ಆಹಾ! ಅತಿ ದೊಡ್ಡ ಈ ಚಿಕನ್ ರೋಲ್ ರುಚಿ ಬಲ್ಲವರೇ ಬಲ್ಲರು; ಎಲ್ಲಿ ಸಿಗತ್ತೆ ಗೊತ್ತಾ!

ಮಧ್ಯಾಹ್ನ 3 ರಿಂದ 10.30 ಗಂಟೆಯ ವರೆಗೆ ‘ಪಟ್ನಾ ರೋಲ್ ಸೆಂಟರ್’ ತೆರೆದಿರುತ್ತದಂತೆ, ಹೋಗ್ತೀರಾ?

ದೊಡ್ಡ ಚಿಕನ್ ರೋಲ್

ದೊಡ್ಡ ಚಿಕನ್ ರೋಲ್

  • Share this:

ಚಿಕನ್ ರೋಲ್ ಎಂದ ಕೂಡಲೇ ಮಾಂಸಾಹಾರಿಗಳ ಬಾಯಲ್ಲಿ ನೀರೂರುತ್ತದೆ. ಅಂತವರು ದೆಹಲಿಯ ‘ಪಟ್ನಾ ರೋಲ್ ಸೆಂಟರ್’ ಗೆ ಒಮ್ಮೆ ಭೇಟಿ ಕೊಟ್ಟರೆ ಖುಷಿಯಾಗುವುದು ಮಾತ್ರವಲ್ಲ ದಂಗಾಗುತ್ತಾರೆ ಕೂಡ! ಯಾಕೆ ಅಂತೀರಾ? ಅಲ್ಲಿ ಸಿಗುವ ಚಿಕನ್ ರೋಲ್ ಅಂತಿಂತದ್ದಲ್ಲ, 2 ಅಡಿ ಉದ್ದದ ಅತ್ಯಂತ ದೊಡ್ಡ ಮೊಟ್ಟೆ ಚಿಕನ್ ರೋಲ್! ನಂಬೋಕೆ ಅಗುತ್ತಿಲ್ಲವೇ? ಹಾಗಿದ್ದರೆ ನೀವು ತನೀಶ್ ಶರ್ಮಾ ಎಂಬ ಫುಡ್ ಬ್ಲಾಗರ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ‘ಪಟ್ನಾ ರೋಲ್ ಸೆಂಟರ್’ವಿಡಿಯೋವನ್ನು ನೋಡಲೇಬೇಕು. ವಿಡಿಯೋದಲ್ಲಿರುವ ದೃಶ್ಯ ಹೀಗಿದೆ: ಬ್ಲಾಗರ್ ತನಿಶ್ ಶರ್ಮಾ ‘ಪಟ್ನಾ ರೋಲ್ ಸೆಂಟರ್’ ಸ್ಟಾಲ್ ಮುಂದೆ ನಿಂತಿದ್ದಾರೆ. ಅಲ್ಲಿ ಸ್ಟಾಲ್ ಮಾಲೀಕ ಆ ಗಾತ್ರದ ಚಿಕನ್ ರೋಲ್‍ಗಳನ್ನು ಹೇಗೆ ಮಾಡುತ್ತಾರೆ ಎಂಬುದನ್ನು ತನೀಶ್ ಶರ್ಮಾ ತೋರಿಸುತ್ತಾರೆ.


ಅಂಗಡಿಯಾತ ದೊಡ್ಡ ಗಾತ್ರದ ಕಾವಲಿಯೊಂದರಲ್ಲಿ ಅದಾಗಲೇ ದೊಡ್ಡ ರೋಟಿಯೊಂದನ್ನು ಮಾಡುತ್ತಿದ್ದಾರೆ. ಕಾವಲಿಯ ಒಂದು ಬದಿಯಲ್ಲಿ ಮಸಾಲೆಯೂ ಇದೆ. ಅಂಗಡಿಯಾತ ಕಾಯುತ್ತಿರುವ ರೋಟಿಯ ಮೇಲೆ ಒಂದಾದ ಮೇಲೊಂದು ಹಸಿ ಮೊಟ್ಟೆಗಳನ್ನು ಒಡೆದು ಹಾಕುತ್ತಾರೆ. ಬಳಿಕ ಆ ರೋಟಿಯನ್ನು ತಿರುವಿ ಹಾಕುತ್ತಾರೆ. ನಂತರದ ದೃಶ್ಯ ಆ ಬೃಹತ್ ಗಾತ್ರದ ಚಿಕನ್ ರೋಲನ್ನು ತನೀಶ್ ಶರ್ಮಾ ಕೈಯಲ್ಲಿ ಹಿಡಿದು ನಿಂತಿರುವುದು.


''ಹತ್ತು ಮೊಟ್ಟೆಗಳ ಚಿಕನ್ ರೋಲ್! ಯಾವತ್ತಾದರೂ ತಿಂದಿದ್ದೀರಾ?” ಎಂದು ಆ ಚಿಕನ್ ರೋಲನ್ನು ಕೈಯಲ್ಲಿ ಹಿಡಿದುಕೊಂಡು ಪ್ರಶ್ನಿಸುತ್ತಾರೆ ತನೀಶ್ ಶರ್ಮಾ. ಬಳಿಕ ಮತ್ತೆ ಅಂಗಡಿಯಾತ ಆರು ಮಧ್ಯಮ ಗಾತ್ರದ ರೋಟಿಗಳನ್ನು ಒಂದೇ ರೋಟಿಯಾಗಿ ಲಟ್ಟಿಸುವ ದೃಶ್ಯವನ್ನು ತೋರಿಸುತ್ತಾ, ತನೀಶ್ ಶರ್ಮಾ ಆತನನ್ನು ಪ್ರಶ್ನಿಸುತ್ತಾರೆ “ಎಷ್ಟು ಅಡಿಯ ರೋಟಿ ಎಂದು.


ಅದಕ್ಕೆ ಅಂಗಡಿಯಾತ “ಎರಡು ಅಡಿ” ಎನ್ನುತ್ತಾನೆ. “ದೆಹಲಿಯಲ್ಲಿ ಬಹುಶ: ಇಂತಹ ರೋಲ್ ಇರಲಿಕ್ಕಿಲ್ಲ” ಎನ್ನುತ್ತಾ ಶರ್ಮಾ, ಅಂಗಡಿಯಾದ ಲಟ್ಟಿಸಿದ ಆ ದೊಡ್ಡ ರೋಟಿ/ಚಪಾತಿಗಳನ್ನು ಕಾವಲಿಗೆ ಹಾಕುವುದನ್ನು ತೋರಿಸುತ್ತಾರೆ. “ಬೇಯುವುದಕ್ಕೆ ಸಮಯ ಬೇಕು, ಇಷ್ಟು ದೊಡ್ಡ ರೋಟಿ ಮಾಡಿದ ಮೇಲೆ ಸಮಯ ಬೇಕೇ ಬೇಕಲ್ಲವೆ? ಎಲ್ಲರ ಆರ್ಡರ್ ಇದೆ, ನಮ್ಮದೂ ಇದೆ” ಎನ್ನುತ್ತಾರೆ ತನೀಶ್.


ಅಂಗಡಿಯಾತ ಹತ್ತು ಮೊಟ್ಟೆಗಳನ್ನು ಆ ರೋಟಿಯ ಮೇಲೆ ಹಾಕುವುದನ್ನು ತನೀಶ್ ಲೆಕ್ಕ ಮಾಡುತ್ತಾರೆ, ಮೆಣಸಿನ ಪುಡಿಯನ್ನು ಅದಕ್ಕೆ ಹಾಕಿ ಮೊಟ್ಟೆಗಳನ್ನು ರೋಟಿಯ ಮೇಲೆ ಹಾಕುತ್ತಾರೆ ಅಂಗಡಿಯಾತ. ತನೀಶ್ ಮಾತನಾಡುತ್ತಿದ್ದಂತೆ ಅಂಗಡಿಯಾತ ಆ ಘನಗಾತ್ರದ ರೋಟಿಯನ್ನು ತಿರುವಿ ಹಾಕುತ್ತಾರೆ. ಅದರೊಳಗೆ ಚಿಕನ್ ತುಂಡು, ಮಟನ್ ತುಂಡು, ಚಿಕನ್ ಟಿಕ್ಕಾ, ನೂಡಲ್ಸ್, ಮಸಾಲೆಗಳು, ಈರುಳ್ಳಿ, ತಂದೂರಿ ಮಯೋನೀಸ್, ಮಯೋಸೀಸ್ ಎಲ್ಲವನ್ನು ಹಾಕಿ ರೋಲ್ ಮಾಡುತ್ತಾರೆ. ಅದನ್ನು ಸಿಲ್ವರ್ ಫಾಯಿಲ್‍ನಲ್ಲಿ ಸುತ್ತಿ ತಿನ್ನಲು ನೀಡುತ್ತಾರೆ. ತನೀಶ್ ಶರ್ಮಾ ಅದನ್ನು ತಿನ್ನುತ್ತಾ ಮೈಮರೆಯುತ್ತಾರೆ ಮತ್ತು ಮನೆಗೂ ಕೊಂಡೊಯ್ಯುವೆ ಎನ್ನುತ್ತಾರೆ.


ವಿಡಿಯೋ ನೋಡಿದ್ರೆ ಚಿಕನ್ ಪ್ರಿಯರು ‘ಪಟ್ನಾ ರೋಲ್ ಸೆಂಟರ್’ ಹೋಗುವ ಕನಸು ಕಾಣುವುದಂತು ಖಂಡಿತಾ. ಮಧ್ಯಾಹ್ನ 3 ರಿಂದ 10.30 ಗಂಟೆಯ ವರೆಗೆ ‘ಪಟ್ನಾ ರೋಲ್ ಸೆಂಟರ್’ ತೆರೆದಿರುತ್ತದಂತೆ, ಹೋಗ್ತೀರಾ?ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
First published: