ರಾಬ್ಡೆಂಟ್ಸೆ ಅವಶೇಷಗಳು, ಸಿಕ್ಕಿಂ ಭಾರತದ (Indian) ಮಾಚು ಪಿಚು ಎಂದು ಸಾಮಾನ್ಯವಾಗಿ ಕರೆಯಲ್ಪಡುವ ರಾಬ್ಡೆಂಟ್ಸೆಯ ಅವಶೇಷಗಳು 1670 ರ ಸಮಯದಷ್ಟು ಹಿಂದಿನದ್ದು. ಸಿಕ್ಕಿಂನ ರಾಜಮನೆತನದ ಗತಕಾಲದ ಅದ್ಭುತದ ಕುರುಹುಗಳನ್ನು ಇಲ್ಲಿ ನೋಡಬಹುದು. ರಾಬ್ಡೆಂಟ್ಸೆ ಒಮ್ಮೆ ಸಿಕ್ಕಿಂ ಸಾಮ್ರಾಜ್ಯದ ಎರಡನೇ ರಾಜಧಾನಿಯಾಗಿತ್ತು. ಆಗಿನ ರಾಜ ಫುನ್‌ಸ್ಟಾಗ್ ನಮ್‌ಗ್ಯಾಲ್‌ನ ಮಗ ಟೆನ್ಸುಂಗ್ ನಮ್ಗ್ಯಾಲ್ , ಸಿಕ್ಕಿಂನ ಮೊದಲ ಚೋಗ್ಯಾಲ್ ರಾಜಧಾನಿಯನ್ನು(Capital) ಯುಕ್ಸೋಮ್‌ನಿಂದ ಇಲ್ಲಿಗೆ ಸ್ಥಳಾಂತರಿಸಿದ ಎನ್ನಲಾಗುತ್ತದೆ. ಆದರೆ 18 ನೇ ಶತಮಾನದಲ್ಲಿ, ಆಕ್ರಮಣಕಾರಿ ಗೂರ್ಖಾ ಸೈನ್ಯದಿಂದ ನಗರವು ನಾಶವಾಯಿತು. ವರ್ಷಗಳ ನಂತರ, ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ಈ ಪ್ರದೇಶವನ್ನು ಮರುಸ್ಥಾಪಿಸಿತು. ಅದಕ್ಕೆ ಭೂದೃಶ್ಯದ ಉದ್ಯಾನಗಳು (Park) ಮತ್ತು ಮಾರ್ಗಗಳನ್ನು ಸೇರಿಸಿತು.
ಈ ಅವಶೇಷಗಳು ಪೆಲ್ಲಿಂಗ್ ಪಟ್ಟಣಕ್ಕೆ ಸಮೀಪದಲ್ಲಿದ್ದು ಇಲ್ಲಿ ಬೌದ್ಧ ದೇವಾಲಯಗಳು, ಸಿಂಹಾಸನ ಮತ್ತು ತೆರೆದ ಚತುರ್ಭುಜಗಳಿವೆ. ಇದರಲ್ಲಿ ಅತ್ಯಂತ ಗಮನಾರ್ಹವಾದ ವೈಶಿಷ್ಟ್ಯವೆಂದರೆ 7-ಅಡಿ ಉದ್ದದ ಬಿಳಿ ಅಮೃತಶಿಲೆಯ ಚಪ್ಪಡಿ.
ಇದು ಇಂದಿಗೂ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಮುಖ್ಯ ಆಕರ್ಷಣೆಯಾಗಿ ಉಳಿದಿದೆ. ಚಪ್ಪಡಿಯ ಸ್ಥಳವು ರಿಸುಮ್ ಗೊಂಪಾ ಎಂಬ ಮಠದ ಸ್ಥಳವಾಗಿದೆ ಎಂದು ನಂಬಲಾಗಿದೆ. ಅಂದಹಾಗೆ ಪೆಲ್ಲಿಂಗ್‌ನಿಂದ 30-ನಿಮಿಷದ ಪ್ರಯಾಣ ಹಾಗೂ ಪೆಮಯಾಂಗ್ಟ್ಸೆ ಮಠದಿಂದ ಸ್ವಲ್ಪ ನಡೆದರೆ ಸಾಕು ಈ ಸ್ಥಳಕ್ಕೆ ನೀವು ತಲುಪಬಹುದು.
1.ಕಿಲಾ ಮುಬಾರಕ್, ಪಂಜಾಬ್: ಇದು ಭಾರತದ ಅತ್ಯಂತ ಹಳೆಯ ಕೋಟೆ ಎನ್ನಲಾಗುತ್ತದೆ. ದೆಹಲಿ ಸುಲ್ತಾನರ ಮೊದಲ ಮತ್ತು ಏಕೈಕ ಮಹಿಳಾ ಆಡಳಿತಗಾರರಾದ ರಜಿಯಾ ಸುಲ್ತಾನ್ ಕ್ರಾಂತಿಕಾರಿ ಮಹಿಳೆಯಾಗಿದ್ದಳು.
1236 ರಲ್ಲಿ ಆಕೆ ಸಾಮ್ರಾಜ್ಞಿಯಾದಾಗ, 'ಸುಲ್ತಾನಾ' ಎಂದು ಕರೆಯಿಸಿಕೊಳ್ಳಲು ಆಕೆ ನಿರಾಕರಿಸಿದ್ದಳಂತೆ. ಏಕೆಂದರೆ ಈ ಪದವನ್ನು ಚಕ್ರವರ್ತಿಯ ಪ್ರೇಯಸಿ ಅಥವಾ ಹೆಂಡತಿಯನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಆದ್ದರಿಂದ ತನ್ನನ್ನು ಸುಲ್ತಾನ್ ಎಂದು ಕರೆಯಬೇಕೆಂದು ಒತ್ತಾಯಿಸಿದ್ದಳು. ಅಲ್ಲದೇ ಅವಳ ಹೆಸರಿನಲ್ಲಿ ನಾಣ್ಯಗಳನ್ನು ಮುದ್ರಿಸಲು ಆದೇಶಿಸಿದ್ದಳು.
ಇದನ್ನೂ ಓದಿ: ಒಂದೇ ಹುಡುಗಿಯನ್ನು ಮದುವೆ ಆಗ್ತಾರಂತೆ ಮನೆಯ ಎಲ್ಲಾ ಸಹೋದರರು, ಇದೆಂಥಾ ಆಚರಣೆಯಪ್ಪಾ?
ಆದರೆ ರಜಿಯಾ ಸುಲ್ತಾನ್ ಜೀವನದ ಬಗ್ಗೆ ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಕಡಿಮೆ. ಭಟಿಂಡಾದಲ್ಲಿರುವ ಕಿಲಾ ಮುಬಾರಕ್ ಅವಳ ದಂತಕಥೆಗಳನ್ನು ದೃಢೀಕರಿಸುವ ಏಕೈಕ ಸ್ಮಾರಕವಾಗಿದೆ. ಇದನ್ನು 90-110 CE ನಡುವೆ ಕುಶಾನ ರಾಜವಂಶದ ರಾಜಾ ದಬ್ ನಿರ್ಮಿಸಿದ ಎನ್ನಲಾಗುತ್ತದೆ.
ಇನ್ನೂ ಕೆಲವು ದಾಖಲೆಗಳ ಪ್ರಕಾರ, ಇದು ಭಾರತದಲ್ಲಿ ಉಳಿದಿರುವ ಅತ್ಯಂತ ಹಳೆಯ ಕೋಟೆಯಾಗಿದೆ. ಇಲ್ಲಿ ಗುರು ಗೋಬಿಂದ್ ಸಿಂಗ್‌ಗೆ ಮೀಸಲಾಗಿರುವ ಗುರುದ್ವಾರವೂ ಸಹ ಇದೆ. ಅದು 1835ಕ್ಕೂ ಹಿಂದಿನದು. ಇನ್ನು, ಇದು ಭಟಿಂಡಾ ಜಂಕ್ಷನ್‌ನಿಂದ 5 ನಿಮಿಷಗಳ ಡ್ರೈವ್ ಆಗಿದೆ.
2.ಉನಕೋಟಿ, ತ್ರಿಪುರಾ: ಇದು ನಿಗೂಢ ಮೂಲವನ್ನು ಹೊಂದಿರುವ ರಾಕ್ ಆರ್ಟ್ ಆಗಿದೆ. ಉನಕೋಟಿಯ ಕಲ್ಲಿನ ಕೆತ್ತನೆಗಳು ಅತ್ಯದ್ಭುತವಾಗಿವೆ.
ಪುರಾಣಗಳ ಪ್ರಕಾರ, ಶಿವನು ಒಮ್ಮೆ 99,99,999 ದೇವತೆಗಳೊಂದಿಗೆ ಕಾಶಿಗೆ ತೆರಳುತ್ತಿದ್ದನು. ಮಾರ್ಗಮಧ್ಯೆ ಒಂದು ರಾತ್ರಿಯನ್ನು ಅಲ್ಲೇ ಕಳೆದನು.
ತೀರ್ಥಯಾತ್ರೆಯನ್ನು ಮುಂದುವರಿಸಲು ಅವನ ಸಹಚರರು ಮಾರನೇ ದಿನ ಬೇಗನೇ ಏಳಬೇಕಿತ್ತು. ಆದರೆ ಶಿವ ಏಳುವ ಹೊತ್ತಿಗೂ ಅವರು ಮಲಗಿಯೇ ಇದ್ದರು. ಇದರಿಂದ ಕೋಪೋದ್ರಿಕ್ತನಾಗಿ ಶಿವನನು ಎಲ್ಲರೂ ಕಲ್ಲಾಗಿ ಎಂದು ಶಾಪ ನೀಡಿದನಂತೆ.
ಮತ್ತೊಂದು ದಂತಕಥೆಯ ಪ್ರಕಾರ, ಈ ಕೆತ್ತನೆಗಳನ್ನು ಕಲ್ಲು ಕುಮ್ಹರ್ ಎಂಬ ಕುಶಲಕರ್ಮಿ ಮಾಡಿದ್ದು ಎನ್ನಲಾಗುತ್ತದೆ. ಒಮ್ಮೆ ಶಿವ ಪಾರ್ವತಿ ಕೈಲಾಸ ಪರ್ವತಕ್ಕೆ ಪ್ರಯಾಣಿಸುತ್ತಿದ್ದರು. ಈ ಕುಶಲಕರ್ಮಿಗೂ ಕೂಡ ಕೈಲಾಸಕ್ಕೆ ಹೋಗಬೇಕೆಂಬ ಕನಸಿತ್ತು.
ಆದ್ರೆ ಒಂದೇ ರಾತ್ರಿಯಲ್ಲಿ ನೀವು ಭಗವಂತ ಹಾಗೂ ಅವರ ಸಂಗಡಿಗರನ್ನು ಚಿತ್ರಿಸುವಂಥ ಒಂದು ಕೋಟಿ ಕೆತ್ತನೆಗಳನ್ನು ನಿರ್ಮಿಸುವಂತೆ ಕುಮ್ಹರ್ ಗೆ ಹೇಳಲಾಯ್ತು. ಆದರೆ ಅವನ ಕೆತ್ತನೆಗಳು ಬಹುತೇಕ ಪೂರ್ಣಗೊಂಡರೂ ಒಂದು ಕೋಟಿಗೆ ಒಂದೇ ಒಂದು ಕಡಿಮೆ ಇತ್ತು. ಹೀಗಾಗಿ ಈ ಸ್ಥಳಕ್ಕೆ ಉನಕೋಟಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.
ಇಲ್ಲಿನ ಆಕರ್ಷಕ ಕಲ್ಲಿನ ಕೆತ್ತನೆಗಳಲ್ಲಿ ಅತ್ಯಂತ ಗಮನಾರ್ಹವಾದವು ಶಿವನ 30 ಅಡಿ ಕೆತ್ತನೆಯಾಗಿದೆ. ಅಲ್ಲದೇ ಗಣೇಶ, ಸಿಂಹದ ಮೇಲೆ ದುರ್ಗಾ, ಗಂಗಾ, ಹನುಮಂತ, ರಾವಣ ಮತ್ತು ಇನ್ನೂ ಹೆಚ್ಚಿನ ಕೆತ್ತನೆಗಳಿವೆ. ಉನಕೋಟಿಗೆ ಹೋಗಬೇಕೆಂದರೆ ನೀವು ಅಗರ್ತಲಾದಿಂದ 4 ಗಂಟೆಗಳ ಪ್ರಯಾಣ ಮಾಡಬೇಕು.
3.ಮಸ್ರೂರ್ ದೇವಾಲಯಗಳು, ಹಿಮಾಚಲ ಪ್ರದೇಶ: ಕಲ್ಲಿನಿಂದ ಕೆತ್ತಿದ ಹಿಂದೂ ದೇವಾಲಯಗಳ ಈ ಸಂಕೀರ್ಣವು 8 ನೇ ಶತಮಾನಕ್ಕೂ ಹಿಂದಿನದು.
ಅಲ್ಲದೇ ಇದು ಏಕಶಿಲೆಯ ಕೆತ್ತನೆಯಾಗಿದೆ. ಇದರ ಮಧ್ಯದಲ್ಲಿ ಮುಖ್ಯ ದೇವಾಲಯ ಮತ್ತು ಅದರ ಸುತ್ತಲೂ ಸಣ್ಣ ದೇವಾಲಯಗಳಿವೆ. ಆದರೆ ಅದರಲ್ಲಿ ಹೆಚ್ಚಿನವು ಅಪೂರ್ಣವಾಗಿದೆ.
ದಂತಕಥೆಯ ಪ್ರಕಾರ ಪಾಂಡವರು ತಮ್ಮ ವನವಾಸದ ಕೆಲವು ಸಮಯ ಈ ಸ್ಥಳದಲ್ಲಿ ಕಳೆದರು. ಅವರು ಅಲ್ಲಿದ್ದಾಗ ಸ್ವರ್ಗಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಲು ಪ್ರಯತ್ನಿಸಿದರಂತೆ.
ನೀವು ಭೇಟಿ ನೀಡಿದರೆ, ಇಲ್ಲಿ ಉಳಿದಿರುವ ಅಪೂರ್ಣ ಮೆಟ್ಟಿಲನ್ನು ನೋಡಿಬಹುದು. ಅಂದಹಾಗೆ ಮಸ್ರೂರ್ ದೇವಾಲಯಗಳಿಗೆ ಹೋಗಬೇಕೆಂದರೆ ಕಾಂಗ್ರಾ ವಿಮಾನ ನಿಲ್ದಾಣದಿಂದ ಒಂದು ಗಂಟೆಯ ಪ್ರಯಾಣ ಮಾಡಬೇಕಾಗುತ್ತದೆ.
4.ಚಂಪಾನೇರ್-ಪಾವಗಡ ಪುರಾತತ್ವ ಉದ್ಯಾನವನ: ಇವುಗಳನ್ನು ಮೊಘಲ್ ಪೂರ್ವದ ನಗರದ ಅವಶೇಷಗಳು ಎನ್ನಲಾಗುತ್ತದೆ. ಅರಮನೆಗಳು, ದೇವಾಲಯಗಳು, ಮಸೀದಿಗಳು, ಗೋರಿಗಳು, ವಸತಿ ಸಂಕೀರ್ಣಗಳ ಅವಶೇಷಗಳು, ಮೆಟ್ಟಿಲುಬಾವಿಗಳು ಮುಂತಾದವುಗಳನ್ನು ನೋಡಬಹುದು. ಇದು ಪಾವಗಡ ಬೆಟ್ಟದಿಂದ ಚಂಪಾನೇರ್ ನಗರದವರೆಗೆ ವಿಸ್ತರಿಸಿದೆ.
14 ನೇ ಶತಮಾನದ ಆರಂಭದಲ್ಲಿ, ಈ ಪ್ರದೇಶವು ಖಿಚಿ ಚೌಹಾನ್ ರಜಪೂತರ ಅಡಿಯಲ್ಲಿ ಹಿಂದೂ ರಾಜಧಾನಿಯಾಗಿತ್ತು. ಅದರ ನಂತರ ಟರ್ಕಿಯ ಆಡಳಿತಗಾರ ಸುಲ್ತಾನ್ ಮೆಹಮೂದ್ ಬೇಗ್ಡಾ ಬೆಟ್ಟದ ಕೋಟೆಯನ್ನು ವಶಪಡಿಸಿಕೊಂಡನು. ಇಲ್ಲಿನ ಜಾಮಾ ಮಸೀದಿಯು ನಂತರದ ಭಾರತದಲ್ಲಿನ ಮಸೀದಿ ವಾಸ್ತುಶಿಲ್ಪಕ್ಕೆ ಮಾದರಿಯಾಯಿತು ಎನ್ನಲಾಗುತ್ತದೆ.
ಇನ್ನು ಪಾವಗಡ ಬೆಟ್ಟದ ಮೇಲಿರುವ ಕಾಳಿಕಾಮಾತಾ ದೇವಾಲಯಕ್ಕೆ ಅಪಾರ ಪ್ರಮಾಣದ ಯಾತ್ರಿಕರು ಭೇಟಿ ನೀಡುತ್ತಾರೆ. ಪಾರ್ಕ್ ವಡೋದರಾದಿಂದ ಒಂದು ಗಂಟೆಯ ಪ್ರಯಾಣ ಬೆಳೆಸಿದರೆ ನೀವು ಈ ಸ್ಥಳವನ್ನು ತಲುಪಬಹುದು.
5.ಮುರುದ್ ಜಂಜಿರಾ ಕೋಟೆ, ಮಹಾರಾಷ್ಟ್ರ: ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾದ ಈ ಕೋಟೆಯನ್ನು ದೋಣಿಗಳ ಮೂಲಕ ತಲುಪಬಹುದು.
ಒಂದು ಕಾಲದಲ್ಲಿ ಜಂಜಿರಾ ಕೋಟೆಯನ್ನು ಅಜೇಯವೆಂದು ಪರಿಗಣಿಸಲಾಗಿತ್ತು. ಕೋಟೆಯು ಒಳಗೆ ವಾಸಿಸುತ್ತಿದ್ದ 550 ಕುಟುಂಬಗಳಿಗೆ ಆಹಾರಕ್ಕಾಗಿ ದೊಡ್ಡ ಧಾನ್ಯಗಳ ಸಂಗ್ರಹ ಸ್ಥಳಗಳು ಮತ್ತು ಸಿಹಿನೀರಿನ ಬಾವಿಗಳನ್ನು ಹೊಂದಿತ್ತು ಎಂದು ತಿಳಿದುಬಂದಿದೆ.
ಯಾವುದೇ ಅತಿಕ್ರಮಣಕಾರರನ್ನು ಹೆದರಿಸಲು ಗೋಪುರಗಳು ಮತ್ತು ಫಿರಂಗಿಗಳನ್ನು ಹೊಂದಿದ್ದ ಈ ಕಲ್ಲಿನ ಕೋಟೆಯಂತಹ ಸಮುದ್ರ ಕೋಟೆಯ ವಾಸ್ತುಶಿಲ್ಪಿಗಳು ಸಿದ್ದಿಗಳು ಎಂದು ಹೇಳಲಾಗುತ್ತದೆ.
ಈ ಕೋಟೆಯು ಮುಂಬೈ ಮತ್ತು ಪುಣೆಯಿಂದ ಕೆಲವೇ ಗಂಟೆಗಳ ಪ್ರಯಾಣವಷ್ಟೇ. ಇಂದು ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಹಾಗಿದೆ. ಮುರುದ್ ಬೀಚ್‌ನಲ್ಲಿರುವ ರಾಜಪುರಿ ಜೆಟ್ಟಿ ಮತ್ತು ಮುರುದ್ ಜಂಜಿರಾ ಕೋಟೆಯ ನಡುವೆ ಬೆಳಿಗ್ಗೆ 7 ರಿಂದ ಸಂಜೆ 4.45 ರವರೆಗೆ ದೋಣಿಗಳು ಸಂಚರಿಸುತ್ತವೆ.
6.ಮೊಲಾಯಿ ಅರಣ್ಯ, ಅಸ್ಸಾಂ: ಇದು ಭಾರತದ ಮಾನವ ನಿರ್ಮಿತ ಅರಣ್ಯವಾಗಿದೆ. ಮಜುಲಿಯಲ್ಲಿ ಬ್ರಹ್ಮಪುತ್ರ ನದಿಯ ಮರಳುಗಾಡಿನ ಹತ್ತಿರ ವಾಸಿಸುತ್ತಿದ್ದ ಪಯೆಂಗ್ ಇದನ್ನು ನಿರ್ಮಿಸಿದವರು. ಅವರು 16 ವರ್ಷದವರಾಗಿದ್ದಾಗ ಅರಣ್ಯಕ್ಕಾಗಿ ಗಿಡಗಳನ್ನು ನೆಡಲು ಆರಂಭಿಸಿದರು.
ಒಂದು ದಿನ ಅವರು ಶಾಲೆಯಿಂದ ಹಿಂದಿರುಗುವಾಗ, ತೀರದಲ್ಲಿ ಹಲವಾರು ಸತ್ತ ಹಾವುಗಳನ್ನು ಕಂಡರು. ಅರಣ್ಯನಾಶ ಮತ್ತು ಬಂಜರು ಮರಳಿನ ದಂಡೆಯು ಸರೀಸೃಪಗಳನ್ನು ಸಂಪೂರ್ಣವಾಗಿ ಅಸಹಾಯಕಗೊಳಿಸಿದೆ ಎಂದು ಅರಿತುಕೊಂಡ ಪಯೆಂಗ್ ಕಾಡನ್ನು ಬೆಳೆಸಲು ಪಣ ತೊಟ್ಟರು.
ಇಂದು, ಅಭಿವೃದ್ಧಿ ಹೊಂದುತ್ತಿರುವ ಅರಣ್ಯವು 550 ಹೆಕ್ಟೇರ್‌ಗಳನ್ನು ವ್ಯಾಪಿಸಿದೆ. ಅಲ್ಲದೇ ಆನೆಗಳು, ಮಂಗಗಳು, ಹುಲಿಗಳು, ಜಿಂಕೆ ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ.
ಇವರ ಕಾಡನ್ನು 2008 ರಲ್ಲಿ ಅರಣ್ಯ ಇಲಾಖೆ ಗುರುತಿಸಿತು. ಪಯೆಂಗ್ ಅಡ್ಡಹೆಸರು ಮೋಲಾ ದಿಂದ ಇದು ಮೊಲೈ ಎಂಬ ಹೆಸರು ಪಡೆದುಕೊಂಡಿತು. ಜೋರ್ಹತ್‌ನಿಂದ 30 ನಿಮಿಷಗಳ ದೋಣಿ ವಿಹಾರದ ಮೂಲಕ ಇಲ್ಲಿಗೆ ತಲುಪಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ