Bigg Boss Kannada Season 8: ಈ ವಾರ ಯಾರು ಹೋಗಬಹುದು ಮನೆಯಿಂದ?

ಮನೆಯಲ್ಲಿ ಎರಡು ಟೀಂ ಮಾಡಿ 10 ಟಾಸ್ಕ್​ಗಳನ್ನು ನೀಡಲಾಗಿತ್ತು. 4  ದಿನಗಳ ಕಾಲ ನಡೆದ ಟಾಸ್ಕ್​ನಲ್ಲಿ ಸೋತ ತಂಡದ ಸದಸ್ಯರು ನಾಮಿನೇಟ್​ ಆಗಿದ್ದಾರೆ. ಈ ಬಾರಿ ಸೋತ ತಂಡದಲ್ಲಿ ಪ್ರಶಾಂತ್ ಸಂಬರಗಿ​, ಪ್ರಿಯಾಂಕಾ ತಿಮ್ಮೇಶ್​, ವೈಷ್ಣವಿ ಗೌಡ, ಶುಭಾ ಪೂಂಜಾ ಇದ್ದಾರೆ,

ಪ್ರಶಾಂತ್​ ಸಂಬರಗಿ

ಪ್ರಶಾಂತ್​ ಸಂಬರಗಿ

  • Share this:
    ದಿನದಿಂದ ದಿನಕ್ಕೆ ಬಿಗ್​ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ರೋಚಕ ಘಟ್ಟ ತಲುಪಿದ್ದು, ದಿನದಂದ ದಿನಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಿದೆ. ಅಲ್ಲದೆ ಈ ವಾರ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಹಾಗೂ ಯಾರು ಉಳಿಯಲಿದ್ದಾರೆ ಎಂದು ಬಿಗ್​ಬಾಸ್​ ಹೇಳಲಿದೆ.

    ನಾಲ್ಕು ಸ್ಪರ್ಧಿಗಳು ಈ ವಾರದ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರ ಹೋಗಲಿದ್ದಾರೆ. ಒಬ್ಬರು ಮನೆಯಿಂದ ಹೊರ ಹೋದರೆ ದೊಡ್ಡ ಮನೆಯ ಸ್ಪರ್ಧಿಗಳ ಸಂಖ್ಯೆ ಒಂಭತ್ತಕ್ಕೆ ಇಳಿಕೆ ಆಗಲಿದೆ.

    ಹೇಗಿರಲಿದೆ ಈ ಬಾರಿಯ ಎಲಿಮಿನೇಷನ್​

    ಎರಡನೇ ಇನ್ನಿಂಗ್ಸಿನಲ್ಲಿ ಬೇರೆಯದೇ ತಂತ್ರ ಹೂಡಿದ ಬಿಗ್​ಬಾಸ್​ ಮಾಮೂಲಿಯಂತೆ ಸ್ಪರ್ಧಿಗಳನ್ನು ಎಲಿಮಿನೇಷನ್​ ಮಾಡದೆ ಎರಡು ತಂಡಗಳ ನಡುವೆ ಸ್ಪರ್ಧೆ ಏರ್ಪಡಿಸಿ ಅದರಲ್ಲಿ ಸೋತ ಗುಂಪಿನ ಒಬ್ಬರು ಸದಸ್ಯರನ್ನು ಮನೆಯಿಂದ ಹೊರಗೆ ಕಳುಹಿಸಲಾಗುವುದು ಎಂದು ತಿಳಿಸಿತ್ತು. ಅದರಂತೆ

    ಮನೆಯಲ್ಲಿ ಎರಡು ಟೀಂ ಮಾಡಿ 10 ಟಾಸ್ಕ್​ಗಳನ್ನು ನೀಡಲಾಗಿತ್ತು. 4  ದಿನಗಳ ಕಾಲ ನಡೆದ ಟಾಸ್ಕ್​ನಲ್ಲಿ ಸೋತ ತಂಡದ ಸದಸ್ಯರು ನಾಮಿನೇಟ್​ ಆಗಿದ್ದಾರೆ. ಈ ಬಾರಿ ಸೋತ ತಂಡದಲ್ಲಿ ಪ್ರಶಾಂತ್ ಸಂಬರಗಿ​, ಪ್ರಿಯಾಂಕಾ ತಿಮ್ಮೇಶ್​, ವೈಷ್ಣವಿ ಗೌಡ, ಶುಭಾ ಪೂಂಜಾ ದೊಡ್ಮನೆಯಿಂದ ಹೊರಹೋಗುವ​ ಪಟ್ಟಿಯಲ್ಲಿದ್ದಾರೆ. ಪ್ರಮುಖ ಸ್ಪರ್ಧಿಗಳೇ ಮನೆಯಿಂದ ಹೊರ ಹೋ್ರ ಹೋಗುತ್ತಾರಾ? ಬಿಗ್​ಬಾಸ್​ ಏನು ಮಾಡಲಿದೆ ಕಾದು ನೋಡಬೇಕಿದೆ.

    ಪ್ರತಿಬಾರಿಯೂ ಎಲಿಮಿನೇಷನ್​ ಮಾಡುವಾಗ ಒಬ್ಬೊಬ್ಬರ ಅಭಿಪ್ರಾಯ ಕೇಳಿ ಅವರಿಗೆ ಇಷ್ಟವಿಲ್ಲದವರ ಹೆಸರನ್ನು ಗಣನೆಗೆ ತೆಗೆದುಕೊಂಡು ಅದರ ಮೂಲಕ ಯಾರು ಹೆಚ್ಚು ಡಿಸ್​ಲೈಕ್​ ಪಡೆದುಕೊಳ್ಳುತ್ತಾರೋ ಅವರನ್ನು ಮನೆಯಿಂದ ಹೊರಕಳಿಸಲಾಗುತ್ತಿತ್ತು, ಆದರೆ ಈ ವಾರದ ನಿಯಮ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.



    ಪ್ರಶಾಂತ್​ ಸಂಬರಗಿ ಅವರು ಎರಡನೇ ಸೀಸನ್​ನಲ್ಲಿ ಕೊಂಚ ಬದಲಾಗಿದ್ದು ಇವರು ಇರಲಿ ಎನ್ನುವ ಮಾತು ಪ್ರೇಕ್ಷಕರ ನಡುವೆ ಇದೆ. ಅಲ್ಲದೇ ನಟಿ ವೈಷ್ಣವಿ ಗೌಡ ಅವರ ಆಟದ ವೈಖರಿ ಹಾಗೂ ಅವರ ನಡವಳಿಕೆಗಳಿಂದ ಗಮನ ಸೆಳೆಯುತ್ತಿದ್ದು ಅವರು ಬಿಗ್​ಬಾಸ್​ ಮನೆಯಲ್ಲಿ ಇರಲಿದ್ದಾರಾ? ಶುಭ ಪೂಂಜಾ, ವೈಲ್ಡ್​ ಕಾರ್ಡ್​ ಎಂಟ್ರಿ ಪಡೆದ ಪ್ರಿಯಾಂಕ ತಿಮ್ಮೇಶ್​ ಅವರು ಏನಾಗಲಿದ್ದಾರೆ?

    ಇದನ್ನೂ ಓದಿ: Bigg Boss Kannada Season 8: ಟಾಸ್ಕ್​ನಲ್ಲಿ ಗೆದ್ದು 2ನೇ ಮಹಿಳಾ ಕ್ಯಾಪ್ಟನ್​ ಆದ ದಿವ್ಯಾ ಸುರೇಶ್: ಅಮ್ಮುಗೆ ಸಿಕ್ತು ಭರ್ಜರಿ ಉಡುಗೊರೆ ​..!

    ಅಂತೂ ಇಂತೂ ಈ ವಾರ ರೋಚಕ ಘಟ್ಟ ತಲುಪಿದ್ದು ಯಾರನ್ನು ಬಿಗ್​ಬಾಸ್​ ಹೊರ ಹಾಕುತ್ತದೆ, ಯಾರನ್ನು ಅದೃಷ್ಟ ಕೈ ಹಿಡಿಯಲಿದೆ ಕಾದು ನೋಡೋಣ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: