ಗಂಡ​ನ ಜೊತೆಗಿರುವ ಫೋಟೋ ಹಾಕಿ ಎಂದ ಟ್ರೋಲಿಗರಿಗೆ ನೀರಿಳಿಸಿದ ರಾಹುಲ್ ಮಹಾಜನ್ ಪತ್ನಿ ನತಾಲ್ಯ ಇಲೀನಾ

Natalya Ilina | ಬಹುತೇಕ ಜನರು ತಮ್ಮನ್ನು ರಾಹುಲ್ ಮಹಾಜನ್ ಪತ್ನಿ ಎನ್ನುವ ಕಾರಣಕ್ಕೆ ಫಾಲೋ ಮಾಡುತ್ತಾರೆ. ನಿರಂತರವಾಗಿ ಈ ಟ್ಯಾಗ್​ ಕೇಳಿ ಸಾಕಾಗಿದೆ ಎಂದು ನತಾಲ್ಯ ಇಲೀನಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹಿಂದಿಯ ಬಿಗ್​ಬಾಸ್ 14 ರ​ ಸ್ಪರ್ಧಿಯಾಗಿದ್ದ ರಾಹುಲ್ ಮಹಾಜನ್​ಗೆ ನತಾಲ್ಯ 3ನೇ ಹೆಂಡತಿ.

ರಾಹುಲ್ ಮಹಾಜನ್, ನತಾಲ್ಯ ಇಲೀನಾ

ರಾಹುಲ್ ಮಹಾಜನ್, ನತಾಲ್ಯ ಇಲೀನಾ

  • Share this:
ನೀವು ಮತ್ತು ನಿಮ್ಮ ಪತಿ ರಾಹುಲ್ ಮಹಾಜನ್ ಅವರು ಒಟ್ಟಿಗಿರುವ ಫೋಟೋಗಳನ್ನು ಪೋಸ್ಟ್​ ಮಾಡಿ ಎಂದು ನಿರಂತರವಾಗಿ ಕಾಡಿಸುತ್ತಿದ್ದ ಟ್ರೋಲಿಗರಿಗೆ ನತಾಲ್ಯ ಇಲೀನಾ ನೀರಿಳಿಸಿದ್ದಾರೆ. ಫೋಟೋಗಳನ್ನು ಹಂಚಿಕೊಂಡರೆ ಅಥವಾ ಹಂಚಿಕೊಳ್ಳದಿದ್ದರೆ ನಮ್ಮ ಮದುವೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ ನತಾಲ್ಯ. ಆದರೆ ಹಿಂದಿಯ ಬಿಗ್​ಬಾಸ್ 14 ರ​ ಸ್ಪರ್ಧಿಯಾಗಿದ್ದ ರಾಹುಲ್ ಮಹಾಜನ್​ ಮಾತ್ರ ತಮ್ಮ ಪತ್ನಿ ನತಾಲ್ಯ ಜೊತೆಗಿರುವ ಫೋಟೋಗಳನ್ನು ಖುಷಿಯಾಗಿಯೇ ಹಂಚಿಕೊಳ್ಳುತ್ತಾರೆ. ಈ ಜೋಡಿ 2018 ರಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದರು.

ಇನ್ನು ಈ ಪೋಸ್ಟ್​ ಮತ್ತು ಟ್ರೋಲ್​ ಬಗ್ಗೆ ವಿವರಣೆ ನೀಡಿರುವ ನತಾಲ್ಯ ಇಲೀನಾ 'ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಿದರೂ, ಮಾಡದಿದ್ದರೂ ನಮ್ಮ ಸಂಬಂಧದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ' ಎಂದಿದ್ದಾರೆ. ರಿಯಾಲಿಟಿ ಶೋಗಳ ಸ್ಪರ್ಧಿಯಾಗಿರುವ ನತಾಲ್ಯ ಅವರ ಪತಿ ರಾಹುಲ್​ ಅವರ ವ್ಯಕ್ತಿತ್ವದ ಬಗ್ಗೆ ಜನರಿಗೆ ಚೆನ್ನಾಗಿ ಪರಿಚಯವಿದೆ. ರಾಹುಲ್‌ ಮಹಾಜನ್‌ ಖುಷಿಯಿಂದಲೇ ಫೋಟೋಗಳನ್ನು ಶೇರ್ ಮಾಡುತ್ತಾರೆ. ಆದರೆ ನತಾಲ್ಯ ಈಗಷ್ಟೇ ಆಕ್ಟಿಂಗ್ ಕೆರಿಯರ್ ಆರಂಭಿಸಿರುವುದರಿಂದ ಅವರನ್ನು ಅವರ ಹೆಸರಿನಿಂದಲೇ ಗುರುತಿಸಬೇಕೆನ್ನುವುದು ರಾಹುಲ್‌ ಪತ್ನಿಯ ಆಸೆಯಾಗಿದೆ.

ಇದೇ ಹಿನ್ನೆಲೆಯಲ್ಲಿ ಪೋಸ್ಟ್ ಬರೆದಿರುವ ನತಾಲ್ಯ, ಬಹುತೇಕ ಜನರು ತಮ್ಮನ್ನು ರಾಹುಲ್ ಮಹಾಜನ್ ಪತ್ನಿ ಎನ್ನುವ ಕಾರಣಕ್ಕೆ ಫಾಲೋ ಮಾಡುತ್ತಾರೆ. ನಿರಂತರವಾಗಿ ಈ ಟ್ಯಾಗ್​ ಕೇಳಿ ಸಾಕಾಗಿದೆ ಎಂದಿದ್ದಾರೆ.
'ನನಗೆ ಚೆನ್ನಾಗಿ ಗೊತ್ತು, ನೀವು ಬಹುತೇಕರು ನಾನು ರಾಹುಲ್ ಮಹಾಜನ್ ಪತ್ನಿ ಎನ್ನುವ ಕಾರಣಕ್ಕೆ ನನ್ನನ್ನು ಫಾಲೋ ಮಾಡುತ್ತಿದ್ದೀರಿ. ಪ್ರತಿದಿನ ನೀವು ನಿಮ್ಮ ಪತಿ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡುವುದಿಲ್ಲ ಏಕೆ? ಎಂದು ಪ್ರಶ್ನಿಸುತ್ತೀರಿ. ನಿಜ ಹೇಳಬೇಕೆಂದರೆ ಇಂತಹ ಪ್ರಶ್ನೆಗಳಿಂದ ನಾನು ಬೇಸತ್ತು ಹೋಗಿದ್ದೇನೆ. ನಾನು ಪೋಟೋಗಳನ್ನು ಪೋಸ್ಟ್ ಮಾಡಲಿ, ಬಿಡಲಿ ಅದರಿಂದ ನಮ್ಮ ಸಂಬಂಧದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ' ಎಂದಿದ್ದಾರೆ.

ಇನ್ನು ದಿವಂಗತ ಬಿಜೆಪಿ ನಾಯಕ ಪ್ರಮೋದ್​ ಮಹಾಜನ್ ಅವರ ಮಗ ಮತ್ತು ಟಿವಿ ಸ್ಟಾರ್ ರಾಹುಲ್ ಮಹಾಜನ್ ಅವರು ಈ ಮೊದಲು ಶ್ವೇತಾ ಸಿಂಗ್ ಅವರನ್ನು ಮದುವೆಯಾಗಿದ್ದರು. ಆದರೆ ಕೌಟುಂಬಿಕ ದೌರ್ಜನ್ಯದ ಕಾರಣ ನೀಡಿ ಶ್ವೇತಾ, ರಾಹುಲ್ ಮಹಾಜನ್ ಅವರಿಂದ ದೂರವಾದರು. ಆ ನಂತರ ರಾಹುಲ್ ಮಹಾಜನ್ 'ರಾಹುಲ್ ದುಲ್ಹನಿಯಾ ಲೇ ಜಾಯೆಂಗೆ' ಎನ್ನುವ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರು. ಇದು 'ರಾಖಿ ಕಾ ಸ್ವಯಂವರ್'​​ ರಿಯಾಲಿಟಿ ಶೋ ನ ಸೀಕ್ವೆಲ್ ಆಗಿತ್ತು. ಈ ರಿಯಾಲಿಟಿ ಶೋ ವಿನ್ನರ್ ಮತ್ತು ಮಾಡೆಲ್ ಡಿಂಪಿ ಗಂಗೂಲಿ ಅವರನ್ನು ರಾಹುಲ್ ಎರಡನೇ ವಿವಾಹವಾದರು. ಆದರೆ ಈ ಮದುವೆಯೂ ಬಹು ಬೇಗನೇ ಮುರಿದುಬಿತ್ತು. ಡಿಂಪಿ ಗಂಗೂಲಿ ಸಹ ಕೌಟುಂಬಿಕ ದೌರ್ಜನ್ಯದ ಕಾರಣವನ್ನೇ ನೀಡಿ ರಾಹುಲ್ ಮಹಾಜನ್​ ಅವರಿಂದ ಬೇರ್ಪಟ್ಟರು.

ನತಾಲ್ಯ ಇಲೀನಾ ರಾಹುಲ್ ಮಹಾಜನ್​ ಅವರ ಮೂರನೇ ಪತ್ನಿಯಾಗಿದ್ದಾರೆ. ಇನ್ನು ರಾಹುಲ್ ಮಹಾಜನ್​ ಇತ್ತೀಚೆಗೆ ಹಿಂದಿಯ ಬಿಗ್​ ಬಾಸ್​ ಸೀಸನ್​ 14ರ ಮೊದಲ ರನ್ನರ್​ ಅಪ್​ ಕೂಡ ಆಗಿದ್ದು, ಅವರು ತಮ್ಮ ಕೆರಿಯರ್​ನಲ್ಲಿ ಮುಂದೆ ಸಾಗುತ್ತಿದ್ದಾರೆ.
Published by:Sushma Chakre
First published: