Corona Effect: ಕೊರೊನಾದಿಂದ ಮೃತಪಟ್ಟ ಅಣ್ಣನ ಹೆಂಡತಿಗೆ ಬಾಳುಕೊಟ್ಟ ತಮ್ಮ, ಗ್ರಾಮಸ್ಥರ ಸಮ್ಮುಖದಲ್ಲಿ ಸಪ್ತಪದಿ

ಮಹಾರಾಷ್ಟ್ರದ ಅಂಕೋಲೆ ತಾಲೂಕಿನ ಧೋಕ್ರಿಯಲ್ಲಿ ಹೆಮ್ಮಾರಿ ಕೊರೊನಾಗೆ ಬಲಿಯಾದ ಅಣ್ಣನ ಹೆಂಡತಿಯನ್ನು ತಮ್ಮನೇ ಮದುವೆಯಾಗಿ ಆಕೆಯ ಬಾಳಿಗೆ ಆಸರೆಯಾಗಿದ್ದಾನೆ.

ಮದುವೆಯಾದ ತಮ್ಮ

ಮದುವೆಯಾದ ತಮ್ಮ

  • Share this:
    ಕೊರೊನಾ (corona) ನಂತರದ ದಿನಗಳು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿವೆ. ಮನೆ (home) ಮನೆಗಳಲ್ಲೂ ನೋವಿನ (pain) ಕಥೆ (story) ಹೆಣೆದ ಕೊರೊನಾಗೆ ಹಿಡಿಶಾಪ ಹಾಕದವರಿಲ್ಲ. ಜಗತ್ತಿಗೆ ಅಂಟಿಕೊಂಡ ಕೊರೊನಾ ವೈರಸ್ ವಿವಿಧ ರೂಪ ಪಡೆದು ಮತ್ತಷ್ಟು ಜನರನ್ನು ಕಾಡುತ್ತಲೇ ಇದೆ. ಇದು ಬದುಕಿ ಬಾಳಬೇಕಾದ ಯುವ (young) ಸಮಾಜ ಮತ್ತು ಮಕ್ಕಳ (children's) ಭವಿಷ್ಯಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಸಾವಿನ ಸರಮಾಲೆ ಹೆಣೆದ ಕೊರೊನಾ ಎಷ್ಟೋ ಜೀವಗಳನ್ನ ಈಗಲೂ ಬಲಿ ಪಡೆಯುತ್ತಲೇ ಇದೆ. ಹೀಗೆ ಕೊರೊನಾ ಮಹಾಮಾರಿಗೆ ಬಲಿಯಾದವರ ಕುಟುಂಬದ ಗೋಳು, ಕಣ್ಣೀರು, ಯಾರಿಗೂ ಬೇಡ. ಕೊರೊನಾ ಬಂದಿದೆ ಎಂದ ಕೂಡಲೇ ಆ ವ್ಯಕ್ತಿಯ ಮನೆಗೆ ಹೋಗುವವರು, ಬರುವವರು, ಅವರಿಗೆ ಅಗತ್ಯತೆ ಏನಾದರೂ ಇದೆಯಾ ಎಂದು ಕೇಳುವವರೂ ಸಹ ಇಲ್ಲದಂತಾಗಿದೆ. ಇದರ ನಡುವೆಯೂ ಕೊರೊನಾದಿಂದ ಬಳಲಿ, ಗುಣಮುಖರಾಗಿ ಮನೆ ಸೇರಿದವರೂ ಇದ್ದಾರೆ.

    ಕೊರೊನಾ ತಂದಿಟ್ಟ ನೋವು

    ಆದರೆ ಕೊರೊನಾಗೆ ಬಲಿಯಾದವರ ಕುಟುಂಬಗಳ ಕಣ್ಣೀರು ಒರೆಸುವವರಾದರೂ ಯಾರು..? ಕೊರೊನಾದಿಂದ ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಎಷ್ಟೋ ಜನರು ಅಣ್ಣ-ತಮ್ಮ, ಅಜ್ಜಿ, ಬಾಳಿ ಬದುಕಬೇಕಾದ ಮಕ್ಕಳನ್ನು, ಹರೆಯದ ಮಕ್ಕಳನ್ನು ಕಳೆದುಕೊಂಡು ನೋವು ಅನುಭವಿಸಿದ್ದಾರೆ. ಈ ಮಧ್ಯೆ ಇಲ್ಲೊಂದು ಕುಟುಂಬ ಕೊರೊನಾ ತಂದಿಟ್ಟ ನೋವನ್ನು ಅನುಭವಿಸುತ್ತಲೇ ವಿಧವೆಯಾದ ಅಣ್ಣನ ಹೆಂಡತಿಗೆ ತಮ್ಮ ಬಾಳು ಕೊಟ್ಟಿದ್ದಾನೆ.

    ಅಣ್ಣನ ಹೆಂಡತಿಗೆ ಬಾಳು ಕೊಟ್ಟ ತಮ್ಮ

    ಮಹಾರಾಷ್ಟ್ರದ (Maharashtra) ಅಂಕೋಲೆ ತಾಲೂಕಿನ ಧೋಕ್ರಿಯಲ್ಲಿ ಹೆಮ್ಮಾರಿ ಕೊರೊನಾಗೆ ಬಲಿಯಾದ ಅಣ್ಣನ ಹೆಂಡತಿಯನ್ನು, ತಮ್ಮನೇ ಮದುವೆಯಾಗಿ ಆಕೆಯ ಬಾಳಿಗೆ ಆಸರೆಯಾಗಿದ್ದಾನೆ. 23 ವರ್ಷದ ಪೂನಂ ಗಂಡನ ತಮ್ಮನನ್ನು ಮದುವೆಯಾಗಿದ್ದಾಳೆ.

    ಇದನ್ನೂ ಓದಿ: ಕೋವಿಡ್ ತಗುಲಿದ ವ್ಯಕ್ತಿಗೆ ಕಾಡಲಿದೆ 81 ಬಗೆಯ ಬ್ಯಾಕ್ಟೀರಿಯಾಗಳ ಕಾಟ!

    ಅಂದಹಾಗೇ, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 31 ವರ್ಷದ ನೀಲೇಶ್ ಸೇಠ್ ಕೊರೊನಾ ಮಹಾಮಾರಿಗೆ ಜೀವ ತೆತ್ತಿದ್ದಾನೆ. ಗಂಡನನ್ನು ಕಳೆದುಕೊಂಡು, ಚಿಕ್ಕ ವಯಸ್ಸಿಗೆ ಪೂನಂ ವಿಧವೆಯಾಗಿದ್ದಾಳು. ಜೊತೆಗೆ 19 ತಿಂಗಳ ಮಗು ಕೂಡ ಆಕೆಯ ಮಡಿಲಲ್ಲಿತ್ತು. ಗಂಡನನ್ನು ಕಳೆದುಕೊಂಡು ದಿಕ್ಕಿಲ್ಲದಂತಾಗಿದ್ದ ಪೂನಂ ಬಾಳಿಗೆ ಗಂಡನ ತಮ್ಮ ಸಮಾಧಾನ್ ಬೆಳಕಾಗಿದ್ದಾನೆ.

    ಗ್ರಾಮಸ್ಥರ ಸಮ್ಮುಖದಲ್ಲಿ ಸಪ್ತಪದಿ

    ಗ್ರಾಮಸ್ಥರ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನೀಲೇಶ್ ಸಹೋದರ ಸಮಾಧಾನ್, ಪೂನಂ ಳ ಜತೆ ಸಪ್ತಪದಿ ತುಳಿದಿದ್ದಾನೆ. ಪೂನಂ ಹಾಗೂ ಸಮಾಧಾನ್ ಪರಸ್ಪರ ಒಪ್ಪಿ, ಗ್ರಾಮದ ಹಿರಿಯರ ಆಶೀರ್ವಾದ ಪಡೆದು ಮದುವೆಯಾಗಿದ್ದಾರೆ.

    ಸಮಾಧಾನ್ ನಿರ್ಧಾರಕ್ಕೆ ಮೆಚ್ಚುಗೆ

    ಇನ್ನು ಊರ ಜನರು, ಗುರು- ಹಿರಿಯರ ಸಮ್ಮುಖದಲ್ಲಿ ಪರಸ್ಪರ ಒಪ್ಪಿ ಮದುವೆಯಾದ ನವಜೋಡಿಗೆ ಎಲ್ಲರೂ ಹರಸಿ, ಹಾರೈಸಿದ್ದಾರೆ. ಪೂನಂ ಮತ್ತು ಸಮಾಧಾನ್ ಅವರ ಮದುವೆಯ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಮಾಧಾನ ಅವರು ವಿಧವೆಯಾಗಿದ್ದ ಸಹೋದರನ ಹೆಂಡತಿಯನ್ನು ಮದುವೆಯಾಗಿ ಹೊಸ ಬಾಳು ಕೊಡುವ ನಿರ್ಧಾರ ಮಾಡಿದ್ದು, ಸಾಕಷ್ಟು ಜನರ ಮೆಚ್ಚುಗೆಗೆ ಸಾಕ್ಷಿಯಾಗಿದೆ.

    ಪೂನಂ ಮತ್ತು ಸಮಾಧಾನ್ ಅವರ ಹೊಸ ಬಾಳು ಸಂಕಷ್ಟ, ವಿಘ್ನಗಳಿಲ್ಲದೆ ಸುಖವಾಗಿ ಬಾಳಲೆಂದು ಎಲ್ಲರೂ ಹಾರೈಸಿದ್ದಾರೆ. ಸಮಾಧಾನ್ ಅವರ ಆಲೋಚನೆ ಎಲ್ಲರ ಗಮನ ಸೆಳೆದಿದ್ದು, ಒಂದೊಳ್ಳೆಯ ನಿರ್ಧಾರ ಎಂದು ಭೇಷ್ ಎನ್ನಿಸಿಕೊಂಡಿದ್ದಾರೆ.

    ಇದನ್ನೂ ಓದಿ: Omicron ರೋಗ ಲಕ್ಷಣಗಳಿದ್ದರೂ ಕೋವಿಡ್ Positive ಬಂದಿಲ್ಲವೇ? ಹಾಗಾದ್ರೆ ಕಾರಣವೇನು!

    ಕೊರೊನಾ ಕೊಟ್ಟ ನೋವನ್ನು ಸರಿಪಡಿಸಿಕೊಳ್ಳಲು, ಈ ರೀತಿಯ ಹೋರಾಟ ಅನೇಕ ಮನೆಗಳಲ್ಲಿ ನಡೆದೇ ಇದೆ. ಮಕ್ಕಳ ಭವಿಷ್ಯ, ತಂದೆ-ತಾಯಿಯರನ್ನು ಕಳೆದುಕೊಂಡ ಅನಾಥ ಭಾವ, ಎಷ್ಟೋ ಮಹಿಳೆಯರು ಗಂಡನನ್ನು ಕಳೆದುಕೊಂಡು ಅನಾಥರಾಗಿರುವ ಸನ್ನಿವೇಶಕ್ಕೆ ಕೊರೊನಾ ಕಾರಣವಾಗಿದೆ. ಈಗಲೂ ಸಹ ಕೊರೊನಾ ಆತಂಕ ಕಡಿಮೆಯೇನೂ ಆಗಿಲ್ಲ. ಮನೆಯಿಂದ ಹೊರ ಹೋಗುವ ಮತ್ತು ಊರಿಂದ ಊರಿಗೆ ಪ್ರಯಾಣಿಸಲು ಜನ ಹಿಂದೆಮುಂದೆ ನೋಡುವಂತೆ ಮಾಡಿದೆ.
    Published by:renukadariyannavar
    First published: