Viral News: ಹಸುಗಳನ್ನು ಶುಲ್ಕವಾಗಿ ಪಡೆಯುತ್ತಿದ್ದ ಬಿಹಾರದ ಕಾಲೇಜು ಮುಚ್ಚಿದ್ದು ಏಕೆ ಗೊತ್ತೇ..?

VITM Bihar: ಪಾಟ್ನಾದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಝೋನಲ್ ಮ್ಯಾನೇಜರ್ ರಾಜೇಂದ್ರ ಸಿಂಗ್ "ನಾವು ಸಾಲದ ವಸೂಲಾತಿಯನ್ನು ಮಾಡಬೇಕಾಗುತ್ತದೆ. ಸಾಲ ವಸೂಲಾತಿಯ ಭಾಗವಾಗಿ ನಾವು ವಿಐಟಿಎಂಗೆ ಬೀಗ ಹಾಕಿದ್ದೇವೆ" ಎಂದು ಹೇಳಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದು ಕಾಲೇಜಿನಲ್ಲಿ(College) ವಿದ್ಯಾಭ್ಯಾಸಕ್ಕಾಗಿ ಸೇರಿಕೊಳ್ಳಬೇಕಾದರೆ ಸಾಮಾನ್ಯವಾಗಿ ನಾವೆಲ್ಲರೂ ಶುಲ್ಕ ನೀಡಬೇಕಾಗುತ್ತದೆ. ಆದರೆ ಬಿಹಾರದ ಬಕ್ಸಾರ್(Bihar Buxar) ಜಿಲ್ಲೆಯಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜು(Engineering) ತನ್ನ ವಿದ್ಯಾರ್ಥಿಗಳಿಗೆ ನೀಡಿದ ವಿಶಿಷ್ಟ ಶುಲ್ಕ ಮಾದರಿಗೆ ಜನಪ್ರಿಯವಾಗಿತ್ತು. ಆದರೆ ಈಗ ತೆಗೆದುಕೊಂಡಿರುವ ಬ್ಯಾಂಕ್ ಸಾಲವನ್ನು(Loan) ಮರು ಪಾವತಿಸಲು ಆಗದ ಕಾರಣ ಕಾಲೇಜಿಗೆ ಬೀಗ ಹಾಕಿದ್ದಾರೆ.ನಾಲ್ಕು ವರ್ಷಗಳ ಎಂಜಿನಿಯರಿಂಗ್ ಕೋರ್ಸ್ ಅನ್ನು ನೀವು ಓದಲು ಕಾಲೇಜಿಗೆ ಶುಲ್ಕದ ರೂಪದಲ್ಲಿ ಐದು ಹಸುಗಳನ್ನು ನೀಡಿದರೆ ಸಾಕಾಗಿತ್ತು.

ಈ ಕಾಲೇಜಿನ ವಿಶೇಷತೆ ಏನು? 

2010ರಲ್ಲಿ ಬಕ್ಸಾರ್ ನ ಅರಿಯಾನ್ ಗ್ರಾಮದಲ್ಲಿ ಸ್ಥಾಪಿಸಲಾದ ವಿದ್ಯಾದಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ವಿಐಟಿಎಂ) ಅನ್ನು ಮಾಜಿ ಡಿಆರ್‌ಡಿಒ ವಿಜ್ಞಾನಿಗಳಾದ ಎಸ್.ಕೆ.ಸಿಂಗ್ ಮತ್ತು ಅರುಣ್ ಕುಮಾರ್ ವರ್ಮಾ ಸೇರಿದಂತೆ ನಿವೃತ್ತ ಮತ್ತು ಸೇವೆ ಸಲ್ಲಿಸುತ್ತಿರುವ ವೃತ್ತಿಪರರ ಗುಂಪೊಂದು ಸೇರಿಕೊಂಡು ಶುರು ಮಾಡಿದ್ದರು.

ಕಾಲೇಜು ಪ್ರಾರಂಭವಾದಾಗ, ಪಾಟ್ನಾದ ಆರ್ಯಭಟ್ಟ ಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಈ ಸಂಸ್ಥೆಯು ತನ್ನ ಶುಲ್ಕವಾಗಿ ಹಸುಗಳನ್ನು ಆಯ್ಕೆಮಾಡಿತ್ತು. ಹೀಗಾಗಿ ಅರಿಯಾನ್ ಮತ್ತು ಹತ್ತಿರದ ಹಳ್ಳಿಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿತ್ತು. ಈ ಕೋರ್ಸ್ ಓದಲು ಪ್ರತಿ ವರ್ಷಕ್ಕೆ 72,000 ರೂಪಾಯಿಯನ್ನು ಯಾರಿಗೆ ನೀಡಲು ಸಾಧ್ಯವಾಗುವುದಿಲ್ಲವೋ ಅವರು ಮೊದಲ ವರ್ಷದಲ್ಲಿ ಎರಡು ಹಸುಗಳು ಮತ್ತು ಕೋರ್ಸ್ ನ ನಂತರದ ಮೂರು ವರ್ಷಗಳಲ್ಲಿ ತಲಾ ಒಂದು ಹಸು ನೀಡಬೇಕಾಗಿ ಹೇಳಿದ್ದರು.

ಇದನ್ನೂ ಓದಿ: Credit Card Bill ಕಟ್ಟಿಲ್ಲ ಎಂದು ಈ ಬ್ಯಾಂಕ್ ಏನು ಮಾಡಿದೆ ಗೊತ್ತೇ?

ಆದರೆ ಈಗ, ಅದರಲ್ಲಿ ಓದುತ್ತಿದ್ದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ, ಅವರಲ್ಲಿ ಹೆಚ್ಚಿನವರು ಹತ್ತಿರದ ಹಳ್ಳಿಗಳಿಂದ ಬಂದವರಾಗಿದ್ದು, ಬ್ಯಾಂಕ್ ನಿಂದ ಪಡೆದ 5.9 ಕೋಟಿ ರೂಪಾಯಿಗಳ ಸಾಲ ಮರು ಪಾವತಿಸಲು ಆಗದೆ ಇರುವುದರಿಂದ ಸಂಸ್ಥೆಗೆ ಬೀಗ ಹಾಕಿದ್ದಾರೆ.

ಕಾಲೇಜು ನಡೆಸುತ್ತಿರುವ ವಿದ್ಯಾದಾನ್ ಸೊಸೈಟಿಯ ಮುಖ್ಯಸ್ಥ ಎಸ್.ಕೆ.ಸಿಂಗ್ ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡುತ್ತಾ "ಮಾಜಿ ಡಿಆರ್‌ಡಿಒ ವಿಜ್ಞಾನಿಗಳು, ವೈದ್ಯರು ಸೇರಿದಂತೆ ನಮ್ಮಲ್ಲಿ ಕೆಲವರು ನನ್ನ ಹಳ್ಳಿಯಲ್ಲಿ ಈ ಸಂಸ್ಥೆಯನ್ನು ತೆರೆಯುವ ಆಲೋಚನೆ ಮಾಡಿದರು. ಬಕ್ಸಾರ್ ಮತ್ತು ವಾರಾಣಸಿ ನಡುವಿನ ಏಕೈಕ ಎಂಜಿನಿಯರಿಂಗ್ ಕಾಲೇಜು ಇದು. ನಮ್ಮ ಹಸುವಿನ ಪರಿಕಲ್ಪನೆ ಬಹಳ ಚೆನ್ನಾಗಿ ಕೆಲಸ ಮಾಡಿತು."

ಕಾಲೇಜು ಮುಚ್ಚಿದ್ದೇಕೆ? 

ಬ್ಯಾಂಕ್ ಆಫ್ ಇಂಡಿಯಾದ ಪಾಟ್ನಾ ಕಾರ್ಪೊರೇಟ್ ಶಾಖೆಯು ಮೂಲಸೌಕರ್ಯ ಅಭಿವೃದ್ಧಿಗಾಗಿ 2010ರಲ್ಲಿ ಕಾಲೇಜಿಗೆ 4.65 ಕೋಟಿ ರೂಪಾಯಿಗಳ ಆರಂಭಿಕ ಸಾಲ ನೀಡಿತ್ತು. ನಂತರ ಅದು 2011ರಲ್ಲಿ 10 ಕೋಟಿ ರೂಪಾಯಿಗಳ ಮತ್ತೊಂದು ಸಾಲವನ್ನು ಮಂಜೂರು ಮಾಡಿತು. ಆದರೆ ಮೊತ್ತವನ್ನು ಎಂದಿಗೂ ನೀಡಲಿಲ್ಲ ಎಂದು ಸಿಂಗ್ ಹೇಳಿದರು. "ನಾವು ಸೂಕ್ತವಾಗಿ ಮೇಲಾಧಾರ ಭದ್ರತೆಯನ್ನು ಠೇವಣಿ ಇಟ್ಟಿದ್ದೇವೆ, ಅದು 15 ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ," ಎಂದು ಸಿಂಗ್ ಹೇಳಿದರು. ಆದರೆ ಈಗ ಕಾಲೇಜನ್ನು ಹಣಕಾಸಿನ ಆರೋಪದಲ್ಲಿ ಬಲಿಪಶು ಮಾಡಲಾಗುತ್ತಿದೆ" ಎಂದು ಅವರು ಹೇಳಿದರು.

"10 ಕೋಟಿ ರೂಪಾಯಿಗಳ ಟಾಪ್ ಅಪ್ ಸಾಲವನ್ನು ನಮಗೆ ಎಂದಿಗೂ ನೀಡಿಲ್ಲ ಮತ್ತು ನಮ್ಮ ಯೋಜನೆ ನಷ್ಟಕ್ಕೆ ಸಿಲುಕಿದೆ. ಆದರೂ, ನಾವು 2012 ರವರೆಗೆ ಆರಂಭಿಕ ಸಾಲದ ಮೊತ್ತ 4.65 ಕೋಟಿ ರೂಪಾಯಿಗಳಿಗೆ 2013 ರಲ್ಲಿ ಕೆಲವು ಹೆಚ್ಚುವರಿ ಮೊತ್ತವನ್ನು ಪಾವತಿಸಿದ್ದೇವೆ. ಕಡಿಮೆ ಹಣಕಾಸು ಒದಗಿಸುವ ಬಗ್ಗೆ ಪರಿಶೀಲಿಸುವ ಬದಲು, ಬ್ಯಾಂಕ್ ಸಾಲ ವಸೂಲಾತಿಯನ್ನು ಪ್ರಾರಂಭಿಸಿದೆ ಮತ್ತು ಕಾಲೇಜಿಗೆ ಮೊಹರು ಹಾಕಿದೆ. ಇದು ವಿಐಟಿಎಂಗೆ ದಾಖಲಾದ ನೂರಾರು ವಿದ್ಯಾರ್ಥಿಗಳ ವೃತ್ತಿಜೀವನದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದೆ" ಎಂದು ಸಿಂಗ್ ಹೇಳಿದರು.

ಪಾಟ್ನಾದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಝೋನಲ್ ಮ್ಯಾನೇಜರ್ ರಾಜೇಂದ್ರ ಸಿಂಗ್ "ನಾವು ಸಾಲದ ವಸೂಲಾತಿಯನ್ನು ಮಾಡಬೇಕಾಗುತ್ತದೆ. ಸಾಲ ವಸೂಲಾತಿಯ ಭಾಗವಾಗಿ ನಾವು ವಿಐಟಿಎಂಗೆ ಬೀಗ ಹಾಕಿದ್ದೇವೆ" ಎಂದು ಹೇಳಿದ್ದಾರೆ.

ಇತ್ತೀಚಿನವರೆಗೂ ಸೋವಾನ್ ಗ್ರಾಮ ಶಾಖೆಯ ವ್ಯವಸ್ಥಾಪಕರಾಗಿದ್ದ ರವೀಂದ್ರ ಪ್ರಸಾದ್ ಅವರು "ಯೋಜನೆಯಿಂದ ನಿರೀಕ್ಷಿತ ರೀತಿಯಲ್ಲಿ ಹಣ ಬರುತ್ತಿಲ್ಲ ಎಂದು ನಾವು ನೋಡಿದಾಗ, ಹೆಚ್ಚುವರಿ ಸಾಲವನ್ನು ವಿತರಿಸಿಲ್ಲ. ನಾವು ವಿತರಿಸಲು ಒಪ್ಪಿದ ಸಾಲದ ಮೊತ್ತದಿಂದ ಅವರು ತೃಪ್ತರಾಗದಿದ್ದರೆ ಮತ್ತೊಂದು ಬ್ಯಾಂಕ್ ಅನ್ನು ಸಂಪರ್ಕಿಸಬಹುದಿತ್ತು" ಎಂದು ಹೇಳಿದರು.

ಇದನ್ನೂ ಓದಿ: ಒಸ್ಮಾನ್ ಕವಾಲಾ ಬಂಧನ ವಿಲಕ್ಷಣ ಕೃತ್ಯವೆಂದ ಪತ್ನಿ

ಇಲ್ಲಿಯವರೆಗೆ, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಐಟಿಎಂನಿಂದ ಪದವಿ ಪಡೆದಿದ್ದಾರೆ. ಅವರಲ್ಲಿ ಸುಮಾರು 20 ವಿದ್ಯಾರ್ಥಿಗಳ ಪೋಷಕರು ಹಸುಗಳನ್ನು ಶುಲ್ಕವಾಗಿ ಪಾವತಿಸಿದ್ದಾರೆ. ಈ ಕಾಲೇಜಿನಲ್ಲಿ ಓದಿದ ಅನೇಕ ಮಾಜಿ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
First published: