• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Cycling: ಇಲ್ಲಿ ಮಹಿಳೆಯರು ಕಾರ್ಖಾನೆಗೆ ತೆರಳಲೆಂದೇ ಸೈಕಲ್ ಕಲಿತಿದ್ದಾರಂತೆ! ಹೇಗಿದೆ ಇವರ ಸೈಕಲ್ ಪಯಣ

Cycling: ಇಲ್ಲಿ ಮಹಿಳೆಯರು ಕಾರ್ಖಾನೆಗೆ ತೆರಳಲೆಂದೇ ಸೈಕಲ್ ಕಲಿತಿದ್ದಾರಂತೆ! ಹೇಗಿದೆ ಇವರ ಸೈಕಲ್ ಪಯಣ

ಕಾರ್ಖಾನೆಗೆ ತೆರಳಲು ಮಹಿಳೆಯರಿಂದ ಸೈಕಲ್‌ ಕಲಿಕೆ

ಕಾರ್ಖಾನೆಗೆ ತೆರಳಲು ಮಹಿಳೆಯರಿಂದ ಸೈಕಲ್‌ ಕಲಿಕೆ

ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗಾರ್ಮೆಂಟ್‌ ಕಾರ್ಖಾನೆಗಳು ಇದ್ದು, ಪ್ರತಿದಿನ ಸಾವಿರಾರು ಮಹಿಳೆಯರು ಅಲ್ಲಿಗೆ ಕೆಲಸಕ್ಕೆ ಹೋಗುತ್ತಾರೆ. ಕಡಿಮೆ ವೇತನ ಇರುವುದರಿಂದ ಮಹಿಳೆಯರು ಬಸ್‌ ಮತ್ತು ಆಟೋ, ವ್ಯಾನ್‌ಗಳನ್ನೇ ಅವಲಂಭಿಸಿದ್ದರು. ಆದರೆ, ಈಗ ಅವರು ಸೈಕಲ್‌ನೊಂದಿಗೆ ಕೆಲಸಕ್ಕೆ ಬರುತ್ತಿದ್ದು, ಈ ಮಹಿಳೆಯರಿಗೆ ಬೆಂಗಳೂರು ಬೈಸೈಕಲಿಂಗ್‌ ಸ್ಕೂಲ್‌ ವರದಾನವಾಗಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಾಕಷ್ಟು ಸಂಖ್ಯೆಯಲ್ಲಿ ಗಾರ್ಮೆಂಟ್‌ ಕಾರ್ಖಾನೆಗಳು ಇದ್ದು, ಪ್ರತಿದಿನ ಸಾವಿರಾರು ಮಹಿಳೆಯರು (Women) ಅಲ್ಲಿಗೆ ಕೆಲಸಕ್ಕೆ ಹೋಗುತ್ತಾರೆ. ಕಡಿಮೆ ವೇತನ ಇರುವುದರಿಂದ ಮಹಿಳೆಯರು ಬಸ್‌ ಮತ್ತು ಆಟೋ, ವ್ಯಾನ್‌ಗಳನ್ನೇ ಅವಲಂಭಿಸಿದ್ದರು. ಆದರೆ, ಈಗ ಅವರು ಸೈಕಲ್‌ನೊಂದಿಗೆ ಕೆಲಸಕ್ಕೆ ಬರುತ್ತಿದ್ದು, ಈ ಮಹಿಳೆಯರಿಗೆ ಬೆಂಗಳೂರು ಬೈಸೈಕಲಿಂಗ್‌ ಸ್ಕೂಲ್‌ (Bicycle School) ವರದಾನವಾಗಿದೆ. ಹೌದು, ಕೋವಿಡ್ ಸಮಯದಲ್ಲಿ ಸಾರ್ವಜನಿಕ ಸಾರಿಗೆ ಆತಂಕಕಾರಿಯಾಗಿತ್ತು. ಅದಲ್ಲದೇ, ಹೆಚ್ಚಿನ ಮಹಿಳೆಯರು ಮನೆ ಮತ್ತು ಕೆಲಸ ಎರಡನ್ನೂ ನಿರ್ವಹಿಸುವುದರಿಂದ ಸಮಯಕ್ಕೆ ಸರಿಯಾಗಿ ಕಾರ್ಖಾನೆಗಳನ್ನು (Factory) ತಲುಪಲು ಸಾಧ್ಯವಾಗುತ್ತಿದ್ದಿಲ್ಲ. ಇದರಿಂದ ಅವರ ಅರ್ಧ ದಿನದ ವೇತನವನ್ನು ಕಳೆದುಕೊಳ್ಳುತ್ತಿದ್ದರು. ಈ ಹಿನ್ನೆಲೆ ಮಹಿಳೆಯರು ಈಗ ಸೈಕಲ್‌ ಮೊರೆ ಹೋಗಿದ್ದು, ಸೈಕಲ್‌ ಕಲಿಯಲು ಆರಂಭಿಸಿದ್ದಾರೆ. ಇವರಿಗೆ ನಗರದಲ್ಲಿ ಸ್ವಯಂ ಸೇವಕರು (Volunteering) ಸೈಕಲ್‌ ತರಬೇತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ.


ಈ ಬಗ್ಗೆ ಬೆಂಗಳೂರು ಬೈಸೈಕಲಿಂಗ್‌ ಸ್ಕೂಲ್‌ನ ಸ್ವಯಂ ಸೇವಕ ಡಾ ಅಲಿ ಪೂನಾವಾಲಾ ಪ್ರತಿಕ್ರಿಯಿಸಿದ್ದು, ನಾವು ಕಾರ್ಖಾನೆಗಳ ಯುನಿಯನ್‌ಗಳನ್ನು ಸಂಪರ್ಕಿಸಿದಾಗ ಅನೇಕ ಮಹಿಳೆಯರು ಸೈಕಲ್‌ ಕಲಿಯಲು ಮುಂದೆ ಬಂದರು. ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ನಾವು ಲಗ್ಗೆರೆ, ಕಬ್ಬನ್‌ ಪಾರ್ಕ್‌ ಮತ್ತು ಪೀಣ್ಯದಲ್ಲಿ ಸೈಕ್ಲಿಂಗ್‌ ತರಬೇತಿಯನ್ನು ಆಯೋಜಿಸಿದ್ದೇವು. ಒಂದು ಬಾರಿಗೆ 30 ರಿಂದ 40 ಮಹಿಳೆಯರು ಸೈಕಲ್‌ ಕಲಿಯಲು ಬರುತ್ತಿದ್ದರು ಎಂದು ಹೇಳಿದ್ದಾರೆ.


ಇದನ್ನೂ ಓದಿ: Love Story: ಬಾಯ್​ಫ್ರೆಂಡ್​​ಗಾಗಿ ಬಾಂಗ್ಲಾದಿಂದ ಭಾರತಕ್ಕೆ ಈಜಿದ ಯುವತಿ! ಅಬ್ಬಾ ಪ್ರೀತಿಯ ಸೆಳೆತವೋ!


ಇನ್ನು, ಪ್ರತಿ ತರಬೇತಿ ಅವಧಿಯಲ್ಲೂ 10ಕ್ಕೂ ಹೆಚ್ಚು ಮಹಿಳೆಯರು ಈ ಹಿಂದೆ ಸೈಕಲ್‌ ಅನ್ನೇ ತುಳಿದಿದ್ದಿಲ್ಲ. ಅವರಿಗೆ ಬಾಲ್ಯದಲ್ಲಿ ಅವರ ಪೋಷಕರು ಸೈಕಲ್‌ ತುಳಿಯುವುದಕ್ಕೆ ಬಿಟ್ಟಿದ್ದಿಲ್ಲ. ಇತರರು ಸೈಕಲ್‌ ಕಲಿಯಲು ಪ್ರಯತ್ನಿಸಿದ್ದರೂ ಆರಂಭದಲ್ಲಿ ಹೆಚ್ಚು ಬಿದ್ದಿದ್ದರಿಂದ ಪೆಡಲ್‌ ತುಳಿಯುವುದರಿಂದ ಹಿಂದೆ ಸರಿದಿದ್ದರು ಎಂಬುದು ನಮ್ಮ ಗಮನಕ್ಕೆ ಬಂತು ಎಂದು ಪೂನಾವಾಲಾ ಹೇಳುತ್ತಾರೆ.


ಸೈಕಲ್‌ ತುಳಿಯುವುದರಿಂದ ಆರೋಗ್ಯಕ್ಕೂ ಉಪಯುಕ್ತ
ಮಹಿಳೆಯರಿಗೆ ಸೈಕಲ್‌ ಕಲಿಸಲು ಸ್ವಯಂ ಸೇವಕರು ಆರಂಭದಲ್ಲಿ ಮಡಚುವ ಸೈಕಲ್‌ಗಳನ್ನು ಬಳಸಿದ್ದರು. ಏಕೆಂದರೆ ಅದರ ಚಕ್ರ ಚಿಕ್ಕದಾಗಿರುವುದರಿಂದ ಮಹಿಳೆಯರು ಸುಲಭವಾಗಿ ಬ್ಯಾಲೆನ್ಸ್‌ ಮಾಡಿ, ಸೈಕಲ್‌ ಕಲಿಯಬಹುದಾಗಿತ್ತು. ನಾನು ಕೊಡೈಕೆನಾಲ್‌, ಜಯನಗರದಲ್ಲಿಯೂ ನೋಡಿದ್ದೇನೆ. ಮಹಿಳೆಯರು ಸೈಕಲ್‌ ತುಳಿಯಲು ಮುಂದೆ ಬರುತ್ತಿದ್ದಿಲ್ಲ. ಈ ಕಾರಣಕ್ಕೆ ಎಲ್ಲರಿಗೂ ಸೈಕಲ್‌ ಕಲಿಸಬೇಕೆಂದು ತೀರ್ಮಾನಿಸಿದೇವು. ಸೈಕಲ್‌ ತುಳಿಯುವುದರಿಂದ ಆರೋಗ್ಯಕ್ಕೂ ಉಪಯುಕ್ತ ಎನ್ನುತ್ತಾರೆ ಮೂತ್ರಶಾಸ್ತ್ರಜ್ಞರಾಗಿರುವ ಡಾ ಪೂನಾವಾಲಾ.


ಗ್ರೀನ್‌ಫೀಸ್‌ನಿಂದ 250 ಸೈಕಲ್‌ ಉಡುಗೊರೆ
ಸಾಫ್ಟವೇರ್‌ ಇಂಜಿಯರ್‌ ಆಗಿರುವ ಶ್ಯಾಮಲಾ ಕಿತ್ತನೆ, ಕಚೇರಿಗೆ ಸೈಕಲ್‌ನಲ್ಲಿ ಹೋಗುವುದು ಮಹಿಳೆಯರ ಸ್ವಾತಂತ್ರ್ಯ ಮತ್ತು ಸ್ವಾವಲಂಭನೆಯನ್ನು ತೋರಿಸುತ್ತದೆ. ಹಲವು ಕಾರಣಗಳಿಂದ ಬಾಲ್ಯದಲ್ಲಿ ನಮಗೆ ಸೈಕಲ್‌ ಕಲಿಯಲು ಆಗಲಿಲ್ಲ. ಆದರೆ, ಈಗ ಕಲಿಯುತ್ತಿರುವುದು ಖುಷಿ ತಂದಿದೆ ಎಂದು ಹಲವು ಮಹಿಳೆಯರು ಹೇಳಿದ್ದಾರೆ. ನಮ್ಮ ತರಬೇತಿ ಬಳಿಕ ಗ್ರೀನ್‌ಫೀಸ್‌ ಸಂಸ್ಥೆ 250 ಸೈಕಲ್‌ಗಳನ್ನು ಮಹಿಳೆಯರಿಗೆ ಉಡುಗೊರೆಯಾಗಿ ನೀಡಿತು ಎಂದು ಹೇಳಿದ್ದಾರೆ.


ಸೈಕಲ್‌ನಲ್ಲಿ ಕಾರ್ಖಾನೆಗೆ ತೆರಳುತ್ತಿರುವ ಮಹಿಳೆಯರು
ಈಗಾಗಲೇ ಕೆಲವು ಮಹಿಳೆಯರು ಕಾರ್ಖಾನೆಗಳಿಗೆ ಸೈಕಲ್‌ನಲ್ಲಿ ತೆರಳಲು ಪ್ರಾರಂಭಿಸಿದ್ದಾರೆ. ನಾನು ಮಾದಾವರದಲ್ಲಿ ನೆಲೆಸಿದ್ದು, ಕೆಲಸಕ್ಕಾಗಿ ಟಿ ದಾಸರಹಳ್ಳಿಗೆ ತೆರಳಬೇಕಿದೆ. ಈ ಮೊದಲು ಬಸ್‌ನಲ್ಲಿ ಹೋಗುತ್ತಿದ್ದೆ, ಇದಕ್ಕಾಗಿ ಪ್ರತಿದಿನ 40 ರೂ. ಬೇಕಿತ್ತು. ಆದರೆ, ಈಗ ನಾನು ಸೈಕಲ್‌ನಲ್ಲಿ ನೇರವಾಗಿ ಕಾರ್ಖಾನೆಗೆ ತೆರಳುತ್ತೇನೆ ಎನ್ನುತ್ತಾರೆ 30 ವರ್ಷದ ಭೂಮಿಕಾ.


ಇದನ್ನೂ ಓದಿ: Garba Dance: ಟ್ರೆಡ್‌ಮಿಲ್ ಮೇಲೆ ಗರ್ಬಾ ನೃತ್ಯ! ಈ ಮಹಿಳೆಯರ ಧೈರ್ಯ ನೋಡಿ ಭೇಷ್ ಎಂದ ನೆಟ್ಟಿಗರು


ಇನ್ನು, 39 ವರ್ಷದ ಹೊನ್ನಮ್ಮ ಎನ್ನುವವರು ದೊಡ್ಡಬಿದರಕಲ್ಲಿನಲ್ಲಿ ನೆಲೆಸಿದ್ದು, ಅವರು ಕೆಲಸ ಮಾಡುವ ಕಾರ್ಖಾನೆ ಚೊಕ್ಕಸಂದ್ರದಲ್ಲಿದೆ. ಅಲ್ಲಿಗೆ ನೇರ ಬಸ್‌ ಕೂಡ ಇಲ್ಲ. ಅದಕ್ಕಾಗಿ ಅವರು 2 ಕಿಮೀ ನಡೆದು, ಮುಖ್ಯ ರಸ್ತೆಗೆ ಬಂದು ಅಲ್ಲಿಂದ ಶೇರ್‌ ಆಟೋದಲ್ಲಿ ಕಾರ್ಖಾನೆ ಬಳಿ ತೆರಳಿ, ಅಲ್ಲಿಂದ ಮತ್ತೆ ಒಂದು ಕಿಮಿ ನಡೆದು ಕಾರ್ಖಾನೆ ತಲುಪುತ್ತಿದ್ದರು. ಇದಕ್ಕಾಗಿ ಅವರು ಮೂಕ್ಕಾಲು ಗಂಟೆ ತೆಗೆದುಕೊಳ್ಳುತ್ತಿದ್ದರು. ಈಗ 20 ನಿಮಿಷದಲ್ಲಿ ಸೈಕಲ್‌ನಲ್ಲಿ ಕಾರ್ಖಾನೆಗೆ ತೆರಳುತ್ತಿರುವುದು ಅವರ ಖುಷಿಯನ್ನು ಹಿಗ್ಗಿಸಿದೆ.

top videos
    First published: