• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • (VIDEO): ಇದು ಶತಮಾನದ ಅತ್ಯುತ್ತಮ ಕ್ಯಾಚ್ ಡ್ರಾಪ್: ಕ್ರಿಕೆಟ್ ಇತಿಹಾಸದಲ್ಲಿ ಹೀಗೊಂದು ಫೀಲ್ಡಿಂಗ್

(VIDEO): ಇದು ಶತಮಾನದ ಅತ್ಯುತ್ತಮ ಕ್ಯಾಚ್ ಡ್ರಾಪ್: ಕ್ರಿಕೆಟ್ ಇತಿಹಾಸದಲ್ಲಿ ಹೀಗೊಂದು ಫೀಲ್ಡಿಂಗ್

Pic: Twitter

Pic: Twitter

ಮೆಕಲಮ್ ಈ ಕ್ಯಾಚ್ ಹಿಡಿದಿದ್ದರೆ ಇದು ಶತಮಾನದ ಅತ್ಯುತ್ತಮ ಕ್ಯಾಚ್ ಆಗಿರುತ್ತಿತ್ತು. ಮೆಕಲಮ್ ಅವರ ಈ ಅದ್ಭುತ ಫೀಲ್ಡಿಂಗ್​ ಎದುರಾಳಿಯ ಐದು ರನ್​ಗಳನ್ನು ಉಳಿಸಿದೆ.

  • News18
  • 3-MIN READ
  • Last Updated :
  • Share this:

ಪರ್ಥ್​​: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್​​ಬ್ಯಾಶ್​​ ಟಿ20 ಲೀಗ್​ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಪರ್ಥ್​​ ಸ್ಕಾರ್ಚೆರ್ಸ್​​​ ವಿರುದ್ಧದ ಪಂದ್ಯದಲ್ಲಿ ಬ್ರಿಸ್ಬೇನ್ ತಂಡದ ನ್ಯೂಜಿಲೆಂಡ್ ಆಟಗಾರ ಬ್ರೆಂಡಬ್ ಮೆಕಲಮ್ ಅವರ ಫೀಲ್ಡಿಂಗ್​​ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಂಚಲನ ಮೂಡಿಸಿದೆ.

ಪರ್ಥ್​​ ತಂಡ ಬ್ಯಾಟಿಂಗ್ ಮಾಡುವವೇಳೆ 14ನೇ ಓವರ್​​ನ ಜೋಶ್ ಲಾಲುರ್ ಅವರ ಓವರ್​ನಲ್ಲಿ ಮಿಚೆಲ್ ಮಾರ್ಶ್​ ಅವರು ಚೆಂಡನ್ನು ಸಿಕ್ಸ್​ಗೆ ಅಟ್ಟಲು ಯತ್ನಿಸುತ್ತಾರೆ. ಈ ಸಂದರ್ಭ ಲಾಂಗ್​ ಆಫ್​​​ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಮೆಕಲಮ್ ಜಾಂಟಿ ರೋಡ್ಸ್​​ ಮಾದರಿಯಲ್ಲಿ ಮೇಲಕ್ಕೆ ಹಾರಿ ಒಂದೇ ಕೈಯಲ್ಲಿ ಚೆಂಡನ್ನು ಹಿಡಿಯಲು ಪ್ರಯತ್ನಸುತ್ತಾರೆ. ಮೆಕಲಮ್ ಹಿಡಿದ ಕ್ಯಾಚ್ ಶೇ. 99 ರಷ್ಟು ಯಶಸ್ವಿಯಾಗಿದ್ದು, ಆದರೆ ಕೊನೆ ಕ್ಷಣದಲ್ಲಿ ಚೆಂಡು ಮೆಲಕಮ್ ಕೈಯಿಂದ ಜಾರಿ ಕೆಳ ಬಿದ್ದಿದೆ.

ಇದನ್ನೂ ಓದಿ: ಕರ್ನಾಟಕ-ಬರೋಡ ರಣಜಿ ಪಂದ್ಯ: ಒಂದೇ ದಿನದಲ್ಲಿ ಉರುಳಿತು 22 ವಿಕೆಟ್

 ಮೆಕಲಮ್ ಈ ಕ್ಯಾಚ್ ಹಿಡಿದಿದ್ದರೆ ಇದು ಶತಮಾನದ ಅತ್ಯುತ್ತಮ ಕ್ಯಾಚ್ ಆಗಿರುತ್ತಿತ್ತು. ಮೆಕಲಮ್ ಅವರ ಈ ಅದ್ಭುತ ಫೀಲ್ಡಿಂಗ್​ ಎದುರಾಳಿಯ ಐದು ರನ್​ಗಳನ್ನು ಉಳಿಸಿದೆ.

ಇದನ್ನೂ ಓದಿ: (VIDEO): ಐತಿಹಾಸಿಕ ಗೆಲುವಿನ ಖುಷಿಗೆ 'ನಾಗಿನ್ ಡ್ಯಾನ್ಸ್​' ಕಿಕ್: ಕೊಹ್ಲಿ-ಪಾಂಡ್ಯ ಸಖತ್ ಸ್ಟೆಪ್ಸ್

ಈ ಪಂದ್ಯದಲ್ಲಿ ಮೊದಲಿ ಬ್ಯಾಟ್ ಮಾಡಿದ ಪರ್ಥ್​ ತಂಡ ನಿಗದಿತ 20 ಓವರ್​​ನಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ತಂಡ 18.2 ಓವರ್​ನಲ್ಲೆ 5 ವಿಕೆಟ್ ನಷ್ಟಕ್ಕೆ 139 ರನ್ ಕಲೆಹಾಕುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು