ದೇಶದ ಹಲವಾರು ರಾಜ್ಯಗಳಲ್ಲಿ(State)ಮದ್ಯ(Liquor)ಮಾರಾಟವನ್ನು ನಿಷೇಧ ಮಾಡಲಾಗಿದೆ. ಅಪರಾಧ ಪ್ರಕರಣಗಳಿಗೆ ಮಧ್ಯವೇ ಕಾರಣವಾಗುತ್ತಿರುವುದರಿಂದ ಹಲವಾರು ರಾಜ್ಯಗಳು ಮದ್ಯ ಮಾರಾಟಕ್ಕೆ ನಿಷೇಧ ಮಾಡಿ ಅಪರಾಧದ ಪ್ರಮಾಣವನ್ನು(Crime Rate) ಇಳಿಕೆ ಮಾಡಲು ನೋಡುತ್ತೇವೆ.. ಹೀಗಾಗಿಯೇ ಬಿಹಾರದಲ್ಲಿ(Bihar)ಸಹ 2016ರಲ್ಲಿ ಮದ್ಯಪಾನವನ್ನು ನಿಷೇಧ ಮಾಡಲಾಗಿತ್ತು.. ಅಂದಿನಿಂದ ಇಂದಿನವರೆಗೂ ಬಿಹಾರದಲ್ಲಿ ಮದ್ಯ ಮಾರಾಟವಾಗದಂತೆ, ಪೊಲೀಸರು(Police)ಅಕ್ರಮವಾಗಿ ಯಾರು ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ವಹಿಸಿದ್ದಾರೆ. ಬಿಹಾರ ಸರ್ಕಾರದ ಈ ಕಾನೂನು ಈಗ ನವ ವಧುಗಳಿಗೆ ತೊಂದರೆಯಾಗಿ ಪರಿಣಮಿಸಿದೆ.
ನವವಧು ಕೊಠಡಿಗೆ ನುಗ್ಗಿ ಪೋಲಿಸರಿಂದ ಎಣ್ಣೆ ಹುಡುಕಾಟ
ಬಿಹಾರದ ವೈಶಾಲಿ ಪೊಲೀಸರು ಹಾಜಿಪುರ ನಗರದ ಹತ್ಸರ್ಗಂಜ್ ಪ್ರದೇಶದಲ್ಲಿ ನೆಲೆಸಿರುವ ಶೀಲಾ ದೇವಿ ಅವರ ಮನೆಯ ಮೇಲೆ ಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಗುಮಾನಿ ಹಿನ್ನೆಲೆ ದಾಳಿ ನಡೆಸಿತ್ತು.. ಆದರೆ ಪೊಲೀಸರು ನೂತನವಾಗಿ ಮದುವೆಯಾಗಿ ಬಂದಿದ್ದ ವಧುವಿನ ಕೊಠಡಿಗೂ ನುಗ್ಗಿ, ಅಲ್ಲಿ ಮದ್ಯದ ಬಾಟಲಿಗಳು ಇದೆಯಾ ಎಂದು ಹುಡುಕಲು ಆರಂಭಿಸಿ ಸಂಪೂರ್ಣ ಮಲಗುವ ಕೋಣೆಯನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ
ಇದನ್ನೂ ಓದಿ: ಸತ್ತು ಹೋದ ಎಂದುಕೊಂಡವನು 12 ವರ್ಷಗಳ ಬಳಿಕ ಧಿಡೀರ್ ಪತ್ತೆ
ಮಹಿಳಾ ಸಿಬ್ಬಂದಿ ಇಲ್ಲದೆ ಪರಿಶೀಲನೆ
ಸಾಮಾನ್ಯವಾಗಿ ಮಹಿಳೆಯರ ತಪಾಸಣೆ ನಡೆಸುವ ವೇಳೆ ಮಹಿಳಾ ಸಿಬ್ಬಂದಿಗಳು ಕಡ್ಡಾಯವಾಗಿ ಇರಬೇಕು ಎಂದು ಕಾನೂನು ಹೇಳುತ್ತದೆ .ಆದರೆ ಹತ್ಸರ್ಗಂಜ್ ಪ್ರದೇಶದಲ್ಲಿ ನೆಲೆಸಿರುವ ಶೀಲಾ ದೇವಿ ಅವರ ಮನೆಯಲ್ಲಿ ತಪಾಸಣೆ ನಡೆಸುವಾಗ ಮಹಿಳಾ ಸಿಬ್ಬಂದಿ ಇಲ್ಲದೆಯೇ ಪೊಲೀಸರು ನವವಿವಾಹಿತ ವಧು ಪೂಜಾ ಕುಮಾರಿ ಬೆಡ್ ರೂಮಿನಲ್ಲಿದ್ದಾಗ, ರೂಮಿಗೆ ನುಗ್ಗಿ ಹುಡುಕಾಟ ನಡೆಸಲು ಆರಂಭಿಸಿದ್ದಾರೆ. ಹಾಸಿಗೆ, ಬೀರು, ಸೂಟ್ಕೇಸ್ಗಳು ಮತ್ತು ಡ್ರಾಯರ್ಗಳು ಸೇರಿದಂತೆ ಇಡೀ ಕೊಠಡಿಯನ್ನು ಪೊಲೀಸರು ಹುಡುಕಿದ್ದಾರೆ..
ನೀವು ಏನನ್ನ ಹುಡುಕುತ್ತಿದ್ದೀರಾ ಎಂದು ವಧು ಪೂಜಾ ಕುಮಾರಿ ಪ್ರಶ್ನೆ ಮಾಡಿದಾಗ ಅಸಭ್ಯ ಶಬ್ದಗಳಿಂದ ಪೊಲೀಸರು ವಧುವನ್ನು ನಿಂದನೆ ಮಾಡಿದ್ದಾರೆ.
ಇದನ್ನೂ ಓದಿ: ಯುಪಿ, ಮಹಾರಾಷ್ಟ್ರ, ಬಿಹಾರ ಸೇರಿದಂತೆ 5 ರಾಜ್ಯಗಳಲ್ಲಿ ಹೆಚ್ಚು ಕೊರೊನಾ ಲಸಿಕೆ ಬ್ಯಾಲೆನ್ಸ್- 10 ಕೋಟಿಗೂ ಹೆಚ್ಚು ಡೋಸ್ ಬಾಕಿ
ಇನ್ನು ಈ ಘಟನೆ ನಡೆದ ವೇಳೆ ಶೀಲಾಕುಮಾರಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಸಹ, ಪೊಲೀಸರು ಕಿಂಚಿತ್ತು ಕರುಣೆ ತೋರದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇನ್ನು ಈ ದಾಳಿಯ ನಂತರ, ನಾವು ಪ್ರದೇಶದಲ್ಲಿ ಮುಜುಗರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ನಮ್ಮ ಕುಟುಂಬದ ಸದಸ್ಯರಿಗೆ ಮದ್ಯ ಸೇವಿಸಿದ ಯಾವುದೇ ಹಿಂದಿನ ದಾಖಲೆಗಳಿಲ್ಲ. ಆದರೂ, ಪೊಲೀಸರು ಯಾವುದೇ ಶೋಧ ವಾರಂಟ್ ಇಲ್ಲದೆ ದಾಳಿ ನಡೆಸಿದ್ದಾರೆ ಎಂದು ಶೀಲಾ ದೇವಿ ಆರೋಪಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಎಸ್ ಪಿ ನಿರಾಕರಣೆ
ಇನ್ನು ಈ ತಿಂಗಳ ಆರಂಭದಲ್ಲಿ, ಬಿಹಾರ ಪೊಲೀಸರ ತಂಡವು ಮದ್ಯವನ್ನು ಹುಡುಕಲು ಪಾಟ್ನಾದ ವಧುವಿನ ಕೋಣೆಗೆ ಪ್ರವೇಶಿಸಿತು. ಆ ಸಂದರ್ಭದಲ್ಲಿ ರಾಜ್ಯ ಪೊಲೀಸರ ಕೃತ್ಯಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದರ ನಡುವೆ ವೈಶಾಲಿಯಲ್ಲಿ ಇದೇ ರೀತಿಯ ಕೃತ್ಯ ನಡೆದಿದೆ.ಆದರೆ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ವೈಶಾಲಿ ಎಸ್ಎಸ್ಪಿ ಮನೀಶ್ ಕುಮಾರ್ ನಿರಾಕರಿಸಿದ್ದಾರೆ.
ಇನ್ನು ಬಿಹಾರದಲ್ಲಿ ಮದ್ಯಪಾನದ ಪ್ರಕರಣಗಳು ಅಧಿಕವಾಗಿ ಅಪರಾಧ ಕೃತ್ಯಗಳು ಹೆಚ್ಚಾಗಿದ್ದರಿಂದ,2016ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರು, ಬಿಹಾರ ರಾಜ್ಯದಲ್ಲಿ ಮದ್ಯಪಾನ ಮಾರಾಟವನ್ನು ನಿಷೇಧ ಮಾಡಿದ್ದರು.. ಅಂದಿನಿಂದ ಇಂದಿನವರೆಗೂ ಬಿಹಾರದಲ್ಲಿ ಮದ್ಯಪಾನ ಮಾರಾಟ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ