Viral News: ಮಗಳು ಹುಟ್ಟಿದ ಖುಷಿಗೆ ಈತ 40 ಸಾವಿರ ಪಾನಿಪುರಿ ಹಂಚಿ ಸಂಭ್ರಮಿಸಿದ್ದಾನೆ, ಯಾರು ಈ ಆದರ್ಶ ತಂದೆ?

ಭಾನುವಾರ ತಾವು 35,000 - 40,000 ರೂ ಮೌಲ್ಯದ ಪಾನಿ ಪುರಿಯನ್ನು ಉಚಿತವಾಗಿ ಹಂಚಿದ್ದಾಗಿ ಆ ವ್ಯಾಪಾರಿ ಹೇಳಿದ್ದಾರೆ. ಆದರೆ ಅದೇನು ದೊಡ್ಡ ವಿಷಯವಲ್ಲ, ಹೆಣ್ಣು ಮಗುವನ್ನು ಪಡೆದ ಖುಷಿಯ ಮುಂದೆ ಬೇರೆಲ್ಲವೂ ಗೌಣ ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಧ್ಯ ಪ್ರದೇಶದ ಭೋಪಾಲದಲ್ಲಿ ಬೀದಿ ವ್ಯಾಪಾರಿಯೊಬ್ಬರು, ತಮಗೆ ಹೆಣ್ಣು ಮಗು ಹುಟ್ಟಿದ ಖುಷಿಯಲ್ಲಿ, ಜನರಿಗೆ ಉಚಿತವಾಗಿ ಪಾನಿ ಪುರಿ ಹಂಚಿದ್ದಾರೆ. ಆ ಮೂಲಕ ಹೆಣ್ಣು ಮಗುವಿನ ಜನನವನ್ನು ಸಂಭ್ರಮಿಸಿ, ಗಂಡು ಮತ್ತು ಹೆಣ್ಣಿನ ನಡುವೆ ಭೇದಭಾವ ಮಾಡಬೇಡಿ ಎಂಬ ಒಂದು ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. “ಭೇಟಿ ಹೇ ತೋ ಕಲ್ ಹೇ (ಹೆಣ್ಣು ಮಗು ಇದ್ದರೆ, ಭವಿಷ್ಯ ಸಾಧ್ಯ)” ಎನ್ನುತ್ತಿರುವ ಆ ಬೀದಿ ವ್ಯಾಪಾರಿಯ ಹೆಸರು ಆಂಚಲ್ ಗುಪ್ತಾ. ಮಧ್ಯಪ್ರದೇಶದ ರಾಜಧಾನಿ ಭೋಪಾಲದ ಕೊಲಾರ್ ಪ್ರದೇಶದಲ್ಲಿ ಅವರು ಪಾನಿ ಪುರಿ ಅಂಗಡಿ ಇಟ್ಟುಕೊಂಡಿದ್ದಾರೆ. ತಮಗೆ ಮಗಳು ಹುಟ್ಟಿದ ಸಂಭ್ರಮದಲ್ಲಿ ಆಂಚಲ್ ಕುಮಾರ್, ಭಾನುವಾರ ತನ್ನ ಅಂಗಡಿಗೆ ಬರುತ್ತಿದ್ದ ಪ್ರತಿಯೊಬ್ಬ ಗ್ರಾಹಕರಿಗೂ ಉಚಿತವಾಗಿ ಪಾನಿಪುರಿ ನೀಡುತ್ತಾ “ಭೇಟಿ ಹೇ ತೋ ಕಲ್ ಹೇ (ಹೆಣ್ಣು ಮಗು ಇದ್ದರೆ, ಭವಿಷ್ಯ ಸಾಧ್ಯ)” ಎಂಬ ಸಂದೇಶ ನೀಡಿದರು.

“ಹೆಣ್ಣು ಮಗುವಿನ ಜನನ ನನ್ನ ಪಾಲಿಗೆ ಕನಸೊಂದು ನನಸಾದ ಹಾಗಿದೆ. ನನಗೆ ಮದುವೆ ಆದಾಗಿನಿಂದ ಹೆಣ್ಣು ಮಗು ಹುಟ್ಟಬೇಕು ಎಂಬ ಆಸೆ ಇತ್ತು. ಆದರೆ ಮೊದಲಿಗೆ, ಎರಡು ವರ್ಷದ ಹಿಂದೆ ನನಗೆ ಗಂಡು ಮಗು ಹುಟ್ಟಿತು” ಎಂದು ಹೇಳಿರುವ ಆಂಚಲ್ ಕುಮಾರ್‌ಗೆ 30 ವರ್ಷ ವಯಸ್ಸು.

ಆಗಸ್ಟ್ 17ರಂದು ತಮಗೆ ಹೆಣ್ಣು ಮಗು ಹುಟ್ಟಿತು ಎಂದು ಅವರು ಹೇಳಿದ್ದಾರೆ. ಆಂಚಲ್ ಕುಮಾರ್ ಹೆಚ್ಚು ವಿದ್ಯಾವಂತರೇನಲ್ಲ, 8ನೇ ತರಗತಿ ಫೇಲಾಗಿ ಶಾಲೆ ತೊರೆದವರು. ಆದರೂ ಗಂಡು ಹೆಣ್ಣಿನ ನಡುವೆ ಭೇದ ಮಾಡಬಾರದು ಎಂಬ ಉನ್ನತ ವಿಚಾರಧಾರೆ ಹೊಂದಿದ್ದಾರೆ.

ಇದನ್ನೂ ಓದಿ:Gold Price Today: ಬಂಗಾರ ಕೊಳ್ಳುವವರಿಗೆ ಶುಭಸುದ್ದಿ; ಚಿನ್ನದ ಬೆಲೆ ಕಡಿಮೆಯಾಗಿದೆ ನೋಡಿ..!

ಭಾನುವಾರ ಅವರ ಮಗನ ಎರಡನೇ ವರ್ಷದ ಹುಟ್ಟು ಹಬ್ಬವಿತ್ತು. ಅದೇ ದಿನ ಅವರು ತಮಗೆ ಹೆಣ್ಣು ಮಗು ಹುಟ್ಟಿದ ಸಂಭ್ರಮವನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಕು ಎಂದು ನಿರ್ಧರಿಸಿದರು ಮತ್ತು ಜೊತೆಗೆ ಭೋಪಾಲದ ಜನರಿಗೆ ಉಚಿತವಾಗಿ ಪಾನಿಪುರಿ ನೀಡಿ, “ಭೇಟಿ ಹೇ ತೋ ಕಲ್ ಹೇ (ಹೆಣ್ಣು ಮಗು ಇದ್ದರೆ, ಭವಿಷ್ಯ ಸಾಧ್ಯ)” ಎಂಬ ಸಂದೇಶ ನೀಡಲು ಬಯಸಿದರು.

ಭಾನುವಾರ ತಾವು 35,000 - 40,000 ರೂ ಮೌಲ್ಯದ ಪಾನಿ ಪುರಿಯನ್ನು ಉಚಿತವಾಗಿ ಹಂಚಿದ್ದಾಗಿ ಆ ವ್ಯಾಪಾರಿ ಹೇಳಿದ್ದಾರೆ. ಆದರೆ ಅದೇನು ದೊಡ್ಡ ವಿಷಯವಲ್ಲ, ಹೆಣ್ಣು ಮಗುವನ್ನು ಪಡೆದ ಖುಷಿಯ ಮುಂದೆ ಬೇರೆಲ್ಲವೂ ಗೌಣ ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಕೊಲಾರ್ ಪ್ರದೇಶದಲ್ಲಿರುವ ಗುಪ್ತಾ ಪಾನಿಪುರಿ ಅಂಗಡಿಯ ಮುಂದೆ ಉಚಿತವಾಗಿ ಪಾನಿಪುರಿ ನೀಡುತ್ತಿದ್ದ ಕಾರಣ ಭಾನುವಾರ ಮಧ್ಯಾಹದಿಂದ ಸಂಜೆಯವರೆಗೆ ಜನ ಮುಗಿಬಿದ್ದಿದ್ದರು. ಅವರಲ್ಲಿ ಬಹಳಷ್ಟು ಮಂದಿ, ಹೆಣ್ಣು ಮಗುವಿನ ಜನನವನ್ನು ಸಂಭ್ರಮಿಸಿದ ಮತ್ತು ಅದಕ್ಕಾಗಿ ಎಲ್ಲರಿಗೆ ಉಚಿತವಾಗಿ ಪಾನಿಪುರಿ ಹಂಚಿದ ನಿರ್ಧಾರವನ್ನು ಪ್ರಂಶಸಿದರು.

ಉಚಿತವಾಗಿ ಸಿಕ್ಕ ಪಾನಿಪುರಿಯನ್ನು ಆಸ್ವಾದಿಸುವಾಗ, ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಯಾವುದೇ ಕೋವಿಡ್ -19 ನಿಯಮಗಳನ್ನು ಪಾಲಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:Corona in Kids: ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಕೋವಿಡ್‌ ಪ್ರಕರಣಗಳು; ಆತಂಕ ಬೇಡ, ಎಚ್ಚರಿಕೆ ಇರಲಿ ಎಂದ ತಜ್ಞರು..!

ಗುಪ್ತಾ ಅವರ ಇಬ್ಬರು ಸಹೋದರರು ಎಂಜಿನಿಯರ್‍ಗಳು, ಆದರೆ ಗುಪ್ತಾ ಮಾತ್ರ ಕಳೆದ ಸುಮಾರು 20 ವರ್ಷಗಳಿಂದ ಪಾನಿಪುರಿ ವ್ಯಾಪಾರ ಮಾಡುತ್ತಿದ್ದಾರೆ. ತನ್ನ ಮಡದಿ ಪದವೀಧರೆ ಆಗಿದ್ದು, ಆಕೆಗಾಗಿ ಹೊಲಿಗೆ ಅಂಗಡಿ (ಹೊಲಿಗೆ ಮತ್ತು ಕಸೂತಿ ಕೆಲಸಕ್ಕಾಗಿ) ಹಾಕಿ ಕೊಡುವ ಯೋಜನೆ ಇದೆ. ಆದರೆ ತಮ್ಮ ಮಗಳ ಜನನದಿಂದ ಆ ಯೋಜನೆ ಮುಂದಕ್ಕೆ ಹೋಗಿದೆ ಎಂದು ತಿಳಿಸಿರುವ ಗುಪ್ತಾ “ ಆದರೆ, ಕೆಲವು ಸಮಯದ ನಂತರ ಅವಳಿಗಾಗಿ ಅಂಗಡಿ ತೆರೆದು ಕೊಡುತ್ತೇನೆ, ಅದರಿಂದ ಅವಳು ಸ್ವಾವಲಂಬಿಯಾಗಲಿ(ಆರ್ಥಿಕವಾಗಿ)” ಎಂದು ಹೇಳಿದ್ದಾರೆ.
Published by:Latha CG
First published: