Online Grocery Shop: ಬಿಹಾರದಲ್ಲಿ ಡಿಜಿಟಲ್ ಕಿರಾಣಿ ಅಂಗಡಿ: ಬಂಡವಾಳ ಇಲ್ಲದೆ ನೂರಾರು ಯುವಕರಿಗೆ ಉದ್ಯೋಗ!

“ಬಿಹಾರದ ಪ್ರತಿಯೊಂದು 45,103 ಹಳ್ಳಿಗಳಲ್ಲೂ ಈ ಉಪಕ್ರಮವನ್ನು ಕೈಗೊಂಡು, ಜನರು ಹೊಂದಿರುವ ಡಿಜಿಟಲ್ ಸೌಲಭ್ಯವನ್ನು ಬಳಸಿಕೊಂಡು, ರಾಜ್ಯದ ದೂರ ದೂರದ ಜಾಗಗಳಲ್ಲಿ ಕೂಡ 5 ಲಕ್ಷ ಉದ್ಯಮಿಗಳನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ” ಎಂದು ಸುಮನ್ ಕುಮಾರ್ ಜಾ ಹೇಳಿದ್ದಾರೆ.

ಸುಮನ್ ಕುಮಾರ್ ಜಾ

ಸುಮನ್ ಕುಮಾರ್ ಜಾ

 • Share this:
  ಡಿಜಿಟಲ್ ಯುಗದಲ್ಲಿ (Digital World) ನಾನಾ ರೀತಿಯ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಅದರಲ್ಲೂ ಡಿಜಿಟಲ್ ಮಾಧ್ಯಮವನ್ನು (Digital Medium) ಬಳಸಿಕೊಂಡು ಸ್ವತಃ ಉದ್ಯೋಗ ಸೃಷ್ಟಿಸಿಕೊಂಡು, ಇತರರಿಗೂ ಕೆಲಸ ನೀಡುವ ಪರಿಕಲ್ಪನೆ ಶ್ಲಾಘನೀಯ. ಅಂತಹ ಒಂದು ಕೆಲಸಕ್ಕೆ ಕೈ ಹಾಕಿದವರಲ್ಲಿ ಸುಮನ್ ಕುಮಾರ್ ಜಾ (Suman Kumar Jha) ಕೂಡ ಒಬ್ಬರು. ಬಿಹಾರದ ಸಮಷ್ಟಿಪುರ ಜಿಲ್ಲೆಯ ಕಿರಾಣಿ ಅಂಗಡಿಯ ಮಾಲೀಕರೊಬ್ಬರ ಮಗನಾಗಿರುವ ಸುಮನ್ ಕುಮಾರ್ ಜಾ, ಡಿಜಿಟಲ್ ಕಿರಾಣಿ ಅಂಗಡಿಗಳ (Online Grocery Shop) ಚೈನ್‌ ಆರಂಭಿಸಿದ್ದು, ಆ ಮೂಲಕ ನಿರುದ್ಯೋಗಿ ಯುವಕರಿಗೆ ಯಾವುದೇ ಬಂಡವಾಳ ಹೂಡಿಕೆ ಮಾಡದೆಯೇ ಉದ್ಯೋಗ ಹೊಂದುವ ಅವಕಾಶ ನೀಡುತ್ತಿದ್ದಾರೆ. ಸ್ವ ಉದ್ಯೋಗ ಕ್ಷೇತ್ರದಲ್ಲಿ 27 ವರ್ಷದ ಈ ಎಂಜಿನಿಯರಿಂಗ್ ಪದವೀಧರ ಇಟ್ಟಿರುವ ಚೊಚ್ಚಲ ಹೆಜ್ಜೆ ನೂರಾರು ಯುವಕರಿಗೆ ಆಶಾಕಿರಣವಾಗಿದೆ.

  “ಜನರು ‘ZILA ಸಮುದಾಯ ನಾಯಕತ್ವ (ZCL)’ ಆ್ಯಪ್‍ನಲ್ಲಿ ತಮ್ಮನ್ನು ನೋಂದಾವಣಿ ಮಾಡಿಸಿಕೊಳ್ಳುತ್ತಾರೆ. ಆ ಬಳಿಕ ಅವರು ಡಿಜಿಟಲ್ ಕಿರಾಣಿ ಅಂಗಡಿ ನಡೆಸಲು ಆರಂಭಿಸುತ್ತಾರೆ ಮತ್ತು ಗ್ರಾಹಕರು ಆರ್ಡರ್ ನೀಡಿದ ವಸ್ತುಗಳನ್ನು ಮನೆ ಬಾಗಿಲಿಗೆ ಪೂರೈಸುತ್ತಾರೆ” ಎಂದು ಸುಮನ್ ಕುಮಾರ್ ಜಾ ಹೇಳಿದ್ದಾರೆ.

  ಡಿಜಿಟಲ್ ಕಿರಾಣಿ ಅಂಗಡಿಯಿಂದ ಗಳಿಸಿದ ಕಮಿಷನ್ ನೇರವಾಗಿ (ZCL)’ ಆ್ಯಪ್‍ನ ಪಾಲುದಾರರ ಖಾತೆಗೆ ಸಂದಾಯವಾಗುತ್ತದೆ. ಪಾಲುದಾರರು ತಿಂಗಳಿಗೆ 5000 ರೂ. ಗಳಿಂದ 15,000 ರೂ. ಗಳಿಸಬಹುದು. ಈ ಆ್ಯಪ್‍ನ ಮೂಲಕ ಖರೀದಿಸುವ ವಸ್ತುಗಳು ಬಹು ಬೇಗ ಗ್ರಾಹಕರನ್ನು ತಲುಪುತ್ತದೆ ಮತ್ತು ದಿನನಿತ್ಯದ ಬಳಕೆಯ ವಸ್ತುಗಳು ತೆರೆದ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಲಭ್ಯ ಇವೆ ಎನ್ನಲಾಗುತ್ತಿದೆ. ಈ ಡಿಜಿಟಲ್ ಕಿರಾಣಿ ಅಂಗಡಿ ಪರಿಕಲ್ಪನೆಯ ಮೂಲಕ, ಕಳೆದ 7 ತಿಂಗಳಲ್ಲಿ ಪಾಟ್ನಾ, ಖಗುವಲ್ ಮತ್ತು ಬಿಹ್ಟಾದಲ್ಲಿ 10,000 ಆರ್ಡರ್‌ಗಳನ್ನು ಪೂರೈಸುವ ಮೂಲಕ 10 ಲಕ್ಷ ರೂ. ಆದಾಯ ಗಳಿಸಿದ್ದಾರೆ.

  “ನಾನು ಚೆನ್ನೈನ ಡಾ. ಎಂಜಿಆರ್ ಯುನಿವರ್ಸಿಟಿಯಿಂದ ಪದವಿ ಪಡೆದ ಬಳಿಕ, ಡಿಜಿಟಲ್ ಅಂಗಡಿ ಪರಿಕಲ್ಪನೆಯ ಕುರಿತು ಕೆಲಸ ಮಾಡಬೇಕೆಂದು ಅಲೋಚಿಸಿದ್ದೆ, ಕೊನೆಗೂ, ಒಂದು ವರ್ಷದ ಸಂಶೋಧನೆ ಮತ್ತು ಕೆಲಸಗಳ ಬಳಿಕ, ನಾನು ಎರಡು ಆ್ಯಪ್‍ಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಈ ಆ್ಯಪ್‍ಗಳು ಗ್ರಾಹಕರಿಗೆ ಆನ್‍ಲೈನ್ ಮೂಲಕ ವಸ್ತುಗಳನ್ನು ಖರೀದಿಸಲು ಸಹಾಯ ಮಾಡುತ್ತದೆ ಮಾತ್ರವಲ್ಲ, ಸ್ಮಾರ್ಟ್ ಫೋನ್‍ಗಳನ್ನು ಹೊಂದಿರುವ ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶಗಳನ್ನೂ ಒದಗಿಸುತ್ತದೆ” ಎನ್ನುತ್ತಾರೆ ಅವರು.

  ಸುಮನ್ ಅವರ ಈ ಆ್ಯಪ್‍ಗಳು ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಲಭ್ಯ ಇವೆ. ಪ್ರಸ್ತುತ ಈ ಡಿಜಿಟಲ್ ಕಿರಾಣಿ ಅಂಗಡಿ ಪರಿಕಲ್ಪನೆಯು ಸುಮಾರು 100 ಪಾಲುದಾರರನ್ನು ಹೊಂದಿದ್ದು, 5000 ಗ್ರಾಹಕರು ಇದ್ದಾರೆ. “ಬಿಹಾರದ ಪ್ರತಿಯೊಂದು 45,103 ಹಳ್ಳಿಗಳಲ್ಲೂ ಈ ಉಪಕ್ರಮವನ್ನು ಕೈಗೊಂಡು, ಜನರು ಹೊಂದಿರುವ ಡಿಜಿಟಲ್ ಸೌಲಭ್ಯವನ್ನು ಬಳಸಿಕೊಂಡು, ರಾಜ್ಯದ ದೂರ ದೂರದ ಜಾಗಗಳಲ್ಲಿ ಕೂಡ 5 ಲಕ್ಷ ಉದ್ಯಮಿಗಳನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ” ಎಂದು ಸುಮನ್ ಕುಮಾರ್ ಜಾ ಹೇಳಿದ್ದಾರೆ. ಈ ಯೋಜನೆಯನ್ನು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ಕೊಂಡೊಯ್ಯುವ ಉದ್ದೇಶ ಸುಮನ್ ಕುಮಾರ್ ಜಾ ಅವರಿಗಿದೆ.

  ಇದನ್ನು ಓದಿ: Explained: 5 ಸಿಇಒ, ಅಮೆರಿಕ, ಆಸ್ಟ್ರೇಲಿಯಾ ಪ್ರಧಾನಿಗಳ ಭೇಟಿ, ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ; ಪ್ರಧಾನಿ ಮೋದಿ ಅಮೆರಿಕ ಪ್ರವಾಸ ವೇಳಾಪಟ್ಟಿ ಹೀಗಿದೆ?

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  First published: