Viral Video: ಪಾಠ ಹೇಳೋ ಶಿಕ್ಷಕರೇ ಹೀಗೆ ಮಾಡಿದ್ರೆ ಹೇಗೆ? ವಿಡಿಯೋ ನೋಡಿ ರೊಚ್ಚಿಗೆದ್ದ ನೆಟ್ಟಿಗರು

ಇಂಟರ್ನೆಟ್ ನಲ್ಲಿ ಜೋರಾಗಿಯೇ ಹರಿದಾಡುತ್ತಿರುವ ಈ ವೀಡಿಯೋದಲ್ಲಿ, ಶಿಕ್ಷಕಿ ತನ್ನ ಕುರ್ಚಿಯ ಮೇಲೆ ಕುಳಿತುಕೊಂಡು ಗಾಢ ನಿದ್ರೆ ಮಾಡುತ್ತಿರುವುದನ್ನು ಕಾಣಬಹುದು, ಆದರೆ ವಿದ್ಯಾರ್ಥಿಗಳು ಅಲ್ಲೇ ತರಗತಿಯಲ್ಲಿ ನೆಲದ ಮೇಲೆ ಕುಳಿತುಕೊಂಡಿರುವುದನ್ನು ನೋಡಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವೆಲ್ಲಾ ಚಿಕ್ಕವರಾಗಿದ್ದಾಗ ಶಾಲೆಗೆ (School)ಹೋದಾಗ ಮಧ್ಯಾಹ್ನದ ಹೊತ್ತಿನಲ್ಲಿ ಊಟದ (Lunch) ಸಮಯ ಆದ ನಂತರ ನಿದ್ರೆ ಬರುವುದು ತುಂಬಾನೇ ಸಾಮಾನ್ಯವಾಗಿರುತ್ತಿತ್ತು. ಆಗ ನಾವು ಮಧ್ಯಾಹ್ನದ (Afternoon) ಹೊತ್ತಿನಲ್ಲಿ ಇರುವ ವಿಷಯಗಳ (Subject) ತರಗತಿಗಳಲ್ಲಿ (Class) ಎಷ್ಟೋ ಬಾರಿ ತೂಕಡಿಸುತ್ತಾ ತೂಕಡಿಸುತ್ತಾ ಕಣ್ಣುಜ್ಜಿಕೊಂಡು ಪಾಠ ಕೇಳುತ್ತಿದ್ದೆವು. ನಮಗೆ ನಿದ್ರೆ (Sleep) ಬರುತ್ತಿದೆ ಎಂದು ತರಗತಿಯಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರಿಗೆ (Teacher) ಗೊತ್ತಾಗಬಾರದೆಂದು ಪುಸ್ತಕವನ್ನು (Book) ಅಡ್ಡ ಇರಿಸಿಕೊಂಡು ಅಥವಾ ಸ್ನೇಹಿತನ (Friend) ಬೆನ್ನ ಹಿಂದೆ ಅಡಗಿ ಕುಳಿತುಕೊಳ್ಳುವುದೆಲ್ಲವನ್ನೂ (Sitting) ಮಾಡುತ್ತಿದ್ದುದ್ದು ಇನ್ನೂ ನಮಗೆ ನೆನಪಿನಲ್ಲಿ ಇರುತ್ತವೆ.

ಹೀಗೆ ಶಾಲೆಯಲ್ಲಿ ಮಧ್ಯಾಹ್ನದ ಹೊತ್ತು ತೂಕಡಿಸದವರು ಯಾರಿದ್ದಾರೆ ಹೇಳಿ? ಕೆಲವೊಮ್ಮೆ ನಮ್ಮ ತರಗತಿಗೆ ಪಾಠ ಮಾಡಲು ಬರುವ ಶಿಕ್ಷಕರು ಸಹ ತೂಕಡಿಸುತ್ತಿದ್ದರು. ನಮಗೆ ಏನಾದರೊಂದು ಬರೆಯಲು ನೀಡಿ ಅವರು ತಮ್ಮ ಕುರ್ಚಿಯ ಮೇಲೆ ಕುಳಿತು ತಮ್ಮ ಎರಡು ಕೈಗಳನ್ನು ಮುಂದೆ ಇರುವ ಟೇಬಲ್ ಮೇಲೆ ಜೋಡಿಸಿಕೊಂಡು ಅದರ ಮೇಲೆ ತಲೆಯನ್ನಿಟ್ಟು ಒಂದು ಕಿರು ನಿದ್ರೆ ಮಾಡಿಯೇ ಬಿಡುತ್ತಿದ್ದರು. ಈಗೆಲ್ಲಾ ಶಾಲೆಯಲ್ಲಿ ಮತ್ತು ತರಗತಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದ್ದು, ಅದಕ್ಕೆಲ್ಲಾ ಅವಕಾಶವಿಲ್ಲದಂತೆ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ವಿದ್ಯಾರ್ಥಿಯೊಂದಿಗೆ ಕುಣಿದು ಕುಪ್ಪಳಿಸಿದ ಶಿಕ್ಷಕಿ
ಇತ್ತೀಚೆಗೆ ತರಗತಿಗಳಲ್ಲಿ ಬಿಹಾರದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯೊಬ್ಬಳು ಕುಣಿದು ಕುಪ್ಪಳಿಸಿದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದನ್ನು ನಾವೆಲ್ಲಾ ನೋಡಿದ್ದೆವು. ಈ ವೀಡಿಯೋ ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದರು. ಆದರೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ಕೆರಳಿ ಕೆಂಡಾಮಂಡಲರಾಗಿದ್ದಾರೆ ಎಂದು ಹೇಳಬಹುದು.

ಇದನ್ನೂ ಓದಿ:  Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ಏನಿದೆ ಅಂತಹದ್ದು ಆ ವೀಡಿಯೋದಲ್ಲಿ ಅಂತ ನಿಮಗೆ ಅದನ್ನು ತಿಳಿದುಕೊಳ್ಳಬೇಕೆಂದು ಕುತೂಹಲ ಜಾಸ್ತಿ ಆಗುತ್ತಿರಬೇಕಲ್ಲ? ಈ ವೀಡಿಯೋದಲ್ಲಿ ಶಾಲೆಯೊಂದರಲ್ಲಿ ಶಿಕ್ಷಕಿ ಕುರ್ಚಿ ಮೇಲೆ ಮಲಗಿದ್ದಾರೆ, ಅವರಿಗೆ ವಿದ್ಯಾರ್ಥಿನಿಯೊಬ್ಬಳು ಅವರಿಗೆ ಗಾಳಿ ಬೀಸುತ್ತಿರುವುದನ್ನು ನಾವು ನೋಡಬಹುದು. ಈ ವೀಡಿಯೋ ನೋಡುಗರನ್ನು ನಿಜವಾಗಿಯೂ ಕೆರಳಿಸಿದೆ ಎಂದು ಹೇಳಲಾಗುತ್ತಿದೆ.

ಕುರ್ಚಿ ಮೇಲೆ ಗಾಢ ನಿದ್ರೆ ಮಾಡಿದ ಶಿಕ್ಷಕಿ
ಇಂಟರ್ನೆಟ್ ನಲ್ಲಿ ಜೋರಾಗಿಯೇ ಹರಿದಾಡುತ್ತಿರುವ ಈ ವೀಡಿಯೋದಲ್ಲಿ, ಶಿಕ್ಷಕಿ ತನ್ನ ಕುರ್ಚಿಯ ಮೇಲೆ ಕುಳಿತುಕೊಂಡು ಗಾಢ ನಿದ್ರೆ ಮಾಡುತ್ತಿರುವುದನ್ನು ಕಾಣಬಹುದು, ಆದರೆ ವಿದ್ಯಾರ್ಥಿಗಳು ಅಲ್ಲೇ ತರಗತಿಯಲ್ಲಿ ನೆಲದ ಮೇಲೆ ಕುಳಿತುಕೊಂಡಿರುವುದನ್ನು ನೋಡಬಹುದು. ಶಿಕ್ಷಕರು ನಿದ್ರಿಸುತ್ತಿರುವಾಗ, ಶಾಲೆಯ ಸಮವಸ್ತ್ರ ಧರಿಸಿರುವಂತಹ ಒಂದು ಪುಟ್ಟ ಹುಡುಗಿಯೊಬ್ಬಳು ತನ್ನ ಶಿಕ್ಷಕಿಯ ಪಕ್ಕದಲ್ಲಿ ನಿಂತು ಗಾಳಿ ಬೀಸುವುದನ್ನು ಇಲ್ಲಿ ನೋಡಬಹುದು.

ಇದನ್ನೂ ಓದಿ: Brave Girl: ಒಂದೇ ಕಾಲಲ್ಲಿ ಶಾಲೆಗೆ ಕಿಲೋಮೀಟರ್​ಗಟ್ಟಲೇ ನಡೆಯುವ ಬಾಲಕಿ! ವಿಡಿಯೋ ನೋಡಿ

ಈ ವೀಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿಯು ನಂತರ ಆ ಶಾಲೆಯ ಹೆಸರನ್ನು ತೋರಿಸಲು ಹೊರಗೆ ಹೋಗಿದ್ದಾರೆ. ರಾಜಕೀಯಕೃತ್ ಪ್ರಾಥಮಿಕ್ ವಿದ್ಯಾಲಯ್, ಕಥರ್ವಾ ಅಂತ ಆ ಶಾಲೆಯ ಹೊರಗಡೆ ಬರೆಯಲಾಗಿತ್ತು. ಸುದ್ದಿ ಮಾಧ್ಯಮದ ಪ್ರಕಾರ, ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಿ ಪುರೈನಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಈ ವೀಡಿಯೋ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಶೀಘ್ರದಲ್ಲಿಯೇ ವೈರಲ್ ಆಯಿತು ಮತ್ತು ಆನ್‌ಲೈನ್ ನಲ್ಲಿ ತ್ವರಿತವಾಗಿ ಪ್ರತಿಕ್ರಿಯೆಗಳನ್ನು ಪಡೆಯಲು ಶುರುವಾಯಿತು ಎಂದು ಹೇಳಬಹುದು. ಅನೇಕ ಇಂಟರ್ನೆಟ್ ಬಳಕೆದಾರರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು ಮತ್ತು ಅಧಿಕಾರಿಗಳನ್ನು ಟ್ಯಾಗ್ ಮಾಡಿದರು, ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.


View this post on Instagram


A post shared by Baat Bihar Ki (@baatbiharki)
ಈ ಬಗ್ಗೆ ಶಿಕ್ಷಕಿ ಹೇಳಿದ್ದೇನು?
ನಂತರ, ಸುದ್ದಿ ಮಾಧ್ಯಮವೊಂದು ಆ ಶಿಕ್ಷಕಿಯ ಹೆಸರು ಬಬಿತಾ ಕುಮಾರಿ ಎಂದು ಹೇಳಿತು. ತನ್ನ ಕೃತ್ಯವನ್ನು ಸಮರ್ಥಿಸಿಕೊಂಡ ಕುಮಾರಿ, ತನಗೆ ಆರೋಗ್ಯ ಸರಿಯಿರಲಿಲ್ಲ ಮತ್ತು ಆದ್ದರಿಂದ ಕುರ್ಚಿಯಲ್ಲಿಯೇ ಕುಳಿತು ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ ಎಂದು ಸುದ್ದಿ ಮಾಧ್ಯಮವು ವರದಿ ಮಾಡಿದೆ. ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿಯಿಲ್ಲ.
Published by:Ashwini Prabhu
First published: