ಸಂಭ್ರಮ ಎಂಬುವುದು ಕೇವಲ ಮನುಷ್ಯರಿಗೆ ಸಿಮೀತವಲ್ಲ ಎಂಬುದನ್ನು ಕೆಲವರು ಈಗಾಗಲೇ ತೋರಿಸಿದ್ದಾರೆ. ಹಸು, ನಾಯಿಗಳ ಜನ್ಮದಿನವನ್ನು ಅವುಗಳ ಸಾಕು ಪ್ರಾಣಿ ಪ್ರಿಯರು ನೆನಪಿನಲ್ಲಿಟ್ಟುಕೊಂಡು ಜನ್ಮದಿನವನ್ನು ಆಚರಿಸಿರುವುದು ನೋಡಿರುತ್ತೇವೆ. ಕೆಲವು ವರ್ಷಗಳ ಹಿಂದೆ ಹುಟ್ಟುಹಬ್ಬದ ಸಂಭ್ರಮ ಕೇವಲ ಶ್ರೀಮಂತ ಮಕ್ಕಳಿಗೆ ಮಾತ್ರ ದೊರೆಯುತ್ತಿತ್ತು. ಇಂದು ಕಾಲ ಕಳೆದಂತೆ ಸಾಮಾನ್ಯ ವರ್ಗದವರು ಮಕ್ಕಳು ಹುಟ್ಟುಹಬ್ಬ ಆಚರಿಸುತ್ತಿರುವುದು ನಿಜವಾದ ಸಂಭ್ರಮ. ಆದರೆ, ಪ್ರಾಣಿ ಪ್ರಿಯರು ಕೂಡ ತಾವು ಸಾಕಿರುವ ಪ್ರಾಣಿಗಳ ಜನ್ಮದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸುವ ದಿನಗಳು ಬಂದಿವೆ. ಇದಕ್ಕೆ ಪೂರಕವೆಂಬಂತೆ ಬಿಹಾರದ ವ್ಯಕ್ತಿಯೊಬ್ಬರು ತಾನು ಸಾಕಿದ ಕುದುರೆಯ ಹುಟ್ಟುಹಬ್ಬಕ್ಕೆ 50 ಪೌಂಡ್ ಕೇಕ್ ಕತ್ತರಿಸಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಕುದುರೆಯನ್ನು ಸ್ವಂತ ಮನೆಯ ಸದಸ್ಯರಂತೆ ನೋಡಲಾಗುತ್ತೆ!
ಬಿಹಾರದ ಸಹರ್ಸ ಜಿಲ್ಲೆಯ ಪಂಚ್ವತಿ ಚೌಕ್ ನಿವಾಸಿ ರಜನೀಶ್ ಕುಮಾರ್ ಅಲಿಯಾಸ್ ಗೋಲು ಯಾದವ್ ಎಂಬುವರು ತಾನು ಸಾಕಿದ ಕುದುರೆಯ ಎರಡನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೋಮವಾರ ಸಾಯಂಕಾಲದಂದು ಆಚರಿಸಿದ್ದಾರೆ. ಮೊದಲನೇ ಹುಟ್ಟುಹಬ್ಬವನ್ನು ಇದೇ ರೀತಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು. ಇನ್ನು, ಯಾದವ್ ಅವರು ತಾವು ಸಾಕಿರುವ ಕುದುರೆಗೆ ಚೇತಕ್ ಎಂದು ಹೆಸರಿಟ್ಟು ಮಗುವನಿಂತೆ ನೋಡಿಕೊಳ್ಳುತ್ತಿದ್ದಾರೆ. ಚೇತಕ್ನನ್ನು ಯಾದವ್ ಅವರು ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಿದ್ದಾರೆ. ಯಾದವ್ ಅವರು ಕುದುರೆಯನ್ನು ಪ್ರಾಣಿ ಎಂದು ಕರಿಯದೆ ಮನೆ ಮಗನಂತೆ ತಿಳಿದುಕೊಂಡು ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ ಎಂದು ಹೇಳುತ್ತಾರೆ.
Mamta Tudu: ಬಜ್ಜಿ-ಬೋಂಡಾ ಮಾರುತ್ತಿದ್ದಾರೆ ರಾಷ್ಟ್ರವನ್ನು ಪ್ರತಿನಿಧಿಸಿದ್ದ ಕ್ರೀಡಾಪಟು; ಕಾರಣವೇನು ಗೊತ್ತಾ..?
ಹುಟ್ಟುಹಬ್ಬ ಸಂಭ್ರಮದ ವೇಳೆ ಕುದುರೆ ಮುಂದೆ ಕೇಕ್ ಇಡಲಾಗಿತ್ತು. ಕೇಕ್ ಮೇಲೆ ಹ್ಯಾಪಿ ಬರ್ತ್ಡೇ ಚೇತಕ್ ಎಂದು ಹೆಸರು ಬರೆಯಲಾಗಿತ್ತು. ಕುದುರೆ ಮಾಲೀಕ ಯಾದವ್ ಅವರು ಕೇಕ್ ಕತ್ತರಿಸಿ ಪಟಾಕಿ ಸಿಡಿಸಿದ್ದಾರೆ. ಇನ್ನು, ಚೇತನ್ ಜನ್ಮದಿನ ಪ್ರಯುಕ್ತವಾಗಿ ಅನೇಕ ಹಿತೈಷಿಗಳು ಯಾದವ್ ಅವರ ನಿವಾಸಕ್ಕೆ ಆಗಮಿಸಿದ್ದರು.
ಮನುಷ್ಯರಿಗಿಂತ ಪ್ರಾಣಿಗಳೇ ಹೆಚ್ಚು ನಿಷ್ಠಾವಂತರಾಗಿರುತ್ತವೆ!
ಯಾದವ್ ಅವರು ಹೇಳುವ ಪ್ರಕಾರ, ಈವರೆಗೆ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿಲ್ಲವಂತೆ. ಆದರೆ, ಪ್ರತಿವರ್ಷ ಚೇತಕ್ ಬರ್ತ್ಡೇಯನ್ನು ಆಚರಿಸುತ್ತೇವೆ. 6 ತಿಂಗಳ ಕುದುರೆ ಮರಿಯನ್ನು ಮನೆಗೆ ತೆಗೆದುಕೊಂಡು ಬಂದು ಅದಕ್ಕೆ ಹಾಲು ಕುಡಿಸುವ ಮೂಲಕ ಪೋಷಣೆ ಮಾಡಿದ್ದೇನೆ. ನನ್ನ ಮಕ್ಕಳ ಮೇಲಿನ ಪ್ರೀತಿಗಿಂತ ಈ ಕುದುರೆಗೆ ಯಾದವ್ ಅವರು ಹೆಚ್ಚು ಪ್ರೀತಿಯನ್ನು ನೀಡುತ್ತೇನೆ. ಚೇತಕ್ ಜನ್ಮದಿನ ಪ್ರಯುಕ್ತ ವೆಜ್ ಮತ್ತು ನಾನ್-ವೆಜ್ ಅಡುಗೆಯನ್ನು ಮಾಡಿಸಲಾಗಿದೆ. ಇನ್ನು, ಕೆಲವು ಕಡೆಗೆ ನಡೆದ ಪ್ರಾಣಿಗಳ ಮೇಲಿನ ದೌರ್ಜನ್ಯ ಘಟನೆಗಳಿಗೆ ಯಾದವ್ ಅವರು ಅಸಮಾಧಾನ ವ್ಯಕ್ತಪಡಿಸಿ, ಇಂದಿನ ದಿನಗಳಲ್ಲಿ ಮನಷ್ಯರಿಗಿಂತ ಪ್ರಾಣಿಗಳು ಹೆಚ್ಚು ನಿಷ್ಠಾವಂತರಾಗಿ ಇರುತ್ತವೆ. ಪ್ರಾಣಿಗಳನ್ನು ಕೇವಲ ಪ್ರಾಣಿ ಎಂದು ನೋಡದೇ ಅವುಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳಬೇಕು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ