Raj Kundra Porn ಸಿನಿಮಾ ಪ್ರಕರಣದ ನಡುವೆ Bigg Boss ಮನೆಗೆ ಹೊರಟಿದ್ದಾರಾ ಶಮಿತಾ ಶೆಟ್ಟಿ?  

Bigg Boss OTT: ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾರನ್ನು ಬಂಧಿಸಿರುವುದರಿಂದ ಶಮಿತಾ ಶೆಟ್ಟಿ ಕುಟುಂಬದಲ್ಲಿ ಸದ್ಯಕ್ಕೆ ತೊಂದರೆ ಉಂಟಾಗಿದೆ. ರಾಜ್ ಕುಂದ್ರಾರನ್ನು ಜುಲೈ 19ರಂದು ಬಂಧಿಸಲಾಗಿತ್ತು. ಶಮಿತಾ ಶೆಟ್ಟಿಯನ್ನು ಬಿಗ್ ಬಾಸ್ ಆಯೋಜಕರು ಈಗಾಗಲೇ ಸಂಪರ್ಕಿಸಿದ್ದಾರೆ. ಶಿಲ್ಪಾ ಶೆ್ಟ್ಟಿ ಕೂಡಾ ಯುಕೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೆದ್ದ ನಂತರ ವಿಶ್ವಪ್ರಸಿದ್ಧಿ ಪಡೆದಿದ್ದರು. ಅಲ್ಲಿನ ನಡೆದ ಒಂದು ವಿವಾದಕ್ಕೂ ಗುರಿಯಾಗಿದ್ದರು.

ಶಮಿತಾ ಶೆಟ್ಟಿ

ಶಮಿತಾ ಶೆಟ್ಟಿ

  • Share this:

Shamitha Shetty: ಆಗಸ್ಟ್ 8ಕ್ಕೆ ಓಟಿಟಿ (OTT) ವೇದಿಕೆಯಲ್ಲಿ ಹಿಂದಿ ಬಿಗ್‍ಬಾಸ್ (Bigg Boss) ಪ್ರಸಾರಕ್ಕೆ ಸಿದ್ಧವಾಗಿದೆ. ಈ ಬಿಗ್‍ಬಾಸ್ ಶೋ ಅನ್ನು ಕರಣ್ ಜೋಹರ್ ನಿರೂಪಣೆ ಮಾಡಲಿದ್ದು, ಯಾವ ಯಾವ ಸೆಲೆಬ್ರಿಟಿಗಳು ಬಿಗ್‍ಬಾಸ್ ಒಟಿಟಿ ಮನೆಗೆ ಪ್ರವೇಶಿಸಲಿದ್ದಾರೆ ಎಂಬುದರ ಬಗ್ಗೆ ಕುತೂಹಲ ಮತ್ತು ಊಹಾಪೋಹಗಳು ಹುಟ್ಟಿಕೊಂಡಿವೆ. ಸದ್ಯಕ್ಕೆ ಬಂದಿರುವ ವರದಿಗಳನ್ನು ನಂಬುವುದಾದರೆ, ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ(Shilpa Shetty) ತಂಗಿ ಶಮಿತಾ ಶೆಟ್ಟಿ(Shamitha Shetty) ಈ ಬಾರಿ ಹಿಂದಿ ಬಿಗ್‍ಬಾಸ್ ಒಟಿಟಿ ಮನೆಯನ್ನು ಪ್ರವೇಶಿಸಲಿದ್ದಾರೆ. ಶಮಿತಾ ಶೆಟ್ಟಿ ಹಲವಾರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರೂ, ಈವರೆಗೆ ಅಕ್ಕನಷ್ಟು ಯಶಸ್ಸು ಪಡೆಯಲು ಸಾಧ್ಯವಾಗಿಲ್ಲ. ವರದಿಗಳ ಪ್ರಕಾರ, ಬಿಗ್‍ಬಾಸ್ ಆಯೋಜಕರು ಶಮಿತಾ ಶೆಟ್ಟಿಯವರನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಆದರೆ ಅದು ಈವರೆಗೆ ದೃಢವಾಗಿಲ್ಲ. ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾರನ್ನು ಬಂಧಿಸಿರುವುದರಿಂದ ಶಮಿತಾ ಶೆಟ್ಟಿ ಕುಟುಂಬದಲ್ಲಿ ಸದ್ಯಕ್ಕೆ ತೊಂದರೆ ಉಂಟಾಗಿದೆ. ರಾಜ್ ಕುಂದ್ರಾರನ್ನು ಜುಲೈ 19ರಂದು ಬಂಧಿಸಲಾಗಿತ್ತು.


ಜುಲೈ ತಿಂಗಳ ಆರಂಭದಲ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು, ‘ಅಂತರಂಗದ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದರು. “ಕೆಲವೊಮ್ಮೆ ನಿಮ್ಮೊಳಗಿನ ಸಾಮರ್ಥ್ಯ ಎಲ್ಲರಿಗೆ ಕಾಣಲು, ಅದೇನು ದೊಡ್ಡ ಉರಿಯಲ್ಲ. ಅದು ತುಂಬಾ ಮೃದುವಾಗಿ ಪಿಸುಗುಟ್ಟುವ ಒಂದು ಸಣ್ಣ ಕಿಡಿ. . . ಅದು ನಿಮ್ಮೊಳಗಿದೆ.. .ಮುಂದುವರಿಯಿರಿ.


ಬೇರೆಯವರು ನಿಮ್ಮ ಸಾಮರ್ಥ್ಯ ಹೇಗೆ ತೆಗೆದುಕೊಳ್ಳುತ್ತಾರೆ ಎಂಬುವುದನ್ನು ನಿಯಂತ್ರಿಸುವುದು ನಿಮ್ಮ ಕೈಯಲ್ಲಿ ಇಲ್ಲ. ನೀವು ಹೇಳುವ ಅಥವಾ ಮಾಡುವ ಯಾವುದಾದರೂ ಸಂಗತಿ, ಅವರು ಆ ಕ್ಷಣದಲ್ಲಿ ಎದುರಿಸುತ್ತಿರುವ ಯಾವುದೇ ವೈಯುಕ್ತಿಕ ವಿಷಯದ ದರ್ಪಣದ ಮೂಲಕ ಫಿಲ್ಟರ್ ಆಗುತ್ತದೆ. ಅದು ನಿಮ್ಮ ಬಗ್ಗೆಯಲ್ಲ. ನಿಮ್ಮ ಕೆಲಸವನ್ನು ಆದಷ್ಟು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿರಿ” ಎಂದು ಬರೆದುಕೊಂಡಿದ್ದರು.


ಇದನ್ನೂ ಓದಿ: PPF: ತಿಂಗಳಿಗೆ ಎಷ್ಟು ಹಣ ಪಿಪಿಎಫ್​ನಲ್ಲಿ ಇಟ್ಟರೆ ನೀವು ಕೋಟ್ಯಾಧಿಪತಿಯಾಗಬಹುದು? ಲೆಕ್ಕ ಮಾಡಿ ನೋಡಿ!

ಈ ಬಾರಿ ಕರಣ್ ಜೋಹರ್, ಆಗಸ್ಟ್ 8ರಿಂದ ಆರು ವಾರಗಳವರೆಗೆ ಒಟಿಟಿಯಲ್ಲಿ ಬಿಗ್‍ಬಾಸ್ ನಿರೂಪಣೆ ಮಾಡಲಿದ್ದಾರೆ. ಆ ಬಳಿಕ ಶೋ ಕಲರ್ಸ್ ಟಿವಿಗೆ ವರ್ಗಾವಣೆ ಆಗುವುದು ಮತ್ತು ಅದನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡಲಿದ್ದಾರೆ.


ಶಮಿತಾ ಶೆಟ್ಟಿ ಮಾತ್ರವಲ್ಲದೆ, ಅನುಷ್ಕಾ ದಂಡೇಕರ್, ಬಹು ಹಮಾರಿ ರಜನಿಕಾಂತ್ ಧಾರಾವಾಹಿ ಖ್ಯಾತಿಯ ರಿಧಿಮಾ ಪಂಡಿತ್, ಕಿರುತೆರೆ ನಟ ಜೀಶನ್ ಖಾನ್, ಕರನ್ ನಾಥ್, ದಿವ್ಯಾ ಅಗರ್ವಾಲ್‌, ಪ್ರತೀಕ್ ಸೆಹಜ್ ಪಾಲ್, ಉರ್ಫೀ ಜಾವೇದ್, ಅಕ್ಷರಾ ಸಿಂಗ್, ನೇಹಾ ಮಲಿಕ್, ಪವಿತ್ರಾ ಲಕ್ಷ್ಮೀ, ನೇಹಾ ಬಸಿನ್ ಮುಂತಾದ ಸೆಲೆಬ್ರಿಟಿಗಳು ಒಟಿಟಿಯಲ್ಲಿ ಪ್ರಸಾರ ಆಗಲಿರುವ ಬಿಗ್‍ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: