ಭೂಮಿಯ ಸಮೀಪ ಹಾದು ಹೋದ 2001 FO32 ಅಪಾಯಕಾರಿ ಕ್ಷುದ್ರಗ್ರಹ : ತಪ್ಪಿದ ಭಾರೀ ಗಂಡಾಂತರ

20 ವರ್ಷಗಳ ಹಿಂದೆಯೇ ಈ 2001 ಎಫ್ ಓ32 ಕ್ಷುದ್ರ ಗ್ರಹವನ್ನು ಅನ್ವೇಷಿಸಲಾಗಿತ್ತು. ಈ ಅಪಾಯಕಾರಿ ಕ್ಷುದ್ರಗ್ರಹವು ಭೂಮಿಗೆ 1400 GMTಯಷ್ಟು ಭೂಮಿಯ ಸಮೀಪ ತಲುಪುವುದರಿಂದ ಎಲ್ಲೆಲ್ಲೂ ಆತಂಕ ಮನೆ ಮಾಡಿತ್ತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
2021 ರ ಬಹು ನಿರೀಕ್ಷಿತ ಅಪಾಯಕಾರಿ ಕ್ಷುದ್ರಗ್ರಹ ಭೂಮಿಯ ಸಮೀಪ ಹಾದು ಹೋಗಿದೆ. ಭೂಮಿಯ ಹತ್ತಿರದಿಂದ ಈ ಕ್ಷುದ್ರಗ್ರಹ ಹಾದು ಹೋಗುವುದರಿಂದ ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಆದರೆ ಇದು ಯಾವುದೇ ರೀತಿಯ ಘರ್ಷಣೆಯನ್ನುಂಟು ಮಾಡದಿರುವುದರಿಂದ ಎಲ್ಲರೂ ಸದ್ಯ ನಿಟ್ಟುಸಿರುಬಿಡುವಂತಾಗಿದೆ. ಆದರೆ ಖಗೋಳ ವಿಜ್ಞಾನಿಗಳಿಗೆ ನಮ್ಮ ಸೌರವ್ಯೂಹದ ಕುರಿತು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಲು ಈ ಕ್ಷುದ್ರಗ್ರಹ ಅವಕಾಶ ಮಾಡಿಕೊಟ್ಟಿದೆ.

ಈ ಕ್ಷುದ್ರಗ್ರಹವು ಭೂಮಿಯಿಂದ 2 ಮಿಲಿಯನ್ ಕಿಲೋ ಮೀಟರ್ ​​(1.25 ಮಿಲಿಯನ್ ಮೈಲಿ) ಅಂತರದಲ್ಲಿ ಹಾದು ಹೋಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಭೂಮಿ ಮತ್ತು ಚಂದ್ರನ ನಡುವಿನ 5 ಪಟ್ಟು ಅಂತರದ ಲೆಕ್ಕದಲ್ಲಿ ಭೂಮಿಯ ಸಮೀಪ ಈ ದೈತ್ಯ ಕ್ಷುದ್ರಗ್ರಹ ಹಾದು ಹೋಗಿದೆ. ಇನ್ನು, ಭೂಮಿಯನ್ನು ನಾಶ ಮಾಡಬಹುದಾದ ಇಂತಹ ಅಪಾಯಕಾರಿ ಕುದ್ರಗ್ರಹಗಳನ್ನು ನಾಸಾ ಟ್ರ್ಯಾಕ್ ಮಾಡುತ್ತದೆ. ಈ ಅಧ್ಯಯನ 66 ದಶಲಕ್ಷ ವರ್ಷಗಳ ಹಿಂದೆ ಶೇಕಡಾ 75 ರಷ್ಟು ಜೀವ ಸಂಕುಲವನ್ನು ನಾಶ ಮಾಡಿದಂತಹ ಕ್ಷುದ್ರಗ್ರಹಗಳ ಬಗ್ಗೆ ಮುನ್ನಚರಿಕೆ ವಹಿಸಲು ನೆರವಾಗುತ್ತದೆ.

20 ವರ್ಷಗಳ ಹಿಂದೆಯೇ ಈ 2001 ಎಫ್ ಓ32 ಕ್ಷುದ್ರ ಗ್ರಹವನ್ನು ಅನ್ವೇಷಿಸಲಾಗಿತ್ತು. ಈ ಅಪಾಯಕಾರಿ ಕ್ಷುದ್ರಗ್ರಹವು ಭೂಮಿಗೆ 1400 GMTಯಷ್ಟು ಭೂಮಿಯ ಸಮೀಪ ತಲುಪುವುದರಿಂದ ಎಲ್ಲೆಲ್ಲೂ ಆತಂಕ ಮನೆ ಮಾಡಿತ್ತು. ಪ್ಯಾರಿಸ್ ಅಬ್ಸರ್ವೇಟರಿ ಹೇಳುವಂತೆ ಈ ದೈತ್ಯ ಕ್ಷುದ್ರಗ್ರಹವು 124,000(77,000ಎಮ್​ಎಫ್ಎಚ್​​​) ಕಿಲೋ ಮೀಟರ್ ವೇಗದಲ್ಲಿ ಪ್ರಯಾಣಿಸುತ್ತಿತ್ತು ಎಂದು ಅಂದಾಜಿಸಲಾಗಿದೆ.

ಬಳ್ಳಾರಿಯಲ್ಲಿ ವಿಜೃಂಭಣೆಯಿಂದ ಜರುಗಿದ ಅಧಿದೇವತೆ ಕನಕ ದುರ್ಗಮ್ಮ ದೇವಿಯ ಸಿಡಿಬಂಡೆ ಜಾತ್ರೆ..!

ಇನ್ನು ಇಟಲಿ ಮೂಲದ ವರ್ಚುವಲ್ ಟೆಲಿಸ್ಕೋಪ್ ಖಗೋಳ ಭೌತಶಾಸ್ತ್ರಜ್ಞ ಜಿಯಾನ್ಲುಕಾ ಮಾಸಿಯವರು ಈ ಕ್ಷುದ್ರಗ್ರಹವನ್ನು ಒಂದು ಬೆಳಕಿನ ಚುಕ್ಕಿಯಂತೆ ಕಂಡಿದ್ದಾಗಿ ವರ್ಣಿಸಿದ್ದಾರೆ. ಅಲ್ಲದೇ ಯೂಟ್ಯೂಬ್ ಪ್ರಸಾರದ ಸಮಯದಲ್ಲಿ ಇದನ್ನು ಜನರ ಬಳಿಗೆ ತಂದಿದ್ದಕ್ಕಾಗಿ ಅವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಖಗೋಳಾಸಕ್ತರಿಗೆ ಈ ಬೆಳವಣಿಗೆ ಎಷ್ಟೋ ಅಧ್ಯಯನಗಳಿಗೆ ತೆರೆದುಕೊಳ್ಳುವಂತೆ ಮಾಡಿದೆ.

ಅಲ್ಲದೇ ವಿಜ್ಞಾನಿಗಳು ಸ್ಪೆಕ್ಟ್ರಮ್ ಅಧ್ಯಯನದ ಮೂಲಕ ಮೇಲ್ಮೈ ನಲ್ಲಿ ಬೆಳಕಿನ ಪ್ರತಿಫಲನದಿಂದಾಗಿ ಕ್ಷುದ್ರಗ್ರಹದ ಖನಿಜಗಳ ಗುರುತುಗಳನ್ನು ಪತ್ತೆ ಹಚ್ಚಬಹುದಾಗಿದೆ. ಅಲ್ಲದೇ ಈ ಕ್ಷುದ್ರಗ್ರಹದ ವಿಸ್ತಾರವಾದ ಕಕ್ಷೆಯೂ ಸ್ಕೇಟ್​ ಬೋರ್ಡರ್​ನಂತೆ ವೇಗವನ್ನು ಹೆಚ್ಚಿಸಿಕೊಂಡು ಅರ್ಧ ಕೆಳಭಾಗಕ್ಕೆ ಚಲಿಸಿ, ನಂತರ ಅಗಾಧವಾದ ಬಾಹ್ಯಕಾಶಕ್ಕೆ ಹಿಂದಕ್ಕೆ ಹಾರುವ ಮೂಲಕ ಸೂರ್ಯನ ಕಡೆಗೆ ತಿರುಗುತ್ತದೆ ಎನ್ನುವ ಕುತೂಹಲಕಾರಿ ಅಂಶವನ್ನು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಅಪಾಯಕಾರಿ ಮುನ್ಸೂಚನೆಗಳು

* ಭೂಮಿಗೆ ಸಮೀಪ ಬರುವ ಕ್ಷುದ್ರ ಗ್ರಹಗಳ ಅಧ್ಯಯನವು ಸೌರಮಂಡಲದ ಇತಿಹಾಸ ಮತ್ತು ಅದರ ಬೆಳವಣಿಗೆ, ಸಾಧ್ಯತೆಗಳ ಬಗ್ಗೆ ವಿಜ್ಞಾನಿಗಳಿಗೆ ಅಧ್ಯಯನಕ್ಕೆ ನೆರವಾಗುತ್ತದೆ.

* ಅಲ್ಲದೇ ಮುಂಬರುವ ದಿನಗಳಲ್ಲಿ ಈ ರೀತಿಯ ದೈತ್ಯ ಬಂಡೆಗಳು ಗ್ರಹಕ್ಕೆ ಬಂದು ಅಪ್ಪಳಿಸಿದರೆ ಗ್ರಹವೇ ನಾಶವಾಗಬಹುದು. ಇದನ್ನು ಮೊದಲೇ ತಿಳಿಯಲು ನೆರವಾಗುತ್ತದೆ.

* ನಾಸಾ ಹೇಳುವಂತೆ ಪ್ರತಿದಿನ 80 ರಿಂದ 100 ಟನ್​ನಷ್ಟು ಧೂಳು ಮತ್ತು ಸಣ್ಣ ಪ್ರಮಾಣದ ಉಲ್ಕೆಗಳು ಭೂಮಿಯ ಮೇಲ್ಮೈ ಮೇಲೆ ಬಿದ್ದರೂ ಯಾವುದೇ ಅಪಾಯವಿಲ್ಲ. ಆದರೆ ದೈತ್ಯ ಬಂಡೆ , ಕ್ಷುದ್ರಗ್ರಹಗಳು ವೇಗವಾಗಿ ಬಂದು ಅಪ್ಪಳಿಸಿದರೆ ವಿನಾಶಕ್ಕೆ ಕಾರಣವಾಗಬಹುದು.

* 2013 ರಲ್ಲಿ ರಷ್ಯಾದ ಚೆಲಾಬಿನಿಸ್ಕ್​ನಲ್ಲಿ 60 ಮೀಟರ್ ಸಮೀಪದಷ್ಟಿದ್ದ ವಸ್ತು ಸ್ಪೋಟಗೊಂಡಿದ್ದು, ಇದು ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಹಿರೋಷಿಮಾದ ಮೇಲೆ ಬಿದ್ದ ಬಾಂಬ್​ ಗಿಂತಲೂ 30 ಪಟ್ಟು ಹೆಚ್ಚಾಗಿತ್ತು. ಇವೆಲ್ಲವೂ ಭೂಮಿಯ ವಿನಾಶಕ್ಕೆ ಕಾರಣವಾಗಬಹುದು.

ಪರಿಣಿತರ ಅಂದಾಜಿನ ಪ್ರಕಾರ ಶತಮಾನಕ್ಕೆ ಒಂದು ಅಥವಾ ಎರಡು ಬಾರಿ ದೈತ್ಯ ವಸ್ತುವಿನ ಹೊಡೆತ ಕಂಡು ಬರುತ್ತದೆ. ಅಲ್ಲದೇ ಇಂತಹ ಘಟನೆಗಳು ಸಂಭವಿಸುತ್ತವೆ ಎಂದಿದ್ದಾರೆ.
Published by:Latha CG
First published: