬಾರದು. ಈ ರೀತಿಯ ಚಾಲನೆ ತುಂಬಾ ಅಪಾಯಕಾರಿ ಹೆಲ್ಮೆಟ್ ಇಲ್ಲದೇ, ಬೇಜವಾಬ್ದಾರಿಯಾಗಿ ವಾಹನ ಓಡಿಸಿದ್ದಾನೆ. ಈತನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಮಹೀಂದ್ರಾ ಅಂತಹ ದೊಡ್ಡ ಕಂಪನಿ ಇಂತಹವರಿಗೆ ನೀವು ಪ್ರೋತ್ಸಾಹ ನೀಡಬೇಡಿ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ