One classroom with 3 teachers: ಒಂದೇ ತರಗತಿಯಲ್ಲಿ ಮೂವರು ಶಿಕ್ಷಕರಿಂದ ಪಾಠ, ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಒಂದೇ ತರಗತಿಯಲ್ಲಿ, ಒಂದೇ ಕಪ್ಪು ಹಲಗೆ ಮೇಲೆ ಇಬ್ಬರು ಶಿಕ್ಷಕರು ಮಕ್ಕಳಿಗೆ ಪಾಠ ಹೇಳುವುದದನ್ನು ನೋಡಬಹುದಾಗಿದೆ. ಇಷ್ಟು ಸಾಲದು ಎಂಬಂತೆ 3ನೇ ಶಿಕ್ಷಕಿ ಮಕ್ಕಳನ್ನು ನಿಯಂತ್ರಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.

ಒಂದೇ ತರಗತಿಯಲ್ಲಿ ಮೂವರು ಶಿಕ್ಷಕರಿಂದ ಪಾಠ

ಒಂದೇ ತರಗತಿಯಲ್ಲಿ ಮೂವರು ಶಿಕ್ಷಕರಿಂದ ಪಾಠ

  • Share this:
ಪಾಟ್ನಾ: ಸರ್ಕಾರಿ ಶಾಲೆಗಳಲ್ಲಿನ (Govt Schools) ಶಿಕ್ಷಣದ ಗುಣಮಟ್ಟದ ಬಗ್ಗೆ ದೂರುವವರೇ ಹೆಚ್ಚು. ಇದಕ್ಕೆ ಪುಷ್ಠಿ ನೀಡುವಂತ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಈಗಲು ಅಂತಹದ್ದೇ ಸರ್ಕಾರಿ ಶಾಲೆಯ ವಿಡಿಯೋವೊಂದು ವೈರಲ್​ (Viral Video) ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಒಂದೇ ತರಗತಿಯಲ್ಲಿ, ಒಂದೇ ಕಪ್ಪು ಹಲಗೆ ಮೇಲೆ ಇಬ್ಬರು ಶಿಕ್ಷಕರು ಮಕ್ಕಳಿಗೆ ಪಾಠ ಹೇಳುವುದದನ್ನು ನೋಡಬಹುದಾಗಿದೆ. ಇಷ್ಟು ಸಾಲದು ಎಂಬಂತೆ 3ನೇ ಶಿಕ್ಷಕಿ ಮಕ್ಕಳನ್ನು ನಿಯಂತ್ರಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ(One classroom with 3 teachers). ಶಿಕ್ಷಕಿ ಹಿಂದಿ ಕಲಿಸುತ್ತಿದ್ದರೆ, ಪಕ್ಕದಲ್ಲೇ ಶಿಕ್ಷಕ ಉರ್ದು ಪಾಠವನ್ನು ಮಾಡುತ್ತಿದ್ದಾರೆ. ಮಕ್ಕಳು ಯಾರನ್ನು ಕೇಳಬೇಕು, ಯಾರನ್ನು ನೋಡಬೇಕು, ಯಾರನ್ನು ಅನುಸರಿಸಬೇಕು ಎಂಬ ಗೊಂದಲದಲ್ಲಿ ಚೀರುವುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದು ಬಿಹಾರದ ಸರ್ಕಾರಿ ಶಾಲೆಯೊಂದರ ವಿಡಿಯೋ ಎಂದು ಹೇಳಲಾಗ್ತಿದೆ.





ಆದರ್ಶ ಮಾಧ್ಯಮಿಕ ಶಾಲೆಯ ಶಿಕ್ಷಕಿ ಕುಮಾರಿ ಪ್ರಿಯಾಂಕಾ ಅವರ ಪ್ರಕಾರ, ಶಾಲಾ ಶಿಕ್ಷಣ ಇಲಾಖೆಯು ಉರ್ದು ಪ್ರಾಥಮಿಕ ಶಾಲೆಯನ್ನು ತಮ್ಮ ಸಂಸ್ಥೆಗೆ ಸ್ಥಳಾಂತರಿಸಿದೆ. "ನಮ್ಮ ಶಾಲೆಯಲ್ಲಿ ಸಾಕಷ್ಟು ತರಗತಿ ಕೊಠಡಿಗಳಿಲ್ಲ, ಅದಕ್ಕಾಗಿಯೇ ನಾವು ಒಂದೇ ಕೋಣೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತೇವೆ" ಎಂದು ಆದರ್ಶ ಮಿಡಲ್ ಸ್ಕೂಲ್‌ನ ಶಿಕ್ಷಕ ಹೇಳಿದ್ದಾರೆ.

ಶಾಲೆಯ ಅವ್ಯವಸ್ಥೆ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ ಗುಪ್ತಾ ಅವರನ್ನು ಪ್ರಶ್ನಿಸಿದಾಗ, ‘ಆದರ್ಶ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಎಂದು ಉರ್ದು ಪ್ರಾಥಮಿಕ ಶಾಲೆಗೆ ಒಂದು ಕೊಠಡಿ ನೀಡಿರುವುದು ಒಳ್ಳೆಯದಲ್ಲ. ವಿವಿಧ ವರ್ಗಗಳ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಒಂದೇ ಕಪ್ಪು ಹಲಗೆಯಲ್ಲಿ ಕಲಿಸಲಾಗುತ್ತಿದೆ ಎಂದಿದ್ದಾರೆ.

ಮತ್ತೊಂದು ವೈರಲ್​ ವಿಡಿಯೋ

ವರದಕ್ಷಿಣೆ (Dowry) ವಿಚಾರಕ್ಕೋ ಅಥವಾ ವಧುವಿನಲ್ಲಿ (Bride) ಏನಾದರೂ ಕೊರತೆಯಿದೆ ಎಂದೋ ಮದುವೆ ಮಂಟಪದ ವರಗೆ (Groom) ಬಂದ ಮದುವೆಗಳು ನಿಂತು ಹೋಗುವ ಕಾಲವೊಂದಿತ್ತು. ಆಗೆಲ್ಲಾ ವರ ಮಹಾಶಯ ಮುದುಕನಿರಲಿ, ಪೆದ್ದನಿರಲಿ ಮದುವೆಗೆ (Marriage) ಯೋಗ್ಯ ಅನಿಸಿಕೊಳ್ಳುತ್ತಿದ್ದ. ಆದರೆ, ಈಗ ಕಾಲ ಬದಲಾಗಿದೆ. ಹೆಣ್ಣು ಕೂಡ ತನ್ನ ಕಲ್ಪನೆಯ ವರನೇ ಬೇಕೆಂದು ಹಠ ಹಿಡಿಯತೊಡಗಿದ್ದಾಳೆ. ವರ ಕುಡುಕನೆಂದು (Drunkard), ವರನ ಸ್ನೇಹಿತರ (Friends) ಬಳಗ ಸರಿ ಇಲ್ಲ, ವರನ ಚಾರಿತ್ರ್ಯ ಸರಿ ಇಲ್ಲ ಎಂದು ಮದುವೆ ಮಂಟಪದಲ್ಲೇ ವಧು ಮದುವೆಯಾಗಲು ಒಲ್ಲೆ ಎನ್ನುವಂತಹ ಘಟನೆಗಳಂತೂ ಈಗ ಸಾಮಾನ್ಯ ಎಂಬಂತಾಗಿದೆ. ಅಂತದ್ದೇ ಘಟನೆಯ ವಿಡಿಯೊವೊಂದು (Video) ಈಗ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿದೆ. ವಧುವೊಬ್ಬಳು ವರನಿಗೆ ಹಾರ ಹಾಕಲು ನಿರಾಕರಿಸುತ್ತಿರುವ ವಿಡಿಯೋ ಅದು. ಅಷ್ಟಕ್ಕೂ ಆ ವಿಡಿಯೋ ಅಸಲಿಯೋ ಅಥವಾ ನಕಲಿಯೋ ತಿಳಿದು ಬಂದಿಲ್ಲ.






ಸ್ವಿಮ್ಮಿಂಗ್ ಪೂಲ್​ಗೆ ಬಿದ್ದ ಜೋಡಿ  

ವೀಡಿಯೋದಲ್ಲಿ ವಧು ತನ್ನ ಗಂಡನನ್ನು ಈಜುಕೊಳಕ್ಕೆ ತಳ್ಳಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಘಟನೆಗಳ ಸರದಿಯಲ್ಲಿ, ಅವಳು ವಿಫಲಳಾಗುತ್ತಾಳೆ ಮತ್ತು ಈ ವೀಡಿಯೋ ಒಂದು ಮುದ್ದಾದ ಟ್ವಿಸ್ಟ್ ನೊಂದಿಗೆ ಕೊನೆಗೊಳ್ಳುತ್ತದೆ. ಈ ವೀಡಿಯೋವನ್ನು ಕ್ರಿಮ್ಸನ್ ಸರ್ಕಲ್ ವೆಡ್ಡಿಂಗ್ಸ್ ಎಂಬ ವೆಡ್ಡಿಂಗ್ ಪ್ಲ್ಯಾನಿಂಗ್ ಏಜೆನ್ಸಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.






"ಎರಡು ಸುಂದರ ಆತ್ಮಗಳು, ಪ್ರೀತಿಯಲ್ಲಿ ಬೀಳುವುದು ಎಂದರೆ ಇದೇ ಇರಬೇಕು"ಎಂದು ಅವರು ವೀಡಿಯೋವನ್ನು ಪೋಸ್ಟ್ ಮಾಡುವಾಗ ಜೋರಾಗಿ ನಗುವ ಎಮೋಟಿಕಾನ್ ನೊಂದಿಗೆ ಶೀರ್ಷಿಕೆಯನ್ನು ಬರೆದಿದ್ದಾರೆ.
Published by:Kavya V
First published: