ಬಿಹಾರದಲ್ಲಿ (Bihar) ನಡೆದ ಫನ್ನಿ ಘಟನೆಯೊಂದರ (Incident) ವಿಡಿಯೋವೊಂದು (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ (Viral) ಆಗುತ್ತಿದೆ. ಸಾಮಾನ್ಯವಾಗಿ ಹಲವರು ಮದುವೆ (Marriage) ಮಂಟಪ ನೋಡಿದ್ರೆ ಸಾಕು ಅಲ್ಲಿನ ಭೋಜನ ನೆನೆದು ಪುಳಕಗೊಳ್ಳುತ್ತಾರೆ. ಅಷ್ಟೇ ಅಲ್ಲದೇ, ಕೆಲವರಂತೂ ಸುಳ್ಳು ಹೇಳಿ ಮದುವೆಗೆ ಹೋಗಿ ಊಟ ಮಾಡಿ ಬರುತ್ತಾರೆ. ವರನ ಕಡೆಯವರು, ವಧುವಿನ ಕಡೆಯವರು ಅಂತಾ ಹೇಳಿಕೊಂಡು ಅಪರಿಚಿತರ ಮದುವೆಯಲ್ಲಿ ಭೋಜನ ಸವಿದು ಬರುತ್ತಾರೆ. ಇಲ್ಲಿಯೂ ಕೂಡ ವಿದ್ಯಾರ್ಥಿಯೊಬ್ಬ ಮದುವೆಗೆ ಆಹ್ವಾನ ನೀಡದೆಯೇ ಮದುವೆ ಮನೆಗೆ ನುಗ್ಗಿ ಊಟ ಮಾಡಿದ್ದಾನೆ. ಅಷ್ಟೇ ಅಲ್ಲದೇ ಊಟ ಮಾಡಬಹುದಾ ಅಂತಾ ವರನಿಗೆ ಕೇಳಿ ಅನುಮತಿ ಪಡೆದಿದ್ದಾನೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಅಪರಿಚಿತರ ಮದುವೆಗೆ ಹೋಗಿ ಸಿಕ್ಕಿ ಬಿದ್ದ ವಿದ್ಯಾರ್ಥಿ
ಮದುವೆಯ ಸೀಸನ್ ಸಮೀಪಿಸುತ್ತಿದ್ದಂತೆ ನಾವೆಲ್ಲರೂ ಮದುವೆಯ ಆಮಂತ್ರಣಕ್ಕಾಗಿ ಕಾಯುತ್ತೇವೆ. ಮದುವೆಯ ಊಟ ನೆನೆದರೆ ಸಾಕು ಬೇಗ ಊಟಕ್ಕೆ ಹೋಗಬೇಕು ಅನ್ನಿಸುತ್ತದೆ. ಕಾತರದಿಂದ ಕಾಯುತ್ತೇವೆ. ಆದರೆ ಕೆಲವರು ಆಹ್ವಾನ ಸಿಗಲಿ, ಸಿಗದೇ ಇರಲಿ ಮದುವೆಗಳಿಗೆ ಹೋಗಿ ಊಟ ಮಾಡಿ ಬರುತ್ತಾರೆ. ಕೆಲವರು ಈ ಕೆಲಸದಲ್ಲಿ ಪರಿಣತಿ ಪಡೆದಿರುತ್ತಾರೆ.
MP : शादी में बिना बुलाए खाना खाने पहुंचा MBA का छात्र, लोगों ने युवक से धुलाए बर्तन
***********************
और बिहार मे :: pic.twitter.com/R25oCuKlTR
— Indian Doctor🇮🇳 (@Indian__doctor) December 1, 2022
ವರನ ಪಕ್ಕದಲ್ಲಿ ಕುಳಿತು ಮಾತನಾಡಿ ಊಟಕ್ಕೆ ಅನುಮತಿ ಪಡೆದ ಯುವಕ
ಅಷ್ಟೇ ಅಲ್ಲದೇ, ವಿಡಿಯೋದಲ್ಲಿ ನೋಡಿದರೆ, ವಿದ್ಯಾರ್ಥಿಯು ವರನ ಪಕ್ಕದಲ್ಲಿ ಕುಳಿತು ಪರಿಚಯದವರಂತೆ ಮಾತನಾಡುತ್ತಿದ್ದಾನೆ. ಹಾಸ್ಟೆಲ್ ನಲ್ಲಿ ವಾಸವಿದ್ದೇನೆ. ಹಾಗಾಗಿ ಇಲ್ಲಿ ಊಟ ಮಾಡಲು ಬಂದಿದ್ದೇನೆ ಎಂದು ವರನ ಬಳಿ ಅನುಮತಿ ಪಡೆದಿದ್ದಾನೆ. ನಾನು ಇಲ್ಲಿ ಊಟ ಮಾಡಿದರೆ ನಿಮಗೆ ತೊಂದರೆ ಇಲ್ಲವೇ? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ವರ ನೀಡಿದ ಉತ್ತರ ಜನಮನ ಗೆದ್ದಿದೆ.
ಹುಡುಗ ಮದುವೆಯಲ್ಲಿ ವರನ ಬಳಿ ವೇದಿಕೆಯ ಮೇಲೆ ಕುಳಿತು ಮಾತನಾಡಿದ್ದಾನೆ. ಮನಸ್ಸಿನಿಂದ ಇಲ್ಲಿಗೆ ಬಂದಿದ್ದೇನೆ. ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದೇನೆ. ಹಸಿವಿನಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಊಟ ಮಾಡಿದರೆ ನಿಮಗೆ ಏನಾದ್ರೂ ತೊಂದರೆಯೇ? ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ವರ ನಕ್ಕು, ತೊಂದರೆ ಏನೂ ಇಲ್ಲ. ನೀವು ಊಟ ಮಾಡಿ. ಜೊತೆಗೆ ನಿಮ್ಮ ಹಾಸ್ಟೆಲ್ ನ ಮಕ್ಕಳಿಗೂ ಊಟ ತೆಗೆದುಕೊಂಡು ಹೋಗಿ ಎಂದಿದ್ದಾರೆ. ವರನ ಉತ್ತರದಿಂದ ನಕ್ಕು ಹುಡುಗ ಶುಭ ಹಾರೈಸಿದ್ದಾನೆ.
ಈ ಇಡೀ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬಿಹಾರದ ಈ ವರನನ್ನು ಜನ ಹೊಗಳುತ್ತಿದ್ದಾರೆ. ಇದು ಮಾನವೀಯತೆ ಎಂದು ಕರೆದಿದ್ದಾರೆ.
ಮಧ್ಯಪ್ರದೇಶದಲ್ಲಿ ಅಪರಿಚಿತರ ಮದುವೆಯಲ್ಲಿ ಊಟ ಮಾಡಿದವನಿಗೆ ಶಿಕ್ಷೆ
MBA स्टूडेंट बिना बुलाए शादी में खाना खाने पहुंच गया. पकड़े जाने के बाद जनातियों ने उससे प्लेट धुलवाईं. इतना ही नहीं उसका वीडियो बनाकर वायरल कर दिया गया. इंटरनेट पर तेजी से वायरल होता यह वीडियो मध्य प्रदेश के भोपाल का बताया जा रहा है. #ATDigital #MadhyaPradesh pic.twitter.com/HZSGcd4LoA
— AajTak (@aajtak) December 1, 2022
ಇದನ್ನೂ ಓದಿ: ಅಬ್ಬಬ್ಬಾ! ಇಂಥಾ ಮಹಿಳೆಯರು ಕೂಡ ಇರ್ತಾರಾ? ಈ ವಿಡಿಯೋ ನೋಡಿದ್ರೆ ನೀವೂ ಬೈಯ್ತೀರಿ!
ಜಬಲ್ಪುರ ಮೂಲದ ಯುವಕ ಮಧ್ಯಪ್ರದೇಶದ (Madhya Pradesh) ಭೋಪಾಲ್ ನಲ್ಲಿ ಎಂಬಿಎ ಓದುತ್ತಿದ್ದಾನೆ. ಈ ವಿಡಿಯೋ ಅನೇಕರಲ್ಲಿ ನಗು ತರಿಸಿದರೆ, ಇನ್ನು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಯುವಕ ಕುಕ್ಕುರಗಾಲಿನಲ್ಲಿ ಕುಳಿತು ಪಾತ್ರೆ ತೊಳೆಯುತ್ತಿರುವುದನ್ನು ನೋಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ