ಯಾವುದೇ ಕಾರ್ಯಕ್ರಮವಾಗಲಿ ಅಲ್ಲಿ ಕಾರ್ಯಕ್ರಮ ನಿರೂಪಕರು (Anchor) ಪ್ರಮುಖ ಪಾತ್ರ ವಹಿಸುತ್ತಾರೆ. ಅತಿಥಿಗಳನ್ನು ಆಹ್ವಾನಿಸಿ, ಸ್ವಾಗತಿಸಿ ಕಾರ್ಯಕ್ರಮವನ್ನು ಸುಗಮ ರೀತಿಯಲ್ಲಿ ನಡೆಸಿಕೊಡುವ ಜವಾಬ್ದಾರಿ ಅವರದ್ದಾಗಿರುತ್ತದೆ. ಆದ್ರೆ ಇಲ್ಲೊಬ್ಬ ನಿರೂಪಕಿ ಮಾಡಿದ ಅವಾಂತರದಿಂದ ಕಾರ್ಯಕ್ರಮಕ್ಕೇ ಕಪ್ಪು ಚುಕ್ಕೆ ಆದಂತಾಗಿದೆ. ಜೊತೆಗೆ ನಿರೂಪಕಿ ಮಾಡಿದ ಕೆಲಸದಿಂದ ಲೈವ್ ಕಾರ್ಯಕ್ರಮ (Programme) ನೀಡುತ್ತಿದ್ದ ಗಾಯಕಿ ತೀವ್ರ ಅವಮಾನ ಅನುಭವಿಸುವಂತಾಗಿದೆ. ಇಂಟರ್‌ನೆಟ್‌ನಲ್ಲಿ ಈ ಘಟನೆಯ ವಿಡಿಯೋ ವೈರಲ್ (Video Viral) ಆಗಿದ್ದು, ನಿರೂಪಕಿಯ ಅಧಿಕಪ್ರಸಂಗಿತನಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಈ ಘಟನೆ ನಡೆದದ್ದು ಬಿಹಾರದ ಥಾವೆ ಮಹೋತ್ಸವ 2023 ರಲ್ಲಿ.
ನಿರೂಪಕಿಯಿಂದ ಗಾಯಕಿಗೆ ಅವಮಾನ !
ಬಿಹಾರದಲ್ಲಿ ನಡೆದ 'ಥಾವೆ ಮಹೋತ್ಸವ 2023' ಕಾರ್ಯಕ್ರಮದಲ್ಲಿ ಭೋಜ್‌ಪುರಿ ಗಾಯಕಿ ಪ್ರಿಯಾಂಕಾ ಸಿಂಗ್ ಹಾಡುತ್ತಿದ್ದರು. ನೇರ ಪ್ರದರ್ಶನದ ವೇಳೆ ನಿರೂಪಕಿ ರೂಪಮ್ ತ್ರಿವಿಕ್ರಮ್ ಗಾಯಕಿಗೆ ಅಡ್ಡಿ ಪಡಿಸಿದರು. ಇಷ್ಟು ಮಾತ್ರವಲ್ಲದೇ ಗಾಯನದ ಮಧ್ಯೆಯೇ ಮೈಕ್ ಕಸಿದುಕೊಳ್ಳಲು ಮುಂದಾದರು.
ಅಲ್ಲದೇ ಗಾಯಕರು ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆಂದು ಹೇಳಿದ ನಿರೂಪಕಿ ರೂಪಮ್, ಪ್ರದರ್ಶನದ ನೀಡುತ್ತಿದ್ದಂತೆಯೇ ಗಾಯಕಿಯ ಮೈಕ್ ಕಿತ್ತುಕೊಳ್ಳಲು ಮುಂದಾದರು. ಆಗ ಗಾಯಕಿ ಪ್ರಿಯಾಂಕಾ, ನಿರೂಪಕಿಯ ವರ್ತನೆಯ ಬಗ್ಗೆ ಪ್ರತಿಭಟಿಸಿದರು.
ಅಲ್ಲದೇ ಮಾತನಾಡಲು ಎರಡು ನಿಮಿಷ ನೀಡುವಂತೆ ಅವರನ್ನು ಕೇಳಿಕೊಂಡರು. ಆದರೆ ನಿರೂಪಕಿ ಅವರ ಮನವಿಯನ್ನು ನಿರ್ಲಕ್ಷಿಸಿದರು. ಜೊತೆಗೆ ವೇದಿಕೆಯಲ್ಲಿ ಗಣ್ಯರೊಬ್ಬರನ್ನು ಕರೆಯಲು ಹೋದರು.
ಇದರಿಂದ ದುಃಖಗೊಂಡ ಗಾಯಕಿ "ಇದು ಸರಿಯಲ್ಲ. ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ" ಎಂದು ಕಣ್ಣೀರು ಹಾಕಿದರು.
ಹೀಗೆ ಅಗೌರವ ತೋರಬಾರದು – ಕಣ್ಣೀರಿಟ್ಟ ಗಾಯಕಿ
ಈ ವೇಳೆ ಅವಮಾನ, ದುಃಖ ಅನುಭವಿಸಿದ ಪ್ರಿಯಾಂಕಾ ಸಿಂಗ್, "ನಾನು ಹಾಡಲು ಸಾಯುತ್ತಿಲ್ಲ, ನೀವು ನನ್ನನ್ನು ಇಲ್ಲಿಗೆ ಕರೆದಿದ್ದೀರಿ. ಆದ್ದರಿಂದ ನಾನು ಬಂದಿದ್ದೇನೆ. ನೀವು ನನಗೆ ಈ ರೀತಿ ಅಗೌರವ ಮಾಡಬಾರದು. ಜಿಲ್ಲಾಡಳಿತದಿಂದ ತಪ್ಪಾಗಿದೆ. ಥಾವೆ ಉತ್ಸವದಲ್ಲಿ ನನಗೆ ತುಂಬಾ ಕೆಟ್ಟ ಅನುಭವವಾಗಿದೆ" ಎಂದು ಹೇಳಿದ್ದಾರೆ.
मैने देखा है कई एंकर को।
इस तरह का अपमान करना योग्य नहीं है। ये कौन है महोदया जिन्होंने सिंगर को अपमानित किया?
स्टेज आर्टिस्ट भी बहुत मेहनत करते हैं। इन महिला जैसे लोगों को काम नहीं देना चाहिए। pic.twitter.com/iNkMwzqO6Q
— Prapti (@i_m_prapti) April 20, 2023
ಇದನ್ನೂ ಓದಿ: ಕಾಫಿ ಜಾಸ್ತಿ ಕುಡಿದರೆ ಕಪ್ಪಾಗ್ತೀವಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ
ಎರಡು ನಿಮಿಷ ಮಾತನಾಡಲು ಅವಕಾಶ ನೀಡಿ ಎಂದು ಕೇಳುತ್ತಿದ್ದರೂ ಗಾಯಕಿಯನ್ನು ನಿರ್ಲಕ್ಷಿಸಿದ ನಿರೂಪಕಿ ಜಿಲ್ಲಾಧಿಕಾರಿಯನ್ನು ವೇದಿಕೆಗೆ ಕರೆದಿದ್ದಾರೆ.
ನಿರೂಪಕಿಗೆ ನೆಟ್ಟಿಗರ ತರಾಟೆ!
ಈ ವಿಡಿಯೋ ವೈರಲ್ ಆಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಕಂಡಿದೆ. ಜೊತೆಗೆ ನೆಟ್ಟಿಗರು ನಿರೂಪಕಿಯ ವರ್ತನೆಗೆ ಛೀಮಾರಿ ಹಾಕುತ್ತಿದ್ದಾರೆ. ಅಲ್ಲದೇ ಗಾಯಕಿಯನ್ನು ಈ ರೀತಿಯಲ್ಲಿ ನಡೆಸಿಕೊಂಡಿದ್ದಕ್ಕೆ ಸಂಘಟನೆ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು, ಟ್ವಿಟ್ಟರ್‌ನಲ್ಲಿ ನಟಿ ಅಕ್ಷರಾ ಸಿಂಗ್ ಕೂಡ ಗಾಯಕಿಗೆ ಬೆಂಬಲ ನೀಡಿದ್ದಾರೆ. "ಈ ಸಂಘಟಕರು ಪ್ರತಿ ಹಂತದಲ್ಲೂ ನಿರ್ವಹಿಸಲು ಒಂದು ರೀತಿಯಿದೆ ಎಂಬುದನ್ನು ಮರೆತಿದ್ದಾರೆ. ಅವರು ತಮ್ಮ ಪ್ರಭಾವ ಮತ್ತು ಶಕ್ತಿಯ ಮೂಲಕ ಕಲಾವಿರದನ್ನು, ಅದರಲ್ಲೂ ಮಹಿಳೆಯನ್ನು ಅವಮಾನ ಮಾಡಿದ್ದಾರೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಚಂದ್ರನ ರಹಸ್ಯ ಫೋಟೋ ತೆಗೆದ ಯುಎಇ ಮಂಗಳಯಾನ, ಬಹಿರಂಗವಾಯ್ತು ವಿಸ್ಮಯಕಾರಿ ವಿಚಾರಗಳು
ಇನ್ನೊಬ್ಬ ಬಳಕೆದಾರರು, "ಇದು ಎಷ್ಟು ಅಸಭ್ಯವಾಗಿದೆ, ನೀವು ಕಲಾವಿದರನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಯಾವುದೇ ಸಮಾರಂಭದಲ್ಲಿ ಅವರನ್ನು ಕರೆಯಬೇಡಿ” ಎಂದು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರ, "ಇದು ಅಸಹ್ಯಕರವಾಗಿದೆ, ಯಾರ ಘನತೆಗೆ ಯಾವುದೇ ರೀತಿಯಲ್ಲಿ ಹಾನಿ ಮಾಡಬಾರದು" ಎಂದು ಬರೆದಿದ್ದಾರೆ. ಇನ್ನೊಬ್ಬರು, "ನಿರೂಪಕರಾದವರು ಇತರರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿಯಬೇಕಾಗಿದೆ" ಎಂದು ಬರೆದಿದ್ದಾರೆ.
ಒಟ್ಟಾರೆ, ಅತಿಥಿಗಳನ್ನು ಕರೆಯಿಸಿಕೊಂಡ ಮೇಲೆ ಅವರನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನೋದನ್ನು ತಿಳಿಯಬೇಕು. ಹೀಗೆ ಕರೆತಂದ ಅತಿಥಿಗಳಿಗೆ ಕಾರ್ಯಕ್ರಮದಲ್ಲಿ ಅವಮಾನ ಮಾಡುವುದು ಸರಿಯಲ್ಲ ಅಂತಿದ್ದಾರೆ ನೆಟ್ಟಿಗರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ