'ಲಾಕ್​ಡೌನ್​ ಮುಂದುವರೆಸಿ, ಮದುವೆಗಳಿಗೆ ನಿಷೇಧ ಹೇರಿ’; ತನ್ನ ಪ್ರೇಯಸಿಯ ಮದುವೆ ನಿಲ್ಲಿಸಲು ಬಿಹಾರ ಸಿಎಂಗೆ ಮನವಿ ಮಾಡಿದ ಪಾಗಲ್ ಪ್ರೇಮಿ..!

ಪಂಕಜ್ ಕುಮಾರ್ ಗುಪ್ತಾ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರಿಗೆ ಟ್ವೀಟ್ ಮಾಡಿರುವ ಈ ಘಟನೆ ಎಲ್ಲರಿಗೂ ನಗು ಹುಟ್ಟಿಸಿದೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆದರೆ ಇವರಿಗೆ ಯಾರು ಸಹಾಯ ಮಾಡಿಲ್ಲವಾದರೂ ಪಂಕಜ್ ಅವರು ಸಿಎಂ ಅವರ ಬಳಿ ಬೇಡಿಕೊಂಡಿರುವುದು ಮಾತ್ರ ಎಲ್ಲರ ನಗುವಿಗೆ ಕಾರಣವಾಗಿದೆ.

  • Share this:

ಕೋವಿಡ್-19ನಿಂದಾಗಿ ಇಡೀ ದೇಶ ಸುಧಾರಿಸಿಕೊಳ್ಳಲು ಇನ್ನೆಷ್ಟು ದಿನಗಳು ಬೇಕೋ ತಿಳಿಯದು. ಆದರೆ ದೇಶದ ಪರಿಸ್ಥಿತಿಯನ್ನು ಸುಧಾರಿಸಲು ಎಲ್ಲೆಡೆ ಜನತಾ ಕರ್ಫ್ಯೂ, ಲಾಕ್‍ಡೌನ್ ಹೇರಲಾಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಹಾಗೂ ಗುಂಪುಗೂಡುವಿಕೆಯನ್ನು ತಡೆಯಲು ಸಭೆ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಹಾಗಾಗಿ ಎಲ್ಲಾ ಮದುವೆಗಳನ್ನು ಮುಂದೂಡಲಾಗುತ್ತಿದೆ. ಇಲ್ಲವೇ ಸರಳವಾಗಿ ವಿವಾಹ ಮಾಡಲಾಗುತ್ತಿದೆ. ಇದೀಗ ಭಗ್ನ ಪ್ರೇಮಿಯೊಬ್ಬನ ಮನವಿ ಮಾತ್ರ ಸಖತ್ ವೈರಲ್ ಆಗುತ್ತಿದೆ.

ಇಂತಹದರ ನಡುವೆ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಮದುವೆಯಾಗುತ್ತಿರುವುದನ್ನು ತಿಳಿದು ಲಾಕ್‍ಡೌನ್ ಅನ್ನು ಮುಂದುವರೆಸಿ, ಮದುವೆಗೆ ನಿಷೇಧ ಹೇರಬೇಕಾಗಿ ಮುಖ್ಯಮಂತ್ರಿ ಬಳಿ ಮನವಿ ಮಾಡಿರುವ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ.

ಹೌದು, ಪಂಕಜ್ ಕುಮಾರ್ ಗುಪ್ತಾ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರಿಗೆ ಟ್ವೀಟ್ ಮಾಡಿರುವ ಈ ಘಟನೆ ಎಲ್ಲರಿಗೂ ನಗು ಹುಟ್ಟಿಸಿದೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆದರೆ ಇವರಿಗೆ ಯಾರು ಸಹಾಯ ಮಾಡಿಲ್ಲವಾದರೂ ಪಂಕಜ್ ಅವರು ಸಿಎಂ ಅವರ ಬಳಿ ಬೇಡಿಕೊಂಡಿರುವುದು ಮಾತ್ರ ಎಲ್ಲರ ನಗುವಿಗೆ ಕಾರಣವಾಗಿದೆ.

ಇದನ್ನೂ ಓದಿ: Coronavirus Karnataka: ಕೊರೋನಾ 2ನೇ ಅಲೆಯಲ್ಲಿ ಯುವಕರೇ ಟಾರ್ಗೆಟ್​​​..!; ಈವರೆಗೆ ರಾಜ್ಯದಲ್ಲಿ 4488 ಯುವಕರ ಸಾವು

ಹೌದು, ಪಂಕಜ್ ಅವರು, ಸರ್ ನೀವು ಮದುವೆಯನ್ನು ನಿಷೇಧ ಮಾಡಿದರೆ ಮೇ 19ರಂದು ನಡೆಯಲಿರುವ ನನ್ನ ಪ್ರೇಯಸಿಯ ಮದುವೆಯು ನಿಲ್ಲುತ್ತದೆ. ಹೀಗೇನಾದರೂ ಆದಲ್ಲಿ ನಾನು ಜೀವಮಾನಕ್ಕೂ ನಿಮಗೆ ಆಭಾರಿಯಾಗಿರುತ್ತೇನೆ ಎಂದು ಹಿಂದಿ ಭಾಷೆಯಲ್ಲಿ ಮೇ 13ರಂದು ಟ್ವೀಟ್ ಮಾಡಿದ್ದಾರೆ.

ಮೇ 16ರಂದು ನಮ್ಮ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿದೆ. ಮೇ 16ರಂದು ಬಿಹಾರದಲ್ಲಿ 6,894 ಹೊಸ ಪ್ರಕರಣಗಳು ದಾಖಲಾಗಿದೆ ಮತ್ತು ಪಾಸಿಟಿವಿಟಿ ದರ 5.73 ಇತ್ತು.

ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಪಂಕಜ್ ಅವರಿಗೆ ಸಹಾಯ ಮಾಡುವಂತೆ ವಿನಂತಿಸಿದರೆ, ಪ್ರೀತಿ ಜೀವನದ ಭಾಗ ಹೀಗೆ ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡಿದರೆ, ಇನ್ನು ಕೆಲವರು ಅವರ ಬೇಡಿಕೆ ನಿರಾಕರಿಸದಂತೆ ಮನವಿ ಮಾಡಿದ್ದಾರೆ.

ಫರೂಕ್ ಖಾನ್ ಎನ್ನುವವರು ಟ್ವೀಟ್ ಮಾಡಿ ಅಕಸ್ಮಾತ್ ನಿಮ್ಮ ಪ್ರೇಯಸಿಯ ಮದುವೆಯಾದರೆ ನೀವು ಅವರನ್ನು ಮದುವೆಯಾಗುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಅಮಿತ್ ಕುಮಾರ್ ಸೇನಾಗುಪ್ತಾ ಅವರು ಟ್ವೀಟ್ ಮಾಡಿ, ವಿಪತ್ತಿನಲ್ಲಿ ಅವಕಾಶ, ನಿತೀಶ್ ಜೀ, ನಾನು ಕೂಡ ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ಪಂಕಜ್ ಭಾಯ್ ಅವರ ಕೋರಿಕೆಯನ್ನು ಮಾನ್ಯ ಮಾಡಿ ಎಂದು ಬೆಂಬಲ ಸೂಚಿಸಿದ್ದಾರೆ.

ಪ್ರೀತಿ ಜೀವನದ ಒಂದು ಭಾಗ. ಆದರೆ ಹೃದಯದ ಭಾಗವಲ್ಲ. ಪ್ರೀತಿಯಲ್ಲಿ ಬೀಳುವುದು, ಪ್ರೀತಿ ಮಾಡುವುದು ಒಳ್ಳೆಯದು ಆದರೆ ದೀರ್ಘಾವಧಿಯಲ್ಲಿ ಅದನ್ನು ಪೋಷಿಸುವ ಸಾಮರ್ಥ್ಯವೂ ಇರಬೇಕು ಎಂದು ಶೈಲೇಶ್ ಕುಮಾರ್ ಗುಪ್ತಾ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಹೀಗೆ ಪ್ರೀತಿಸಿದವರು ತಮ್ಮ ಪ್ರೇಯಸಿಯನ್ನು ಪಡೆಯಲು ಎಂತಹ ಹುಚ್ಚು ಸಾಹಸಕ್ಕಾದರೂ ಇಳಿಯುತ್ತಾರೆ ಎಂಬುದಕ್ಕೆ ಈ ಘಟನೆ ನೈಜ ಸಾಕ್ಷಿಯಾಗಿದೆ.
ಭಾರತದಲ್ಲಿ ಈಗಾಗಲೇ 2.5 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಕಳೆದ ಒಂದು ದಿನದಲ್ಲಿ 4,200 ಸಾವುಗಳು ಸಂಭವಿಸಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ವಿವಿಧ ರಾಜ್ಯಗಳು ವಿಭಿನ್ನ ನಿರ್ಬಂಧಗಳೊಂದಿಗೆ ಲಾಕ್‍ಡೌನ್ ಜಾರಿಗೊಳಿಸಿವೆ.

Published by:Latha CG
First published: